ಬ್ಯಾಂಕಿಂಗ್ ಮೇಲೆ ಕೋವಿಡ್ 19 ನೆರಳು
Team Udayavani, Mar 30, 2020, 3:11 PM IST
ಕೋವಿಡ್ 19 , ಜನರ ಸಾಮಾಜಿಕ ಮತ್ತು ಅರ್ಥಿಕ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಬ್ಯಾಂಕಿಂಗ್ ಅಗತ್ಯದ ಸೇವೆ ಆಗಿರುವುದರಿಂದ, ಉಳಿದ ಇಲಾಖೆಗಳಿಗೆ ನೀಡಿದಂತೆ ದೀರ್ಘ ರಜೆ ಕೊಡಲು ಸಾಧ್ಯವಿಲ್ಲ. ಅಂತೆಯೇ ಸರ್ಕಾರ, ಭಾರತೀಯ ಬ್ಯಾಂಕುಗಳ ಒಕ್ಕೂಟ ಮತ್ತು ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಅವಶ್ಯಕ ಸೇವೆ ಒದಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ. ಮಾಸ್ಕ್ ಹಾಕಿದ್ದರಷ್ಟೇ ಪ್ರವೇಶ ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರಿಗ ಸ್ಯಾನಿಟೈಸರ್ ನೀಡಲಾಗುತ್ತಿದೆ. ಮಾಸ್ಕ್ ಧರಿಸಿಕೊಂಡೇ ಬರಬೇಕೆಂದು ಗ್ರಾಹಕರಿಗೆ ತಾಕೀತು ಮಾಡಲಾಗಿದೆ.
ಬ್ಯಾಂಕ್ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಸ್ಯಾನಿಟೈಸರ್ ಬಳಸುತ್ತಿದ್ದಾರೆ. ಗ್ರಾಹಕರಿಗೂ- ಸಿಬ್ಬಂದಿಗೂ ಮಧ್ಯೆ ಲಕ್ಷ್ಮಣ ರೇಖೆ ಎಳೆಯತ್ತಿದ್ದು, ಸೋಷಿಯಲ್ ಡಿಸ್ಟೆನ್ಸ್ ಕಾಯ್ದು ಕೊಳ್ಳಲಾಗುತ್ತಿದೆ. ಕೆಲವು ಬ್ಯಾಂಕುಗಳು ವ್ಯವಹಾರದ ಸಮಯವನ್ನು 10- 2ಗಂಟೆ ಅಥವಾ 10.30 ರಿಂದ 2.30 ಗಂಟೆಗೆ ಬದಲಾಯಿಸಿಕೊಂಡಿವೆ. ಬಹುತೇಕ ಬ್ಯಾಂಕುಗಳು ಭೋಜನ ವಿರಾಮದ ನಂತರ ಗ್ರಾಹಕರ ಸೇವೆಯನ್ನು ನಿಲ್ಲಿಸುತ್ತಿವೆ. ಸಿಬ್ಬಂದಿ ಸಂಖ್ಯೆಯನ್ನುಕಡಿಮೆ ಮಾಡಿವೆ.
ಹಣ ಜಮಾ ಮಾಡುವುದು, ಹಣ ಹಿಂಪಡೆಯುವಿಕೆ , ಹಣ ರವಾನೆ, ಚೆಕ್ ಡಿಪಾಸಿಟ್ ಮಾಡುವುದು, ಚೆಕ್ ಕ್ಲಿಯರಿಂಗ್ ಮತ್ತು ಸರ್ಕಾರದ ವ್ಯವಹಾರಗಳಿಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಾಗಿದೆ. ಹೊಸ ಸಾಲ ಸಂಬಂಧಿ ಕೋರಿಕೆಗಳನ್ನು ಪರಿಸ್ಥಿತಿ ಸುಧಾರಿಸುವವರೆಗೆ ತಡೆಹಿಡಿಲಾಗಿದೆಯಂತೆ. ಕೊರೊನಾ ಕಾಟ ಮುಗಿಯುವವರೆಗೆ ಡಿಜಿಟಲ್ ವ್ಯವಹಾರದ ಮೂಲಕವೇ ಬ್ಯಾಂಕಿಂಗ್ ಸೇವೆ ಪಡೆಯುವಂತೆ ಎಲ್ಲಾ ಬ್ಯಾಂಕ್‌ಗಳೂ ಗ್ರಾಹಕರನ್ನು ವಿನಂತಿಸಿವೆ.
ಇದರ ಜೊತೆಗೆ ಡೆಬಿಟ್ ಕಾರ್ಡ್ ಮೂಲಕ ಹಣ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸುವ ಮೂಲಕ ಗ್ರಾಹಕರ ಬ್ಯಾಂಕ್ ಭೇಟಿಗೆ ಕಡಿವಾಣಹಾಕಲಾಗಿದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆ 24 ಗಂಟೆಯೂ ದೊರಕುವಂತೆ ವ್ಯವಸ್ಥೆಮಾಡಿದೆ. ಸೇವಾಕ್ಷೇತ್ರ ತಲ್ಲಣ ಕರ್ನಾಟಕದಲ್ಲಿ 6.5 ಲಕ್ಷ ಸಣ್ಣ ಉದ್ಯಮಗಳು ಉತ್ಪಾದನೆ ನಿಲ್ಲಿಸಿವೆ. ಇದರಿಂದ 10,000 ಕೋಟಿ ರೂ. ಉತ್ಪಾದನಾ ನಷ್ಟವಾಗುತ್ತಿದೆ. ಈ ಹಣ ಬ್ಯಾಂಕುಗಳ ಮೂಲಕವೇ ಹರಿಯುತ್ತಿತ್ತು ಎನ್ನುವುದು ವಿಶೇಷ.
ಈ ಉದ್ಯಮಗಳಲ್ಲಿ ಸುಮಾರು 70 ಲಕ್ಷ ದುಡಿಯುತ್ತಿದ್ದಾರೆ ಎನ್ನುವುದು ಇನ್ನೊಂದು ಅತಂಕದ ವಿಷಯ. ಸತ್ವಪರೀಕ್ಷೆಯ ಕಾಲ ಮಾರ್ಚ್ ತಿಂಗಳು, ಬ್ಯಾಂಕುಗಳಿಗೆ ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ. ಈ ತಿಂಗಳಲ್ಲಿ ಅವು ಹೆಚ್ಚಿನ ಠೇವಣಿ, ಸಾಲ ನೀಡಿಕೆ ಮತ್ತು ಕಡಿಮೆ ಅನುತ್ಪಾದಕ ಸಾಲಗಳನ್ನು ತೋರಿಸಬೇಕಾಗಿರುತ್ತದೆ. ಆದರೆ, ಈಗ ಹೆಚ್ಚಿನ ಬ್ಯಾಂಕುಗಳು ಯಾವುದೇ ಮಾನದಂಡವನ್ನು ತಲುಪಲಾಗದ ಭಯದಲ್ಲಿ ಇವೆ. ಅನುತ್ಪಾದಕ ಸಾಲವನ್ನು ಗುರುತಿಸುವ ಮತ್ತು ವರ್ಗೀಕರಿಸುವ ಮಾನದಂಡವನ್ನು ಬದಲಿಸಬೇಕು ಮತ್ತು ಕೆಲವು ವಿನಾಯಿತಿಗಳನ್ನು ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.
ಕೋವಿಡ್ 19 ವಿರುದ್ಧ ಹೋರಾಡುವ ಸರ್ಕಾರದ ಪ್ರತಿಯೊಂದು ಕ್ರಮಗಳ ಫಲಶ್ರುತಿಗೆ ಬ್ಯಾಂಕುಗಳೇ ಡೆಲಿವರಿ ಪಾಯಿಂಟ್‌ಗಳು. ಬಹುತೇಕ ಎಲ್ಲಾ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಕೋವಿಡ್ 19 ದಿಂದ ಕೆಂಪಾಗುವ ಲಕ್ಷಣ ಕಾಣುತ್ತಿದೆ.
-ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.