ಕಂಪ್ಯೂಟರ್ಗೆ ಕೋವಿಡ್ ಬಂದ್ರೆ?
ಇ-ವೈರಸ್‌ಗೆ ಲಸಿಕೆ ಉಂಟು!
Team Udayavani, Aug 10, 2020, 5:02 PM IST
ಕೋವಿಡ್ ಆತಂಕದಿಂದ ಬಚಾವಾಗಲು ಸಾಕಷ್ಟು ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಸೂಚಿಸಿವೆ. ನಾವೇನೋ ಮನೆಯಲ್ಲೇ ತಣ್ಣಗೆ ಕುಳಿತು ವೈರಸ್ ಹರಡೋದನ್ನು ತಡೀಬಹುದು. ಆದರೆ, ನಾವು ಬಳಸೋ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು? ಅವಕ್ಕೂ ಕೋವಿಡ್ ಬರುತ್ತಾ ಅಂತೀರಾ? ಅವಕ್ಕೆ ಕೋವಿಡ್ ಬಾರದಿದ್ದರೂ, ಅವುಗಳನ್ನು ಕಾಡೋ ವೈರಸ್ಸು, ಮಾಲ್ವೇರುಗಳು ಸುಮಾರಿವೆ. ಅವುಗಳಿಂದ ಪಾರಾಗೋಕೆ ಈ ಅಂಶಗಳನ್ನು ಪಾಲಿಸಿ.
- http ಲಿಂಕುಗಳು : ನಾವು ಯಾವುದೇ ಜಾಲತಾಣವನ್ನು ತೆರೆಯೋಕೆ ಮುಂಚೆ, ಅದು ಅಧಿಕೃತ ಅಲ್ಲವೋ ಅನ್ನೋದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ಈ ನಕಲಿ ತಾಣಗಳಿಗೂ, ಅಸಲೀ ತಾಣಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ, ಅವುಗಳ ಜಾಲತಾಣ ಶುರುವಾಗೋದು http:// ಇಂದನಾ ಅಥವಾ https:// ಇಂದನಾ ಅಂತ ಹುಷಾರಾಗಿ ಚೆಕ್ ಮಾಡಿ. ಈ http:// ತಾಣಗಳಲ್ಲಿ ನೀವು ಕೊಡೋ ಮಾಹಿತಿಯೇ ನಿಮ್ಮ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ಅವುಗಳನ್ನು ತೆರೆದಾಗ ಮಾಲ್ವೇರುಗಳು, ವೈರಸ್ಸುಗಳು ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗೋ ಸಾಧ್ಯತೆಯೂ ಇದೆ. ಹಾಗಾಗಿ http:// ಲಿಂಕುಗಳನ್ನು ತೆರೆಯಲೇ ಬೇಡಿ. ಒಂದುವೇಳೆ ತೆರೆದರೂ, ಅಲ್ಲಿ ಸಿಗೋ ಉಚಿತ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಯಾವ ತಂತ್ರಾಂಶದ ಜೊತೆ ಯಾವ ವೈರಸ್ಸು ಫ್ರಿನೋ ಯಾರಿಗೆ ಗೊತ್ತು? https ಜಾಲತಾಣಗಳ ಮತ್ತೂಂದು ವ್ಯತ್ಯಾಸವೆಂದರೆ, ಅದರಲ್ಲಿನ ಸರ್ಟಿಫೀಕೇಟುಗಳು. ಇವುಗಳನ್ನ ಸರ್ಟಿಫಿಕೇಶನ್ ಏಜೆನ್ಸಿಗಳಿಂದ ದೃಢೀಕರಣವನ್ನೂ ಮಾಡಬೇಕಾಗಿರುವುದರಿಂದ, ಈ ತಾಣಗಳು ಅಧಿಕೃತ ಅಂತ ನಂಬಬಹುದಾಗಿದೆ. ಇವುಗಳಲ್ಲಿ ಬಿಟ್ ಸುರಕ್ಷತೆಯೂ ಇರೋದರಿಂದ, ನೀವು ಆ ಜಾಲತಾಣಗಳಲ್ಲಿ ವ್ಯವಹರಿಸೋ ಮಾಹಿತಿಯೂ ಸುರಕ್ಷಿತ ಎಂದು ನಂಬಬಹುದು.
- ಆ್ಯಂಟಿ ವೈರಸ್ ತಂತ್ರಾಂಶಗಳು : ಎಲ್ಲಾ ಕಂಪ್ಯೂಟರುಗಳಲ್ಲೂ ನಾರ್ಟನ್, ಮೆಕ್ಕೆಫೆ, ಎಸ್ಸೆಟ್ ಮುಂತಾದ ಆ್ಯಂಟಿ ವೈರಸ್ ತಂತ್ರಾಂಶಗಳು ಇರುತ್ತವೆ. ಅವುಗಳಲ್ಲಿರೋ ಆಟೋಮೇಟಿಕ್ ಅಪ್‌ಡೇಟ್ ಆಯ್ಕೆಯನ್ನು ಬಳಸೋದರಿಂದ, ಹೊಸ ಹೊಸ ವೈರಸ್ಸುಗಳ ವಿರುದ್ಧ ಹೋರಾಡೋದು ಹೇಗೆಂಬ ಮಾಹಿತಿ ನಿಮ್ಮ ಕಂಪ್ಯೂಟರಿನ ಆಂಟಿ ವೈರಸ್ಸಿಗೆ ಅಪ್ಡೆಟ್ ಆಗುತ್ತಿರುತ್ತೆ. ನೀವೂ ಆಗಾಗ ಅಪ್‌ಡೇಟ್ ಸೆಕ್ಯುರಿಟಿ ಆಯ್ಕೆಯನ್ನು ಬಳಸಬಹುದು.
- ಆಪರೇಟಿಂಗ್ ಸಿಸ್ಟಂ ಅಪ್‌ಡೇಟುಗಳು : ನೀವು ಬಳಸೋ ಆಪರೇಟಿಂಗ್ ಸಿಸ್ಟಂ ಹಳೆಯದಾದಷ್ಟೂ, ವೈರಸ್ಸುಗಳ ಕಾಟವೂ ಜಾಸ್ತಿಯಾಗೋ ಸಾಧ್ಯತೆಯಿರುತ್ತೆ. ಮೆಲ್ಟ್ ಡೌನ್ ಮುಂತಾದ ಆಪರೇಟಿಂಗ್ ಸಿಸ್ಟಂನಲ್ಲಿನ ನ್ಯೂನತೆಗಳನ್ನು ಬಳಸಿಕೊಂಡೇ, ಸುಮಾರಷ್ಟು ವೈರಸ್ಸುಗಳು ದಾಳಿ ಮಾಡುತ್ತಿರುತ್ತವೆ. ಹಾಗಾಗಿ, ಆಗಾಗ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ ಡೇಟ್ ಮಾಡುತ್ತಿರೋದು ಒಳ್ಳೆಯದು.
- ಬಳಸೋ ವೈ ಫೈ : ಸಿಕ್ಕ ಸಿಕ್ಕ ಫ್ರೀ ವೈ ಫೈಗಳಿಗೆ ಕನೆಕ್ಟ್ ಮಾಡಿದರೂ, ಕಂಪ್ಯೂಟರಿಗೆ ತೊಂದರೆ ತಪ್ಪಿದ್ದಲ್ಲ. ಮನೆಯ ವೈ ಫೈ, ಮೊಬೈಲಿನ ಹಾಟ್‌ಸ್ಪಾಟುಗಳನ್ನೇ ಬಳಸುತ್ತಿದ್ದರೂ, ಅದಕ್ಕೊಂದು ಗಟ್ಟಿಯಾದ ಪಾಸ್‌ವರ್ಡ್ ಇಡೋದನ್ನು ಮರೆಯಬೇಡಿ. ಅದನ್ನು ಆಗಾಗ ಬದಲಾಯಿಸುತ್ತಿರಿ. ಸುತ್ತಮುತ್ತಲಿನ ಮನೆಯವರು ನಿಮ್ಮ ವೈ ಫೈ, ಹಾಟ್‌ಸ್ಪಾಟ್ ಬಳಸಿ ನೀವು ತೊಂದರೆಗೆ ಸಿಕ್ಕಿ ಹಾಕಿಕೊಳ್ಳೋದು ತಪ್ಪುತ್ತೆ.
5. ಲಿನಕ್ಸ್ ಆಪರೇಟಿಂಗ್ ಸಿಸ್ಟಂ : ನಿಮ್ಮ ಕಂಪ್ಯೂಟರಿನಲ್ಲಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸೋ ಆಯ್ಕೆಯಿದ್ದರೆ ಅದನ್ನೇ ಬಳಸಿ. ಪ್ರಪಂಚದಾದ್ಯಂತ ಬಹುತೇಕರು ವಿಂಡೋಸ್ ಅನ್ನೇ ಬಳಸೋದರಿಂದ ಹೆಚ್ಚಿನ ವೈರಸ್ಸುಗಳಿರೋದು ಸಹಜ. ಹಾಗಾಗಿ ಕುರಿಮಂದೆಯ ದಾರಿಯಲ್ಲೇ ಸಾಗಿ ಹಳ್ಳಕ್ಕೆ ಬೀಳ್ಳೋ ಬದಲು, ಹೊಸ ಹಾದಿ ಹಿಡಿಯೋದು ಸೂಕ್ತ ಅನಿಸುತ್ತೆ.
-ಪ್ರಶಸ್ತಿ ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.