ಹೋಲಿಕೆಯ ಹೊರೆ


Team Udayavani, Apr 2, 2018, 5:41 PM IST

holikeya.jpg

ಗುಣಮಟ್ಟದ ಜೀವನ ಅಂದರೆ ಅತ್ಯುತ್ತಮ ವಸ್ತುಗಳನ್ನು ಹೊಂದುವುದಲ್ಲ. ಬದಲಾಗಿ ಹೆಚ್ಚು ಹೆಚ್ಚು ಸಂತೋಷದಿಂದ ಇರುವುದು. ಸಂತೋಷದ ಗುಟ್ಟು ಕಡಿಮೆ ಖರ್ಚು ಮಾಡುವುದರಲ್ಲಿದೆ.

ಹೊಸದಾಗಿ ಮನೆ ಕಟ್ಟಿದವರೊಬ್ಬರು ಗೃಹಪ್ರವೇಶಕ್ಕೆ ಕರೆಯಲು ಬಂದಿದ್ದರು.  ಹೊಸ ಮನೆ ಕಟ್ಟಿದ ಸಂಭ್ರಮದ ಬದಲಾಗಿ ಗಂಡ ಹೆಂಡತಿ ಮುಖದಲ್ಲಿ ದುಗುಡದ ಕಳೆ ಇತ್ತು. ಇದು ಕೇವಲ ನನ್ನ ಊಹೆಯೂ ಇರಬಹುದು ಎನ್ನಿಸಿದರೂ ಕೇಳಿದೆ;  ”ಯಾಕೋ ತುಂಬಾ ಸುಸ್ತಾದವರ ಹಾಗಿದ್ದೀರಿ. ಓಡಾಟ ಜಾಸ್ತಿನಾ?’ ಸುಸ್ತಾದದ್ದು ನಿಜ, ಓಡಾಟ ಅಲ್ಲ. ಮನೆ ಕಟ್ಟಿ ಆದ ಸುಸ್ತು. ಕೈ ಖಾಲಿ ಆಗಿದೆ… ಗಂಡ ಇನ್ನೂ ಹೇಳಲು ತೊಡಗಿದ. ಹೆಂಡತಿ ಬಾಯಿ ಮುಚ್ಚಿಸಿದಳು.

ಇವರು ಇದ್ದದ್ದು ಮೂವರೇ.  ಆದರೆ ಕಟ್ಟಿದ್ದು ಮಾತ್ರ ಮೂರಂತಸ್ತಿನ ಮನೆ. ಇಷ್ಟು ದೊಡ್ಡ ಮನೆ ಯಾಕೆ ಬೇಕಿತ್ತು ಎಂಬುದಕ್ಕೆ ಅವರೇ ಹೇಳತೊಡಗಿದರು “ಮನೆಯನ್ನು ನಮಗೆ ಅಂತಷ್ಟೇ ಕಟ್ಟಿಕೊಳ್ಳುವುದಿಲ್ಲ. ಬೇರೆಯವರಿಗೆ, ಅಂದರೆ ಬೇರೆಯವರು ಹೊಗಳಲಿ, ಬೇರೆಯವರು ಮೆಚ್ಚಲಿ, ಕೊನೆಗೆ ನಮಗೆ ಆಗದವರೂ ನೋಡಿ ಹೊಟ್ಟೆ ಉರಿದುಕೊಳ್ಳಲಿ ಎಂದೂ ಕಟ್ಟುತ್ತೇವೆ. ನಾವಂತೂ ಕೋಳಿ ಗೂಡಿನಂತಹ ಮನೆಯಲ್ಲಿ ಇದ್ದು ಬೆಳೆದವರು.

ಈಗಲಾದರೂ ದೊಡ್ಡ ಮನೆಯಲ್ಲಿ ಆರಾಮವಾಗಿ ಇರೋಣ ಅನ್ನಿಸಿತು. ಈಗ ನೋಡಿದ್ರೆ, ಹನುಮಂತನ ಬಾಲದ ಹಾಗೆ ಮನೆಯ ಖರ್ಚು ಬೆಳೆಯುತ್ತಿದೆ. ಇಷ್ಟು ದೊಡ್ಡ ಮನೆ, ಕೆಲಸದವರಿಗೆ, ಕರೆಂಟ್‌ ಬಿಲ್‌ ಅಂತಾ ನಾವು ಉಂಡು ತಿಂದು ಮಾಡುವುದಕ್ಕಿಂತ ಹೆಚ್ಚಿಗೆ ಹಣ ಇದಕ್ಕಾಗಿ ಖರ್ಚಾಗುತ್ತಿದೆ. ಆರಾಮವಾಗಿ ಇರೋದು ಹಾಗಿರಲಿ, ಈಗ ಮಾಡಿರುವ ಸಾಲ ತೀರಿಸಲು  ಓವರ್‌ ಟೈಮ್‌ ಕೆಲಸ ಮಾಡಬೇಕು.

ನನ್ನ ಹೆಂಡತಿಯೂ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಿದೆ . ಇದು ಇವರೊಬ್ಬರು ಮಾಡುವ ತಪ್ಪು ಅಲ್ಲ. ನಾವೆಲ್ಲರೂ ಅರಿತೋ ಅರಿಯದೆಯೋ ಇಂತಹ ತಪ್ಪು ಮಾಡುತ್ತೆವೆ. ಬೇರೆಯವರನ್ನು ಮೆಚ್ಚಿಸಲು ಇನ್ನೊಬ್ಬರಿಗೆ ಅಂತಸ್ತು ತೋರಿಸಲು ಯಾವಾಗ ಬದುಕುತ್ತೇವೋ ಆಗ ಆಗುವುದೇ ಹೀಗೆ. ನಮ್ಮ ಹಿರಿಯರು ಹೇಳಿದ, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರೆ ಇದೇ ಅಲ್ಲವೆ. ಹೋಲಿಕೆ ಹೇಗೆ ನಮ್ಮ ಸಂತೋಷವನ್ನೇ ಕೊಲ್ಲುತ್ತದೆ ಎನ್ನುವುದಕ್ಕೆ ಒಂದು ಕಥೆ ನೆನಪಾಯಿತು. ಒಂದು ಊರು.

 ಆ ಊರಿನಲ್ಲಿ ಎಲ್ಲರೂ ತಕ್ಕ ಮಟ್ಟಿಗೆ ಇದ್ದಾರೆ. ಆ ಊರಿಗೆ ಒಬ್ಬ ಸ್ವಾಮೀಜಿ ಬರುತ್ತಾರೆ. ಆ ಊರಿನ ಜನರೆಲ್ಲರೂ ಹೋಗಿ ಸಹಜವಾಗಿಯೇ  ಅದು ಬೇಕು ಇದು ಬೇಕು ಎಂದು ಸ್ವಾಮೀಜಿಯನ್ನು ಕೇಳುತ್ತಿದ್ದರು. ಒಂದು ದಿನ ಸ್ವಾಮೀಜಿ ಎಲ್ಲರನ್ನೂ ಕರೆದು ಹೇಳುತ್ತಾರೆ;  ನೋಡಿ, ನಾನು ನೀವು ಕೇಳಿದ್ದನ್ನೆಲ್ಲ ಕೊಡುತ್ತೇನೆ. ನಿಮಗೆ ಏನು ಬೇಕೋ ಅದನ್ನು ಒಂದು ಚೀಟಿಯಲ್ಲಿ ಬರೆದು ಈ ದೊಡ್ಡ ಬಾಕ್ಸ್‌ ಗೆ ಹಾಕಿ ಅಂದರು. ಬಹಳಷ್ಟು ಜನ ಈ ಮಾತನ್ನು ನಂಬಲಿಲ್ಲ.

ಕೇಳಿದ್ದೆಲ್ಲ ಆಗುವುದು ಹೇಗೆ? ಸಾಧ್ಯವೇ ಇಲ್ಲ.  ಆದರೂ ಹೇಗಿದ್ದರೂ ಕೇಳಿದ್ದಾರಲ್ಲಾ ಅಂದು ಕೊಂಡ್ರು. ತಮಗೆ ಏನೇನು ಬೇಕೋ ಅದನ್ನೆಲ್ಲ ಬರೆದು ಒಂದು ಡಬ್ಬಿಯಲ್ಲಿ ಹಾಕಿದರು. ಆ ಊರಿನಲ್ಲಿರುವ ಒಬ್ಬ ಭಿಕ್ಷುಕ ಮಾತ್ರ ಏನೂ ಬರೆಯಲಿಲ್ಲ. ಮಾರನೇ ದಿನ ಬೆಳಗ್ಗೆ ಪ್ರತಿಯೊಬ್ಬರಿಗೂ ಅವರು ಏನೇನು ಬರೆದಿದ್ದರೋ ಅದೆಲ್ಲವೂ ಸಿಗುತ್ತದೆ. ಮನೆ, ಕಾರು, ಒಡವೆ, ಬಂಗಾರ ಹೀಗೆ, ಸ್ವಲ್ಪ ಹೊತ್ತು ಎಲ್ಲರಿಗೂ ಖುಷಿಯೋ ಖುಷಿ. ಆದರೆ ಕೆಲವೇ ಕ್ಷಣದಲ್ಲಿ ಅವರ ಖುಷಿ ಮಾಯವಾಯಿತು.

ಎಲ್ಲರ ಅಳಲು ಒಂದೇ “ಅಯ್ಯೋ, ನಾನು ಕೇಳುವುದು ಕೇಳಿದೆ, ಪಕ್ಕದ ಮನೆಯವರ ಹಾಗೆ ದೊಡ್ಡ ಮನೆ ಕೇಳಬಾರದಿತ್ತಾ? ಇನ್ನೊಬ್ಬರು ಕೇಳಿದಂತೆ ಜಾಸ್ತಿ ಬಂಗಾರ ಕೇಳಬೇಕಿತ್ತು, ಇಷ್ಟು ಚಿಕ್ಕ ಕಾರು ಯಾಕೆ ಕೇಳಿದೆ? ಒಂದೇ ಕಾರು ಕೇಳುವ ಬದಲು ಎರಡು ಕಾರು ಕೇಳಬೇಕಿತ್ತು.  ಹೀಗೆ ಬಯಸಿದ್ದೆಲ್ಲ ಬಂದರೂ ಅವರೊಳಗೆ ಇನ್ನೂ ಅತೃಪ್ತಿ ಹಾಗೇ ಇತ್ತು. ಆ ಭಿಕ್ಷುಕ ಒಬ್ಬನೇ ಎಂದಿನಂತೆ ಖುಷಿಯಾಗಿ ಇದ್ದ.

ನಮ್ಮಲ್ಲಿ ಏನಿದೆಯೋ ಅದಕ್ಕಾಗಿ ಖುಷಿ ಪಡದೆ, ಇರುವುದರಲ್ಲಿ ಸಂತೃಪ್ತಿ ಪಡದಿದ್ದರೆ ಎಷ್ಟಿದ್ದರೂ ನೆಮ್ಮದಿ ಇರುವುದಿಲ್ಲ. ನಾವು ಎಷ್ಟು ದುಡಿಯುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಹೇಗೆ ಬದುಕುತ್ತೇವೆ ಅನ್ನುವುದು ಅಷ್ಟೇ ಮುಖ್ಯ. ಗುಣಮಟ್ಟದ ಜೀವನ ಅಂದರೆ ಅತ್ಯುತ್ತಮ ವಸ್ತುಗಳನ್ನು ಹೊಂದುವುದಲ್ಲ. ಬದಲಾಗಿ ಹೆಚ್ಚು ಹೆಚ್ಚು ಸಂತೋಷದಿಂದ ಇರುವುದು. ಸಂತೋಷದ ಗುಟ್ಟು ಕಡಿಮೆ ಖರ್ಚು ಮಾಡುವುದರಲ್ಲಿದೆ. ಇದನ್ನೇ ಇನ್ನೊಂದು ರೀತಿಯಿಂದ ನೋಡುವುದಾದರೆ ಸರಳ ಜೀವನದಲ್ಲಿ ಇದೆ.

* ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.