ಕೂಲ್‌ ಗೋಡೆಗಳು


Team Udayavani, Apr 3, 2017, 4:17 PM IST

02-ISIRI-4.jpg

ಚಳಿಗಾಲದಲ್ಲಿ ಮೈಗೆ ತಾಗಿ ಬೆಚ್ಚನೆಯ ಅನುಭವ ನೀಡುವ ಸೂರ್ಯನ ಕಿರಣ ಬೇಸಿಗೆಯಲ್ಲಿ ಶತ್ರುವಿನಂತೆ ಕಾಡುತ್ತದೆ. ಅದಕ್ಕೆ ಮನೆಯನ್ನು ತಂಪಾಗಿಸುವ ಉಪಾಯಗಳತ್ತ ನಾವು ಚಿಂತಿಸಬೇಕಾಗುತ್ತದೆ. ಮನೆಯ ಒಳಾಂಗಣ ಹಾಗೂ ಹೊರಗಿನ ವಾತಾವರಣದ ಮಧ್ಯೆ ಇದ್ದುಕೊಂಡು ಹವಾಮಾನದ ವೈಪರಿತ್ಯಗಳಿಂದ ಕಾಪಾಡುವುದು ನಾಲ್ಕು ಗೋಡೆ ಹಾಗೂ ಸೂರು. ಮನೆಯನ್ನು ತಂಪಾಗಿಸಲು ಟೆರೇಸ್‌ ಗಾರ್ಡನ್‌ ಮಾಡುವುದು ಸುಲಭವಾದರೂ ಗೋಡೆಗಳ ಮೇಲೆ ಗಿಡ ಬೆಳೆಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಗೋಡೆಗಳನ್ನು ಶಾಖನಿರೋಧಕವಾಗಿ ಮಾಡಿದರೆ, ಬೇಸಿಗೆಯ ಬಿಸಿಯೇರಿಕೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. 

ಪೂರ್ವ ಪಶ್ಚಿಮದ ಗೋಡೆಗಳಿಗೆ ರಕ್ಷಣೆ
ಪೂರ್ವಕ್ಕಿಂತ ಪಶ್ಚಿಮದ ಗೋಡೆಗಳಿಗೆ ಹೆಚ್ಚು ರಕ್ಷಣೆಯ ಅಗತ್ಯವಿದ್ದರೂ ಬಿರುಬೇಸಿಗೆಯಲ್ಲಿ ಬೆಳಗ್ಗೆ ಉಗುರು ಬೆಚ್ಚಗಿನ
ನೀರಿನ ಸ್ನಾನ ಹಾಗೂ ಬಿಸಿಬಿಸಿ ಕಾಫಿ- ಟೀ ಸವಿಯುವ ಅಭ್ಯಾಸವಿರುವವರಿಗೆ ಸುತ್ತಲಿನ ವಾತಾವರಣ ತಂಪಾಗಿದ್ದರೆ ಅಸ್ವಾಧಿಸಲು ಸಹಾಯಕಾರಿಯಾಗಿರುತ್ತದೆ. ಜೊತೆಗೆ ನಮಗೆಲ್ಲ ಬೆಳಗ್ಗೆಯ ಹೊತ್ತು ವಾತಾವರಣ ಬಿಸಿಯೇರುವ ಅನುಭವ ಹೆಚ್ಚಾಗುವುದು ದಿನನಿತ್ಯ ತರಾತುರಿಯಲ್ಲಿ ಕೆಲಸ ಕಾರ್ಯಗಳಿಗೆ ತೆರೆಳಲು ಅನುವಾಗುತ್ತಿರುವಾಗಲೇ. ಹಾಗಾಗಿ ಪೂರ್ವದಿಕ್ಕಿನಿಂದಲೂ ಬೇಸಿಗೆಯಲ್ಲಿ ಶಾಖ ಮನೆಯನ್ನು ಕಾಡದಂತೆ ನೋಡಿಕೊಳ್ಳುವುದು ಉತ್ತಮ. ನಮ್ಮ ಮನೆಯ ಗೋಡೆಗಳನ್ನು ಮಾಮೂಲಿ ಕಾಂಕ್ರಿಟ್‌ ಬ್ಲಾಕ್‌ಬಳಸಿ ಕಟ್ಟಿದ್ದರೆ, ಅವುಗಳ ಶಾಖನಿರೋಧಕ ಗುಣ ಕಡಿಮೆ ಇರುತ್ತದೆ. ಆದುದರಿಂದ ಅವುಗಳ ಮುಂದೆ- ಮನೆಯ ಹೊರಮುಖಕ್ಕೆ ಒಂದು ಪದರ ಕ್ಲಾಡಿಂಗ್‌ ರೀತಿಯಲ್ಲಿ ಏರೇಟೆಡ್‌ ಕಾಂಕ್ರಿಟ್‌ ಬ್ಲಾಕ್ಸ್‌ ಕಟ್ಟಿದರೆ, ಪೂರ್ವದ ಗೋಡೆಗೂ ಸಾಕಷ್ಟು ಶಾಖನಿರೋಧಕ ಗುಣ ಲಭ್ಯವಾಗುತ್ತದೆ.

ಮನೆಯ ಮುಂಭಾಗವಾದ ಕಾರಣ, ಎಲಿವೇಷನ್‌ ಟ್ರೀಟ್‌ ಮೆಂಟ್‌ ರೀತಿಯಲ್ಲಿಯೂ ಸಹ ಟೆರ್ರಾಕೋಟ ಬ್ಲಾಕ್‌ಗಳನ್ನು ಕಟ್ಟಿದರೆ, ಗೋಡೆಗಳಿಗೆ ಹೆಚ್ಚುವರಿ ಶಾಖನಿರೋಧಕ ಗುಣ ಹೆಚ್ಚುವುದರ ಜೊತೆಗೆ ನೋಡಲು ಹೆಚ್ಚು ಸುಂದರವಾಗಿಯೂ ನಮ್ಮ ಮನೆ ಕಾಣುತ್ತದೆ. ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಿದ್ದ ಸುಟ್ಟ ಮಣ್ಣಿನ ಇಟ್ಟಿಗೆಗಳಲ್ಲಿ ಸಾಕಷ್ಟು ಸಣ್ಣ ಸಣ್ಣ ರಂಧ್ರಗಳಿರುವ ಕಾರಣ ಅವು ನೈಸರ್ಗಿಕವಾಗಿಯೇ ಹೆಚ್ಚು ಶಾಖನಿರೋಧಕ ಗುಣ ಹೊಂದಿರುತ್ತವೆ. ಸಾಮಾನ್ಯವಾಗಿ ಪೂರ್ವದ ಗೋಡೆಗೆ ಮಾಮೂಲಿ
ಇಟ್ಟಿಗೆಗಳನ್ನು ಬಳಸಿದ್ದರೆ, ಹೆಚ್ಚುವರಿ ಶಾಖನಿರೋಧಕ ಪದರಗಳನ್ನು ನೀಡುವ ಅಗತ್ಯ ಇರುವುದಿಲ್ಲ.

ಪಶ್ಚಿಮದ ಗೋಡೆಗಳಿಗೆ ಅದರಲ್ಲೂ ಅವು ಮನೆಯ ಮುಂಭಾಗದಲ್ಲಿದ್ದು, ಮಧ್ಯಾಹ್ನದ ನಂತರ ಸೂರ್ಯನ ಪ್ರಖರ ಕಿರಣಗಳಿಗೆ ಈಡಾಗುತ್ತಿದ್ದರೆ, ಆಗ ನಾವು ಹೆಚ್ಚುವರಿ ಶಾಖನಿರೋಧಕ ವಸ್ತುಗಳನ್ನು ಬಳಸುವುದು ಅನಿವಾರ್ಯ. ಜೇಡಿಮಣ್ಣಿನ ಠೊಳ್ಳು
ಇಟ್ಟಿಗೆ ಇಲ್ಲ ಏರೇಟೆಡ್‌ ಕಾಂಕ್ರಿಟ್‌ ಬ್ಲಾಕ್‌ಗಳನ್ನು ಬಳಸಿ ಸೀಟ್‌ ಪೂ›ಫ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೇವಲ ಮೂರು 
ನಾಲ್ಕು ಇಂಚು ದಪ್ಪದ ಜಂಬಿಟ್ಟಿಗೆ- ಲ್ಯಾಟರೈಟ್‌ ಕಲ್ಲಿನ ಕ್ಲಾಡಿಂಗ್‌ ಗಳೂ ಕೂಡ ಲಭ್ಯ. ಇವನ್ನೂ ಕೂಡ ಎಲಿವೇಷನ್‌ಗೆ ಕಲಾತ್ಮಕವಾಗಿ ಬಳಸುವುದರ ಜೊತೆಗೆ ಶಾಖನಿರೋಧಕ ಪದರವನ್ನಾಗಿಯೂ ಬಳಸಬಹುದು.

ಜಾಲಿ ವರ್ಕ್ಸ್ ಮೂಲಕ ತಂಪು
ಇತ್ತೀಚಿನ ದಿನಗಳಲ್ಲಿ ನಾನಾ ವಿನ್ಯಾಸದ ಕಂಪ್ಯೂಟರ್‌ ಕಟ್‌ ವಿನ್ಯಾಸಗಳನ್ನು ಅಲಂಕಾರಿಕವಾಗಿ ಬಳಸುವುದು ಜನಪ್ರಿಯವಾಗುತ್ತಿದೆ. ಈ ಮಾದರಿಯ ಪದರಗಳನ್ನು ತೀರ ಗೋಡೆಗೆ ತಾಗಿದಂತೆ ಇಡದೆ ಒಂದೆರಡು ಇಂಚು ದೂರ ಅಂದರೆ ಗಾಳಿ ಆಡಲು ಅನುಕೂಲಕರವಾದ ರೀತಿಯಲ್ಲಿ ಅಳವಡಿಸಿದರೆ, ನೋಡಲು ಸುಂದರವಾಗಿರುವುದರ ಜೊತೆಗೆ ಸೂರ್ಯನ ನೇರ ಪ್ರಹಾರದಿಂದಲೂ
ಮನೆಯನ್ನು ರಕ್ಷಿಸುತ್ತದೆ. 

ನೀರುನಿರೋಧಕ ಗುಣ ಹೊಂದಿರುವ ಮರ, ಕೊರಿಯನ್‌ ಮಟೆರಿಯಲ್‌, ಇಲ್ಲವೇ ತುಕ್ಕುನಿರೋಧಕ ಗುಣ ಹೊಂದಿರುವ ಸ್ಟೆನ್‌ಲೆಸ್‌ ಸ್ಟೀಲ್‌ ಶೀಟುಗಳನ್ನು ನಮಗಿಷ್ಟ ವಾದ ವಿನ್ಯಾಸಗಳಲ್ಲಿ ಕೊರೆಸಿ ನೆರಳು ನೀಡಲು ಬಳಸಬಹುದು. ಲೋಹದ ತಗಡುಗಳನ್ನು
ಬಳಸುವುದಾದರೆ ಅವಕ್ಕೆ ಮ್ಯಾಟ್‌ ಅಂದರೆ ಸ್ವಲ್ಪ ತರಿತರಿಯಾಗಿರುವಂತಹ μನಿಶ್‌ ನೀಡುವುದು ಉತ್ತಮ. ಹೆಚ್ಚು ಶೈನಿಂಗ್‌
ಇದ್ದರೆ, ಕಣ್ಣಿಗೆ ಸೂರ್ಯಕಿರಣಗಳು ಹೊಡೆಯುವುದು ತಪ್ಪುವುದಿಲ್ಲ.

ವೈರ್‌ಕಟ್‌ ಇಟ್ಟಿಗೆ ಹಾಗೂ ಟೆರ್ರಕೋಟ ಬ್ಲಾಕ್ಸ್‌ಗಳನ್ನು ಬಳಸಿಯೂ ನಾವು ಗೋಡೆಗಳಿಗೆ ನೆರಳನ್ನು ನೀಡುವ ಸ್ಕ್ರೀನ್‌ ವಾಲ್‌ಗ‌ಳನ್ನು ಕಟ್ಟಬಹುದು. ಗಾಳಿ ಸರಾಗವಾಗಿ ಹರಿದುಹೋಗುವ ರೀತಿಯಲ್ಲಿ ಸಾಕಷ್ಟು ಸಂದಿಯನ್ನು ಬಿಟ್ಟು ಕಟ್ಟಿದರೆ, ಬಿಸಿಲು ನೇರವಾಗಿ
ಬಿದ್ದರೂ ನಮ್ಮ ಮನೆಯ ಗೋಡೆಗಳು ಬಿಸಿಯೇರದೆ ತಂಪಾಗಿರುತ್ತವೆ. ನಮ್ಮ ದೇಹದ ಉಷ್ಣಾಂಶ 37 ಡಿಗ್ರಿಯಷ್ಟಿದ್ದರೂ ಅದರಲ್ಲಿ ಜೀವಶಕ್ತಿಗೆಂದು ನಾವು ತಿನ್ನುವ ಆಹಾರ ಸದಾಕಾಲ ಶಾಖವಾಗುವುದರಿಂದ, ಪರಿಸರದ ತಾಪಮಾನ ಕಡೇ ಪಕ್ಷ ಹನ್ನೆರಡು 
ಡಿಗ್ರಿಯಷ್ಟು ಅಂದರೆ ಸುಮಾರು 25 ಡಿಗ್ರಿಯಷ್ಟಿದ್ದರೆ, ನಮಗೆ ತಂಪೆನಿಸುತ್ತದೆ. 

ದಕ್ಷಿಣ ಭಾರತದಲ್ಲಿ ವರ್ಷದ ನಾಲ್ಕಾರು ತಿಂಗಳುಗಳ ಗರಿಷ್ಟ ತಾಪಮಾನ ಮುವತ್ತು ಡಿಗ್ರಿ ಸೆಲಿÏಯಸ್‌ ಗಿಂತ ಹೆಚ್ಚಿರುವುದರಿಂದ 
ನಾವು ಅನಿವಾರ್ಯವಾಗಿ ಗಾಳಿ ಹಾಯುವಿಕೆಯ ಮೂಲಕ ನಮ್ಮ ದೇಹಕ್ಕೆ ಆರಾಮದಾಯಕ ಎಂದೆನಿಸುವ ತಾಪಮಾನವನ್ನು ಅಂದರೆ ಇಪ್ಪತ್ತೆ„ದು ಡಿಗ್ರಿ ಆಸು ಪಾಸಿನಲ್ಲಿ ಇರುವಂತೆ ಮನೆಯ ವಿನ್ಯಾಸ ಮಾಡಬೇಕು. ಮನೆಯೊಳಗೆ ಗಾಳಿಯ ಹರಿವು ಕಡಿಮೆ ಆದಂತೆ ಫ್ಯಾನ್‌ ಗಳಿಗೆ ಮೊರೆ ಹೋಗುವ ರೀತಿಯಲ್ಲೇ ಗೋಡೆಗಳು ಬಿಸಿಯೇರಿದರೂ ಅನಿವಾರ್ಯವಾಗಿ ವಿದ್ಯುತ್‌ ಶಕ್ತಿಯನ್ನು
ವ್ಯಯಿಸಬೇಕಾಗುತ್ತದೆ. ಆದುದರಿಂದ ನಮ್ಮ ಮನೆಯ ಗೋಡೆಗಳನ್ನು ಸಾಕಷ್ಟು ತಂಪಾಗಿರಿಸಿಕೊಂಡರೆ ವಿದ್ಯುತ್‌ ಅಭಾವ ವಿರುವ ಬೇಸಿಗೆಯಲ್ಲಿಯೂ ಕೂಡ ತಂಪಾಗಿರಬಹುದು.

ತಂಪೆರೆಯುವ ಸಜಾjಗಳು
ಸಾಮಾನ್ಯವಾಗಿ ಕಿಟಕಿಗಳ ಮೂಲಕ ಮನೆಯನ್ನು ಬಿಸಿಲು ಹಾಗೂ ಮಳೆ ನೇರವಾಗಿ ಪ್ರವೇಶಿಸಬಾರದು ಎಂದು ನಾವು ಲಿಂಟಲ್‌ ಮಟ್ಟದಲ್ಲಿ ಹೊರಚಾಚುಗಳನ್ನು ನೀಡುತ್ತೇವೆ. ಇದೇ ರೀತಿಯಲ್ಲಿ ನಾವು ಗೋಡೆಗಳಿಗೂ ನೆರಳನ್ನು ನೀಡಿದರೆ, ಅವು ಬಿಸಿಯೇರಿ ಮನೆಯ ಒಳಗೆ ಶಾಖವನ್ನು ಹರಿಸುವುದು ತಪ್ಪುತ್ತದೆ. ಲಿಂಟಲ್‌ ಹಾಗೂ ಸೂರಿನ ಮಧ್ಯದ ಭಾಗ ಬೇಸಿಗೆಯಲ್ಲಿ ಹೆಚ್ಚು ಶಾಖದ
ಪ್ರಹಾರಕ್ಕೆ ಒಳಗಾಗುವುದರಿಂದ, ಸೂರು ಮಟ್ಟದಲ್ಲಿ ಇಲ್ಲವೇ ಅದಕ್ಕೂ ಮೇಲೆ- ಪ್ಯಾರಾಪೆಟ್‌ ಮಟ್ಟದಲ್ಲಿ ಎಲಿವೇಶನ್‌ಗೆ ಏನೋ ಎಂಬಂತೆ ನೆರಳು ನೀಡುವ ಹೊರಚಾಚುಗಳನ್ನು ವಿನ್ಯಾಸ ಮಾಡಬಹುದು. ಈ ಪೊ›ಜೆಕ್ಷನ್‌ಗಳನ್ನು ಸೂಕ್ತ ಆಕಾರದಲ್ಲಿ ಡಿಸೈನ್‌ ಮಾಡಿದರೆ, ಬಿಸಿಲು ಹೆಚ್ಚು ತಾಗುವ ಕಡೆಯ ಗೋಡೆಗಳೂ ಕೂಡ ಬೇಸಿಗೆಯ ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ: 9844132826

ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.