ಹಳ್ಳಿಗರ ಕಿಸೆ ತುಂಬಿಸೋ ಸಂತೆ ಏಡಿ ಮಾರ್ಕೆಟ್‌!


Team Udayavani, Aug 17, 2020, 8:44 PM IST

ಹಳ್ಳಿಗರ ಕಿಸೆ ತುಂಬಿಸೋ ಸಂತೆ ಏಡಿ ಮಾರ್ಕೆಟ್‌!

ಏಡಿ ಸಂತೆ… ಗೋಕಾಕ್‌ ಹೊಳೆ ಹರಿದು ಬಂತೆಂದರೆ, ಬೆಳಗಾವಿ ಮಾರ್ಕೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಏಡಿಗಳು ಲಗ್ಗೆ ಇಟ್ಟಂತೆಯೇ ಲೆಕ್ಕ. ಆರೋಗ್ಯದಾಯಕ, ರುಚಿರುಚಿ ಏಡಿ ಇಲ್ಲಿನವರ ಆಹಾರಲೋಕದಲ್ಲಿ ಪ್ರಮುಖ ಭಾಗವೇ ಆಗಿದೆ. ಈ ಏಡಿ ಸಂತೆ ಬೆಳಗಾವಿ ಹಳ್ಳಿಗರ ಕಿಸೆ ತುಂಬಿಸಿದೆ…

ಮಳೆಗಾಲ! ನಿಸರ್ಗದ ತಂಪು ವೃಷ್ಟಿ. ಈ ಋತು ಕೆಲವರಿಗೆ ಹನಿ, ಮತ್ತೆ ಕೆಲವರಿಗೆ ಮನಿ. ಅದರಲ್ಲೂ ರೈತರಿಗೆ ಈ ಋತು ಬದುಕು ಕಟ್ಟಿಕೊಡುತ್ತೆ. ಬೆಳಗಾವಿಯ ರೈತಾಪಿ ವರ್ಗದ ಮಾಂಸಪ್ರಿಯರು ಮಳೆಗಾಲದಲ್ಲಿ ವಿಶೇಷ ಬ್ಯುಸಿನೆಸ್‌ ಆರಂಭಿಸುತ್ತಾರೆ. ಅದೇ ಏಡಿ ಸಂತೆ. ಗೋಕಾಕ್‌ ಹೊಳೆ ಹರಿದು ಬಂತೆಂದರೆ, ಬೆಳಗಾವಿ ಮಾರ್ಕೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಏಡಿಗಳು ಲಗ್ಗೆ ಇಟ್ಟಂತೆಯೇ ಲೆಕ್ಕ. ಆರೋಗ್ಯದಾಯಕ, ರುಚಿರುಚಿ ಏಡಿ ಇಲ್ಲಿನವರ ಆಹಾರಲೋಕದಲ್ಲಿ ಪ್ರಮುಖ ಭಾಗವೇ ಆಗಿದೆ.

ಉಪ ಕಸುಬು :  ಬೆಳಗಾವಿಯ ಗೋಕಾಕ್‌, ಘಟಪ್ರಭಾ, ರಾಯಭಾಗ, ಅರಬಾವಿ, ಮುನ್ನೋಳಿ…- ಹೀಗೆ ಹತ್ತಾರು ಭಾಗದ ನೂರಾರು ಶ್ರಮಿಕ ಕುಟುಂಬಗಳಿಗೆ ಈ ದಿನಗಳಲ್ಲಿ ಏಡಿಸಂತೆ ಒಂದು ಉಪ ಕಸುಬು. ಶೂನ್ಯ ಬಂಡವಾಳದಲ್ಲಿ ಗುಡ್ಡ, ಹೊಳೆ, ಹಳ್ಳ, ಕಾಲುವೆಗಳಿಗೆ ಬುಟ್ಟಿಗಳನ್ನು ಇಟ್ಟು ಏಡಿ ಹಿಡಿದು ತಂದು ಮಾರುವುದು ಇಲ್ಲಿನವರ ದಿನಚರಿ. ವಿಶೇಷವಾಗಿ ಮಳೆಗಾಲದಲ್ಲಿ ಸಿಕ್ಕಾಪಟ್ಟೆ ಏಡಿಗಳು ಸಿಗುವುದು ಹಾಗೂ ಅಷ್ಟೇ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಈ 2-3 ತಿಂಗಳು ಒಳ್ಳೆಯ ವ್ಯಾಪಾರವೂ ಆಗುತ್ತೆ.

ವ್ಯಾಪಾರ ಆರಂಭ ಹೀಗೆ… :  ನೂರಕ್ಕೂ ಹೆಚ್ಚು ಜನರು ಅದರಲ್ಲೂ ಮಹಿಳೆಯರು ಬೆಳ್ಳಂಬೆಳಗ್ಗೆ ನಗರದ ನಾರ್ಥ್ ಟೆಲಿಗ್ರಾಫ್ ರೋಡ್‌, ಫಿಶ್‌ ಮಾರ್ಕೆರ್ಟ್, ಕಾಸಬಾಗ್‌ ಸರ್ಕಲ್, ರೈಲ್ವೇ ಸ್ಟೇಷನ್‌ ಸ್ಥಳಗಳಲ್ಲಿ ಏಡಿ ತುಂಬಿದ ಚೀಲಗಳೊಂದಿಗೆ ವ್ಯಾಪಾರಕ್ಕೆ ಇಳಿಯುತ್ತಾರೆ. ಚಟ್‌ ಚಟ್‌ ಅಂತ ಏಡಿಯ ಕಾಲುಗಳನ್ನು ಮುರಿಯುತ್ತ, ಸತ್ತ ಏಡಿಗಳನ್ನು ಚೀಲದಿಂದ ಆರಿಸಿ ಎಸೆಯುತ್ತ ಕೈಗಳಲ್ಲಿ ಗನ್‌ ಹಿಡಿದಂತೆ ಏಡಿ ಹಿಡಿದು “ಓ ಭಯ್ಯಾ ಇಲ್ಲಿ ಬಾ… ಶಂಭ ರುಪಾಯಿಗೆ ಜೋಡಿ ಕೇಕಡಾ ಏಡಿ’ ಎನ್ನುತ್ತಾ ಗಿರಾಕಿಗಳನ್ನು ಪೈಪೋಟಿಗೆ ಬಿದ್ದು ತಮ್ಮತ್ತ ಸೆಳೆಯುತ್ತಾರೆ. ವಾರಪೂರ್ತಿ ಏಡಿ ಮಾರ್ಕೆಟ್‌ ನಡೆದ್ರೂ ವಿಶೇಷವಾಗಿ ಭಾನುವಾರ, ಮಂಗಳವಾರ, ಬುಧವಾರ ಖರೀದಿದಾರರಿಂದ ತುಂಬಿ ಹೋಗಿರುತ್ತೆ. ಬಿಸಿಲು ಏರಿದಂತೆ ವ್ಯಾಪಾರ ರಂಗೇರಿ, ಬಿಸಿಲು ತಗ್ಗಿದಂತೆ ವ್ಯಾಪಾರವೂ ಕರಗುತ್ತದೆ. ಸರಿಸುಮಾರು ನಾಲ್ಕೈದು ಗಂಟೆಯಷ್ಟೆ ವ್ಯಾಪಾರ ನಡೆದು ಆಮೇಲೆ ಸ್ತಬ್ಧ ಆಗಿಬಿಡುತ್ತೆ.

ಮೀನಿಗಿಂತ ಏಡಿಗೇ ಡಿಮ್ಯಾಂಡ್ :  ಈ ದಿನಗಳಲ್ಲಿ ಮೀನು, ಇತರೆ ಮಾಂಸಕ್ಕೆ ಅಷ್ಟಾಗಿ ಬೇಡಿಕೆ ಇರೋದಿಲ್ಲ. ಜನ ಸೀಸನ್‌ ಫ‌ುಡ್‌ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಮಳೆಗಾಲ ಆರಂಭದ ಎರಡು ತಿಂಗಳು ಸ್ವಾದಿಷ್ಟಕರವಾದ ಮೋಟ ದಪ್ಪ ಕಲ್ಲು ಏಡಿಗೆ ಹೆಚ್ಚು ಡಿಮ್ಯಾಂಡ್ ಕುದುರುತ್ತದೆ. ಏಡಿಗಳನ್ನು ಜೋಡಿ ಲೆಕ್ಕದಲ್ಲಿ ಮಾರಲಾಗುತ್ತೆ. ಬೇಡಿಕೆ ಹೆಚ್ಚಿದ್ದರೆ, ಹವಾಮಾನ ವೈಪರಿತ್ಯದಿಂದ ಮೀನಿನ ಅಭಾವ ಆದಾಗ ಏಡಿಗಳ ಬೆಲೆ ಹೆಚ್ಚಾಗುತ್ತೆ. ಏಡಿಗಳ ಗಾತ್ರದ ಮೇಲೆ ದರ ಇರುತ್ತೆ. ಜೋಡಿ ಏಡಿಗೆ ಸರಾಸರಿ 80 ರಿಂದ 150ರವರೆಗೆ ರೇಟ್‌ ಇದೆ. ಬೇಸಿಗೆಯಲ್ಲಿ ಏಡಿಗಳಿಗೆ ಬರ ಇರುವ ಕಾರಣ ಜೋಡಿ ಏಡಿಗಳ ಬೆಲೆ ಅಂದಾಜು 150- 180 ಇರುತ್ತದೆ. ಬೆಳಗಾವಿ ಅಷ್ಟೆ ಅಲ್ಲ, ಹುಬ್ಬಳ್ಳಿ- ಧಾರವಾಡ, ಗುಲ್ಬರ್ಗಾ, ಗೋವಾ, ಮುಂಬೈ, ಪೂನಾ… ಹೀಗೆ ಅನ್ಯ ಜಿಲ್ಲೆ, ರಾಜ್ಯಗಳಿಗೂ ಬೆಳಗಾವಿ ಏಡಿ ಪೂರೈಕೆ ಆಗುತ್ತೆ. ­

ಕೋವಿಡ್ ಗೆ ರಾಮಬಾಣ! :  ಏಡಿ ತಿಂದ್ರೆ ಜ್ವರ, ಕೆಮ್ಮು ಹಾಗೂ ನೆಗಡಿ ಹತ್ತಿರ ಸುಳಿಯಲ್ಲ ಎನ್ನುವುದು ಗ್ರಾಮೀಣರ ನಂಬಿಕೆ. ಅದರಲ್ಲೂ ಮಳೆಗಾಲದಲ್ಲಿ ಈ ಕಾಯಿಲೆಗಳು ಸಾಮಾನ್ಯ. ಇದಕ್ಕೆಲ್ಲ ಏಡಿಯೇ ರಾಮಬಾಣ ಎನ್ನುತ್ತಾರೆ ಇಲ್ಲಿನವರು. ಏಡಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಕೋವಿಡ್ ಕಾರಣಕ್ಕೆ ಸಹಜವಾಗಿ ಈ ಬಾರಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

 

 

-ಸ್ವರೂಪಾನಂದ ಎಂ. ಕೊಟ್ಟೂರು

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.