ಆಧಾರ್‌ ಸುತ್ತಮುತ್ತ ಗೊಂದಲಗಳ ಹುತ್ತ…


Team Udayavani, Jan 14, 2019, 12:30 AM IST

aadhar.jpg

ಸಮಸ್ಯೆ ಇರುವುದು ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ಯಾವುದೋ ದಾಖಲೆಯಾಗಿ ಕೊಡುವುದರಲ್ಲಿ ಅಲ್ಲ, ಆಧಾರ್‌ ಯೋಜನೆಯ ಜೊತೆ ಜೋಡಣೆ ಮಾಡಿಕೊಳ್ಳುವುದರಲ್ಲಿ. ನಮ್ಮ ಆಧಾರ್‌ ಸಂಖ್ಯೆ ಪಡೆದು ಆಧಾರ್‌ ಯೋಜನೆಯಲ್ಲಿ ಒಂದು ವ್ಯವಸ್ಥೆ ಬಯೋಮೆಟ್ರಿಕ್‌ ಮೂಲಕ ಲಿಂಕ್‌ ಮಾಡಲು ಹೊರಟಾಗ ನಮ್ಮ ಅಷ್ಟೂ ದಾಖಲೆ ಪುರಾಣಗಳು ಈ ವ್ಯವಸ್ಥೆಯ ವಶವಾಗುತ್ತದೆ. ಅದಕ್ಕೆ ಖಾಸಗಿ, ಸರ್ಕಾರಿ ಎಂಬ ಕಟ್ಟುಪಾಡು ಕೂಡ ಇಲ್ಲ. 

ಕೇಂದ್ರ ಸರ್ಕಾರದ ವಿಶಿಷ್ಟ ಗುರುತು ಪ್ರಾಧಿಕಾರ ಯುಐಡಿಎಐನ ಯೋಜನೆ ಹಲವು ದೃಷ್ಟಿಯಿಂದ ಮಹತ್ವವಾದದ್ದು. ಈ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಒಂದು ವಿಶಿಷ್ಟ ಗುರುತಿನ ನಂಬರ್‌ ನೀಡಿ, ಆತನ ಮಾಹಿತಿಗಳ ದತ್ತಾಂಶವನ್ನು ಸಂಗ್ರಹಿಸುವುದು ಸರಿಯಾದ ದಿಕ್ಕಿನಲ್ಲಿನ ನಡೆ. ಯೋಜನೆಯ ಜಾರಿಯಲ್ಲಿನ ಸಣ್ಣ ಪುಟ್ಟ ತಪ್ಪುಗಳ ಹೊರತಾಗಿ ಇದು ವಿಶ್ವದ ಗಮನ ಸೆಳೆದಿತ್ತು. ನೂರಾರು ಕೋಟಿ ಜನಸಂಖ್ಯೆಯ ದೇಶದಲ್ಲಿ ನಕಲು ಸಾಕಷ್ಟು ಸುಲಭ. ಅಂಥದ್ದರಲ್ಲಿ ನಕಲು ಸಾಧ್ಯವಿಲ್ಲ ಎಂಬಂತೆ ಬೆರಳುಗಳ ಬಯೋಮೆಟ್ರಿಕ್‌, ಕಣ್ಣಿನ ಪಾಪೆ ಗುರುತು ಥರಹದ ವಿಶಿಷ್ಟ ಸಾಕ್ಷ್ಯಗಳ ಮೂಲಕ ಜನರನ್ನು ದಾಖಲಿಸಿ ಅವರಿಗೆ ಗುರುತಿನ ಸಂಖ್ಯೆ ನೀಡಿದ್ದು ನಿಜಕ್ಕೂ ಸ್ವಾಗತಾರ್ಹ. ಹ್ಯಾಟ್ಸ್‌ ಆಫ್ ಟು ನಂದನ್‌ ನೀಲೇಕಣಿ ಟೀಮ್‌.

ಅಂಕುಶ ನಿರೀಕ್ಷಿತ!
ಹೀಗಿದ್ದೂ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 2018ರ ಸೆಪ್ಟೆಂಬರ್‌ 18ರಂದು ಆಧಾರ್‌ನ ಬಳಕೆಗೆ ಅಂಕುಶ ತಂದಿದ್ದು ನಿರೀಕ್ಷಿತವೇ. ಇವತ್ತಿಗೂ ನಮ್ಮಲ್ಲಿ ಸಮರ್ಥವಾದ ದತ್ತಾಂಶ ರಕ್ಷಣಾ ಕಾಯ್ದೆ ಇಲ್ಲ. ಇಂಥ ಸಂದರ್ಭದಲ್ಲಿ ಆಧಾರ್‌ನ ಜೊತೆ ಜೋಡಣೆ ಮಾಡುವ ಯೋಜನೆಯಡಿ ಆಧಾರ್‌ನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಖಾಸಗಿಯವರಿಗೂ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಕುರಿತು ಇಡೀ ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬರೋಬ್ಬರಿ 31 ಆಕ್ಷೇಪದ ಅರ್ಜಿಗಳು ಸುಪ್ರೀಂಕೋರ್ಟ್‌ ಮುಂದೆ ಸಲ್ಲಿಕೆಯಾಗಿದ್ದವು.

ಉತ್ಛ ನ್ಯಾಯಾಲಯ ಆಧಾರ್‌ ಬಳಕೆಗೆ ತನ್ನ 4-1ರ ತೀರ್ಪಿನಲ್ಲಿ ಹಲವು ಷರತ್ತುಗಳನ್ನು ಹಾಕಿತ್ತು. ಪಾನ್‌ ಜೊತೆ ಆಧಾರ್‌ನ 12 ಅಂಕಿಗಳ ಸಂಖ್ಯೆಯನ್ನು ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಿದ ಅದು ಸಿಮ್‌ ಕಾರ್ಡ್‌ ಖರೀದಿಗೆ, ಖಾಸಗಿ ವ್ಯವಸ್ಥೆಗಳಿಗೆ, ಶಾಲಾ ದಾಖಲಾತಿ, ಸಿಬಿಎಸ್‌ಸಿ ಮೊದಲಾದ ಶೈಕ್ಷಣಿಕ ಸೇರ್ಪಡೆಗೆ ಆಧಾರ್‌ ಜೋಡಣೆಯನ್ನು ನಿಷೇಧಿಸಿದೆ. ಬ್ಯಾಂಕ್‌ನ ಕೆವೈಸಿಗೆ ಆಧಾರ್‌ ಜೋಡಣೆ ಬಳಕೆಯನ್ನು ತೆಗೆದುಹಾಕಲು ತಿಳಿಸಲಾಗಿದೆ. ಆದರೆ ಅದಕ್ಕೆ ಆಧಾರ್‌ ಕಾಯ್ದೆ ಮೂಲಕ ದತ್ತವಾದ ಸಾಂವಿಧಾನಾತ್ಮಕ ರಕ್ಷಣೆಯನ್ನು ಎತ್ತಿಡಿಯಲಾಗಿದೆ.

ಇಷ್ಟು ಹಳೆ ಸುದ್ದಿ. ಈಗ ಸರ್ಕಾರ ಮತ್ತೆ ಸಿಮ್‌ ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯನ್ನು ಹಿಂಬಾಗಿಲ ಮೂಲಕ ತರಲು ಹೊರಟಿದೆ. ಗ್ರಾಹಕನ ಒಪ್ಪಿಗೆ ಇದ್ದರೆ ಜೋಡಣೆಯನ್ನು ಅನುಮತಿಸಬಹುದು ಎಂಬುದು ಪ್ರತಿಪಾದನೆ. ವ್ಯವಸ್ಥೆಯಲ್ಲಿ “ಬಹುದು’ ಎಂಬುದನ್ನು ಕಡ್ಡಾಯದ ರೀತಿ ಬಳಸುವುದು ಕಷ್ಟವಲ್ಲ. ಇಂಥ ಕಡ್ಡಾಯದ ವಿರುದ್ಧ ಹೋರಾಡುವ ಚಿಂತನೆ, ಸಾಮರ್ಥ್ಯ ಮತ್ತು ಅವಕಾಶ ಸಾಮಾನ್ಯ ನಾಗರಿಕನಿಗೆ ಕಷ್ಟ. ಅದನ್ನು ಬಳಸಿಕೊಳ್ಳಲು ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದೆ.

ಸುಲಭ ದಾಖಲೆ, ಕದಿಯುವವರಿಗೂ!
ವಿಷಯವನ್ನು ಇನ್ನೊಂದು ಮಗ್ಗುಲಿನಿಂದ ನೋಡಬೇಕಾಗಿದೆ. ಆಧಾರ್‌ ಯೋಜನೆ ಜಾರಿಗೆ ಬಂದ ನಂತರ ಸಿಮ್‌ ಖರೀದಿ ಇರಬಹುದು, ಬ್ಯಾಂಕ್‌ ಖಾತೆ ತೆಗೆಯುವುದಿರಬಹುದು, ಇದೆಲ್ಲ ಅತ್ಯಂತ ಸರಳ ಕೆಲಸವಾಗಿ ಮಾರ್ಪಟ್ಟಿತ್ತು. ಆ ದಾಖಲೆ ಕೊಡು, ಈ ದಾಖಲೆ ಇಡು, ಫೋಟೋ, ಸಹಿ ಪರಿಪಾಟಲುಗಳು ಮಾಯವಾಗಿತ್ತು. ಪ್ರಾಮಾಣಿಕವಾಗಿ ಬ್ಯಾಂಕ್‌ ಖಾತೆ, ಸಿಮ್‌ ಖರೀದಿಗೆ ಮುಂದಾಗುವವನ ಸಮಯ, ಹಣ ಉಳಿತಾಯವಾಗುತ್ತಿತ್ತು. ಹತ್ತು ಹಲವು ಸಂದರ್ಭಗಳಲ್ಲಿ ನೂರು ದಾಖಲೆ ಇಡುವ ಬದಲು ಒಂದು ಆಧಾರ್‌ನ ಜೆರಾಕ್ಸ್‌ ಸಾಕಾಗುತ್ತಿತ್ತು. ಸ್ವಾರಸ್ಯ ಎಂದರೆ, ಉತ್ಛನ್ಯಾಯಾಲಯದ ತೀರ್ಪು ಬಂದು ಮೂರು ತಿಂಗಳುಗಳೇ ಕಳೆದಿವೆ. ಇತ್ತೀಚಿನವರೆಗೂ ಸಿಮ್‌ ಖರೀದಿಗೆ ಆಧಾರ್‌ ಬಯೋಮೆಟ್ರಿಕ್‌ ಬೇಕಾಗಿತ್ತು.

ಸಮಸ್ಯೆ ಇರುವುದು ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ಯಾವುದೋ ದಾಖಲೆಯಾಗಿ ಕೊಡುವುದರಲ್ಲಿ ಅಲ್ಲ, ಆಧಾರ್‌ ಯೋಜನೆಯ ಜೊತೆ ಜೋಡಣೆ ಮಾಡಿಕೊಳ್ಳುವುದರಲ್ಲಿ. ನಮ್ಮ ಆಧಾರ್‌ ಸಂಖ್ಯೆ ಪಡೆದು ಆಧಾರ್‌ ಯೋಜನೆಯಲ್ಲಿ ಒಂದು ವ್ಯವಸ್ಥೆ ಬಯೋಮೆಟ್ರಿಕ್‌ ಮೂಲಕ ಲಿಂಕ್‌ ಮಾಡಲು ಹೊರಟಾಗ ನಮ್ಮ ಅಷ್ಟೂ ದಾಖಲೆ ಪುರಾಣಗಳು ಈ ವ್ಯವಸ್ಥೆಯ ವಶವಾಗುತ್ತದೆ. ಅದಕ್ಕೆ ಖಾಸಗಿ, ಸರ್ಕಾರಿ ಎಂಬ ಕಟ್ಟುಪಾಡು ಕೂಡ ಇಲ್ಲ. ಎಲ್ಲವೂ ಜೋಡಣೆಯಾದ ದಾಖಲೆಗಳು ಪರರಿಗೆ ಸಿಗುತ್ತವೆ ಎಂತಾದರೆ ಅದು ಅಪಾಯವೇ ಸರಿ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ನಿರ್ಬಂಧದ ತೀರ್ಪು ನೀಡಿತ್ತು.

ಬಹುಶಃ ಆಧಾರ್‌ನ “ಲಿಂಕ್‌’ ಮಾಡುವ ಅವಕಾಶವನ್ನು ಯುಐಡಿಎಐ ಇತರರಿಗೆ ಕೊಡುವುದನ್ನು ತಡೆಯಬಹುದಿತ್ತು. ನಾಗರಿಕನ ಹೆಸರು, ವಿಳಾಸ, ಫೋಟೋಗಳನ್ನು ಮಾತ್ರ ತನ್ನ ದಾಖಲೆಗೆ ಆಧಾರ್‌ ಮೂಲಕ ಪಡೆದುಕೊಳ್ಳುವ ಸೀಮಿತ ಆಯ್ಕೆಯನ್ನು ಖಾಸಗಿ ವ್ಯವಸ್ಥೆಗಳಿಗೆ ಒದಗಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಅಥವಾ ಖುದ್ದು ಯುಐಡಿಎಐ ಕಂಪನಿಗಳ ಮೂಲಕ ಸಲ್ಲಿಕೆಯಾಗುವ ಆಧಾರ್‌ ಸಂಖ್ಯೆ ಆಧಾರಿತ ಅರ್ಜಿಗಳನ್ನು ಎಲೆಕ್ಟ್ರಾನಿಕ್‌ ಮಾದರಿಯಲ್ಲಿ ಪರಿಶೀಲಿಸುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿ ಆಧಾರ್‌ನ ವಿಶಿಷ್ಟ ದಾಖಲೆಗಳನ್ನು ಕಾಪಾಡಬಹುದಿತ್ತು. ಇದಕ್ಕಿರುವ ತೊಂದರೆಗಳ ಬಗ್ಗೆ ಎಲ್ಲಿಯೂ ಚರ್ಚೆ ನಡೆದಂತೆ ಕಾಣುವುದಿಲ್ಲ.

ಎಲ್‌ಐಸಿ ಉಪದ್ವಾಪ್ಯ!
ಸುಪ್ರೀಂಕೋರ್ಟ್‌ ತೀರ್ಪಿನಿಂದ ಎರಡು ಅಂಶಗಳು ಸ್ಪಷ್ಟವಾಗಿವೆ. ಜೋಡಣೆ ಹಾಗೂ ದಾಖಲೆ ಎರಡು ವಿಭಿನ್ನ ವಿಚಾರಗಳು. ಶಾಲೆ ದಾಖಲಾತಿ, ಯುಜಿಸಿ, ಎನ್‌ಇಇಟಿ, ಸಿಬಿಎಸ್‌ಇ ಮೊದಲಾದ ನೋಂದಣಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಆಧಾರ್‌ ದಾಖಲೆ ನೀಡುವುದನ್ನು ಕಡ್ಡಾಯ ಎಂದು ಹೇಳುವಂತಿಲ್ಲ. ಸಿಮ್‌ ಖರೀದಿ, ಬ್ಯಾಂಕ್‌ ಖಾತೆ ಆರಂಭದ ಸಂದರ್ಭದಲ್ಲಿ ಆಧಾರ್‌ ಜೋಡಣೆಯ ವ್ಯವಸ್ಥೆಯನ್ನು ಮುಂದುವರೆಸುವಂತಿಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ, ಆಧಾರ್‌ ಸಂಖ್ಯೆಯನ್ನು ದಾಖಲೆಯಾಗಿ ಸ್ವಯಂಪ್ರೇರಿತವಾಗಿ ಕೊಟ್ಟರೆ ತಪ್ಪಿಲ್ಲ, ಬೇಕೇ ಬೇಕು ಎನ್ನುವುದು ಕಾನೂನುಬಾಹಿರ. ಆಧಾರ್‌ ಜೋಡಣೆಗೆ ಇತರ ವ್ಯವಸ್ಥೆಗಳು ಮುಂದಾಗುವಂತಿಲ್ಲ, ಬದಲಿ ದಾಖಲೆ ಕೇಳಬೇಕು.

2018ರ ಅಕ್ಟೋಬರ್‌ 19ರ ವೇಳೆಗೆ ಭಾರತೀಯ ಜೀವವಿಮಾ ನಿಗಮ ತನ್ನೆಲ್ಲ ಶಾಖೆಗಳಿಗೆ ಸುತ್ತೋಲೆ ಕಳುಹಿಸಿ ಪಾಲಿಸಿದಾರರನ್ನು ಆಧಾರ್‌ ಮೂಲಕ ದೃಢೀಕರಣ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕೈ ಬಿಟ್ಟಿರುವುದನ್ನು ತಿಳಿಸಿದೆ. ಈಗಾಗಲೇ ಆಧಾರ್‌ಅನ್ನು ಗುರುತಿನ ದಾಖಲೆಯಾಗಿ ಪಡೆದುಕೊಂಡಿರುವ ಪಕ್ಷದಲ್ಲಿ ಪಾಲಿಸಿಯಲ್ಲಿನ ವಿಳಾಸ ಬದಲಾವಣೆ, ನಾಮಿನಿ, ಪುನಶ್ಚೇತನ, ನಕಲು ಪಡೆಯುವ ಸಂದರ್ಭಗಳಲ್ಲಿ, ತಿದ್ದಪಡಿ, ವರ್ಗಾವಣೆ, ಸಾಲ ಮೊದಲಾದ ಅವಕಾಶದಲ್ಲಿ ಪರ್ಯಾಯ ದಾಖಲೆ ಪಡೆಯಬೇಕು ಎಂದು ಸೂಚಿಸಿದೆ. ಪ್ರಸ್ತುತ ಎಲ್‌ಐಸಿಯಲ್ಲಿ ಯಾವ ವ್ಯವಹಾರಕ್ಕೂ ಆಧಾರ್‌ ಕಾರ್ಡ್‌ನ್ನು ಒಂದು ದಾಖಲೆಯಾಗಿ ಪರಿಗಣಿಸದ ವಿಪರ್ಯಾಸದ ಸನ್ನಿವೇಶ ನಿರ್ಮಾಣವಾಗಿದೆ. ಕೇಳಿದರೆ, ಆಧಾರ್‌ ಜೆರಾಕ್ಸ್‌ನ್ನು ನಾವು ಪಡೆಯುವಂತಿಲ್ಲ ಎಂಬ ಉತ್ತರ ಲಭ್ಯವಾಗುತ್ತದೆ.

ಆಧಾರ್‌ನ್ನು ಲಿಂಕ್‌ ಮಾಡಿದ ಪಾಲಿಸಿದಾರ ಅದನ್ನು ಕಡಿತಗೊಳಿಸಲು ಸೂಚಿಸಿದರೆ ಆ ಕ್ರಮಕ್ಕೆ ಮುಂದಾಗುವುದಾಗಿ ಎಲ್‌ಐಸಿ ತಿಳಿಸಿದೆ. ಆದರೆ ಜೋಡಣೆಯ ಹೊರತಾಗಿ ಆಧಾರ್‌ ಕಾರ್ಡ್‌ನ ಜೆರಾಕ್ಸ್‌ಅನ್ನು ಕೂಡ ಹೆಸರು, ವಿಳಾಸ, ವಯಸ್ಸಿನ ದಾಖಲೆಯಾಗಿ ಎಲ್‌ಐಸಿ ಪಡೆಯುತ್ತಿಲ್ಲ. ಅಮಾನ್ಯಿàಕರಣವಾದ 500, ಸಾವಿರ ರೂ. ನೋಟುಗಳಂತೆಯೇ ಈ ವಿಮಾ ಸಂಸ್ಥೆ ಆಧಾರ್‌ ಕಾರ್ಡ್‌ ಅನ್ನು ಪರಿಗಣಿಸಿದೆ. ಆಧಾರ್‌ ಈಗಲೂ ಸಂಪೂರ್ಣ ಮಾನ್ಯ. ಆದರೆ ಅದನ್ನು ಜೋಡಿಸಿ ನೀವು ಪಾಲಿಸಿಗಳನ್ನು ತರಿಸುವುದು ಸಮ್ಮತವಲ್ಲ. ಆದರೆ, ಪಾಲಿಸಿದಾರ ತನ್ನ ಆಧಾರ್‌ ಕಾರ್ಡ್‌ ಅನ್ನು ಸ್ವಯಂಪ್ರೇರಿತವಾಗಿ ನೀಡಿದರೆ ಅದನ್ನು ದಾಖಲೆಯಾಗಿ ಪರಿಗಣಿಸಬಹುದು ಎಂದು ಆ ಸಂಸ್ಥೆಗೆ ಹೇಳುವ ಪ್ರಾಜ್ಞರು ಬೇಕಾಗಿದ್ದಾರೆ.

ತೀರ್ಪು ಜಾರಿಯಲ್ಲಿ “ಹಿಂದುಳಿದ’ ಇಲಾಖೆ!
ಆಧಾರ್‌ ಕುರಿತು ಗೊಂದಲಗಳು ಮುಂದುವರೆದಿದ್ದಕ್ಕೆ ಇನ್ನೊಂದು ಉದಾಹರಣೆಯನ್ನು ಕೊಡಬಹುದು. ಇತ್ತೀಚಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದು ಪ್ರಕಟಣೆಯನ್ನು ಹೊರಡಿಸಿದೆ. 2018-19ರ ಸಾಲಿನ ವಿದ್ಯಾರ್ಥಿ ವೇತನಕ್ಕೆ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯವಾಗಿದ್ದು, ಚಾಲ್ತಿ ಇಟ್ಟ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಿಸಲು ಶಾಲಾ ಮುಖ್ಯ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಲು ಕ್ರಮ ತೆಗೆದು ಕೊಳ್ಳಬೇಕು ಎಂದು ಅದು ಸೂಚಿಸಿದೆ. ಸುಪ್ರೀಂಕೋರ್ಟ್‌ ತೀರ್ಪು ಬಂದ ನಂತರ ಅಂದರೆ 2018ರ ಡಿಸೆಂಬರ್‌ 28ರಷ್ಟು ಈಚೆಗೆ ಪ್ರಕಟಣೆ ಹೊರಡಿಸಿರುವುದನ್ನು ಕೂಡ ಕಾಣುತ್ತೇವೆ. ವಿದ್ಯಾರ್ಥಿ ವೇತನ ಮಂಜೂರಾತಿ ಹಂತದಲ್ಲಿರುವಾಗ ಆಧಾರ್‌ ಜೋಡಣೆಯಾಗದ ಬ್ಯಾಂಕ್‌ ಖಾತೆಗೆ ಸ್ಕಾಲರ್‌ಶಿಪ್‌ನ ಮೊತ್ತವನ್ನು ವರ್ಗಾಯಿಸಲು ಆಗುವುದಿಲ್ಲ ಎಂಬ ಎಚ್ಚರಿಕೆಯೂ ಆ ಪ್ರಕಟಣೆಯಲ್ಲಿದೆ. ಎಲ್‌ಐಸಿಯ ಕ್ರಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಈ “ಕಲ್ಯಾಣ ಗುಣ’ ಪ್ರಶ್ನಾರ್ಹ.

ಈಗಲೂ ಆಧಾರ್‌ ನೋಂದಣಿ ನಡೆಯುತ್ತಿದೆ. ನೋಂದಣಿ ಮಾಡಿಕೊಳ್ಳುವಾಗಲೇ ಹೆಚ್ಚು ಮುಂಜಾಗ್ರತೆಯಿಂದ ಅಲ್ಲಿನ ಮಾಹಿತಿಗಳನ್ನು ಕಂಪ್ಯೂಟರ್‌ ಆಪರೇಟರ್‌ ತುಂಬಿದರೆ ಅಷ್ಟರಮಟ್ಟಿಗೆ ಜನರ ಆ ನಂತರದ ತಿದ್ದುಪಡಿ ಪ್ರಹಸನ ಕೊನೆಗೊಳ್ಳುತ್ತದೆ. ದಾಖಲೆ ಆಧರಿಸಿ ಸರಿಯಾಗಿ ಜನ್ಮ ದಿನಾಂಕ ದಾಖಲಿಸಿದರೆ ಇದು ಜನ್ಮದಿನ ದಾಖಲೆಯೂ ಆಗಬಲ್ಲದು. ತೀರಾ ವಯಸ್ಸಾದವರಿಗೆ ಬಯೋಮ್ಯಾಟ್ರಿಕ್‌ ದಾಖಲೆ ಸಂಗ್ರಹಿಸಲಾಗುವುದಿಲ್ಲ ಎಂಬ ಅಂಶಕ್ಕೂ ಅದು ಮಾನ್ಯತೆ ನೀಡಬೇಕು. ಈಗಲೂ ದೇಶದ ಬಹುಸಂಖ್ಯಾತರ ಅಭಿಪ್ರಾಯವೆಂದರೆ ಆಧಾರ್‌ ಬೇಕು. ಆದರೆ ಆಧಾರ್‌ ಜೋಡಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರ ಮಾಹಿತಿಗಳನ್ನು ಸಂರಕ್ಷಿಸಿ ದತ್ತಾಂಶ ಹಂಚಿಕೊಳ್ಳುವಲ್ಲಿ “ಚೂÂಸಿ’ ಆಗಬೇಕು.

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.