ಜೋಳ ಮತ್ತು ಸೂರ್ಯಕಾಂತಿ ಬೀಜ ಬಿಡಿಸುವ ಯಂತ್ರ
Team Udayavani, Oct 14, 2019, 5:00 AM IST
ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಕೃಷಿಕಾರ್ಯಗಳಿಗೆ ಬೇಕಾಗುವ ಯಂತ್ರಗಳನ್ನು ರೂಪಿಸುವುದಕ್ಕೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆದ್ಯತೆ ನೀಡಿದೆ. ಈ ದೆಸೆಯಲ್ಲಿ ಮುಸುಕಿನ ಜೋಳ ಮತ್ತು ಸೂರ್ಯಕಾಂತಿ ತೆನೆಗಳಿಂದ ಬೀಜಗಳನ್ನು ಬೇರ್ಪಡಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದೆ. ಯಂತ್ರದ ಅಶ್ವಶಕ್ತಿ ಹೆಚ್ಚಿದಷ್ಟೂ ಅದು ಬಳಸುವ ವಿದ್ಯುತ್ ಯೂನಿಟ್‌ನ ಪ್ರಮಾಣ ಅಧಿಕ. ಆದ್ದರಿಂದ, ಕಡಿಮೆ ಅಶ್ವಶಕ್ತಿಯ ಕೃಷಿಯಂತ್ರ ರೂಪಿಸುವುದರತ್ತ ತಜ್ಞರು ಗಮನಹರಿಸಿದ್ದಾರೆ. ಮುಸುಕಿನ ಜೋಳ ಮತ್ತು ಸೂರ್ಯಕಾಂತಿ ತೆನೆಗಳಿಂದ ಬೀಜಗಳನ್ನು ಬೇರೆ ಬೇರೆ ಮಾಡುವ ಯಂತ್ರದ ಅಶ್ವಶಕ್ತಿ ಕೇವಲ 0.25 ಹೆಚ್.ಪಿ. ಮಾತ್ರ.
ಈ ಯಂತ್ರವನ್ನು ಸಿಂಗಲ್ ಫೇಸ್‌ನಲ್ಲಿಯೂ ಚಾಲನೆ ಮಾಡಬಹುದು. ಇದರ ಕಮರ್ಷಿಯಲ್ ಬಳಕೆಗೆ ವಿದ್ಯುತ್ ಪರವಾನಗಿ ಅಗತ್ಯವಿಲ್ಲ. ಮನೆಯಲ್ಲಿಯೇ ಇಟ್ಟುಕೊಂಡು ಕೂಡಾ ಬಳಸಬಹುದು. ಇದರ ವೈಶಿಷ್ಟé ಏನೆಂದರೆ ಏಕಕಾಲದಲ್ಲಿ ಇಬ್ಬರು ಮುಸುಕಿನ ಜೋಳ ಅಥವಾ ಸೂರ್ಯಕಾಂತಿ ಬೀಜಗಳನ್ನು ಬೇರ್ಪಡಿಸಬಹುದು. ಪ್ರತಿ ಗಂಟೆಗೆ 100 ಕಿಲೋಗ್ರಾಮ್ ಬೀಜ ಬೇರ್ಪಡೆಯಾಗುತ್ತದೆ. ಈ ಕೆಲಸ ಬೇಗ ಆಗುತ್ತದೆ. ಗುಣಮಟ್ಟವೂ ಇರುತ್ತದೆ.
ಈ ಯಂತ್ರದ ಅಂದಾಜು ಬೆಲೆ 5,000 ರೂ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ತಜ್ಞರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080-23545640
– ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.