ಸಾಲದ ದಾಖಲೆಗಳು, ನೀವು ಸಾಲ ತಗೊಳ್ತೀರಾ?


Team Udayavani, Jan 23, 2017, 3:50 AM IST

sala.jpg

1000 ಮತ್ತು 500 ನೋಟುಗಳ ರದ್ಧತಿ, ಹಳೆ ನೋಟುಗಳ ಬದಲಾವಣೆ ಮತ್ತು ಹೋಸ ನೋಟುಗಳ ವಿತರಣೆಯ ಗೊಂದಲದ ಸಮಯದಲ್ಲಿ ಮಾತ್ರವಲ್ಲ. ಸಾಲದ ಅರ್ಜಿಯ ಸಂಗಡ ಬ್ಯಾಂಕಿನವರು ಕೇಳುವ ಕಾಗದ ಪತ್ರಗಳ ಬಗೆಗೆ ಗ್ರಾಹಕರ ಅಕ್ರೋಶ ಲಾಗಾಯ್ತಿನಿಂದ ಕೇಳಿಬರುತ್ತಿದೆ. ಈ ಟೀಕೆಗಳಲ್ಲಿ ಅರ್ಥವಿಲ್ಲದಿಲ್ಲ. ಅದರೆ, ಬ್ಯಾಂಕುಗಳು ಇಷ್ಟೊಂದು ದಾಖಲೆಗಳನ್ನು, ಪುರಾವೆಗಳನ್ನು ಮತ್ತು ಕಾಗದ ಪತ್ರಗಳನ್ನು ಏಕೆ ತೆಗೆದುಕೊಳ್ಳುತ್ತಾರೆ ಎನ್ನುವುದು ಬಹುತೇಕ ಗ್ರಾಹಕರಿಗೆ ತಿಳಿದಿರುವುದಿಲ್ಲ.

ವಾಸ್ತವಿಕವಾಗಿ ಬ್ಯಾಂಕಿನವರಿಗೆ ಕೂಡಾ ಅಷ್ಟೊಂದು ತೂಕದ ಸಾಲದ ಅರ್ಜಿಯನ್ನು ಪರಾಮರ್ಷಿಸುವ ವ್ಯವಧಾನವೂ ಇರುವುದಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಂ ಕಾರಂತರು ನಾಲ್ಕನೇ ತರಗತಿಯವರೆಗೆ ಸ್ಕೂಲ ಕೇವಲ ಒಂದು ಸ್ಲೇಟ… ಮತ್ತು ಒಂದು ಪುಸ್ತಕ ಇರಲಿ ಎನ್ನುವಂತೆ, ಬ್ಯಾಂಕ್‌ ನವರೂ ಸಾಲದ ಅರ್ಜಿ ಸಂಗಡ ಕನಿಷ್ಟ ದಾಖಲೆಗಳನ್ನು ನಿರಿಕ್ಷಿಸುತ್ತಾರೆ. ಆದರೆ, ಸಾಲ ನೀಡುವಿಕೆ ಮತ್ತು ವಸೂಲಿಯಲ್ಲಿ ಆದ ಕೆಲವು ಕಹಿ ಅನುಭವ, ಅವರ ದಾಖಲೆ ಹಸಿವನ್ನು
ಹೆಚ್ಚಿಸಿದೆ. ಅವರು ಕೇಳುವ ಒಂದೊಂದು ದಾಖಲೆ, ಕಾಗದ ಪತ್ರ ಮತ್ತು ಪುರಾವೆಗಳ ಹಿಂದೆ ಕಹಿ ಅನುಭವದ ಇತಿಹಾಸವೇ ಇದೆ. ಗ್ರಾಹಕರು ಕೇಳುವ ಸಾಲದ ಉದ್ದೇಶಕ್ಕೆ ಅನುಗುಣವಾಗಿ, ಸಾಲದ ಅರ್ಜಿ ಸಂಗಡ ಬ್ಯಾಂಕಿನವರು ಸಲ್ಲಿಸಬೇಕಾದ ದಾಖಲೆಗಳ ಉದ್ದವಾದ ಪಟ್ಟಿಯನ್ನೂ ಕೊಡುತ್ತಾರೆ. ಇವುಗಳನ್ನು ಬ್ಯಾಂಕಿವನರು ಏಕೆ ತೆಗೆದುಕೊಳ್ಳುತ್ತಾರೆ ಎನ್ನುವದರ ಸಂಕ್ಷಿಪ್ತ ಮಾಹಿತಿ ಹೀಗಿದೆ.

1. ಸಾಲ ಕೇಳುವ ಗ್ರಾಹಕನ ಭಾವಚಿತ್ರದೊಂದಿಗೆ ಪೂರ್ಣ ಮಾಹಿತಿ ತುಂಬಿರುವ ಸಾಲದ ಅರ್ಜಿ.
ಭಾವಚಿತ್ರದಲ್ಲಿರುವವನೇ ಸಾಲಗಾರನಾಗುವವನು ಎನ್ನುವುದನ್ನು  ದೃಢೀಕರಿಸಲು ಮತ್ತು ಇದು ಯಾರದೋ
ಹೆಸರಿನಲ್ಲಿ ಯಾರಿಗೋ ಸಾಲ ಹೋಗದಂತೆ ಮುಂಜಾಗರೂಕತೆಯ ಕ್ರಮ. ಸರಳ ಭಾಷೆಯಲ್ಲಿ ಅವನೇ ಇವನು ಎಂದು ತಿಳಿಯಲು.

2. ಗುರುತಿನ ಪತ್ರ: ಸರ್ಕಾರದ ಅಂಗೀಕೃತ ಸಂಸ್ಥೆಗಳು ನೀಡುವ ವ್ಯಕ್ತಿಯನ್ನು ಅಧಿಕೃತವಾಗಿ ಗುರುತಿಸುವ, ಆಧಾರ, ವೋಟರ್ಸಕಾರ್ಡ್‌, ಚಾಲನಾ ಪತ್ರ ಪಾಸ್‌ಪೋರ್ಟ್‌ ದಂಥ ಗುರುತಿನ ಪತ್ರಗಳು. ಇಂಥ ಪತ್ರಗಳನ್ನು ನೀಡುವ ಹಿಂದೆ ಸಾಕಷ್ಟು ದಾಖಲೆಗಳು ಇರುತ್ತವೆ ಮತ್ತು ಇವುಗಳು ಸುದೀರ್ಘ‌ವಾಗಿ ಪರಿಶೀಲನೆಯಾಗಿರುತ್ತವೆ ಎನ್ನುವ ನಂಬಿಗೆ.

3. ವಯಸ್ಸಿನ ದೃಢೀಕರಣ ಪತ್ರ: ಬ್ಯಾಂಕಿನಲ್ಲಿ ಖಾತೆ ತೆರೆಯಲು ಕನಿಷ್ಟ ವಯಸಸ್ಸಿನ ಮಿತಿ ಇರುತ್ತದೆ. ಹಾಗೆಯೇ ಸಾಲ ಕೊಡುವಾಗಲೂ ಕನಿಷ್ಟ ಮತ್ತು ಗರಿಷ್ಟ ವಯಸ್ಸಿನ ನಿಬಂಧನೆ ಇರುತ್ತದೆ. ಇದನ್ನು ದೃಢೀಕರಿಸಲು ವಯಸ್ಸಿನ ದಾಖಲೆಯನ್ನು ಕೇಳುತ್ತಾರೆ.

4. ವಿಳಾಸ ದೃಢೀಕರಣ : ಕೇವಲ ಬಾಯಿ ಮಾತಿನಲ್ಲಿ ಹೇಳಿದ ವಿಳಾಸಕ್ಕೆ ಎಲ್ಲೂ ಮಾನ್ಯತೆ ಇರುವುದಿಲ್ಲ. ವೋಟರ್ಸ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಪಾಸಪೋರ್ಟ್‌, ಚಾಲನಾ ಪತ್ರ ಮುಂತಾದ ಅಧಿಕೃತ ಸರ್ಕಾರಿ ಸಂಸ್ಥೆಗಳು ನೀಡಿದ ದಾಖಲೆಗಳೇ ಆಗಬೇಕಾಗುತ್ತದೆ.

5. ಶಿಕ್ಷಣಾರ್ಹತೆ: ಕೆಲವು ರೀತಿಯ ಸಾಲಗಳಿಗೆ ಕೆಲವು ಕನಿಷ್ಟ ವಿದ್ಯಾರ್ಹತೆ ಅವಶ್ಯಕ ಇರುತ್ತಿದ್ದು, ಅದಕ್ಕೆ ಪೂರಕವಾಗಿ
ಪುರಾವೆಯನ್ನು ಕೊಡಬೇಕಾಗುತ್ತದೆ.

6. ಆದಾಯ ಪ್ರಮಾಣ ಪತ್ರ: ಗ್ರಾಹಕನ ಸಾಲ ಮರುಪಾವತಿ ಸಾಮರ್ಥ್ಯವನ್ನು ತಿಳಿಯಲು ಆತನ ಆದಾಯವನ್ನು ಪರಿಗಣಿಸಲೇ ಬೇಕಾಗುತ್ತದೆ. ಇದನ್ನು ಗ್ರಾಹಕನು ಸಲ್ಲಿಸುವ , ಉದ್ಯೋಗದಾತನು ನೀಡುವ ಸಂಬಳ ಪ್ರಮಾಣ ಪತ್ರ, ಫಾರ್ಮ 16, -ಇನ್‌ಕಮ… ಟ್ಯಾಕ್ಸ ರಿಟರ್ನ್ ಬ್ಯಾಂಕ್‌ ಸ್ಟೇಟ…ಮೆಂಟ… ಮೂಲಕ ಮಾಡಬೇಕಾಗುತ್ತದೆ. ಗ್ರಾಹಕ ರೈತನಾದರೆ, ಲ್ಯಾಂಡ… ಹೊಲ್ಡಿಂಗ ಪತ್ರ ವನ್ನು ಕೇಳಬೇಕಾಗುತ್ತದೆ. ಉಳಿದವರಿಗೆ ಹಿಂದಿನ ಮೂರು ವರ್ಷದ ಟ್ಯಾಕ್ಸ ರಿಟರ್ನ್, ಬ್ಯಾಂಕ್‌ ಅಕೌಂಟ… ಸ್ಟೇಟ… ಮೆಂಟ… ಅನ್ನು ಕೇಳುತ್ತಾರೆ.

7. ಸಾಲ ಮರುಪಾವತಿ ಅಂಡರ್‌ಟೇಕಿಂಗ ಪತ್ರ: ಸಾಲ ಮರುಪಾವತಿ ಸಾಲಗಾರನ ಕರ್ತವ್ಯ. ಆದರೂ ಸಾಲಗರನು ಸಾಲ ಮರುಪಾವತಿ ಬಗೆಗೆ ಅಂಡರ ಟೇಕಿಂಗ್‌ ಪತ್ರ ಅಥವಾ ತನ್ನ ಖಾತೆಯಿಂದ ಕಂತನ್ನು ಸಾಲ ಖಾತೆಗೆ ವರ್ಗಾಯಿಸಲು ಅನುಮತಿ ಪತ್ರ ಕೊಡಬೇಕು.  ಯಾವುದೋ ಒಂದು ಪ್ರಕರಣದಲ್ಲಿ ಈ ಪತ್ರ ಇಲ್ಲದಿರುವ ಬಗೆಗೆ ಸಾಲಗಾರ ತಕರಾರು ಎತ್ತಿದ್ದು, ಸಾಲ ಮರುಪಾವತಿ ಗೊಂದಲಕ್ಕೀಡಾಗಿ ಬ್ಯಾಂಕ್‌ ಮುಜುಗರ ಅನುಭವಿಸಬೇಕಾಗಿತ್ತಂತೆ. ಅಂತೆಯೇ ಬ್ಯಾಂಕುಗಳು ಈ ನಿಟ್ಟಿನಲ್ಲಿ ತುಂಬಾ ಜಾಗೃತೆ ವಹಿಸುತ್ತವೆ.

8. ಕೆಲವು ಸಾಲದ ವಿಷಯಗಳಲ್ಲಿ ಬ್ಯಾಂಕುಗಳು ವಿಮೆ ಮಾಡಿಸಬೇಕಾಗುತ್ತದೆ. ಏನಾದರೂ ಅನಾಹುತವಾದರೆ
ಪರಿಹಾರ ದೊರಕಿಸಲು ಸಾಲವನ್ನು ವಜಾ ಮಾಡಿಕೊಳ್ಳುವ ಸಲುವಾಗಿ ಇದು ಅವಶ್ಯಕ.

9. ಸಾಲ ಒಪ್ಪಿಗೆ ಪತ್ರ (ಚcknಟಡಿlಛಿಛಜಛಿಞಛಿnಠಿ ಟf ಛಛಿಚಿಠಿ): ಸಾಲ ನೀಡಿದ ಮೂರು ವರ್ಷಗಳಲ್ಲಿ ಸಾಲಗಾರ ತನ್ನ ಸಾಲಖಾತೆಯಲ್ಲಿರುವ ಬ್ಯಾಲೆನ್ಸ್‌ ಅನ್ನು ಒಪ್ಪಿ ಪತ್ರ ಕೊಡಬೇಕಾಗುತ್ತದೆ. ಇದು ಸಾಲ ವಸೂಲಾತಿ ಪ್ರಕರಣ ನ್ಯಾಯಾಲಯಕ್ಕೆ ಹೋದರೆ ಔಜಿಞಜಿಠಿಚಠಿಜಿಟn ಅcಠಿ ನಿಂದ ರಕ್ಷ$ಣೆ ಪಡೆಯಲು ಅವಶ್ಯಕ. ಇವು ಒಂದು ಸಾಲದ ಅರ್ಜಿ ಸಂಗಡ ನೀಡಬೇಕಾದ ಸಾಮಾನ್ಯ ದಾಖಲೆಗಳು, ಪುರಾವೆಗಳು ಮತ್ತು ಕಾಗದಪತ್ರಗಳು. ಸಾಲವನ್ನು ಪಡೆಯುವ ಹೊತ್ತಿಗೆ ಇವುಗಳ ಸಂಖ್ಯೆ ಹೆಚ್ಚಾಗಲೂಬಹುದು. ಇದು ಯಾವ ರೀತಿಯ ಸಾಲ, ಸಾಲ ಪಡೆಯುವ ಸ್ಥಳ, ಸಾಲ ನೀಡುವ ಬ್ಯಾಂಕ್‌ ಮತ್ತು ನೀಡುವ ಸೆಕ್ಯುರಿಟಿಯ ಮೇಲೆ ಅವಲಂಭಿಸಿ ಕೊಂಡಿರುತ್ತದೆ. ಗೃಹಸಾಲವಾದರೆ ಸಲ್ಲಿಸಬೇಕಾದ ದಾಖಲೆಗಳು, ನಿವೇಶನ ಖರೀದಿಗೋ, ಕಟ್ಟಿದ ಮನೆಯನ್ನು ಖರೀದಿಸಲೋ, ಮನೆಯ ನವೀಕರಣಕ್ಕೋ, ದುರಸ್ತಿಗೋ, ಫ್ಲಾಟ್‌ ಖರೀದಿಗೋ ಎನ್ನುವುದರ ಮೇಲೆ ಅವಲಂಭಿಸಿಕೊಂಡಿರುತ್ತದೆ. ಹಾಗೆಯೇ ಈ ಖರೀದಿ ಸಹಕಾರಿ ಸಂಘದಿಂದಲೋ, ಖಾಸಗಿ ಬಿಲ್ಡರ್ಸ್‌ ನಿಂದಲೋ, ಅಭಿವೃದ್ದಿ ಪ್ರಾಧಿಕಾರದಿಂದಲೋ ಎನ್ನುವುದನ್ನು
ಪರಿಗಣಿಸುತ್ತಾರೆ. ಆದರೂ ಮುಖ್ಯವಾಗಿ ಗೃಹಸಾಲ ನೀಡುವಾಗ, ಮಾರಾಟಗಾರನ ಮಾಲೀಕತ್ವದ ಪೂ›ಫ್,
ಮಾರಾಟದ ಒಡಂಬಡಿಕೆ ಪತ್ರ, ರಿಜಿಸ್ಟರ್ಡ್‌, ಸೇಲ… ಡೀಡ್‌, ಖಾತಾ ವರ್ಗಾವಣೆ, ತೆರಿಗೆ ನೀಡಿದ ಪಾವತಿಗಳು, ನಾನ್‌ ಎನ್‌ಕಂಬರೆನ್ಸ್‌ ಪ್ರಮಾಣಪತ್ರಗಳು ಮುಖ್ಯ ದಾಖಲೆಗಳು. ಈ ಪಟ್ಟಿ ಕೂಡಾ ಅಪೂರ್ಣವೇ. ಯಾವ ರೀತಿಯ ಗೃಹ ಸಾಲ ಎನ್ನುವುದರ ಮೇಲೆ ಈ ದಾಖಲೆಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ.

ಆರಂಭದ ದಿನಗಳಲ್ಲಿ ಬ್ಯಾಂಕುಗಳು ಸಾಲ ಕೊಡುವಾಗ ಕೇವಲ ಒಂದೆರಡು ದಾಖಲೆಗಳನ್ನು ಪಡೆದು ಸಾಲ ನೀಡುತ್ತಿದ್ದವು. ಆದರೆ ಕೆಲವು ಸಾಲಗಾರರು ಇದನ್ನು ದುರುಪಯೋಗ ಮಾಡಿದ್ದು, ಹಲವಾರು ಕಾನೂನಾತ್ಮಕ, ಆಡಳಿತಾತ್ಮಕ ವಿವಾದಗಳನ್ನು ಎತ್ತಿದ್ದು ಮತ್ತು ಸಾಲ ವಸೂಲಿ ಕಷ್ಟಕರವಾಗ ತೊಡಗಿದ್ದರಿಂದ, ಬ್ಯಾಂಕುಗಳು ಬ್ಯಾಂಕಿನ ಮತ್ತು ಸಾಲ ನೀಡಿದ ತನ್ನ ಸಿಬ್ಬಂದಿಗಳ ರಕ್ಷಣೆಗಾಗಿ, ಮತ್ತು ಅವಶ್ಯಕತೆ ಬಿದ್ದರೆ ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲು ಹೆಚ್ಚೆಚ್ಚು ಲಿಖೀತ ದಾಖಲೆಗಳನ್ನು ಪಡೆಯಬೇಕಾದ ಪರಿಸ್ಥಿತಿಯಿಂದಾಗಿ ಸಾಲದ ಅರ್ಜಿಯ ತೂಕ ಹೆಚ್ಚಾಗುತ್ತಿದೆ. ಪ್ರತಿಯೊಂದನ್ನೂ ಲಿಖೀತರೂಪದಲ್ಲಿ ಪಡೆದುಕೊಳ್ಳುವ ಅನಿವಾರ್ಯತೆ ಬ್ಯಾಂಕ್‌ ನವರ ತಲೆಯ ಮೇಲಿದೆ. ನಿಷ್ಟೆ, ಪ್ರಾಮಾಣಿಕತೆ, ಬಧœತೆ, ನೈತಿಕ ಹೊಣೆಗಾರಿಕೆ, ಪಡೆದ ಸಾಲವನ್ನು ಬಡ್ಡಿ ಸಹಿತ ಹಿಂತಿರುಗಿಸಬೇಕು ಎನ್ನುವ ಆಶಯ ಗ್ರಾಹಕರಲ್ಲಿ ಆಳವಾಗಿದ್ದರೆ, ಕೇವಲ ಬಾಯಿ ಮಾತಿನ ಮೇಲೆ ಅಥವಾ ಒಂದೆರಡು ಕಾಗದ ಪತ್ರಗಳ ಮೇಲೆ ಸಾಲವನ್ನು ನೀಡಬಹುದು. ಕೆಲವೇ ಕೆಲವು ಗ್ರಾಹಕರು ವಾಮ ಮಾರ್ಗ ಹಿಡಿದು ಸಾಲ ಮರುಪಾವತಿಯಲ್ಲಿ
ಅಡೆ-ತಡೆಗಳನ್ನು ತಂದಿರುವುದು, ಬ್ಯಾಂಕುಗಳು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ಯಾಂಕಿನ ಹಿತದೃಷ್ಟಿಯಲ್ಲಿ ಅವು ಹೆಚ್ಚೆಚ್ಚು ದಾಖಲೆಗಳು ಮತ್ತು ಕಾಗದ ಪತ್ರಗಳ ಮೊರೆ ಹೋಗುತ್ತಿವೆ.

ಕೆಲವು ಬಾರಿ ಸಾಲ ವಸೂಲಾತಿ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ, ನ್ಯಾಯಾಲಯಗಳು ಡಾಕ್ಯುಮೆಂಟ್ಸ್‌ ನಿಟ್ಟಿನಲ್ಲಿ ಬೊಟ್ಟುಮಾಡಿ ತೋರಿಸಿದ ಕೊರತೆಯನ್ನು ನೀಗಿಸಲು ಬ್ಯಾಂಕುಗಳು ಕೆಲವು ಡಾಕ್ಯುಮೆಂಟ…
ಗಳನ್ನು ಕೇಳುತ್ತವೆ. ಗ್ರಾಹಕರು ಬ್ಯಾಂಕುಗಳ ದಾಖಲೆ, ಪುರಾವೆ ಹಸಿವನ್ನು ತರಾಟೆಗೆ ತೆಗೆದುಕೊಳ್ಳುವಾಗ, ಇದಕ್ಕೆ ಯಾರು ಕಾರಣ ಎನ್ನುವುದನ್ನು ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ಬ್ಯಾಂಕಿನವರು ಹೇಳುತ್ತಾರೆ.

– ರಮಾನಂದ ಶರ್ಮ

ಟಾಪ್ ನ್ಯೂಸ್

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.