ಡಿಸ್ಕೌಂಟ್‌ ಮಾಯೆಗೆ ಗ್ರಾಹಕ ಫ್ಲಾಟ್‌ !


Team Udayavani, Feb 19, 2018, 8:15 AM IST

b-10.jpg

ಒಂದು ವಸ್ತುವನ್ನು ಅಂಗಡಿಕಾರ ಅದರ ಮುದ್ರಿತ, ನಿಗದಿತ ಅಥವಾ ಮುಖ ಬೆಲೆಗಿಂತ ಕಡಿಮೆ ದರಕ್ಕೆ ಮಾರಿದರೆ, ಅದನ್ನು ವಾಣಿಜ್ಯ ಭಾಷೆಯಲ್ಲಿ ಡಿಸ್ಕೌಂಟ್‌ ಅಥವಾ ಇಳಿಕೆ  ವ್ಯಾಪಾರ  ಎನ್ನುತ್ತಾರೆ.  ಸಾಮಾನ್ಯವಾಗಿ  ಯಾರೂ ಮುದ್ರಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಿಲ್ಲ. ಯಾರಾದರೂ ಸ್ವಲ್ಪ ಚೌಕಾಶಿ ಮಾಡಿದರೆ, ಸಾರಿ ಸರ್‌, ಇದು ಪ್ರಿಂಟೆಡ್‌ ಬೆಲೆ. ಇದಕ್ಕಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವಿಲ್ಲ  ಎಂದು ಹೇಳುತ್ತಾರೆ. ಅದರೂ ಇಂದು ದೇಶಾದ್ಯಂತ ಡಿಸ್ಕೌಂಟ್‌  ಸೇಲ್ಸ್‌ ನಡೆಯುತ್ತಲೇ ಇದೆ.  ಇದರ ಹಿಂದಿನ ಉದ್ದೇಶ  ಏನು? ಒಂದು ಕಾಲಕ್ಕೆ ಕೇವಲ ಕೆಲವು  ಪ್ರಮುಖ ಹಬ್ಬಗಳಿಗೆ ಮಾತ್ರವೇ ಡಿಸ್ಕೌಂಟ್‌ ಸೇಲ್‌ಗ‌ಳಿತ್ತು. ಇಂದು ಯಾವುದಾದರೂ ನೆವದಲ್ಲಿ ವರ್ಷಪೂರ್ತಿ ನಡೆಯುತ್ತಲೇ  ಇರುತ್ತದೆ.  ಈ ಡಿಸ್ಕೌಂಟ್‌ ಸೇಲ್‌ಗೆ  ಇತ್ತೀಚೆಗಿನ ದಿನಗಳಲ್ಲಿ ವಾರಾಂತ್ಯ ಮತ್ತು ರಾಷ್ಟ್ರೀಯ ಹಬ್ಬಗಳು ಮತ್ತು ಜಯಂತಿಗಳು ಬಹು ಮುಖ್ಯವೇದಿಕೆಯಾಗುತ್ತಿವೆ.

ಈ ಡಿಸ್ಕೌಂಟ್‌ ಸೇಲ್ನ  ಹಿಂದಿನ ಉದ್ದೇಶ ಏನು?
ಮೇಲು ನೋಟಕ್ಕೆ, ಹಣದುಬ್ಬರದಿಂದ  ಜರ್ಜರಿತವಾದ ಗ್ರಾಹಕರಿಗೆ  ತುಸು ರಿಲೀಫ್ ಕೊಡಲು  ವ್ಯಾಪಾರಿಗಳು ಮುಖ ಬೆಲೆ ಮೇಲೆ ಡಿಸ್ಕೌಂಟ್‌ ನೀಡುತ್ತಾರೆ. ಗ್ರಾಹಕರೂ ನಾಲ್ಕುಕಾಸು ಉಳಿದರೆ ಸಾಕು ಎಂದು  ಡಿಸ್ಕೌಂಟ್‌ ಸೇಗೆ  ಭರ್ಜರಿಯಾಗಿ ಸ್ಪಂದಿಸುತ್ತಾರೆ ಮತ್ತು ಮುಗಿ ಬೀಳುತ್ತಾರೆ.  ಕೆಲವು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಡಿಸ್ಕೌಂಟ್‌  ಸೇಲ್‌ ನ ಹಿಂದಿನ ಉದ್ದೇಶ ಗ್ರಾಹಕರ ಹಿತಾಸಕ್ತಿಗೆ  ಹೊರತಾಗಿ ಬೇರೆ ಇರುತ್ತದೆ. ಸ್ಟಾಕ್‌ ಬಹುದಿನಗಳಿಂದ  ಮಾರಾಟವಾಗದೇ ಉಳಿದಿದ್ದು, ಟ್ರೆಂಡ್‌, ಫ್ಯಾಷನ್‌,ಅಭಿರುಚಿ ನಿರಂತರ ಬದಲಾವಣೆಯಾಗುವ ದಿನಗಳಲ್ಲಿ ಅವು Out Of Date ಮತ್ತು oout of Fashionಆಗಿ ಅವು ಡೆಡ್‌ಸ್ಟಾಕ್‌ ಆಗುವ ಭಯ. ನಿರೀಕ್ಷೆಯ ಲಾಭಕ್ಕೆ ಅಪೇಕ್ಷೆ ಪಡದೇ, ಹೂಡಿಕೆ ಮತ್ತು ಖರ್ಚು ವೆಚ್ಚವನ್ನಾದರೂ ಮರಳಿ ಪಡೆಯುವ ಹುನ್ನಾರ.  ಸಾಮಾನ್ಯವಾಗಿ  ವ್ಯಾಪಾರಸ್ಥರು  ಬ್ಯಾಂಕ್‌ಲೋನ್‌ ತೆಗೆದುಕೊಳ್ಳುತ್ತಿದ್ದು, ವ್ಯಾಪಾರ ಅಗಲಿ,ಆಗದೇ ಇರಲಿ ಬಡ್ಡಿ ಮೀಟರ್‌ ಓಡುತ್ತಿರುತ್ತದೆ. ಖಾತೆಗಳಲ್ಲಿ ಒಂದಿಷ್ಟು  ಹಣ ಓಡಾಡಿದರೆ, ವ್ಯಾಪಾರಿಗಳಿಗೆ ಅಷ್ಟೇ ನೆಮ್ಮದಿ ಮತ್ತು ಬ್ಯಾಂಕುಗಳು ಕೂಡಾ  ವಿಚಲಿತರಾಗುವುದಿಲ್ಲ. ಮಾರುಕಟ್ಟೆ  ಮತ್ತು ಬಿಜಿನೆಸ್‌, ಇವೆರಡೂ ನಿಂತ ನೀರಲ್ಲ. ಅದು ಸದಾ ಹರಿಯುತ್ತಿರುತ್ತದೆ ಮತ್ತು ಬದಲಾಗುತ್ತಿರುತ್ತವೆ. ಮಾರುಕಟ್ಟೆಯಲ್ಲಿ ಸದಾ ಹೊಸ ಹೊಸ ಅವಿಷ್ಕಾರಗಳು ಮತ್ತು ಉತ್ಪನ್ನಗಳು ಬರುತ್ತಿದ್ದು, ಹಳೆ ಪದಾರ್ಥಗಳು, ಉತ್ಪನ್ನಗಳು ಮತ್ತು ಅವಿಷ್ಕಾರಗಳು   ಹೊಸದಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ. ಅಂತೆಯೇ ಹೊಸ ಉತ್ಪನ್ನಗಳಿಗೆ ಅನುವು ಮಾಡಿಕೊಡಲು ಹಳೆಯದನ್ನು ಖಾಲಿ ಮಾಡುವ ಅನಿವಾರ್ಯತೆ ಇರುತ್ತದೆ. ಹಳೆಯ ಮುದ್ರಿತ ದರಗಳಿಗೇ ಅಂಟಿಕೊಂಡರೆ, ಅವುಗಳನ್ನು ಸಾಗಹಾಕುವುದು  ತುಂಬಾ ಕಷ್ಟ.  ಈ ಕಾರಣದಿಂದಲೇ ಕೆಲವೊಂದು ವಸ್ತುಗಳ ಮುದ್ರಿತ ದರವನ್ನು ಇಳಿಸಿ ಮಾರಾಟ ಮಾಡುವುದನ್ನು ನೋಡಬಹುದು. ಬಹುಶ ಇದೇ ಕಾರಣಕ್ಕೊ ಏನೋ, ಡಿಸ್ಕೌಂಟ… ಸೇಲ್‌ಗಳಲ್ಲಿ, ಆಯ್ದ  ಐಟಂ ಗಳಿಗೆ ಮಾತ್ರ ರಿಯಾಯಿತಿ (selected items only)  ಎನ್ನುವ ನಿಬಂಧನೆಯನ್ನೂ ನೋಡಬಹುದು.  ಮಳಿಗೆಯಲ್ಲಿರುವ  ಎಲ್ಲಾ  ಐಟಂಗಳಿಗೆ  ಡಿಸ್ಕೌಂಟ್‌ ಅನ್ವಯವಾಗುವುದು  ತೀರಾ ಕಡಿಮೆ. ಈ ಆಯ್ದ ಐಟಂಗಳು ಸಾಮಾನ್ಯವಾಗಿ, ಹೊಸ ಸರಕಾಗಿರದೇ, outdated ಮತ್ತು out of fashion ಅಗಿರುವುದೇ ಹೆಚ್ಚು.  ಇವನ್ನು ಕೊಳ್ಳಲು ಬಂದವರು  ಹೊಸ ಸರಕಿನತ್ತ  ಕಣ್ಣು ಹಾಯಿಸುವದನ್ನು, ಮಾರ್ಕೆಟಿಂಗ್‌  ಮತ್ತು ಸೇಲ್ಸ್‌ ಸ್ಟ್ರಾಟೆಜಿ ಎನ್ನಬಹುದು.

ಡಿಸ್ಕೌಂಟ್‌ ಸೇಲ್ಸ್‌ ಎಂದು ಬೋರ್ಡ್‌ ಹಾಕಿದಾಗ, ಖರೀದಿಸಲಿ ಅಥವಾ ಬಿಡಲಿ, ಸಾಮಾನ್ಯಕ್ಕಿಂತ  ಹೆಚ್ಚು ಗ್ರಾಹಕರು ಮಳಿಗೆಗೆ ಬರುತ್ತಿದ್ದು. ಮಳಿಗೆಯಲ್ಲಿ ದಟ್ಟಣೆ ಕಾಣುತ್ತದೆ. ಬಂದವರಲ್ಲಿ 10-20%  ಗ್ರಾಹಕರು ಖರೀದಿಸಿದರೂ   ವ್ಯಾಪಾರಸ್ತರಿಗೆ  ಅಷ್ಟರಮಟ್ಟಿಗೆ   ಬಿಜಿನೆಸ್‌  ವೃದ್ದಿಯಾಗುತ್ತದೆ. ಅಂತೆಯೇ  ಇಂಥ ಡಿಸ್ಕೌಂಟ… ಸೇಲ… ಅನ್ನು  ಹೆಚ್ಚಿನ ಗ್ರಾಹಕರನ್ನು  ಎಳೆಯವ  ಮಾರ್ಕೆಟಿಂಗ್‌ ತಂತ್ರವೆಂದೂ ಬಣ್ಣಿಸುತ್ತಾರೆ. ಇದು ಒಂದು ರೀತಿಯಲ್ಲಿ ಹೊಸ ಗ್ರಾಹಕರೊಂದಿಗೆ  ಸಂಪರ್ಕ ಸಾಧಿಸುವ ಅವಕಾಶವೂ ಅಗಿರುತ್ತದೆ.

 ಡಿಸ್ಕೌಂಟನಲ್ಲಿ ಎಷ್ಟು ವಿಧಗಳು
ಡಿಸ್ಕೌಂಟ್‌ನಲ್ಲಿ ಹಲವು ರೀತಿಗಳು ಇರುತ್ತವೆ. ಮುಖಬೆಲೆಯ ಮೇಲೆ  ನೀಡುವ   ಇಳಿಕೆಯನ್ನು  ಮಾತ್ರ ಸಾಮಾನ್ಯವಾಗಿ  ಡಿಸ್ಕೌಂಟ್‌ ಎಂದು ಹೇಳಲಾಗುತ್ತದೆ. ನಿಸ್ಸಂಶಯವಾಗಿ ಡಿಸ್ಕೌಂಟ್‌ ಸೇಲ…ನಲ್ಲಿ ಇದು ಹೆಚ್ಚು ಜನಪ್ರಿಯ ಮತ್ತು  ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತದೆ. ಇದನ್ನು ಕ್ಯಾಷ್‌ ಡಿಸ್ಕೌಂಟ್‌ ಎಂದು ಕರೆಯತ್ತಾರೆ. ಪದಾರ್ಥಗಳ ಮುಖ ಬೆಲೆಯ ಮೇಲೆ  ಕೆಲವು  ಪರ್ಸೆಂಟೇಜ…  ಇಳಿಕೆ ನೀಡಲಾಗುತ್ತದೆ. ಈ ಇಳಿಕೆ ಶೇ. 5 ರಿಂದ  ಅರಂಭವಾಗಿ ಶೇ.55ವರೆಗೂ ಇರುತ್ತದೆ.  ಎರಡನೇ ರೀತಿಯ ಡಿಸ್ಕೌಂಟ್‌ ಎಂದರೆ,   ಒಂದು ಕೊಂಡರೆ, ಇನ್ನೊಂದು ಉಚಿತ, ಮೂರು ಕೊಂಡರೆ ಎರಡು ಉಚಿತ, ನಾಲ್ಕು  ಕೊಂಡರೆ ಮೂರು ಉಚಿತ ಎನ್ನುವ  ಮಾರಾಟ. ಇದು ಗಾರ್ಮೆಂಟ್ಸ್‌ ಸೆಕ್ಟರ್‌ನಲ್ಲಿ ಹೆಚ್ಚು ಕಾಣುತ್ತದೆ. ಈ ಡಿಸ್ಕೌಂಟ್‌ನಲ್ಲಿ ಹೆಚ್ಚು ಐಟಂ ಖರೀದಿಸಿದಷ್ಟು, ಹೆಚ್ಚು ಐಟಂಗಳು ಉಚಿತವಾಗಿ ಸಿಗುತ್ತವೆ. ಹಲವು ಸಂದರ್ಭದಲ್ಲಿ  ಪ್ಯಾಂಟ್‌ ಖರೀದಿಸಿದರೆ, ಶರ್ಟ್‌ ಉಚಿತ, ಸೀರೆ ಕೊಂಡರೆ ಬ್ಲೌಸ್‌ ಬಟ್ಟೆ  ಉಚಿತ, ಟಿವಿ ಕೊಂಡರೆ ಮೊಬೈಲ…  ಉಚಿತ ಎನ್ನುವ ಸ್ಕೀಮ…ಗಳು ಇರುತ್ತವೆ. ಕೆಲವು ಮಳಿಗೆಗಳಲ್ಲಿ ಡಿಸ್ಕೌಂಟ್‌ಗಳನ್ನು ಕೂಡಲೇ ಕೊಡದೇ, ವೋಚರ್‌ ಕೊಟ್ಟು, ಮೂರು ತಿಂಗಳಿನಲ್ಲಿ ಇನ್ನೊಮ್ಮೆ  ಖರೀದಿಸುವಾಗ  ಡಿಸ್ಕೌಂಟ್‌ ತೆಗೆದುಕೊಳ್ಳುವಂತೆ  ಹೇಳಿ ಗ್ರಾಹಕ ಇನ್ನೊಮ್ಮೆ ತಮ್ಮ  ಮಳಿಗೆಗೆ ಬರುವಂತೆ ಮಾಡುತ್ತಾರೆ. ವ್ಯಾಪಾರಸ್ಥರ ಈ ಚಾಣಾಕ್ಷತನ  ಮತ್ತು ಮಾರ್ಕೆಟಿಂಗ್‌  ಗಿಮಿಕ್‌ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಗ್ರಾಹಕರು ಸಾಮಾನ್ಯವಾಗಿ ಈ ಡಿಸ್ಕೌಂಟ… ಹಿಂದಿನ ಸಮೀಕರಣವನ್ನು  ಮತ್ತು  ಲೆಕ್ಕಾಚಾರವನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ.  ಅವರ ಗಮನ ಇರುವುದು ನಾಲ್ಕು  ಕಾಸು ಉಳಿಯಬಹುದೇ ಎನ್ನುವ ಯೋಚನೆಯ ಮೇಲೆ.

ಹಳೆಯದನ್ನು ಕೊಟ್ಟು ಹೊಸದನ್ನು ಪಡೆಯಿರಿ
ಇತ್ತೀಚೆಗೆ, ನಿಮ್ಮ ಹಳೆಯ ವಸ್ತುಗಳನ್ನು ಪಡೆದು, ಅದರ ಬದಲಿಗೆ ಹೊಸ ಉತ್ಪನ್ನವನ್ನು ನೀಡುವ  ಸ್ಕೀಮ…   ಚಾಲ್ತಿಗೆ ಬಂದಿದ್ದು,  ಭಾರೀ ಜನಪ್ರಿಯವಾಗುತ್ತಿದೆ. ಮೇಲುನೋಟಕ್ಕೆ ಕಾಣದಿದ್ದರೂ, ಇದೂ ಒಂದು ರೀತಿಯ ಡಿಸ್ಕೌಂಟ್‌ ಸೇಲ್‌ ಇದು. ರಿಪೇರಿಗಿಂತ  ಹೊಸದನ್ನು ಕೊಳ್ಳುವುದೇ ವಾಸಿ ಎನ್ನುವ ಆಧುನಿಕ ಮಾರ್ಕೆಟಿಂಗ್‌ ತಂತ್ರದ ಕೂಸು.  ಇಂದು  ಹೊಸ ಅನ್ವೇಷಣೆ ಮತ್ತು ಅವಿಷ್ಕಾರಗಳು ಮಾರುಕಟ್ಟೆಗೆ ಸದಾ ಲಗ್ಗೆ ಇಡುತ್ತಿದ್ದು, ಹಳೆಯದರ ರಿಪೇರಿಗೆ spare ಗಳು ಸಿಗುತ್ತಿಲ್ಲ.  ರಿಪೇರಿ ಮಾಡುವವರೂ ಸಿಗುತ್ತಿಲ್ಲ. ಹೀಗಾಗಿ ರಿಪೇರಿ ಮಾಡಿಸುವ ಖರ್ಚೇ ದುಬಾರಿಯಾಗುತ್ತಿದ್ದು, ಹೊಸತನ್ನು  ಖರೀದಿಸುವ ಅನಿವಾರ್ಯತೆ ಹೆಚ್ಚುತ್ತಿದೆ.

 ಈ ವಿನಿಮಯ ವ್ಯವಹಾರ ಗ್ರಾಹಕರಿಗೂ ಒಂದು ರೀತಿಯಲ್ಲಿ ಅನುಕೂಲಕರವೇ. ರಿಪೇರಿಯಾಗದ, ಬೇಡವಾದ  ಅಥವಾ out dated ಮತ್ತು out of Fashion ವಸ್ತುಗಳನ್ನು  ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರುವುದು ಸಾಧ್ಯವಿಲ್ಲ. ಅಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ ಮತ್ತು  ವಿನಿಮಯ ವ್ಯವಹಾರ ಎಲ್ಲವುಗಳಿಗೆ ಪರಿಹಾರ.  ಈ ವಿನಿಮಯ ವ್ಯವಹಾರದಲ್ಲಿ ನಿರೀಕ್ಷೆಯಷ್ಟು ದೊರಕಲಿಕ್ಕಿಲ್ಲ.  ಆದರೆ, ಕಿಂಚಿತ್‌ ಆದರೂ ಸಿಗುವ ತೃಪ್ತಿ ಇರುತ್ತದೆ. ಈ ವ್ಯವಹಾರದಲ್ಲಿ ವ್ಯಾಪಾರಸ್ಥ ನಿಮ್ಮ ಹಳೆ ವಸ್ತುಗಳಿಗೆ ಒಂದು ನಿಖರ ಮೊತ್ತವನ್ನು ನಿಗದಿ ಪಡಿಸುತ್ತಿದ್ದು. ಹೆಚ್ಚಿಗೆ  ಚೌಕಾಶಿಗೆ  ಅವಕಾಶವಿಲ್ಲ. ಹಳೆಯದು ಛಜಿsಟಟsಛಿ ಆಯಿತು ಎನ್ನುವುದೇ ಹೆಚ್ಚಿನ ಸಮಾಧಾನ. ಆಟೋಮೊಬೈಲ…, ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಗೃಹೋಪಯೋಗಿ ಸಣ್ಣ, ಸಣ್ಣ   ವಸ್ತುಗಳ  ವ್ಯವಹಾರದಲ್ಲಿ  ಈ ವಿನಿಮಯ ವ್ಯವಹಾರಗಳು ಎದ್ದು ಕಾಣುತ್ತವೆ.

ವ್ಯಾಪಾರಿ ನಷ್ಟ ಮಾಡಿಕೊಳ್ಳುತ್ತಾನೆಯೇ?
ಬ್ಯುಸಿನೆಸ್‌ನಲ್ಲಿ ಯಾರೂ ನಷ್ಟ ಮಾಡಿಕೊಂಡು  ವ್ಯವಹಾರ ಮಾಡುವುದಿಲ್ಲ. ಲಾಭವನ್ನು ಕಡಿಮೆ ಮಾಡಿಕೊಳ್ಳಬಹುದೇ ವಿನಃ, ಅಸಲನ್ನು ಎಂದೂ ಕಳೆದುಕೊಳ್ಳುವುದಿಲ್ಲ. ಅನಿವಾರ್ಯವಾದ ಮತ್ತು ಬೇರೆ ಮಾರ್ಗವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಷ್ಟಮಾಡಿಕೊಂಡು ವ್ಯವಹಾರ ಮಾಡಬಹುದು. ಇದು ಬ್ಯುಸಿನೆಸ್‌ ಅರ್ಥ ಶಾಸ್ತ್ರದ ಮೊದಲ ಪಾಠ. ಒಬ್ಬ ವ್ಯಾಪಾರಿ ಡಿಸ್ಕೌಂಟ… ಕೊಡುತ್ತಾನೆ ಎಂದರೆ ಅತ ತನ್ನ  ಲಾಭದ ಪ್ರಮಾಣದಲ್ಲಿ ಕೊಂಚ  ಕಡಿಮೆ ಮಾಡಿ ಕೊಳ್ಳುತ್ತಾನೆ ಎಂತಲೇ ಅರ್ಥ.  ತನ್ನ ಮೂಲ ಬೆಲೆಯಲ್ಲಿ ಕಡಿಮೆಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ.  ಎಪ್ಪತ್ತು ಸಾವಿರ ಬೆಲೆಯ ಫ‌ನೀಚರ್‌ ಸೆಟ್‌ ಅನ್ನು ಡಿಸ್ಕೌಂಟ್‌ನಲ್ಲಿ  30 ಸಾವಿರಕ್ಕೆ ನೀಡಿದ ಮೇಲೂ, ಆ ವ್ಯಾಪಾರಿಗೆ  ನಷ್ಟವಾಗದು ಎಂದರೆ, ಡಿಸ್ಕೌಂಟ್‌ ಘೋಷಣೆಗೂ  ಮೊದಲು ಖರೀದಿಸಿದವರು ಅದಕ್ಕೆ ದುಪ್ಪಟ್ಟು ತೆತ್ತಿರಬೇಕು. 

ನಮ್ಮ ದೇಶದಲ್ಲಿ ಗ್ರಾಹಕ ಚಳವಳಿ ಕೆಲವು ಪಾಶ್ಚಿಮಾತ್ಯ ದೇಶಗಳಷ್ಟು ಸಕ್ರಿಯವಾಗಿಲ್ಲ.  ಅಂತೆಯೇ, ಇದರ ಹಿಂದಿನ ಸಮೀಕರಣವನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಶೇ. 10 -15 ರಷ್ಟು ಡಿಸ್ಕೌಂಟ… ನೀಡುವುದು  ತೀರಾ ಸಾಮಾನ್ಯವಾದ  ಬ್ಯೂಸಿನಸ್‌ನ ಪದ್ಧತಿ ಹಾಗೂ ತಂತ್ರ. ಆದರೆ, ಈ ಡಿಸ್ಕೌಂಟ್‌ ಶೇ. 50ರವರೆಗೂ ಹೋಗುವುದು,  ಅನೇಕ ರೀತಿಯ costly ಗಿಫ್ಟ್ ನೀಡುವುದು, ಕೆಲವು ಬಾರಿ ಕೆಲವು ಸಂಶಯಗಳಿಗೆ ಮತ್ತು ಉಹಾ ಪೋಹಗಳಿಗೆ  ಎಡೆ ಮಾಡಿ ಕೊಡುತ್ತದೆ.  ಮುಖ ಬೆಲೆಯ ಮೇಲೆ ಶೇ. 50ರ ವರೆಗೂ  ಡಿಸ್ಕೌಂಟ್‌ ಕೊಟ್ಟ  ಮೇಲೆ ವ್ಯಾಪಾರಿಗಳಿಗೆ  ಉಳಿಯುವುದೇನು? ಈಗ ಔಷಧಗಳ ಮೇಲಿ ಶೇ. 25ರ ತನಕ, ಚಪ್ಪಲಿಗಳ ಮೇಲೆ ಶೇ.30ರ ತನಕ ಡಿಸ್ಕೌಂಟ್‌ ದೊರೆಯುತ್ತಿದೆ ಎಂದಾದರೆ ಅವರ ಲಾಭದ ಪ್ರಮಾಣ, ಹೂಡಿಕೆಯ ಪ್ರಮಾಣವನ್ನು ಊಹಿಸಿ. ಈ ತನಕ ಡಿಸ್ಕೌಂಟ್‌ ನೀಡದೆ ಎಷ್ಟೆಲ್ಲಾ ಲಾಭ ಮಾಡಿಕೊಂಡಿರಬಹುದು?

 ಇನ್ನೂ ಕೆಲವರು ಫ್ಲಾಟ್‌ ಫಿಫ್ಟಿ ಅನ್ನೋ ಬೋರ್ಡು ಹಾಕಿರುವುದನ್ನು ಗಮನಿಸಬಹುದು. ಇದು ಹೇಗೆ ಸಾಧ್ಯ? ಅನುಮಾನ ಮೂಡದೇ ಇರದು. ತಜ್ಞರ ಪ್ರಕಾರ, ಈಗಾಗಲೇ ಇರುವ ಬೆಲೆಯನ್ನು ಹೆಚ್ಚಿಸಿ, ಅದರಲ್ಲಿ ಡಿಸ್ಕೌಂಟ್‌ ನಿಗಧಿ ಮಾಡುವುದರಿಂದ ಮಾರಾಟಗಾರರಿಗೆ ಹಳೆಯ ಬೆಲೆಗೇ ವಸ್ತುಗಳು ಹೆಚ್ಚುಹೆಚ್ಚು ಮಾರಾಟವಾಗುತ್ತದೆ.ಒಟ್ಟಾರೆ ಹೇಳುವುದಾದರೆ, ಡಿಸ್ಕೌಂಟ್‌ ಎಂಬುದು ಮಾರುಕಟ್ಟೆಯ ಮಾಯಾಮೃಗ. ವರ್ತಕರು ದನ್ನು ಆಗಿಂದಾಗ್ಗೆ ಬಿಡುತ್ತಲೇ ಇರುತ್ತಾರೆ. ಗ್ರಾಹಕರು ಮಾಯಾಮೃಗದ ಮೋಹಕ್ಕೆ ಮರುಳಾಗಿ, ಅದರ ಹಿಂದೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ. ಆ ಮೂಲಕ ವರ್ತಕರ ವ್ಯವಹಾರದಲ್ಲಿ ಏರಿಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಈ ವ್ಯವಹಾರದಲ್ಲಿ ಗ್ರಾಹಕನಿಗಿಂತ ಹೆಚ್ಚಿನ ಲಾಭ ವ್ಯಾಪಾರಿಗೇ ಆಗುತ್ತದೆ, ಅಷ್ಟೇ !
 
ರಮಾನಂದ ಶರ್ಮಾ

ಟಾಪ್ ನ್ಯೂಸ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.