please ಚೆಕ್
Team Udayavani, Oct 23, 2017, 12:07 PM IST
ಸಾಮಾನ್ಯವಾಗಿ ಗ್ರಾಹಕರು ತುಂಬಿದ ಹಣ ಮತ್ತು ಚೆಕ್‌ಗಳು ಅವರ ಅಥವಾ ಅವರು ನಮೂದಿಸಿದ ಖಾತೆಗೇ ಜಮಾ ಅಗುತ್ತವೆ. ತಪ್ಪು ಮಾಡುವುದು ಮನುಷ್ಯನ ಸಹಜ ಧರ್ಮ. ಬ್ಯಾಂಕಿನವರು ತಪ್ಪು ಮಾಡಬಹುದು, ಹಾಗೆಯೇ ಗ್ರಾಹಕರೂ ತಪ್ಪು ಮಾಡಬಹುದು. ಒಮ್ಮೊಮ್ಮೆ ಗ್ರಾಹಕ ತುಂಬಿದ ಹಣ ತಪ್ಪು ಖಾತೆಗೆ ಜಮಾ ಆಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಬ್ಯಾಂಕಿನಲ್ಲಿ ನಿಮ್ಮ ಖಾತೆಗೆ ಅಥವಾ ಬೇರೆ ಯಾರದ್ದಾದರೂ ಖಾತೆಗೆ ಹಣ ತುಂಬಿದಾಗ ಅಥವಾ ಚೆಕ್ ಅನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡುವಾಗ, ಬ್ಯಾಂಕ್ ಚಲನ್‌ನ ಎರಡೂ ಭಾಗದಲ್ಲಿ ನೋಟುಗಳ ವಿವರ, ಒಟ್ಟೂ ಮೊತ್ತ , ದಿನಾಂಕ, ಖಾತೆ ನಂಬರ್ ಮತ್ತು ಖಾತೆದಾರನ ಹೆಸರನ್ನು ನಮೂದಿಸಬೇಕಾಗುತ್ತದೆ. ಚೆಕ್ ಅನ್ನು ಡಿಪಾಸಿಟ… ಮಾಡುವಾಗ ಚೆಕ್‌ನ ಎಲ್ಲಾ ಮಾಹಿತಿಗಳನ್ನು ಬರೆಯ ಬೇಕಾಗುತ್ತದೆ. ಹಾಗೆಯೇ ನಿಮ್ಮ ಸಹಿಯೂ ಅಷ್ಟೇ ಮುಖ್ಯವಾಗಿರುತ್ತದೆ. ಬ್ಯಾಂಕಿನವರು ಎಲ್ಲವನ್ನೂ ಪರಿಶೀಲಿಸಿ, ಅವುಗಳಲ್ಲಿ ನಮೂದಿಸಿದ ವಿವರಗಳನ್ನು ದೃಢೀಕರಿಸಿಕೊಂಡು ಕೌಂಟರ್ ಪೈಲ್ ಮೇಲೆ ದಿನಾಂಕ ಇರುವ ರಬ್ಬರ್ ಮುದ್ರೆಯನ್ನು ಒತ್ತಿ, ಸಹಿಹಾಕಿ ಗ್ರಾಹಕರಿಗೆ ಚೆಕ್ ಅಥವಾ ನಗದು ಸಂದಾಯವಾಗಿದ್ದಕ್ಕೆ ಪ್ರೂಫ್ ಎಂದು ನೀಡುತ್ತಾರೆ. ಸಾಮಾನ್ಯವಾಗಿ ಲೆಕ್ಕ ಪತ್ರಗಳನ್ನು ಇಡುವವರು ಅಥವಾ ತಮ್ಮ ಲೆಕ್ಕ ಪತ್ರಗಳನ್ನು ಆಡಿಟ್ ಮಾಡಿಸುವವರು ಕನಿಷ್ಠ ಆಡಿಟ್ ಅಗುವವರೆಗೆ ಈ ಕೌಂಟರ್ ಫೈಲ್ ಗಳನ್ನು ಕಾಯ್ದಿರಿಸುತ್ತಾರೆ. ದೊಡ್ಡ ಗ್ರಾಹಕರು ಮತ್ತು ಕಂಪನಿಗಳು ಕೌಂಟರ್ ಫೈಲ್ ಗಳನ್ನು ಪ್ರತ್ಯೇಕಿಸದೇ ಚಲನ್ ಪುಸ್ತಕಗಳನ್ನು ಒಪ್ಪವಾಗಿ ಬೈಂಡಿಂಗ್ ಮಾಡಿಡುತ್ತಾರೆ. ಬಹುತೇಕ ಗ್ರಾಹಕರು ಈ ಬಗೆಗೆ ಸಾಕಷ್ಟು ಕಾಳಜಿ ತೆಗೆದು ಕೊಳ್ಳದೇ ನಿರ್ಲಕ್ಷಿಸುತ್ತಾರೆ. ಇವುಗಳು ಅದೇ ದಿನ ಅಥವಾ ಅ ಕ್ಷಣ ಕಸದ ಬುಟ್ಟಿಗೆ ಸೇರುವ ಸಂದರ್ಭಗಳೂ ಇಲ್ಲದಿಲ್ಲ. ಕನಿಷ್ಠ, ಸಂಬಂಧಪಟ್ಟ ವ್ಯವಹಾರಗಳು ಪಾಸ್ ಬುಕ್‌ನಲ್ಲಿ ನಮೂದಾಗುವವರೆಗೂ ಅದನ್ನು ಸರಿಯಾಗಿ ಇಟ್ಟುಕೊಳ್ಳದೇ ಸಂಕಷ್ಟ ಅನುಭವಿಸುತ್ತಾರೆ.
ಇದನ್ನು ಯಾಕೆ ಕಾಯ್ದಿರಿಸಿಕೊಳ್ಳಬೇಕು?
ಸಾಮಾನ್ಯವಾಗಿ ಗ್ರಾಹಕರು ತುಂಬಿದ ಹಣ ಮತ್ತು ಚೆಕ್‌ಗಳು ಅವರ ಅಥವಾ ಅವರು ನಮೂದಿಸಿದ ಖಾತೆಗೇ ಜಮಾ ಅಗುತ್ತವೆ. ತಪ್ಪು ಮಾಡುವುದು ಮನುಷ್ಯನ ಸಹಜ ಧರ್ಮ. ಬ್ಯಾಂಕಿನವರು ತಪ್ಪು ಮಾಡಬಹುದು, ಹಾಗೆಯೇ ಗ್ರಾಹಕರೂ ತಪ್ಪು ಮಾಡಬಹುದು. ಒಮ್ಮೊಮ್ಮೆ ಗ್ರಾಹಕ ತುಂಬಿದ ಹಣ ತಪ್ಪು ಖಾತೆಗೆ ಜಮಾ ಆಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಅಥವಾ ಕಡಿಮೆ ಜಮಾ ಆಗುವುದನ್ನು, ಜಮಾ ಆಗದೇ ಇರುವ ಸಾಧ್ಯತೆ ( ಇದು ತುಂಬಾ ಕಡಿಮೆ)ಯನ್ನು ಪೂರ್ಣವಾಗಿ ಇಲ್ಲವೆನ್ನಲಾಗದು. ಇಂಥ ಸಂದರ್ಭದಲ್ಲಿ ಯಾವುದಾದರೂ ತಕರಾರು, ಗೊಂದಲ ಅಥವಾ ಸಂದೇಹ ಬಂದರೆ, ಗ್ರಾಹಕನ ರಕ್ಷಣೆ ಮಾಡುವುದು, ಬ್ಯಾಂಕಿನವರು ನೀಡುವ ಕೌಂಟರ್ ಫೈಲ್ ಮಾತ್ರ. ಇನ್ನು ಯಾವುದೇ ಸಾಕ್ಷ್ಯ-ಪುರಾವೆಗಳಿಗೆ ಬ್ಯಾಂಕ್‌ನಲ್ಲಿ ತೂಕ ಇರುವುದಿಲ್ಲ. ಬ್ಯಾಂಕಿನವರು ಮಾನ್ಯ ಮಾಡುವುದು ದಿನಾಂಕ ಇರುವ ಬ್ಯಾಂಕಿನ ರಬ್ಬರ ಮುದ್ರೆ ಮತ್ತು ಬ್ಯಾಂಕಿನ ಅಧಿಕೃತ ಸಿಬ್ಬಂದಿಯ ಸಹಿ ಇರುವ ಬ್ಯಾಂಕ್‌ನವರೇ ನೀಡಿದ ಕೌಂಟರ್ ಫೈಲ್ ಮಾತ್ರ.
ಇತ್ತೀಚೆಗೆ ಸಿ.ಸಿ ಟಿವಿಗಳು ಇದ್ದರೂ ಗ್ರಾಹಕನು ಮಾಡಿದ ಎಲ್ಲಾ ವ್ಯವಹಾರವನ್ನು ಕೂಲಂಕಷವಾಗಿ ಅಥವಾ ನಿಖರವಾಗಿ ಹೇಳಲು ಮತ್ತು ಪರಿಶೀಲಿಸಲು ಸಾಧ್ಯವಿಲ್ಲ. ಸಿ.ಸಿ ಟಿವಿಯ ಫೂಟೇಜ… ಗ್ರಾಹಕನು ಬ್ಯಾಂಕ್‌ಗೆ ಬಂದದಕ್ಕೆ ಮತ್ತು ಬ್ಯಾಂಕಿನಲ್ಲಿ ವ್ಯವಹಾರ ಮಾಡಿದ್ದಕ್ಕೆ ಸಾಕ್ಷಿಯಾಗಬಹುದು. ಇದಕ್ಕೂ ಹೆಚ್ಚಿಗೆ ಮಾಹಿತಿಗಳನ್ನು ಅವು ಒದಗಿಸಲಾರವು. ಹಾಗೆಯೇ, ಬ್ಯಾಂಕಿನಲ್ಲಿ ಗ್ರಾಹಕ ತನ್ನ ಖಾತೆಗೆ ಜಮಾ ಮಾಡಲು ನೀಡಿದ ಚೆಕ್ ಯಾವುದಾದರೂ ಕಾರಣಕ್ಕೆ ಬೌನ್ಸ್ ಅದರೆ, ಅದನ್ನು ಬ್ಯಾಂಕ್‌ನಿಂದ ಹಿಂತಿರುಗಿ ಪಡೆಯಲು, ಬ್ಯಾಂಕಿವನರು ನೀಡಿದ ಬ್ಯಾಂಕ್ ಚಲನ್‌ನ ಕೌಂಟರ್ ಫೈಲ್‌ಅನ್ನು ತೋರಿಸಬೇಕಾಗುತ್ತದೆ. ಈ ಕೌಂಟರ್ ಫೈಲ್ ಚೆಕ್ ನಿಮ್ಮದೇ ಮತ್ತು ನೀವೇ ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದ್ದು ಎನ್ನುವುದಕ್ಕೆ ಬ್ಯಾಂಕನ ಆಂತರಿಕ ನಿಯಮಾವಳಿ ಪ್ರಕಾರ ದೊರೆಯುವ ಅಧಿಕೃತ ದೃಢೀಕರಣವಾಗಿರುತ್ತದೆ. ಚೆಕ್‌ಅನ್ನು ಹಿಂತಿರುಗಿಸಲಾಗಿದೆ ಎಂದು ಕೌಂಟರ್ ಫೈಲ್ ಮೇಲೆ ಬರೆದು ಬ್ಯಾಂಕಿನವರು ಅದನ್ನು ಗ್ರಾಹಕರಿಗೆ ಹಿಂತಿರುಗಿಸುತ್ತಾರೆ.
ಚೆಕ್ ಅನ್ನು ಹಿಂತಿರುಗಿಸಿದ್ದಕ್ಕೆ ಬ್ಯಾಂಕ್‌ನ ಪುಸ್ತಕದಲ್ಲಿ ಸಹಿ ತೆಗೆದುಕೊಳ್ಳುವ ಪದ್ಧತಿಯೂ ಕೆಲವು ಬ್ಯಾಂಕುಗಳಲ್ಲಿ ಇದೆ. ಒಬ್ಬರ ಚೆಕ್ ಇನ್ನೊಬ್ಬರ ಕೈಸೇರಿ ಕಾನೂನು ತೊಡಕಾಗುವುದನ್ನು ತಪ್ಪಿಸಲು ಈ ನಿಯಾವಳಿಯನ್ನು ಬ್ಯಾಂಕಿನವರು ಪಾಲಿಸುತ್ತಾರೆ. ಅಂತೆಯೇ ಗ್ರಾಹಕರು ತಮ್ಮ ವ್ಯವಹಾರವು ಪಾಸ್ ಬುಕ್‌ನಲ್ಲಿ ನಮೂದಾಗುವ ತನಕ ಬ್ಯಾಂಕಿನವರು ನೀಡಿದ ಕೌಂಟರ… ಫೈಲ್ ಅನ್ನು ಜತನದಿಂದ ಕಾಯ್ದಿರಿಸಿಕೊಳ್ಳಬೇಕು.
ವರ್ಷಗಳ ಹಿಂದೆ ಒಬ್ಬ ಗ್ರಾಹಕ ತನ್ನ ನೌಕರನ ಮೂಲಕ 40,000 ರೂಪಾಯಿಗಳನ್ನು ತನ್ನ ಖಾತೆಗೆ ಜಮಾ ಮಾಡಲು ಕಳಿಸಿಕೊಟ್ಟಿದ್ದ. ಆ ನೌಕರ ತನ್ನ ಮಾಲೀಕನಿಗೆ, ಬ್ಯಾಂಕ್ ಹಣ ಸ್ವೀಕರಿಸಿ , ದಿನಾಂಕ ಇರುವ ರಬ್ಬರ್ ಮುದ್ರೆ ಮತ್ತು ಕ್ಯಾಷಿಯರ್‌ನ ಸಹಿ ಇರುವ ಬ್ಯಾಂಕ್‌ಚಲನ್‌ದ ಕೌಂಟರ್ ಫೈಲ…ಅನ್ನು ನೀಡಿದ್ದ. ವಾರದ ನಂತರ, ಆ ಗ್ರಾಹಕ 40,000 ರೂಪಾಯಿನ ಚೆಕ್ ನೀಡಲು ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್ ಬೌನ್ಸ್‌ಆಯಿತು. ಗಾಬರಿಯಿಂದ ಅ ಗ್ರಾಹಕ ಬ್ಯಾಂಕಿಗೆ ಬಂದು ವಿಚಾರಿಸಲು, ಗ್ರಾಹಕನ ನೌಕರ ಮಾಡಿದ ಮೋಸ ಹೊರ ಬಂದಿತು. ಆ ನೌಕರ , ಬ್ಯಾಂಕಿಗೆ ನೀಡಿದ ಚಲನ್‌ನಲ್ಲಿ, ಬ್ಯಾಂಕ್ ಇರಿಸಿಕೊಳ್ಳುವ ಭಾಗದಲ್ಲಿ 4,000 ರೂಪಾಯಿ ಬರೆದಿದ್ದ ಮತ್ತು ಗ್ರಾಹಕನ ಪ್ರತಿಯ ಭಾಗದಲ್ಲಿ 4,0000 ರೂಪಾಯಿ ಎಂದ ಬರೆದಿದ್ದ. ಅ ಗ್ರಾಹಕನ ನೌಕರ ಯಾವುದೇ ರೀತಿಯಲ್ಲಿ ಸಂಶಯ ಬರದಂತೆ ಕಾಳಜಿ ತೆಗೆದುಕೊಂಡಿದ್ದ. ಆನಂತರ ನೌಕರ ಕೆಲಸ ಬಿಟ್ಟಿದ್ದ. ಅತಿ ಚಾಣಾಕ್ಷ$ತನದಿಂದ ಆ ನೌಕರ ಮಾಡಿದ ಈ ಮೋಸ ಬ್ಯಾಂಕ್ ಕ್ಯಾಷಿಯರ…ನ ಗಮನಕ್ಕೆ ಬಂದಿರಲಿಲ್ಲ, ಗ್ರಾಹಕನಿಗೂ ತಿಳಿದಿರಲಿಲ್ಲ. ಈಗಾದರೆ ವ್ಯವಹಾರದ ಮಾಹಿತಿ ಗ್ರಾಹಕನಿಗೆ ಎಸ್‌ಎಮ ಎಸ್ ಮೂಲಕ ಕ್ಷಣ ಮಾತ್ರದಲ್ಲಿ ದೊರಕಿ ಇಂಥ ಅಚಾತುರ್ಯಕ್ಕೆ ಆಸ್ಪದವಿರುವುದಿಲ್ಲ. ಒಮ್ಮೊಮ್ಮೆ ಒತ್ತಡದಲ್ಲಿರುವಾಗ ಬ್ಯಾಂಕಿನ ಕ್ಯಾಷಿಯರ್‌ಗಳು ಕೌಂಟರ್ ಫೈಲ…ಅನ್ನು ಅಷ್ಟು ಸೂಕ್ಷ್ಮವಾಗಿ ನೋಡುವುದಿಲ್ಲ. ಗ್ರಾಹಕನ ಆ ನೌಕರ ಇದನ್ನು ದುರುಪಯೋಗ ಮಾಡಿಕೊಂಡಿದ್ದ.
ಯಾವುದೇ ವ್ಯವಹಾರದಲ್ಲಿ ಬಾಯಿ ಮಾತಿಗಿಂತ ಲಿಖೀತ ಸಾಕ್ಷಿಗೇ ಹೆಚ್ಚಿನ ತೂಕ ಇರುತ್ತದೆ. ಜನಸಾಮಾನ್ಯರು ಹೇಳುವ ನಾನೇನು ಹಾಗಂತ, ಬರೆದು ಕೊಟ್ಟಿದ್ನಾ ಎನ್ನುವ ಮಾತು ಅರ್ಥ ಪೂರ್ಣವಾಗಿರುತ್ತದೆ. ಹಣಕಾಸು ವ್ಯವಹಾರದಲ್ಲಂತೂ, ಈ ಲಿಖೀತ ಸಾಕ್ಷಿಗೆ ಹೆಚ್ಚಿನ ತೂಕ ಇರುತ್ತದೆ. ಕ್ರಿಮಿನಲ್ ಕಾನೂನಿನಲ್ಲಿ ಸಾಮಾನ್ಯವಾಗಿ ಕೇಳುವ ಪ್ರತ್ಯಕ್ಷ$ ಸಾಕ್ಷಿ ಮತ್ತು ಸಾಂದರ್ಭಿಕ ಸಾಕ್ಷಿಗಳಂತೆ ಇವುಗಳನ್ನು ಪರಿಗಣಿಸಬಹುದು. ಕೌಂಟರ್ ಫೈಲ್ ಪರಿಕಲ್ಪನೆ ಗ್ರಾಹಕ ಮತ್ತು ಬ್ಯಾಂಕುಗಳು, ಹೀಗೆ ಇಬ್ಬರ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಯಾವುದೇ ಗ್ರಾಹಕ ತಾನು ಹಣ ಜಮಾ ಮಾಡಿದ್ದೇನೆ ಅಥವಾ ಚೆಕ್‌ಅನ್ನು ಡಿಪಾಸಿಟ್ ಮಾಡಿದ್ದೇನೆ. ಅದರೆ, ತನ್ನ ಖಾತೆಗೆ ಜಮಾ ಆಗಿಲ್ಲ ಎಂದು ಈ ಕೌಂಟರ್ ಫೈಲ್ ಇಲ್ಲದೇ ಬ್ಯಾಂಕಿನವರನ್ನು ಪ್ರಶ್ನಿಸಲಾಗದು. ಈ ನಿಟ್ಟಿನಲ್ಲಿ ಇದು ಗ್ರಾಹಕನ ಕೈಯಲ್ಲಿರುವ ದೃಢವಾದ ಅಸ್ತ್ರ.
ರಮಾನಂದ ಶರ್ಮಾ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.