ಸಾವಿನ ಮಾರ್ಕೆಟ್ ,ಆನ್‌ಲೈನ್ ಆಟದ ಮಾರುಕಟ್ಟೆ!
Team Udayavani, Aug 28, 2017, 5:59 PM IST
ಇತ್ತೀಚೆಗೆ ಆನ್‌ಲೈನ್ ಗೇಮ… ಹಾವಳಿ ಬಹಳ ಜಾಸ್ತಿಯಾಗಿದೆ. ‘ಬ್ಲೂ ವೇಲ…’ ಎನ್ನುವ ಆಟ ಜಗತ್ತಿನಾದ್ಯಂತ ಮುನ್ನೂರಕ್ಕೂ ಹೆಚ್ಚು ಜೀವವನ್ನೇ ಬಲಿತೆಗೆದುಕೊಂಡಿದೆ. ಜಗತ್ತಿನಾದ್ಯಂತ ಪಾಲಕರು ಕಂಗಾಲಾಗಿ¨ªಾರೆ. ಐವತ್ತು ದಿನಗಳ ಈ ಆಟ ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯಗೊಳ್ಳುತ್ತದೆ. ಇದು ಕಂಪ್ಯೂಟರ… ಮುಂದೆ ಕೂತು ಆಡುವ ಆನ್‌ಲೈನ್ ಆಟವಲ್ಲ ಬದಲಾಗಿ ಆನ್‌ಲೈನ್ ನಲ್ಲಿ ಸಿಗುವ ಆದೇಶಕ್ಕೆ ತಕ್ಕ ಹಾಗೆ ಆಡುವ ಆಟ. ಆನ್‌ಲೈನ್‌ನಲ್ಲಿ ಅನಾಮಿಕ ಒಬ್ಬ ನಿರ್ವಾಹಕ ಇರುತ್ತಾನೆ. ಅವನು ದಿನವೂ ಒಂದೊಂದು ಚಾಲೆಂಜ… ಕೊಡುತ್ತಾನೆ. ಅದನ್ನು ಮಾಡುತ್ತಾ ಹೋಗಬೇಕು. ಚಾಲೆಂಜ… ಎಷ್ಟು ಡೆಡ್ಲಿ ಇರುತ್ತದೆ ಅಂದರೆ ಕೊನೆಯಲ್ಲಿ ಆಟಗಾರ ತನ್ನ ಇಂದ್ರಿಯಗಳ ಸಂವೇದನೆಯನ್ನೇ ಕಳೆದುಕೊಂಡು ಬಿಡುತ್ತಾನೆ. ಹುಟ್ಟು, ಜನರ ಸಾವು, ಏನಿದು ಆಟ? ಇದರ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿ:-
ರಷ್ಯಾದಲ್ಲಿ ಈ ಆಟ ಶುರುವಾಗಿದ್ದು 2013ರಲ್ಲಿ. VKontakte ಎಂಬುದು ರಷ್ಯಾದ ಸಾಮಾಜಿಕ ಜಾಲತಾಣದ ಹೆಸರು. ಇದು ಫೇಸ್‌ಬುಕ್ ಇದ್ದ ಹಾಗೆಯೇ. ಅದರಲ್ಲಿ ‘ಡೆತ… ಗ್ರೂಪ…’ ಎನ್ನುವ ಒಂದು ಕಮ್ಯುನಿಟಿ ಇದೆ. ಆ ಗುಂಪಿನಲ್ಲಿ F57 ಎನ್ನುವ ಹೆಸರಿನಲ್ಲಿ ಈ ಆಟ ಶುರುವಾಗಿದ್ದು. ಇದನ್ನು ರಷ್ಯಾದ ಫಿಲಿಪ್ ಬುಡೆಕಿನ… ಎಂಬಾತ ಕಂಡುಹಿಡಿದಿದ್ದು.
F ಅಂದರೆ ಫಿಲಿಪ್ ಹೆಸರಿನ ಮೊದಲ ಅಕ್ಷರ, 57 ಆತನ ಮೊಬೈಲ… ನಂಬರಿನ ಕೊನೆಯ ಎರಡು ಅಂಕೆಗಳು. ಆತ ಸೈಕಾಲಜಿ ವಿಷಯದ ವಿದ್ಯಾರ್ಥಿಯಾಗಿದ್ದವನು. ಅವನನ್ನು ವಿಶ್ವವಿದ್ಯಾಲಯವು ಉಚ್ಚಾಟನೆ ಮಾಡಿತ್ತು. ಅವನು ಹೇಳುವ ಪ್ರಕಾರ ಸತತ ಐದು ವರ್ಷಗಳ ಕಾಲ ಮನುಷ್ಯನ ವರ್ತನೆಯನ್ನು ಅಧ್ಯಯನ ಮಾಡಿ ವಿನ್ಯಾಸಗೊಳಿಸಿದ ಆಟ ಇದು. ಈ ಆಟದ ಮೂಲ ಉದ್ದೇಶ ವೇಸ್ಟ್ ಅನಿಸಿಕೊಂಡಿರುವ ಜನರನ್ನು ಭೂಮಿಯ ಮೇಲಿನಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು. ಫಿಲಿಪ… ಪ್ರಕಾರ ಕೆಲವೊಂದು ಜನರು ಬದುಕಿರುವುದೇ ವೇಸ್ಟ್ ಅಂತೆ. ಅವರನ್ನು ಸಾಯಿಸುವುದೇ ಇವನ ಹಾಗೂ ಈ ಆಟದ ಗುರಿಯಾಗಿತ್ತು. ಇದಕ್ಕೆ ‘ಬ್ಲೂ ವೇಲ್’ ಅಂತ ಹೆಸರು ಬರಲು ಕಾರಣ ಏನು ಗೊತ್ತಾ? ಸಮುದ್ರದಲ್ಲಿ ಕೆಲವೊಮ್ಮೆ ತಿಮಿಂಗಿಲಗಳು ಡಿಹೈಡ್ರೇಷನ್ ಅಥವಾ ಇನ್ನಾವುದೋ ತೊಂದರೆಗೊಳಗಾಗಿ ತಮ್ಮನ್ನು ತಾವೇ ಸಾಯಿಸಿಕೊಂಡು ದಂಡೆಯ ಮೇಲೆ ಬಂದು ಬೀಳುತ್ತವೆ. ಹೀಗಾಗಿ ಈ ಸುಸೈಡಲ… ಗೇಮಿಗೆ ‘ಬ್ಲೂ ವೇಲ…’ ಎನ್ನುವ ಹೆಸರಿಡಲಾಗಿದೆ. ಈ ಆಟ ಹೇಗೆ ಅಂದರೆ, ಮೊದಲು ಅದರಲ್ಲಿ ಲಾಗಿನ್ ಆಗಿ ಆಟ ಆಡಲು ಒಪ್ಪಿಕೊಳ್ಳಬೇಕು.
ಆವಾಗಲೇ ನಿರ್ವಾಹಕ, ನೀನು ಆತ್ಮಹತ್ಯೆ ಮಾಡಿಕೊಳ್ಳಲು ರೆಡಿ ಇದ್ದೀಯಾ? ಅಂತ ಕೇಳುತ್ತಾನೆ. ರೆಡಿ ಇದ್ದರೆ ಮಾತ್ರ ಮುಂದುವರಿಯಬಹುದು. ಇದು ಭಾಗವಹಿಸುವ ವ್ಯಕ್ತಿ ಹಾಗೂ ನಿರ್ವಾಹಕರ ನಡುವೆ ಖಾಸಗಿಯಾಗಿ ನಡೆಯುವ ಆಟ. ನಿರ್ವಾಹಕ ಒಂದೊಂದೇ ಕೆಲಸವನ್ನು ಕೊಡುತ್ತಾ ಹೋಗುತ್ತಾನೆ. ಆ ಕೆಲಸವನ್ನು ಚಾಲೆಂಜ… ಎನ್ನುತ್ತಾರೆ. ಪ್ರತೀ ಚಾಲೆಂಜನ್ನು ಭಾಗವಹಿಸಿದ ಸ್ಪರ್ಧಾಳು ಮುಗಿಸುತ್ತಾ ಹೋಗುತ್ತಾನೆ. ಇದು ಕೇವಲ ನಿರ್ವಾಹಕನಿಗೆ ಹಾಗೂ ಸ್ಪರ್ಧಾಳುವಿಗೆ ಗೊತ್ತಿರುತ್ತದೆ. ಎಲ್ಲವೂ ಖಾಸಗಿಯಾಗಿ ನಡೆಯುವಂತಹದ್ದು. ಚಾಲೆಂಜ… ಎಲ್ಲವೂ ಅಮಾನವೀಯವಾದದ್ದು. ಕೈಮೇಲೆ ನಿರ್ವಾಹಕ ಹೇಳಿದ ಸಂಖ್ಯೆಯನ್ನು ಕೊಯ್ಯುವುದು, ತಿಮಿಂಗಿಲದ ಚಿತ್ರಣ ಕೆತ್ತನೆಯನ್ನು ಮಾಡಿಕೊಳ್ಳುವುದು, ನಡುರಾತ್ರಿ ಏಕಾಂಗಿಯಾಗಿ ಓಡಾಡುವುದು, ರಾತ್ರಿ ಯಾರೂ ಇಲ್ಲದ ಜಾಗದಲ್ಲಿ ಕೂತು ಭಯಾನಕ ಸಿನೆಮಾ ನೋಡುವುದು, ದೊಡ್ಡ ದೊಡ್ಡ ಕಟ್ಟಡ ಅಥವಾ ಸೇತುವೆಯ ಮೇಲೆ ಹೋಗಿ ನಿಲ್ಲುವುದು, ನಿರ್ವಾಹಕರು ಕಳುಹಿಸಿರುವ ವಿಡಿಯೋ ದೃಶ್ಯಾವಳಿಗಳನ್ನು ಬಲವಂತವಾಗಿ ನೋಡುವುದು ಇತ್ಯಾದಿ. ಹೀಗೆ ಐವತ್ತು ದಿನಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ವಾಹಕ ಹೇಳುತ್ತಾನೆ. ಅದೂ ಕೂಡ ‘ಬ್ಲೂ ವೇಲ…’ ಗೇಮ… ಪ್ರಕಾರ ಒಂದು ಚಾಲೆಂಜ…!
ಪ್ರತಿಯೊಂದು ಚಾಲೆಂಜನ್ನೂ ಮುಗಿಸಿದ್ದಕ್ಕೆ ಸಾಕ್ಷಿ$ಯಾಗಿ ಫೋಟೊ ತೆಗೆದು ಕಳುಹಿಸಬೇಕು. ಫೋಟೊ ಏನಾದರೂ ಸುಳ್ಳಾಗಿದ್ದರೆ ನಿರ್ವಾಹಕರು ಮತ್ತೆ ಸ್ಪರ್ಧಾಳುವನ್ನು ಸಂಪರ್ಕಿಸುವುದೇ ಇಲ್ಲ! ಒಮ್ಮೆ ಆಡಲು ಒಪ್ಪಿ ಅರ್ಧಕ್ಕೆ ಹಿಂದಕ್ಕೆ ಬರುತ್ತೇನೆ ಅಂದರೆ ನಿರ್ವಾಹಕ ಅವನ ಹತ್ತಿರವಿರುವ ಖಾಸಗಿ ಮಾಹಿತಿಯನ್ನು ಬಳಸಿ ಬ್ಲಾಕ್‌ವೆುàಲ… ಮಾಡಿ ಆಟಕ್ಕೆ ಪುನಃ ಬರುವಂತೆ ಮಾಡುತ್ತಾನೆ. ಒಟ್ಟಿನಲ್ಲಿ ಒಮ್ಮೆ ಆಟದ ಒಳಕ್ಕೆ ಹೋದವರು ಸಾವಿನ ಬಾಗಿಲಿನಿಂದಲೇ ಹೊರಕ್ಕೆ ಬರಬೇಕು.
ಈ ಆಟದ ಮೊದಲ ಬಲಿಪಶು ರಷ್ಯಾದ ಹದಿನೈದು ವರ್ಷದ ಬಾಲಕಿ. ಆಕೆ ತನಗೆ ಹೇಳಿದ ಎಲ್ಲ ನಲವತ್ತೂಂಬತ್ತು ಟಾಸ್ಕ್ ಮುಗಿಸಿ ಕೊನೆಗೆ ಕಟ್ಟಡದ ಮೇಲಿಂದ ಜಿಗಿದು ಜೀವ ಕಳೆದು ಕೊಂಡಿದ್ದಳು. ಅದಾದ ನಂತರದ ದಿನಗಳಲ್ಲಿ ಮತ್ತೂಬ್ಬಳು ಹದಿನಾಲ್ಕು ವರ್ಷದ ಹುಡುಗಿ ರೈಲಿನಿಂದ ಹಾರಿ ಸಾವನ್ನಪ್ಪಿದ್ದಳು. ಇಬ್ಬರೂ ‘ಡೆತ್ ಗ್ರೂಪ್’ ನ ಸದಸ್ಯರಾಗಿದ್ದರು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅದೇ ಗುಂಪಿನ ಸುಮಾರು ನೂರಾ ಮೂವತ್ತು ಜನರು ಸಾವನ್ನಪ್ಪಿದ್ದರು. ಈ ಮಾಹಿತಿಯನ್ನು ಕೇಳಿ, ಕೆಲವೊಂದು ವಿಡಿಯೋ ನೋಡಿ ಜಗತ್ತೇ ನಡುಗಿತು. ಬ್ರೆಜಿಲ…, ಇಂಗ್ಲೆಂಡ…, ಅಮೇರಿಕಾ, ಇಟಲಿ, ಭಾರತ ಹೀಗೆ ಹಲವಾರು ದೇಶಗಳಲ್ಲಿ ಈ ಘಟನೆ ನಡೆದಿದೆ, ನಡೆಯುತ್ತಿದೆ. ಸತ್ತವರಲ್ಲಿ ಹೆಚ್ಚಿನವರು ಹದಿಹರೆಯದ ಹುಡುಗಿಯರು. ಈ ಆಟ ಆಟವನ್ನು ಸೃಷ್ಟಿಸಿ ಹಲವರ ಜೀವದೊಂದಿಗೆ ಚೆಲ್ಲಾಟವಾಡಿದ ಪುಣ್ಯಾತ್ಮ ಈಗ ಜೈಲಿನಲ್ಲಿ ದ ಬ್ರಹ್ಮ ಜೈಲಿನ ಒಳಗೆ ಕಂಬಿಗಳನ್ನು ಎಣಿಸುತ್ತಿ¨ªಾನೆ. ಆದರೆ ಆತಂಕದ ವಿಷಯ ಅಂದರೆ, ಇವತ್ತೂ ಈ ಮಾರಣಾಂತಿಕ ಆಟ ಚಾಲ್ತಿಯಲ್ಲಿದೆ! ಜಗತ್ತಿನಾದ್ಯಂತ ಮುಗ್ಧ ಮಕ್ಕಳನ್ನು ತಮ್ಮ ಬಲೆಗೆ ಹಾಕಿಕೊಂಡು ಅವರೊಡನೆ ಚೆÇÉಾಡುವ ಗುಂಪೊಂದು ಈ ಪ್ಲಾಟಫಾರ್ಮನ್ನು ಬಳಸಿಕೊಳ್ಳುತ್ತಿದೆ. ಈ ಆಟದಲ್ಲಿ ಒಂದೊಮ್ಮೆ ಗೆದ್ದರೆ ಹಣವಿಲ್ಲ, ಸರ್ಟಿಫಿಕೇಟ್ ಇಲ್ಲ. ಯಾವುದೇ ಬಹುಮಾನವಿಲ್ಲಯ ಆದರೂ ಮಕ್ಕಳು, ಯುವಕ, ಯುವತಿಯರು ತಮ್ಮ ಜೀವವನ್ನು ಪಣದಲ್ಲಿಟ್ಟು ಆಡುತ್ತಾರೆ.
2005ರಲ್ಲಿ ದಕ್ಷಿಣ ಕೊರಿಯಾದ ಸರ್ಕಾರ ನಡೆಸಿದ ಸರ್ವೆಯಲ್ಲಿ ಗೊತ್ತಾದ ವಿಷಯ ಅಂದರೆ, ದೇಶದ ಸುಮಾರು ಐದು ಲಕ್ಷ ಜನ ಇಂಟರ್ನೆಟ… ಚಟದಿಂದ ಬಳಲುತ್ತಿ¨ªಾರೆ ಎನ್ನುವುದು. ಇವತ್ತು ಆ ಪರಿಸ್ಥಿತಿ ಇನ್ನೂ ಗಂಭೀರವಾಗಿರಬಹುದು. ಇತ್ತೀಚೆಗೆ ‘ಪೋಕ್ ಮನ್’ ಎನ್ನುವ ಒಂದು ಆನ್‌ಲೈನ್ ಗೇಮ… ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಅದರ ಚಟ ಜನರಿಗೆ ಎಷ್ಟು ಹೆಚ್ಚಿತ್ತು ಅಂದರೆ ಇದರಿಂದಾಗಿ ರಸ್ತೆಯ ಮೇಲೆ ಅಪಘಾತಗಳ ಸರಣಿಯೇ ಶುರುವಾಗಿತ್ತು. ಇವೆಲ್ಲ ನೋಡಿದ ಮೇಲೆ ಮನಸ್ಸಿಗೆ ಬರುವ ಪ್ರಶ್ನೆ ಅಂದರೆ ಯಾಕಪ್ಪಾ ಜೀವ ಬಿಟ್ಟು ಆನ್‌ಲೈನ್ ಆಟ ಆಡುತ್ತಾರೆ?
ಲಕ್ಷ ಕೋಟಿ ವಹಿವಾಟು
ಆನ್‌ಲೈನ್ ಗೇಮ್‌ಗೆ ಕೆಲವು ಪ್ರಖ್ಯಾತ ಕಂಪೆನಿಗಳೂ ಸೇರಿದಂತೆ ಹಲವು ಕಂಪೆನಿಗಳು ಹಾರ್ಡವೇರ್ ಮತ್ತು ಸಾಫ್ಟ್ವೇರನ್ನು ತಯಾರಿಸಿ ಕೊಡುತ್ತವೆ. ಈ ಆನ್‌ಲೈನ್ ಗೇಮ್‌ನಿಂದ ಕಂಪನಿಗಳಿಗೆ ಸಿಗುವ ವಾರ್ಷಿಕ ಟರ್ನ್ ಓವರ್ ಎಷ್ಟು ಗೊತ್ತೆ? 6ಲಕ್ಷ ಕೋಟಿ ರೂಪಾಯಿ!. ಈ ಆಟದಿಂದ ಯಾರಾರಿಗೆ, ಹೇಗೆಲ್ಲಾ ಲಾಭ ಆಗುತ್ತದೆ ಗೊತ್ತಾ?
ಜಗತ್ತಿನ ಒಟ್ಟೂ ಇಂಟರ್ನೆಟ… ಬಳಕೆದಾರರರಲ್ಲಿ ಶೇ. 44ರಷ್ಟು ಜನ ಆನ್‌ಲೈನ್ ಗೇಮ… ಆಡುತ್ತಾರೆ. 700 ಮಿಲಿಯನ್ ಜನರಲ್ಲಿ ಶೇ. 46 ಹೆಂಗಸರು, ಶೇ. 54 ಗಂಡಸರು ಗೇಮಲ್ಲಿ ನಿರತರಾಗಿರುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಟಿವಿ ನೋಡುವ ಸಮಯ ಎಷ್ಟಿತ್ತೋ ಅಷ್ಟೇ ಇದೆ ಆದರೆ ಮೊಬೈಲ… ನಲ್ಲಿ ಆನ್‌ಲೈನ… ಗೇಮ… ಆಡುವ ಸಮಯ ಶೇ. 75 ಹೆಚ್ಚಿದೆ.
ಆಟಕ್ಕೆ ಲಾಗಿನ್ ಆಗಲು ಸ್ವಲ್ಪ ಹಣವನ್ನು ಸಂದಾಯ ಮಾಡಬೇಕು. ನಂತರ ಆಡುವುದನ್ನು ಮುಂದುವರಿಸಲು ಕಡ್ಡಾಯವಾಗಿ ಚಂದಾದಾರರಾಗಬೇಕು. 700 ಮಿಲಿಯನ್ ಜನ ಆನ್‌ಲೈನ್ ಗೇಮ… ಆಡುತ್ತಿ¨ªಾರೆ. ಶೇ. 46ರಷ್ಟು ಮಹಿಳೆಯರು ಹಾಗೂ ಶೇ.54ರಷ್ಟು ಪುರುಷರು. ಚಂದಾದಾರರಿಂದಲೇ ಹೆಚ್ಚು ವಹಿವಾಟು ನಡೆಯುತ್ತದೆ. ಬಹಳಷ್ಟು ಆಟಗಳು ಇದೇ ಮಾದರಿಯಲ್ಲಿ ನಡೆಯುತ್ತಿದೆ. ಯೂಟ್ಯೂಬ… ಗೇಮಿಂಗ್ ಹಾಗೂ ಟ್ವಿಚ್ ಟಿವಿ.ಕಾಮ… ಇವೆರಡರ ಮೂಲಕ ಕಳೆದ ವರ್ಷ ಸುಮಾರು 292 ಬಿಲಿಯನ… ನಿಮಿಷಗಳ ಬಳಕೆಯಾಗಿದೆ.
ಇದರಲ್ಲಿ ಕೇವಲ ಕೆಲವೇ ಹಂತಗಳನ್ನು ಮಾತ್ರ ಉಚಿತವಾಗಿ ಆಡಬಹುದು. ಒಂದು ಹಂತ ತಲುಪಿ ಮುಂದಿನ ಹಂತಕ್ಕೆ ಹೋಗಬೇಕು ಅಂದರೆ ಪ್ರೀಮಿಯಮ… ಕಟ್ಟಬೇಕು. ಯಾರು ಹಣ ಕೊಟ್ಟು ಆಡುತ್ತಾರೋ ಅವರು ಎಲ್ಲ ಹಂತವನ್ನೂ ಆಡಬಹುದು. ಡಂಜಿಯಾನ… ರನ್ನರ್ಸ…, ಹಾಗೂ ಡೋಫಸ್ ಐಐಆರ್ಸಿ ತರಹದ ಆಟಗಳು ಈ ಮಾದರಿಯನ್ನು ಬಳಸಿಕೊಂಡಿವೆ.
ಒಮ್ಮೆ ಆಟದ ಬಾಕ್ಸ… ನ್ನು ಖರೀದಿ ಮಾಡಿ, ಗೇಮ… ಕೋಡ್ ಪಡೆದು ಇನ್‌ಸ್ಟಾಲ… ಮಾಡಿಕೊಂಡರೆ ಮುಗಿಯಿತು.
ಜೀವನಪರ್ಯಂತ ಆಟ ಅಡಬಹುದು. ಇದು ಇನ್ನೊಂದು ರೀತಿಯ ಬ್ಯುಸಿನೆಸ್ ಮಾಡೆಲ….
ಹಾಗೆಯೇ, ಆಟದ ಪರಿಸರದ ಅಕ್ಕ ಪಕ್ಕ ಫಲಕ ಬಳಸುವುದು. ಮಧ್ಯೆ ಜಾಹಿರಾತಿನ ತುಣುಕು ಪ್ರಸಾರ ಮಾಡುವುದು. ಆಟಗಾರರಿಗೆ ಫ್ರೀಯಾಗಿ ಕೊಟ್ಟು, ಜಾಹೀರಾತಿನ ಮೂಲಕ ಹಣ ಮಾಡುವುದು ಇನ್ನೊಂದು ಬಗೆಯ ವ್ಯವಹಾರದ ಮಾಡೆಲ…. ಮೊಬೈಲ… ಗೇಮಿಂಗ್‌ನಲ್ಲಿ ಈ ಮಾಡೆಲ… ನ್ನು ಹೆಚ್ಚಾಗಿ ಕಾಣಬಹುದು.
ಇದು ಮೈಕ್ರೋಟ್ರಾನ್ಸಾ$Âಕ್ಷನ್ ಮಾಡೆಲ್‌ನಲ್ಲಿಯೇ ಬರುವಂತಹದ್ದು, ಆದರೆ ಸ್ವಲ್ಪ ವಿಶೇಷವಾಗಿದೆ. ಇದರಲ್ಲಿ ನಾವು ಹೇಗೆ ಕರೆನ್ಸಿ ಬದಲಾಯಿಸುತ್ತೆವೆಯೋ ಹಾಗೆಯೇ ಬದಲಾಯಿಸಬಹುದು. ಅದರದ್ದೇ ಆದ ನಿರ್ಧಾರಿತ ಎಕ್ಸ್‌ಚೇಂಜ… ರೇಟ… ಕೂಡ ಇರುತ್ತದೆ. ಎಂಟ್ರೋಪಿಯಾ ಯುನಿವರ್ಸ… ಎನ್ನುವ ಆಟ ಈ ಮಾಡಲ… ಬಳಸಿಕೊಂಡಿದೆ.
ಆಟ ಸಂಪೂರ್ಣವಾಗಿ ಫ್ರೀ ಆದರೆ ಅದರಲ್ಲಿ ಬಳಕೆ ಆಗುವ ಸರಕುಗಳನ್ನು ಖರೀದಿ ಮಾಡಬೇಕು. ಉದಾಹರಣೆಗೆ ಟೀ-ಶರ್ಟ್, ಪೋಸ್ಟರ…, ಲೋಗೋ, ಇತ್ಯಾದಿ. ಕಿಂಗ್ಡಮ… ಆಫ್ ಲೋಥ್ ಎನ್ನುವ ಒಂದು ಆಟ ಈ ಮಾಡೆಲ… ಮೇಲೆ ಆಧಾರವಾಗಿದೆ.
ಇದರಲ್ಲಿ ಆಟ ಫ್ರೀ, ಆದರೆ ಇನ್ನೊಂದು ಹಂತಕ್ಕೂ ಹೋಗುವ ಮೊದಲು ಸರ್ವೆಯೊಂದನ್ನು ಮುಗಿಸಿ, ಆ ವಿಷಯದ ಬಗ್ಗೆ ಫೀಡಬ್ಯಾಕ್ ಕೊಟ್ಟು ಮುಂದಕ್ಕೆ ಹೋಗಬೇಕು. ಸರ್ವೆ ಮಾಡಿಸಲು ಇನ್ನೊಂದು ಕಂಪನಿಯವರು ಗೇಮಿಂಗ… ಕಂಪನಿಗೆ ಹಣ ಕೊಡುತ್ತಾರೆ. ಇನ್ನೊಂದು ರೀತಿಯಲ್ಲಿ ಆಟದಲ್ಲಿ ಗೆ¨ªಾರೆ ಕೂಪನ… ಕೊಡುವುದು. ಅದನ್ನು ಬಳಸಿ ನೀವು ಶಾಪಿಂಗ… ಮಾಡಬಹುದು.
ಆನ್‌ಲೈನ್ ಆಟದ ಮಾರುಕಟ್ಟೆ!
ಬೆಂಗಳೂರಿನಲ್ಲಿರುವ ಕೆಲವು ಸಾಫ್ಟ್ವೇರ್ ಕಂಪನಿಗಳು ಆನ್‌ಲೈನ್ ಗೇಮ… ಡೆವಲಪೆ¾ಂಟ… ಮಾಡುವುದರಲ್ಲಿ ತೊಡಗಿಸಿಕೊಂಡಿವೆ. ಇನ್ನು ಕೆಲವು ಆ ಕ್ಷೇತ್ರಕ್ಕೆ ಪರೋಕ್ಷ$ವಾಗಿ ಸರ್ವಿಸ… ಕೊಡುತ್ತಿವೆ. ಇವತ್ತು ಜಗತ್ತಿನಲ್ಲಿ ಓನಲೈನ… ಗೇಮಿಂಗ…
ಉದ್ಯಮಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಆನ್‌ಲೈನ್ ಆಟದ ಕಂಪನಿಗಳ ಕಳೆದ ವರ್ಷದ ಒಟ್ಟೂ ವಹಿವಾಟು ಸುಮಾರು ನೂರು ಬಿಲಿಯನ… ಡಾಲರ್‌ಗಳಷ್ಟು. ಅದರಲ್ಲಿ ಅರ್ಧದಷ್ಟು ಭಾಗ ಏಷಿಯಾ ಪೆಸಿಫಿಕ್ ಪ್ರದೇಶದಿಂದ ಬರುತ್ತಿದೆ. ಮೊಬೈಲ್ ಇಂಟರ್‌ನೆಟ್ ಪ್ರಬಲವಾಗುತ್ತಿರುವ ಹಾಗೆಯೇ ಮೊಬೈಲ… ಆನ್‌ಲೈನ್ ಗೇಮ… ಮಾರುಕಟ್ಟೆ ಕೂಡ ವೃದ್ಧಿಸುತ್ತಿದೆ. 2016ರ ಒಟ್ಟೂ ವಹಿವಾಟಿನಲ್ಲಿ ಸುಮಾರು ಶೇ. 37ರಷ್ಟು ಭಾಗ ಮೊಬೈಲ್ ಗೇಮ…ನದ್ದೇ ಆಗಿದೆ. ಆನ್‌ಲೈನ… ಗೇಮ… ಆಡುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಜನಸಂಖ್ಯೆ ಕೂಡ ಜಗತ್ತಿನಲ್ಲಿ ಅತೀ ಹೆಚ್ಚು ಚೈನಾದಲ್ಲಿದೆ. ಇದರಿಂದಾಗಿ ಆನ್‌ಲೈನ್ ಗೇಮಿಗೆ ಅತೀ ದೊಡ್ಡ ಮಾರುಕಟ್ಟೆ ಅಂದರೆ ಅದು ಚೈನಾ. ಅದರ ನಂತರ ಅಮೇರಿಕಾ, ಜಪಾನ…, ರಷ್ಯಾ, ದಕ್ಷಿ$ಣ ಕೋರಿಯಾ ಹಾಗೂ ಇತರೆ ದೇಶಗಳು ಪಟ್ಟಿಯಲ್ಲಿ ಬರುತ್ತವೆ.
ಭಾರತ ಮೊದಲ ಇಪ್ಪತ್ತನೆಯ ಸ್ಥಾನದಲ್ಲಿ ಕೂಡ ಇಲ್ಲ ಎನ್ನುವುದು ಒಳ್ಳೆಯ ಸುದ್ದಿ. ಆದರೆ ಅದು ಮುಂದೆ ಹೋದ ಹಾಗೆ ಸುಳ್ಳಾಗಲೂಬಹುದು. ಯಾಕೆಂದರೆ ಇವತ್ತು ಅಕ್ಷ$ರ ಓದಲು ಬರೆಯಲು ಬರದ ಮಕ್ಕಳು ಕೂಡ ಆನ್‌ಲೈನ್ ಗೇಮ… ಆಡಲು ಶುರು ಮಾಡಿ¨ªಾರೆ. ಅರವತ್ತು ವರ್ಷದ ಅಜ್ಜನಿಗಿಂತ ಆರು ವರ್ಷದ ಮೊಮ್ಮಗನಿಗೆ ಮೊಬೈಲ… ಬಳಕೆಯ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ ಇಂದು. ಇವತ್ತು ಸುಮಾರು ಶೇ. 30ರಷ್ಟು ಜನರು ಕಂಪ್ಯೂಟರ್ ಬಳಸಿ ಆನ್‌ಲೈನ… ಗೇಮ… ಆಡುತ್ತಿ¨ªಾರೆ. ಆದರೆ ಇನ್ನೆರಡು ವರ್ಷದ ನಂತರದಲ್ಲಿ ಹೆಚ್ಚಾಗಿ ಮೊಬೈಲ… ಬಳಸಿಯೇ ಗೇಮ… ಆಡಲು ಜನರು ಒಲವು ತೋರಿಸುತ್ತಾರೆ ಅಂತ ಸಾಕಷ್ಟು ಸಮೀಕ್ಷೆಗಳು ಹೇಳುತ್ತಿವೆ. ಇತ್ತೀಚಿಗಂತೂ ವಚ್ಯುìವಲ… ರಿಯಾಲಿಟಿ ಓನಲೈನ… ಗೇಮಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಜನರು, ವಿಶೇಷವಾಗಿ ಎಳೆಯ ವಯಸ್ಸಿನ ಮಕ್ಕಳು ವರ್ಚುವಲ… ಜಗತ್ತಿನಲ್ಲಿ ಕಳೆದು ಹೋಗುತ್ತಿ¨ªಾರೆ.
– ವಿಕ್ರಮ್ ಜೋಷಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.