ಕರೆಂಟ್ ಬೈಕ್ ಬಂತು!
ವಿದ್ಯುತ್‌ನಿಂದ ಓಡುವ ಸ್ಪೋರ್ಟ್ಸ್ ಬೈಕ್
Team Udayavani, Sep 9, 2019, 5:05 AM IST
ಎಲೆಕ್ಟ್ರಿಕ್ ವಾಹನಗಳ ಕುರಿತು ಒಂದು ರೀತಿಯ ಕ್ರೇಝ್ಅನ್ನು ನಾವಿಂದು ಕಾಣಬಹುದು. ಹಾಗಿದ್ದೂ ಜನರು ಅವನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ನ್ಪೋರ್ಟಿ ಲುಕ್‌ನಲ್ಲಿ ಬಂದರೆ ಮಾತ್ರ ಅವನ್ನು ಕೊಳ್ಳಬಹುದು ಎನ್ನುವುದು ಅನೇಕರ ಅಭಿಪ್ರಾಯ ಆಗಿರುತ್ತಿತ್ತು. ಇದುವರೆಗೂ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳು, ಈ ನ್ಪೋರ್ಟಿ ಲುಕ್ ಅಥವಾ ಇಂದಿನ ಪೀಳಿಗೆಯ ಯುವಕರನ್ನು ಆಕರ್ಷಿಸುವ ಕೆಲಸ ಮಾಡಿರಲಿಲ್ಲ. ಆದರೆ, ಇದೀಗ ಸಂಪೂರ್ಣವಾಗಿ ಭಾರತದ ಕಂಪನಿಯೇ ತಯಾರಿಸಿರುವ ಒಂದು ಮೋಟಾರ್ ಸೈಕಲ್ ಬಂದಿದೆ. ಅದರ ಹೆಸರು ರಿವೋಲ್ಟ್ ಆರ್‌ವಿ 400.
ಇಂಟೆಲಿಜೆಂಟ್ ಬೈಕ್ ಇದು
“ರಿವೋಲ್ಟ್’ ಪೂರ್ತಿಯಾಗಿ ನ್ಪೋರ್ಟಿ ಲುಕ್ ಹೊಂದಿರುವ, ಯುವಕರ ನೆಚ್ಚಿನ ಬೈಕ್ ಆಗುವ ನಿರೀಕ್ಷೆ ಹೊಂದಿರುವಂಥ ಬೈಕ್. ಇದರ ವಿಶೇಷ “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಇದರಲ್ಲಿ 4ಜಿ ಎಲ್‌ಟಿಇ ಆಧರಿತ ಸಿಮ್ ಹಾಕಿ, ಮೊಬೈಲ್ ಮೂಲಕವೇ ಕಂಟ್ರೋಲ್ ಮಾಡುವ ವ್ಯವಸ್ಥೆ ನೀಡಲಾಗಿದೆ. ಸವಾರರು ಗಾಡಿಯ ಸ್ಥಿತಿಗತಿ, ನ್ಯಾವಿಗೇಶನ್, ಬೈಕ್ ಲೋಕೇಟರ್, ಜಿಯೋ- ಫೆನ್ಸಿಂಗ್, ಮನೆಬಾಗಿಲಿಗೆ ಬ್ಯಾಟರಿ ಡೆಲಿವರಿ ಮತ್ತು ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಮೊಬೈಲ್ ನಲ್ಲಿ ನೀಡಲಾಗಿರುವ ರಿವೋಲ್ಟ…ನ ಆ್ಯಪ್ ಮೂಲಕವೇ ಮಾಡಬಹುದಾಗಿದೆ.
ಕಡಿಮೆ ಸಿ.ಸಿ
ಇದು 125 ಸಿಸಿ ಗಾಡಿ. ಇಂದಿನ ಕಾಲದ 150ಸಿಸಿಗೆ ಮೇಲಿನ ದ್ವಿಚಕ್ರ ವಾಹನಗಳನ್ನು ಇಷ್ಟಪಡುವ ಯುವಕರಿಗೆ ಈ ಅಂಶದಿಂದ ಕೊಂಚ ನಿರಾಸೆಯಾಗಬಹುದು. ಹೀಗಾಗಿ “125 ಸಿಸಿ ಅಷ್ಟೇನಾ?’ ಎಂದು ಮೂಗು ಮುರಿದರೂ ಮುರಿಯಬಹುದು. ಸ್ಪೋರ್ಟ್ಸ್ ವಾಹನಗಳು ಸಾಮಾನ್ಯವಾಗಿ ಹೆಚ್ಚಿನ ಸಿಸಿ ಹೊಂದಿರುತ್ತವೆ. ಆದರೆ ರಿವೋಲ್ಟ್ ಗಾಡಿಗಳು ಕಡಿಮೆ ಸಿಸಿ ಹೊಂದಿರುವುದಕ್ಕೆ ಕಾರಣ ಇದು ವಿದ್ಯುತ್ ಚಾಲಿತ ಎನ್ನುವುದು ಕಾರಣವಾಗಿರಬಹುದು. ತೂಕ ಕಡಿಮೆ ಮಾಡಿದಷ್ಟೂ ಬ್ಯಾಟರಿ ದೀರ್ಘಾವಧಿ ಬರುತ್ತದೆ ಎನ್ನುವ ಲೆಕ್ಕಾಚಾರ ಇದರಲ್ಲಿ ಅಡಗಿದೆ.
ಕಂತಿನಲ್ಲಿ ಬರುತ್ತೆ!
ಬೈಕಿನ ಬಗ್ಗೆ ಹೇಳುವುದಾದರೆ ನೋಡುವುದಕ್ಕೆ ಕೊಂಚ ಚೆನ್ನಾಗಿಯೇ ಇದೆ. ಆದರೂ, ಇಂದಿನ ಕಾಲದಲ್ಲಿ ಬರುತ್ತಿರುವ ಬಿಎಂಡಬ್ಲ್ಯೂ ಸೇರಿದಂತೆ ಐಷಾರಾಮಿ ಕಾರುಗಳ ಕಂಪನಿಗಳು ರೂಪಿಸುತ್ತಿರುವ ಎಲೆಕ್ಟ್ರಿಕ್ ಬೈಕ್‌ಗಳಿಗೆ ಇದನ್ನು ಹೋಲಿಸಲು ಆಗುವುದಿಲ್ಲ. ಆದರೂ, ನೋಡಲು ಚೆನ್ನಾಗಿದೆ ಎಂದು ಹೇಳಲಿಕ್ಕಂತೂ ಅಡ್ಡಿ ಇಲ್ಲ. ಆದರೆ, ಸಿಟಿ ಪ್ರದೇಶದಲ್ಲಿ ಕೇವಲ 80ರಿಂದ 90 ಕಿ.ಮೀ. ಮೈಲೇಜ್ ಕೊಟ್ಟರೆ ದೂರದ ಕಚೇರಿಗಳಿಗೆ ಹೋಗಿ ಬರಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಬೈಕ್‌ನ ಎಕ್ಸ್ ಶೋ ರೂಂ ದರ 1,20,463 ರೂ.ನಿಂದ 1,47,963 ರೂ. ತನಕ ಇದೆ.
ಈಗಾಗಲೇ ಈ ಬೈಕ್‌ನ ಬುಕ್ಕಿಂಗ್ ಆರಂಭವಾಗಿದೆ. ಕೊಂಚ ಹಣ ಪಾವತಿಸಿ ಬೈಕ್ ಮಾಡಬಹುದು. ಅಂತೆಯೇ ಈ ಬೈಕ್‌ಅನ್ನು ಸಂಪೂರ್ಣವಾಗಿ ಹಣ ಕೊಟ್ಟು ಖರೀದಿ ಮಾಡಬೇಕು ಎಂದೇನಿಲ್ಲ. ಕಂಪನಿಯೇ ಇಎಂಐ ಪ್ಲಾನ್‌ಗಳನ್ನೂ ನೀಡಿದೆ. ಅಂದರೆ 3499 ರೂ.ನಿಂದ 3,999 ರೂ. ವರೆಗಿನ ಪ್ಲಾನ್‌ನಲ್ಲಿ 39 ತಿಂಗಳುಗಳ ವರೆಗೆ ಇಎಂಐ ಕಟ್ಟಿ ಬೈಕ್ ಖರೀದಿಸಬಹುದು. ಬೈಕ್ ಮೂರು ಆವೃತ್ತಿಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಅವುಗಳ ಬೆಲೆ ಸವಲತ್ತುಗಳಿಗೆ ತಕ್ಕಂತೆ ನಿಗದಿ ಪಡಿಸಲಾಗಿರುತ್ತದೆ.
ಮೇಡ್ ಇನ್ ಇಂಡಿಯಾ
ಬ್ಯಾಟರಿ ಮತ್ತು ಎಂಜಿನ್ ಎರಡನ್ನು ಬಿಟ್ಟು ಉಳಿದಿದ್ದೆಲ್ಲಾ “ಮೇಡ್ ಇನ್ ಇಂಡಿಯಾ’ ಎಂದು ಹೇಳುತ್ತಿದೆ ರಿವೋಲ್ಟ್ ಇಂಟೆಲಿ ಕಾರ್ಪ್ ಕಂಪನಿ. ಇದು ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾದ ರಾಹುಲ್ ಶರ್ಮಾ ಎಂಬುವವರ ಮಾಲಕತ್ವದ ಕಂಪನಿ. ಇವರ ಪ್ರಕಾರ, ಇದು ಭಾರತದ ಮೊದಲ ಕೃತಕ ಬುದ್ಧಿಮತ್ತೆ ಸೌಲಭ್ಯ ಹೊಂದಿರುವ ಬೈಕ್. ಇದರ ಬಾಡಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸಲಾಗಿದೆ. ಬ್ಯಾಟರಿ ಮತ್ತು ಎಂಜಿನ್‌ಅನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಬೈಕ್ ಚೀನಾದ ಸೂಪರ್ ಸೋಕೋ ಟಿಎಸ್1200ಆರ್ ಬೈಕ್‌ಅನ್ನು ಹೋಲುತ್ತದೆ ಎನ್ನುವ ಮಾತು ಕೂಡಾ ಕೇಳಿ ಬಂದಿದೆ.
ಎಷ್ಟು ಕೊಡುತ್ತೆ ಗೊತ್ತಾ?
ಬೈಕ್ ಅನ್ನು ಒಮ್ಮೆ ಪೂರ್ತಿ ಚಾರ್ಚ್ ಮಾಡಿದರೆ ಎಕೋ ಮೋಡ್‌ನಲ್ಲಿ 150 ಕಿ.ಮೀ. ಓಡಿಸಬಹುದು ಎಂದು ಕಂಪನಿ ಹೇಳುತ್ತಿದೆ. ಆದರೆ, ನಗರ ಪ್ರದೇಶದಲ್ಲಾದರೆ ಇದು ಕೇವಲ 80 ರಿಂದ 90ಕ್ಕೆ ಇಳಿಕೆಯಾಗಬಹುದು. ಹಾಗಾಗಿ ದೂರದ ಪ್ರಯಾಣ ಸದ್ಯಕ್ಕೆ ಕಷ್ಟ. ಒಮ್ಮೆ ಎಲ್ಲ ಕಡೆಗಳಲ್ಲಿ ಬ್ಯಾಟರಿ ಸ್ವೆ„ಪಿಂಗ್ ಅಥವಾ ಚಾರ್ಜಿಂಗ್ ಸ್ಟೇಷನ್‌ಗಳು ಲಭ್ಯವಾದರೆ ಸವಾರರಿಗೆ ಅನುಕೂಲವಾಗುತ್ತದೆ. ಈ ಬೈಕ್ ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಕನಿಷ್ಠ ನಾಲ್ಕೂವರೆ ಗಂಟೆ ಬೇಕಾಗಬಹುದು. ಹೀಗಾಗಿ ರಾತ್ರಿ ಚಾರ್ಜ್‌ಗೆ ಹಾಕಿ ಮಲಗಬಹುದು ಅಷ್ಟೇ. ಅಂದ ಹಾಗೆ 8 ವರ್ಷ ಅಥವಾ 1,50,000 ಕಿ.ಮೀ ಪ್ರಯಾಣಿಸಿದ ಬಳಿಕ ಬ್ಯಾಟರಿಯನ್ನು ಕಂಪನಿಯೇ ಬದಲಾಯಿಸಿ ಕೊಡಲಿದೆ.
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.