ಕೊಟ್ಟೆ ಕಡುಬಿಗೆ ಮೀನಾಕ್ಷಿ ಭವನಕ್ಕೆ ಬನ್ನಿ
Team Udayavani, Jun 11, 2018, 11:52 AM IST
ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ರುಚಿಯಾಗಿರುತ್ತದೆ.
ಮಲೆನಾಡು ಪ್ರಾಕೃತಿಕ ಸೌಂದರ್ಯದಷ್ಟೇ ಅಡುಗೆಗೂ ಹೆಸರುವಾಸಿ. ಮಲೆನಾಡಿನ ಜನರು ಬಗೆ ಬಗೆಯ ಸೊಪ್ಪು, ತರಕಾರಿಯಿಂದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ. ಅದು ಆರೋಗ್ಯ ರಕ್ಷಣೆಯ ಜೊತೆಗೆ ಬಾಯಿಗೂ ರುಚಿ ನೀಡುತ್ತದೆ. ಮಲೆನಾಡಿಗರ ತಿನಿಸುಗಳಿಂದಲೇ ಹೆಸರು ಮಾಡಿರುವ ಹೋಟೆಲೆಂದು ಶಿರಸಿಯಲ್ಲಿದೆ.
ಶಿರಸಿಯ ಬಸ್ತಿಗಲ್ಲಿಯಲ್ಲಿ, ಸುಮಾರು 60 ವರ್ಷಗಳ ಹಿನ್ನೆಲೆ ಹೊಂದಿರುವ ಮೀನಾಕ್ಷಿ ಭವನ ಹೋಟೆಲ್ ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುತ್ತಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಶಿರಸಿ ನಗರದಲ್ಲಿ ಅಂತಹ ದೊಡ್ಡ ಹೋಟೆಲ್‌ಗಳು ಇಲ್ಲದಂತಹ ಸಮಯದಲ್ಲಿ ಕುಟುಂಬ ಸಮೇತವಾಗಿ ಶಿರಸಿಗೆ ಬಂದ ಉಡುಪಿ ಮೂಲದ ರಾಮಕೃಷ್ಣ ತಂತ್ರಿ ಅವರು 1962ರಲ್ಲೇ ತಮ್ಮ ಮನೆಯಲ್ಲೇ ಪುಟ್ಟದಾದ ಹೋಟೆಲ್ ಅನ್ನು ಪ್ರಾರಂಭಿಸಿದ್ದರು.
ಮಲೆನಾಡಿನ ಹಳ್ಳಿಯ ಜನರು ನಿರ್ಮಿಸುವಂತೆ ಕಟ್ಟಿಗೆಯಲ್ಲಿ ಕೊಠಡಿಯೊಂದನ್ನು ಕಟ್ಟಿಕೊಂಡು ಸುಮಾರು 50 ವರ್ಷ ಅಲ್ಲಿಯೇ ಹೋಟೆಲ್ ನಡೆಸುತ್ತಿದ್ದ ತಂತ್ರಿ ನಿಧನದ ನಂತರ ಅವರ ಮಕ್ಕಳಾದ ವಿಶ್ವನಾಥ್ ಹಾಗೂ ಸತೀಶ್ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೀಗ ಹೊಸ ಹೋಟೆಲ್ ಅನ್ನು ಬಸ್ತಿಗಲ್ಲಿಯಲ್ಲೇ ನಿರ್ಮಿಸಲಾಗುತ್ತಿದ್ದು, ಇದೀಗ ಬಾಡಿಗೆ ಕಟ್ಟಡದಲ್ಲಿ ಹೋಟೆಲ್ ನಡೆಸಿಕೊಂಡು ಬರಲಾಗುತ್ತಿದೆ.
ವಿಶೇಷ ತಿಂಡಿ:
ಮೀನಾಕ್ಷಿ ಭವನದ ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ರುಚಿಯಾಗಿರುತ್ತದೆ. ಹೊಸ ಕಟ್ಟಡ ನಿರ್ಮಾಣದ ನಂತರ ಹಿಂದಿನ ತಿಂಡಿಗಳ ಜೊತೆಗೆ ಚಾಟ್ಸ್ ಮುಂತಾದ ಬಗೆಯ ತಿಂಡಿಗಳನ್ನೂ ಉಣಬಡಿಸುತ್ತೇವೆ ಎನ್ನುತ್ತಾರೆ ಹೋಟೆಲ್ ಮಾಲಿಕರಲ್ಲಿ ಒಬ್ಬರಾದ ವಿಶ್ವನಾಥ್.
ಮೀನಾಕ್ಷಿ ಭವನ ವಾರದ 7 ದಿನವೂ ತೆರೆದಿರುತ್ತದೆ. ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಉಳಿದ ದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9.30 ಗಂಟೆಯವರೆಗೂ ಸೇವೆಯನ್ನು ಒದಗಿಸುತ್ತದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ವೇಳೆ ಜೋಳದ ರೊಟ್ಟಿ, ಚಪಾತಿ ಊಟದ ವ್ಯವಸ್ಥೆ ಇರುತ್ತದೆ.
– ಭೋಗೇಶ ಎಂ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.