ಕ್ರಿಟಿಕಲ್‌ ವಿಮೆ


Team Udayavani, Jun 11, 2018, 12:11 PM IST

vime.jpg

ಎಲ್ಲ ವಿಮಾ ಕಂಪೆನಿಗಳೂ ತಮ್ಮ ಬ್ರೋಷರ್‌ಗಳಲ್ಲಿ ಅತ್ಯಾಕರ್ಷಕವಾಗಿ ಈ ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಬರೆದು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿರುತ್ತವೆ.  ಆದರೆ ಎಲ್ಲವೂ ಅಲ್ಲಿರುವಂತೆ ನಡೆಯುವುದಿಲ್ಲ. ಒಳಹೊಕ್ಕ ಮೇಲಷ್ಟೇ ನಿಜಾಂಶ ತಿಳಿಯುವುದು.

ಇಂದು ನಮ್ಮಲ್ಲಿ ಬಹಳ ಒತ್ತಡದ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಧಾವಂತದ ಬದುಕನ್ನು ಸಾಗಿಸುವವರೇ ಹೆಚ್ಚು. ಇಂಥವರಿಗೆ ದುಡಿಮೆಯೊಂದರ ಹೊರತಾಗಿ ಬೇರಾವುದರ ಬಗ್ಗೆಯೂ ಗಮನವಿರುವುದಿಲ್ಲ. ಅವರ ಸ್ವಂತ ಆರೋಗ್ಯದ ಬಗ್ಗೆಯಾಗಲೀ, ಕುಟುಂಬದ ಆರೋಗ್ಯದ ಬಗ್ಗೆಯಾಗಲೀ ಚಿಂತಿಸಲು ಸಮಯವೇ ಸಿಗುವುದಿಲ್ಲ. ಅದರಲ್ಲೂ ನಗರ ಪ್ರದೇಶದಲ್ಲಿ ಗಡಿಬಿಡಿ ಬದುಕು.  ಇದು ನಾವೇ ಸೃಷ್ಟಿಸಿಕೊಂಡಿರುವ ಅಪಾಯ.  ವ್ಯಕ್ತಿಗತ ಆರೋಗ್ಯವನ್ನು ಕಾಪಾಡಿಕೊಂಡು ಸಾವಧಾನವಾಗಿ, ಹಾಸಿಗೆ ಇದ್ದಷ್ಟೇ ಕಾಲುಚಾಚಿ, ಜೀವನ ನಿರ್ವಹಣೆ ಮಾಡುವುದು ಸಾಧ್ಯವಿದೆ. ಇಲ್ಲವೆಂದಲ್ಲ. ಆದರೆ ಅದು ಇತ್ತೀಚಿನ ದಶಕಗಳಲ್ಲಿ ಆಗುತ್ತಿಲ್ಲ. ಕೊಳ್ಳುಬಾಕ ಸಂಸ್ಕೃತಿ ನಮ್ಮ ಮನೆ-ಮನಗಳಿಗೆ ಕಾಲಿಟ್ಟ ನಂತರದಲ್ಲಿ ವ್ಯಕ್ತಿಗತ ಸಂತೋಷದ ಪರಿಭಾಷೆಯೇ ಬದಲಾಗಿದೆ.  ಹಾಗಾಗಿ ಎಲ್ಲರಿಗೂ ಹೆಚ್ಚು ಹೆಚ್ಚು ದುಡಿಯಬೇಕೆಂಬ ಧಾವಂತ.  ಈ ಕಾರಣದಿಂದಾಗಿ ಹಲವರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇನ್ನೂ 30-40ರ ಹರೆಯದಲ್ಲಿರುವಾಗಲೇ ಗಂಭೀರಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಾರೆ ಮತ್ತು ನಡುವಯಸ್ಸಲ್ಲೇ ಇಹವನ್ನು ತ್ಯಜಿಸುತ್ತಾರೆ. 

ಎಷ್ಟೆಲ್ಲ ವೈಜಾnನಿಕ ಆವಿಷ್ಕಾರಗಳಾಗಿದ್ದರೂ ಕೂಡ ಮನುಷ್ಯರ ಜೀವನವಿಧಾನದ ಕಾರಣದಿಂದಾಗಿ ಸರಾಸರಿ ಬದುಕುವ ವಯಸ್ಸು ಏರಿಕೆಯಾಗುವ ಬದಲು ಇಳಿಮುಖವಾಗುತ್ತಿದೆ.  ಐವತ್ತರ ನಂತರದ ಬದುಕು ಬೋನಸ್‌ ಎಂದು ಭಾವಿಸಿರುವವರು, ಅಕಾಲದಲ್ಲಿ ಮುಪ್ಪಿಗೆ ತುತ್ತಾಗಿ ಅರವತ್ತಕ್ಕೂ ಮುನ್ನವೇ ಬದುಕಲ್ಲಿ ಹೈರಾಣಾಗಿ ಜವರಾಯನ ಕರೆಗೆ ಕಾಯುತ್ತಿರುವವರೂ ಬಹಳ ಮಂದಿ ಇದ್ದಾರೆ.   
ಇದೆಲ್ಲವನ್ನೂ ಬಂಡವಾಳವಾಗಿ ಮಾಡಿಕೊಂಡಿರುವುದು ವಿಮಾ ಕಂಪೆನಿಗಳು ಮಾತ್ರ. ಇದಕ್ಕಾಗಿ ನಾನಾ ವಿಮೆಗಳನ್ನು ಮಾಡಿವೆ, ಕಾಯಿಲೆಗಳ ಸ್ವರೂಪಕ್ಕೆ ತಕ್ಕಂತೆ ಕಂತು ನಿಗದಿ ಮಾಡಿದೆ. ಪ್ರಾಣಘಾತಕ ಕಾಯಿಲೆಗಳು, ಪ್ರಾಣಾಪಾಯ ವಿಲ್ಲದ ಕಾಯಿಲೆಗಳು ಅಂತೆಲ್ಲ ಭಾಗ ಮಾಡಿಕೊಂಡಿವೆ.  ಗಂಭೀರಸ್ವರೂಪದ ಕಾಯಿಲೆಗಳಿಗೆ ವ್ಯಕ್ತಿಗತ ವಿಮಾಪಾಲಿಸಿಗಳಲ್ಲಿ ಕ್ಲೈಮು ಪಡೆಯುವುದಕ್ಕೆ ಅವಕಾಶವಾಗುವಂತೆ ವಿಮಾಕಂಪೆನಿಗಳು ಕ್ರಿಟಿಕಲ್‌ ಇನ್ಸೂರೆನ್ಸ್‌ ಬೆನಿಫಿಟ್ಸ್‌ ಎಂಬ ಹೊಸ ರೈಡರ್‌ ಸೇರಿಸುವ ಮೂಲಕ ಇಂತಹ‌ ವಿಷಮ ಸಂದರ್ಭಗಳಲ್ಲಿ ಪಾಲಿಸಿದಾರರಿಗೆ ಹೆಚ್ಚುವರಿ ನೆರವು ನೀಡುವ ಯೋಜನೆಗಳನ್ನು ಹೊಂದಿವೆ.

ಕ್ರಿಟಿಕಲ್‌ ಇಲ್‌ನೆಸ್‌ ಅಂದರೇನು?
ಸಾಮಾನ್ಯವಾಗಿ, ಯಾರಿಗೆ ಯಾವ ಕಾಯಿಲೆ ಯಾವಾಗ ಅಡರಿಕೊಳ್ಳುತ್ತದೆ ಎಂಬುದನ್ನು ಮೊದಲೇ ಹೇಳಲಾಗದು. ವಾರ್ಷಿಕವಾಗಿ ದೈಹಿಕ ತಪಾಸಣೆಗೆ ಒಳಗಾಗುವವರು ಕೆಲವೊಂದು ಕಾಯಿಲೆಗಳ ಆಗಮನದ ಸಾಧ್ಯತೆಯನ್ನು ಪೂರ್ವಭಾವಿಯಾಗಿ ತಿಳಿದುಕೊಳ್ಳಬಹುದಾದರೂ, ಹೀಗೆ ನಿಯಮಿತವಾಗಿ ವಾರ್ಷಿಕ ಆರೋಗ್ಯ ತಪಾಸಣೆಗೆ ಒಳಗಾಗುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇ ಇದೆ.  ತಮ್ಮ ಜೀವನ ವಿಧಾನ, ಆಹಾರಪದ್ಧತಿ, ಚಟಗಳು, ಹವ್ಯಾಸಗಳ ಕಾರಣದಿಂದ ಮಾತ್ರವಲ್ಲ, ಕೆಲವರಿಗೆ ಅನುವಂಶಿಕವಾಗಿಯೂ ಕಾಯಿಲೆಗಳು ಬರಬಹುದು. ಗಮನಿಸಿ, ಇತ್ತೀಚಿನ ವರ್ಷಗಳಲ್ಲಿ ಮೂವತ್ತರ ಆಸುಪಾಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.  ಇನ್ನು ಕ್ಯಾನ್ಸರ್‌, ಕಿಡ್ನಿ, ಲಿವರ್‌ ವೈಫ‌ಲ್ಯ, ಬಹು ಅಂಗಾಂಗ ವೈಫ‌ಲ್ಯದ ಪ್ರಕರಣಗಳೂ ಹೆಚ್ಚುತ್ತಲೇ ಇವೆ. ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳು ವಯೋಮಾನದ ಹಂಗಿಲ್ಲದೇ ಬಹುತೇಕರಲ್ಲಿ ಕಾಣಿಸುವ ಅಂಶಗಳಾಗಿದ್ದು ಇವು ಅನೇಕ ರೋಗಗಳಿಗೆ ದಿಡ್ಡಿಬಾಗಿಲು ತೆರೆದು ಒಳಕರೆಯುವ ಮೂಲಗಳಾಗಿ ಕೆಲಸ ಮಾಡುತ್ತವೆ. ಹೀಗೆ ಆರೋಗ್ಯವಂತನಂತೆ ತೋರುವ ವ್ಯಕ್ತಿಗೆ ಪೂರ್ವಸೂಚನೆ ಕೊಡದೆ ಅಕಸ್ಮಾತ್ತಾಗಿ ಅಮರಿಕೊಳ್ಳುವ ಮತ್ತು ಮಾರಣಾಂತಿಕವೆನಿಸುವ ಕಾಯಿಲೆಗಳಿಗೆ ಕ್ರಿಟಿಕಲ್‌ ಇನ್‌ನೆಸ್‌ ಎಂದು ಕರೆಯಲಾಗುತ್ತದೆ.

ಕ್ರಿಟಿಕಲ್‌ ಇಲ್‌ನೆಸ್‌ ವಿಮಾ ಕವರೇಜ್‌ ಸ್ವರೂಪ ಹೇಗಿರುತ್ತದೆ?
ಎಲ್ಲ ವಿಮಾ ಕಂಪೆನಿಗಳೂ ತಮ್ಮ ಬ್ರೋಷರ್‌ ಗಳಲ್ಲಿ ಅತ್ಯಾಕರ್ಷಕವಾಗಿ ಈ ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಬರೆದು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿರುತ್ತವೆ.  ಆದರೆ ಎಲ್ಲವೂ ಅಲ್ಲಿರುವಂತೆ ನಡೆಯುವುದಿಲ್ಲ. ಒಳಹೊಕ್ಕ ಮೇಲಷ್ಟೇ ನಿಜಾಂಶ ತಿಳಿಯುವುದು. ಸಾಮಾನ್ಯವಾಗಿ ಆರೋಗ್ಯ ವಿಮೆಯಲ್ಲಿ ಕಾಯಿಲೆಗೆ ಒಳಗಾಗಿ ಪಾಲಿಸಿದಾರ ಆಸ್ಪತ್ರೆ ಸೇರುತ್ತಾನೆ. ಆತನ ಅಥವಾ ಆಕೆಯ ಆಸ್ಪತ್ರೆ ವೆಚ್ಚವನ್ನು ಕಂಪೆನಿ ಭರಿಸುತ್ತದೆ. ಅಸ್ಪತ್ರೆಯಿಂದ ಡಿಸಾcರ್ಜ್‌ ಆದ ನಂತರದ ವೆಚ್ಚಗಳನ್ನೂ ನಿರ್ದಿಷ್ಟ ಮಿತಿಯಲ್ಲಿ ಕಂಪೆನಿ ಭರಿಸುತ್ತದೆ. ಆದರೆ ಕ್ರಿಟಿಕಲ್‌ ಇಲೆ°ಸ್‌ ರೈಡರ್‌ ಜೀವವಿಮಾ ಪಾಲಿಸಿಗಳಲ್ಲಿ ನೀವು ಆಯ್ಕೆ ಮಾಡಿರುವ ಪಾಲಿಸಿಯಲ್ಲಿರುವ ಷರತ್ತುಗಳಿಗೆ ಅನುಗುಣವಾಗಿ ಇರುತ್ತದೆ. ಇಂತಹ ಪಾಲಿಸಿಯನ್ನು ಇಂಡೆಮ್ನಿಟಿ ಪ್ಲಾನ್‌ ಎಂದು ಕರೆಯುತ್ತಾರೆ.

ಒಬ್ಬ ವ್ಯಕ್ತಿ ಪಾಲಿಸಿಕೊಳ್ಳುವಾಗ ಯಾವುದೇ ಗಂಭೀರಸ್ವರೂಪದ ಕಾಯಿಲೆಗಳನ್ನು ಹೊಂದಿರಬಾರದು. ಇಂತಹ ವ್ಯಕ್ತಿ ಕ್ರಿಟಿಕಲ್‌ ಇಲೆ°ಸ್‌ ರೈಡರ್‌ ಹೊಂದಿದ ನಂತರದಲ್ಲಿ ಕಾಯಿಲೆಗೆ ಪಾಲಿಸಿದಾರ ತುತ್ತಾದಾಗ ಕಂಪೆನಿಯು ವಿಮಾ ಮೊತ್ತವನ್ನು ಏಕಗಂಟಿನಲ್ಲಿ ಆತನಿಗೆ ಕೊಡುತ್ತದೆ.  ಇಲ್ಲಿ ವಿಮಾಕಂಪೆನಿ ಯಾವುದೇ ಆಸ್ಪತ್ರೆವೆಚ್ಚಗಳನ್ನು ಕೊಡುವುದಿಲ್ಲ. ಬದಲಾಗಿ ವಿಮಾಮೊತ್ತವನ್ನೇ ಕೊಟ್ಟುಬಿಡುತ್ತದೆ. ಇದನ್ನು ಡಿಫೈನ್‌x ಬೆನಿಫಿಟ್‌ ಪ್ಲಾನ್‌ ಎಂದು ಕರೆಯಲಾಗುತ್ತದೆ.

ಕೆಲವು ಕಂಪೆನಿಗಳಲ್ಲಿ ಹೀಗೆ ವಿಮಾಮೊತ್ತ ಕೊಟ್ಟ ನಂತರದಲ್ಲಿ ಆ ವಿಮಾಪಾಲಿಸಿ ಮುಕ್ತಾಯಗೊಳಿಸುತ್ತದೆ. ಮತ್ತಲವು ಕಂಪೆನಿಗಳಲ್ಲಿ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಹೀಗೆ ವಿಮಾಮೊತ್ತ ಮರುಪಾವತಿ ಸವಲತ್ತು ಕೂಡ ಇರುತ್ತದೆ.  ಅಂತಹ ಕಾಯಿಲೆಗೆ ಚಿಕಿತ್ಸೆ ಪಡೆದ ನಂತರದಲ್ಲಿ ಪಾಲಿಸಿದಾರ ದುಡಿಮೆಮಾಡುವ‌ ಕ್ಷಮತೆ ಕಳೆದುಕೊಂಡಿದ್ದರೆ, ಅದಕ್ಕೆ ಬದಲಿಯಾಗಿ ಆತನಿಗೆ ನಿರ್ದಿಷ್ಟ ಮೊತ್ತವನ್ನು ಕೊಡುವ ಷರತ್ತು ಕೂಡ ಕೆಲ ಪಾಲಿಸಿಗಳಲ್ಲಿ ಇರುತ್ತದೆ. ಇನ್ನು ಕೆಲವು ಪಾಲಿಸಿಗಳಲ್ಲಿ ಇಂತಹ ಕ್ಲೈಮು ಪಡೆದ ನಂತರವೂ ಪಾಲಿಸಿ ಚಾಲ್ತಿಯಲ್ಲಿ ಉಳಿಯುತ್ತದೆ.

ಪಾಲಿಸಿ ಪಡೆಯುವಾಗ ಇದನ್ನೆಲ್ಲ ಗಮನಿಸಿ
1. ವಿಮಾ ಕಂಪೆನಿಯ ಬ್ರೋಷರ್‌ನಲ್ಲಿ ಕ್ರಿಟಿಕಲ್‌ ಇಲೆ°ಸ್‌ ಎಂಬ ಪರಿಭಾಷೆಯಡಿಯಲ್ಲಿ ಅತೀ ಹೆಚ್ಚು ರೋಗಗಳು ಕವರ್‌ ಆಗಿವೆ ಎಂಬ ಕಾರಣಕ್ಕೆ ಯಾವುದೋ ಒಂದು ಇರಲಿ ಅಂತ ವಿಮಾ ಕಂಪೆನಿ ಆಯ್ಕೆ ಮಾಡುವುದು ಸರಿಯಲ್ಲ.

2. ನಿರ್ದಿಷ್ಟ ರೋಗಗಳ ಕುರಿತಾಗಿ ಕಂಪೆನಿಯ ವ್ಯಾಖ್ಯಾನ ಏನು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ತಿಳಿಯದೆ ಮುಂದೊಂದು ದಿನ ಪಡಿಪಾಟಲು ಪಡಬೇಕಾದೀತು.  ಉದಾಹರಣೆಗೆ -ಒಬ್ಬ ವ್ಯಕ್ತಿ ಕ್ಯಾನ್ಸರ್‌ಗೆ ತುತ್ತಾಗಿದ್ದಲ್ಲಿ ಮತ್ತು ಅದು ಪ್ರಾಥಮಿಕ ಹಂತದಲ್ಲಿದ್ದಲ್ಲಿ “ನಾವು ಈ ಹಂತಕ್ಕೆ ಕೊಡುತ್ತೀವಿ ಅಂತ ಹೇಳಿಲ್ಲ’ ಅಂತ  ವಿಮಾ ಕಂಪೆನಿ ತಾನು ಒಪ್ಪಿಕೊಂಡ ಡಿಫೈನ್‌x ಬೆನಿಫಿಟ್‌ ಕೊಡದೇ ಇರಬಹುದು.  ಇಲ್ಲಿ ಪರಿಗಣಿತವಾದ ರೋಗ ಯಾವ ಹಂತದಲ್ಲಿದ್ದಾಗ ವಿಮಾ ಸವಲತ್ತು ಸಿಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಪತ್ತೆಯಾದ ರೋಗ ಸ್ಟೇಜ್‌-1 ನಲ್ಲಿದ್ದರೆ ಅದನ್ನು ಕ್ರಿಟಿಕಲ್‌ ಎಂದು ಪರಿಗಣಿಸಲಾಗದು ಎಂಬ ವ್ಯಾಖ್ಯಾನವನ್ನು ಆ ಕಂಪೆನಿ ಹೊಂದಿರಬಹುದಾದ ಸಾಧ್ಯತೆ ಇದೆ. ಇದೆಲ್ಲವನ್ನೂ ಮೊದಲು ಪರಾಮರ್ಶೆ ಮಾಡಬೇಕು.

3. ಆರೋಗ್ಯವಿಮಾ ಪಾಲಿಸಿಯಲ್ಲಾದರೆ ವೇಯಿrಂಗ್‌ ಪೀರಿಯಡ್‌ ಎಂಬುದು ಇರುತ್ತದೆ. ಪಾಲಿಸಿ ಕೊಂಡ ವರ್ಷದಲ್ಲೇ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ಕೆಲವು ಕಂಪೆನಿಗಳು ಕ್ಲೈಮು ನಿರಾಕರಿಸುತ್ತವೆ.  ಹಾಗೆಯೇ ಜೀವಮಾ ಪಾಲಿಸಿಯಲ್ಲಿ ಕ್ರಿಟಿಕಲ್‌ ಇಲೆ°ಸ್‌ ರೈಡರ್‌ ಹೊಂದಿದ್ದರೆ ಪಾಲಿಸಿ ಪಡೆದು ಎಷ್ಟು ವರ್ಷಗಳ ನಂತರ ಅದರ ಸವಲತ್ತು ಪಡೆಯಬಹುದು ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು  ಅಥವಾ ಪಾಲಿಸಿ ಪಡೆದ ನಂತರದಲ್ಲಿ ಯಾವುದೇ ಸಂದರ್ಭದಲ್ಲಾದರೂ ರೋಗಪತ್ತೆಯಾದರೆ ಆ ವ್ಯಕ್ತಿ ಕ್ಲೈಮಿಗೆ ಅರ್ಹನಾಗುತ್ತಾನೆಯೇ ಎಂಬುದರ ಖಚಿತತೆ ಇರಬೇಕು.

4. ಕೆಲವು ವಿಮಾಕಂಪೆನಿಗಳಲ್ಲಿ ಇಂತಹ ಕ್ರಿಟಿಕಲ್‌ ಇಲೆ°ಸ್‌ ರೈಡರ್‌ ಇದ್ದ ಸಂದರ್ಭದಲ್ಲಿ ರೋಗಪತ್ತೆಯಾದ ಕೂಡಲೇ ಕ್ಲೈಮು ಸೆಟಲ್‌ ಮಾಡುವುದಿಲ್ಲ. ಆ ವ್ಯಕ್ತಿ ರೋಗಪತ್ತೆಯಾದ ನಂತರದಲ್ಲಿ ಕನಿಷ್ಠ ಮೂವತ್ತು ದಿನಗಳ ಕಾಲ ಬದುಕುಳಿದಿರಬೇಕು. ಈ ಅವಧಿ ಕಳೆದ ನಂತರದಲ್ಲಿ ಕ್ಲೈಮ್‌ ತೀರುವಳಿ ಮಾಡಲಾಗುತ್ತದೆ.

ಪ್ರತ್ಯೇಕ ಯೋಜನೆ ಬೇಕೇ?
ಮೆಡಿಕ್ಲೈಮ್‌ ಆರೋಗ್ಯ ವಿಮಾ ಪಾಲಿಸಿಯಡಿಯಲ್ಲಿ ಬರುವ ಸಂಗತಿಯಾಗಿದ್ದು, ಅದರಡಿ ಆಸ್ಪತ್ರೆ ವೆಚ್ಚ, ವೈದ್ಯಕೀಯ ವೆಚ್ಚ, ಆಸ್ಪತ್ರೆಯಿಂದ ಹೊರಬಂದ ನಂತರದ ನಿರ್ದಿಷ್ಟ ವೆಚ್ಚ ಇವುಗಳನ್ನು ಭರಿಸಲ್ಪಡುತ್ತದೆ.  ಆದರೆ ಕ್ರಿಟಿಕಲ್‌ ಇಲೆ°ಸ್‌ ಪಾಲಿಸಿ ಇದಕ್ಕಿಂತ ಭಿನ್ನವಾಗಿದೆ. ಅದರಡಿಯಲ್ಲಿ ಆಸ್ಪತ್ರೆ ವೆಚ್ಚದ ಮರುಪಾವತಿ ಪ್ರಶ್ನೆಯೇ ಬರುವುದಿಲ್ಲ. ರೋಗಪತ್ತೆಯಾದ ನಂತರದಲ್ಲಿ ನಿರ್ದಿಷ್ಟ ವಿಮಾಮೊತ್ತ ಪಾಲಿಸಿದಾರನಿಗೆ ಏಕಗಂಟಿನಲ್ಲಿ ಸಂದಾಯವಾಗುತ್ತದೆ.  ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆದ ನಂತರದಲ್ಲಿ ಆ ವ್ಯಕ್ತಿ ದುಡಿಯುವ ಕ್ಷಮತೆ ಕಳೆದುಕೊಂಡಲ್ಲಿ ಕ್ರಿಟಿಕಲ್‌ ಇಲೆ°ಸ್‌ ಪಾಲಿಸಿ ನೆರವಿಗೆ ಬರುತ್ತದೆ.  ಆದರೆ ಮತ್ತೂಮ್ಮೆ ಗಮನಿಸಿ, ಯಾವ ಕಂಪೆನಿಯ ಪಾಲಿಸಿ ಸೂಕ್ತ ಎಂಬುದನ್ನು ತೀರ್ಮಾನ ಮಾಡುವ ಮೊದಲು ಸಾಕಷ್ಟು ಗ್ರೌಂಡ್‌ ವರ್ಕ್‌ ಮಾಡಿಕೊಳ್ಳಿ.

ಇದಕ್ಕೆ ಪರಿಹಾರ ಸಿಗುವುದಿಲ್ಲ.
1. ಧೂಮಪಾನ, ಮದ್ಯಪಾನ, ಡ್ರಗ್‌ ಸೇವನೆಯಿಂದಾಗಿ ರೋಗ ಬಂದಿದೆ ಎಂದು ವೈದ್ಯಕೀಯ ವರದಿಯಲ್ಲಿ ದಾಖಲಾಗಿದ್ದರೆ ಕ್ರಿಟಿಕಲ್‌ ಇಲೆ°ಸ್‌ ವಿಮಾಪ್ರತಿಫ‌ಲ ಸಿಗಲಾರದು.

2. ವಿಮೆ ಮಾಡಿಸಿಕೊಂಡ ವ್ಯಕ್ತಿಯು ಮಿಲಿಟರಿಯಲ್ಲಿದ್ದು, ಮಿಲಿಟರಿ ಕಾರ್ಯಾಚರಣೆಯಿಂದಾಗಿ ಆಗುವ ಅಪಘಾತ, ದೈಹಿಕ ಅಂಗನ್ಯೂನತೆ ಅಥವಾ ಇನ್ನಾವುದೇ ಆರೋಗ್ಯ ಸಂಬಂಧಿತ ತೊಂದರೆ, ಕಾಯಿಲೆಗಳಿದ್ದರೆ ಅದು ವಿಮೆಯ ವ್ಯಾಪ್ತಿಗೆ ಬರುವುದಿಲ್ಲ.

3. ವಿಮೆ ಮಾಡಿಸಿಕೊಂಡ ವ್ಯಕ್ತಿಯು ಸ್ವಯಂ ತಾನಾಗಿಯೇ ಯಾವುದಾದರೂ ರೀತಿಯಲ್ಲಿ ತನ್ನ ದೇಹಕ್ಕೆ/ಜೀವಕ್ಕೆ ಧಕ್ಕೆ ಬರುವಂತಹ ಕೆಲಸ ಮಾಡಿದ್ದರೆ, ಆತ್ಮಹತ್ಯೆಗೆ ಯತ್ನಿಸಿ ವಿಫ‌ಲನಾಗಿ ಬದುಕುಳಿದು, ದೈಹಿಕ/ಮಾನಸಿಕ ಕಾಯಿಲೆಗೆ ಒಳಗಾಗಿದ್ದರೆ ಅದು ಈ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ.

4. ವಿಮೆ ಮಾಡಿಸಿಕೊಂಡ ವ್ಯಕ್ತಿಯು ರೇಸಿಂಗ್‌, ಗ್ಲೆ„ಡಿಂಗ್‌, ಡೈವಿಂಗ್‌ ಸ್ಕೂಬಾ ಡೈವಿಂಗ್‌, ಪರ್ವತಾರೋಹಣ ಇಂತಹ ಹವ್ಯಾಸಗಳಲ್ಲಿ ತೊಡಗಿದ್ದು, ಅದರಿಂದಾಗಿ ಯಾವುದಾದರೂ ದೈಹಿಕ ತೊಂದರೆ, ನ್ಯೂನತೆ, ಕಾಯಿಲೆಗಳು ಬಂದಿದ್ದರೆ ವಿಮೆ ಇಲ್ಲ.

5. ವಿಮೆ ಮಾಡಿಸಿದ ವ್ಯಕ್ತಿಗೆ ಎಚ್‌.ಐ.ವಿ./ಏಡ್ಸ್‌ ನಂಥ ಖಾಯಿಲೆಗಳಾಗಲೀ, ಇತರೆ ಲೈಂಗಿಕ ಕಾಯಿಲೆಗಳಾಗಲೀ ಇದ್ದರೆ ಅದಕ್ಕೆ ಈ ವಿಮೆಯಲ್ಲಿ ಜಾಗವಿಲ್ಲ.

6. ವಿಮೆ ಮಾಡಿಸಿಕೊಂಡ ಮಹಿಳೆ, ಹೆರಿಗೆಯ ಸಮಯದಲ್ಲಿ ಅಥವಾ ಅದಕ್ಕೆ ಮುನ್ನ ಯಾವುದೇ ದೈಹಿಕ/ಮಾನಸಿಕ ತೊಂದರೆಗೆ ಒಳಗಾಗಿ ಕಾಯಿಲೆಗೆ ತುತ್ತಾಗಿದ್ದಲ್ಲಿ ಅದಕ್ಕೆ ಕ್ರಿಟಕಲ್‌ ಇಲೆ°ಸ್‌ನ ಪರಿಹಾರವೂ ಸಿಗುವುದಿಲ್ಲ.

7. ಇದಷ್ಟೇ ಅಲ್ಲ, ಒಂದೊಂದು ವಿಮಾಕಂಪೆನಿಗೂ ಒಂದೊಂದು ರೀತಿಯ ಸಂಹಿತೆ ಇರುತ್ತದೆ. ಅದಕ್ಕೆ ಭಂಗವಾದಲ್ಲಿ ಅಂತಹ ಪ್ರಕರಣವನ್ನು ಈ ಪಾಲಿಸಿಯ ಪ್ರತಿಫ‌ಲ ಕೊಡುವ ಪ್ರಸ್ತಾವನೆಯಿಂದ ಹೊರಗಿಡಲಾಗುತ್ತದೆ.

ಇವು ಪರಿಹಾರ
1. ಕೆಲವು ಕಂಪೆನಿಗಳಲ್ಲಿ ಕ್ರಿಟಿಕಲ್‌ ಇಲೆ°ಸ್‌ ವ್ಯಾಪ್ತಿಯಲ್ಲಿ ಹತ್ತುರೋಗಗಳನ್ನು ಪಟ್ಟಿ ಮಾಡಿದ್ದರೆ ಇನ್ನು ಕೆಲವು ಕಂಪೆನಿಗಳಲ್ಲಿ ರೋಗಗಳ ಪಟ್ಟಿ 30ರ ತನಕವೂ ಇರುತ್ತವೆ.

2. ಇದರಡಿ ವಿಮಾಪರಿಹಾರ ಕೊಡುವ ವಿಚಾರದಲ್ಲಿ ಕೆಲವು ಕಂಪೆನಿಗಳಲ್ಲಿ ರೋಗಪತ್ತೆಯಾದ ಮೂವತ್ತುದಿನಗಳ ತನಕ ವ್ಯಕ್ತಿ ಬದುಕುಳಿದರೆ, ಆ ಅವಧಿ ಕಳೆದ ನಂತರದಲ್ಲಿ ವಿಮಾಪರಿಹಾರ ಕೊಡುವ ಪ್ರಸ್ತಾವನೆ ಇರುತ್ತದೆ. ಇನ್ನು ಕೆಲ ಕಂಪೆನಿಗಳಲ್ಲಿ ಈ ವೈಟಿಂಗ್‌ ಪೀರಿಯಡ್‌ 90 ದಿನಗಳ ತನಕವೂ ಇದೆ.

3. ಕೆಲವು ಕಂಪೆನಿಗಳಲ್ಲಿ ಪಾಲಿಸಿ ಮಾಡಿಸಿದ ಮೊದಲ ವರ್ಷದಲ್ಲೇ ಕ್ರಿಟಿಕಲ್‌ ಇಲೆ°ಸ್‌ ಕಾಣಿಸಿಕೊಂಡರೆ ಪರಿಹಾರ ಕೊಡುವುದಾಗಿ ಆಶ್ವಾಸನೆ ಇದ್ದು, ಇನ್ನು ಕೆಲವು ಕಂಪೆನಿಗಳಲ್ಲಿ ಮೂರುವರುಷಗಳ ನಂತರ ಅಂತಹ ಪರಿಹಾರಗಳನ್ನು ಪರಿಗಣಿಸುತ್ತವೆ.

4. ಒಂದುಲಕ್ಷದ ವಿಮಾಮೊತ್ತಕ್ಕೆ ಕನಿಷ್ಠ ಪ್ರೀಮಿಯಂ 579/- ಇದ್ದು ಇದು ಒಂದೊಂದು ವಿಮಾ ಕಂಪೆನಿಯಲ್ಲಿ ಒಂದೊಂದು ತರಹದ್ದಾಗಿರುತ್ತದೆ. ಒಂದುಲಕ್ಷಕ್ಕೆ ಅನ್ವಯಿಕವಾಗುವ ಪ್ರೀಮಿಯಂ ದರ ಐದುಸಾವಿರದ ತನಕವೂ ಇದೆ.

ಗಮನಿಸಿ, ಮೇಲೆ ಹೇಳಿದ ಎಲ್ಲ ಅಂಶಗಳ ಪರಾಮರ್ಶೆಯ ನಂತರದಲ್ಲಿ ವಿಚಾರಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದ ನಂತರದಲ್ಲಿ ಈ ಪಾಲಿಸಿ ಸೂಕ್ತವೇ, ಸೂಕ್ತವಾಗಿದ್ದಲ್ಲಿ ಯಾವ ಕಂಪೆನಿಯ ಪಾಲಿಸಿ ಸೂಕ್ತ ಎಂಬೆಲ್ಲ ವಿಷಯಗಳ ಕುರಿತಾಗಿ ಸಾಕಷ್ಟು ವಿವೇಚನೆ ಮತ್ತು ಚಿಂತನೆಯೊಂದಿಗೆ ಮುಂದಡಿಯಿಡುವುದು ಸೂಕ್ತ ನಿರ್ಧಾರ.

– ನಿರಂಜನ

ಟಾಪ್ ನ್ಯೂಸ್

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

1

Brahmavara: ಉದ್ಯೋಗ ಭರವಸೆ ನೀಡಿ ಹಣ ವಂಚನೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.