ಮನೆಯ ಎದುರುಗಡೆ ದೊಡ್ಡ ಮರಗಳು ಬೇಡ, ಏಕೆಂದರೆ…
Team Udayavani, Aug 21, 2017, 6:25 AM IST
ನಿಮ್ಮ ಪರಿಸರ ಪ್ರೀತಿಯನ್ನು ಕೈಬಿಡದಿರಿ. ಮನೆ ಎದುರು ಚಿಕ್ಕಪುಟ್ಟ ಗಿಡಗಳನ್ನು ಬೆಳೆಸಿ. ದೊಡ್ಡ ದೊಡ್ಡ ಮರಗಳನ್ನು ಬೆಳೆಸುವ ವಿಚಾರ ಕೈಬಿಡಿ. ನಿಮ್ಮ ಮನೆಯ ವಾಸ್ತುಶಕ್ತಿಯ ವಿಚಾರಗಳು ಪಂಚಭೂತಗಳ ಸಮೃದ್ಧಿಯೊಂದಿಗೆ ಸೂಕ್ತದಿಕ್ಕುಗಳನ್ನು ಬಳಸಿಕೊಂಡು ಬೆಳಕು, ಗಾಳಿ, ಮಣ್ಣು, ಕಾವು ಹಾಗೂ ದೈವಸಿದ್ಧಿಗಳನ್ನು ಕೊಡಬೇಕೇ ವಿನಾ ಇವೇ ಪಂಚಭೂತಗಳನ್ನು ಬಳಸಿಕೊಂಡು ಬಲಾಡ್ಯವಾಗಿ ಬೆಳೆಯುವ ಮನೆಯ ತೀರಾ ಸನಿಹದ ಮರಗಳಿಂದ ಸಕಾರಾತ್ಮಕ ಶಕ್ತಿಗೆ ಭಂಗವನ್ನು ತರುವ ಸಂದರ್ಭ ಎದುರಾಗಬಾರದು. ಅಂಗಳದಲ್ಲಿ ಬಣ್ಣದ ಹೂಗಳ ಪುಟ್ಟ ಗಿಡಬಳ್ಳಿಗಳು ಲಾನ್‌ಗಳನ್ನು ಬೆಳೆಸಬಹುದು. ಮುಖ್ಯವಾಗಿ ನಿಮ್ಮ ಮನೆಯು ಇಂಥದೇ ದಿಕ್ಕನ್ನು ಬಳಸಿಕೊಳ್ಳುವ ಬಾಗಿಲು ಎಂಬ ಅಂಶದ ಕುರಿತು ಆಧುನಿಕವಾದ ಈ ಕಾಲದಲ್ಲಿ ಗಮನ ಹರಿಸುವುದು ಕಷ್ಟಕರವಾದ ಸಂಗತಿ. ಹೊಂದಿ ಬರದ ಬಾಗಿಲುಗಳಿದ್ದರೂ ಮನೆಯಲ್ಲಿ ದೇವರ ಸ್ಥಳ ಎಲ್ಲಿ ಎಂಬುದನ್ನು ಸೂಕ್ತವಾಗಿ ರೂಪಿಸಿಕೊಂಡು ಮನೆಯೊಳಗಿನ ದೇವರು ಪೂರ್ವದಿಕ್ಕನ್ನು ನೋಡುವಂತೆ ಗಮನ ಹರಿಸಿ. ಆ ದಿಕ್ಕಿಗೆ ದೇವರ ಎದುರಿನ ಪ್ರಧಾನ ದ್ವಾರ ಮೆಟ್ಟಿಲು ಬರಲಿ.
ಹಲವರು ಪೂರ್ವದ ದಿಕ್ಕು, ನಂದಿ ಬಾಗಿಲು, ಮುಳುಗುವ ದಿಕ್ಕು ಎಂದು ಬಹಳಷ್ಟು ಪರದಾಡುತ್ತ, ಅಲೆದಾಡುತ್ತ ಹಳಹಳಿಸುತ್ತ ಇರುತ್ತಾರೆ. ಮನೆಯ ಪ್ರಧಾನ ಬಾಗಿಲು ದೇವರು ನೋಡುವ ದಿಕ್ಕನ್ನು ಆಧರಿಸಿಕೊಂಡೇ ರೂಪಿಸಿಕೊಂಡಾಗ ದಕ್ಷಿಣ ದಿಕ್ಕು ಮುಳುಗುವ ದಿಕ್ಕು ಎಂಬ ತಾಕಲಾಟಗಳು ಎದುರಾಗಲಾರವು. ಆದರೆ ಈ ವ್ಯವಸ್ಥೆ ಆಗಿದ್ದರೂ ಮನೆಯ ಸುತ್ತಮುತ್ತಲೂ ದೊಡ್ಡ ಮರಗಳನ್ನು ಬೆಳೆಸಿದರೆ ಮನೆಯ ಸಂಪನ್ನತೆಯನ್ನು ಹಾಳು ಮಾಡುತ್ತದೆ. ಸುವ್ಯವಸ್ಥಿತವಾದ ಶಕ್ತಿ ಸುಳಿ ಹಾಗೂ ಸುಸಂಬದ್ಧ, ತಳಹದಿ ಇರುವ ಮನೆಯ ತಳಹದಿಯನ್ನು ಈ ಮರಗಳ ಕಠಿಣ ಬೇರುಗಳ ಶಕ್ತಿಘಾತದಿಂದ ಧಕ್ಕೆ ಒದಗದಂತೆ ಜಾಗ್ರತೆ ವಹಿಸಬೇಕು. ಚಿಕ್ಕಪುಟ್ಟ ಶಮೀ, ಔದುಂಬರ, ಉತ್ತರಾಣಿ, ಗಿಡ ಪೊದೆ ಸೂûಾ¾ತಿಸೂಕ್ಷ್ಮ ಪೊದೆ ಇರಲಿ ದಟ್ಟಡವಾದುದು ಬೇಡ. ಎಕ್ಕದ ಗಿಡ ಕೂಡಾ ಸೂಕ್ತ ವಾಸ್ತುಸಲಹೆಯೊಂದಿಗೆ ಬೆಳೆಸಬಹುದು.
ಅರಳಿ, ಪಾಲಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ ಗಮನಕ್ಕೆ ಬಾರದೆಯೇ ಗಣೇಶ ಕೃಷ್ಣ, ದುರ್ಗಾ ವಿಗ್ರಹಗಳನ್ನು ಮನೆಯ ಆವರಣಗಳಲ್ಲಿ ಸ್ಥಾಪಿಸದಿರಿ. ಪ್ರತಿಯೊಂದನ್ನೂ ಸೂಕ್ತವಾದ ಅಳತೆ ಪರಿಸರ, ವಿಧಾನ ಸ್ಥಾಪನಾ ವಿಧಿಗಳೊಡನೆ ಕೇಳಿ ತಿಳಿದು ಯತಾರ್ಥವಾಗಿ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಕುಲದೇವರು, ಗ್ರಾಮ ದೇವರು, ಊರ ದೇವರು ಎಂದು ಸಮುಷ್ಟಿಯ ಒಳಿತುಗಳನ್ನು ಗಮನ ಇಟ್ಟುಕೊಂಡ ದೇವಮಂದಿರ ಗುಡಿ ದೇವಸ್ಥಾನಗಳ ರಚನೆ ಮಾಡುತ್ತಾರೆಯೇ ವಿನಾ, ಮನೆ ಮನೆಯ ಅಂಗಳದಲ್ಲಿ ಮಾಡುವುದು ಸೂಕ್ತವೆನಿಸದು. ಮೂಲದಲ್ಲಿ ಜಲಾಶಯ, ಕೆರೆ, ತೂಬುಗಳಿರುವ, ಮೋರಿಗಳಿರುವ ಜಾಗದಲ್ಲಿ ಮನೆ ಕಟ್ಟದಿರಿ. ಹೊರವಲಯಗಳು ಎಂದು ಗುರುತಿಸಿಕೊಂಡ ಜಾಗಗಳಲ್ಲಿ ಮನೆ ಕಟ್ಟಲು ಮುಂದಾಗದಿರಿ. ಕೆಲವು ಮನೋವಿಪ್ಲವಗಳನ್ನೂ, ಅಶಾಂತಿಗಳನ್ನು ಇದು ಸೃಷ್ಟಿಸಬಹುದು. ಇಂದು ನಗರಗಳಲ್ಲಿ ಪ್ರತಿಷ್ಠಿತ ಬಡಾವಣೆಗಳು ಎಂಬಲ್ಲಿ ಕೂಡಾ ಸ್ಥಿತಿವಂತರಾಗಿದ್ದು, ಮನಃಶಾಂತಿ ಕಳೆದುಕೊಂಡ ಸಾವಿರಾರು ಕುಟುಂಬಗಳು ಇದ್ದಿರುತ್ತದೆ. ನಿಷಿದ್ಧವಾದ ಸ್ಥಳಗಳು ನವೀಕರಣದ ಭರಾಟೆಯಲ್ಲಿ ಬಹು ಬೆಲೆಬಾಳುವ ನಿವೇಶನಗಳ ಕಾಲನಿಗಳಾಗಿ ಲೇಔಟ್‌ಗಳಾಗಿ ಪರಿವರ್ತನೆಗೊಂಡಿರುತ್ತದೆ. ನಿರ್ದಿಷ್ಟ ನಿಷೇಧಿತ ಗುಣ, ಧರ್ಮಗಳ ಕ್ರೋಢೀಕರಣದ ಪರಿಣಾಮಗಳನ್ನು ತಿಳಿಯಲಾರದೆ ನಿಷಿದ್ಧ ಜಾಗಗಳಲ್ಲಿ ಇಮಾರತುಗಳು ಸೌಧಗಳು, ವಿಲ್ಲಾಗಳು ತಲೆಯೆತ್ತುತ್ತಲೇ ಇವೆ.
ಆದರೆ ವಾಸಿಸುವ ಜನಕ್ಕೆ ಸುಖ ಮರೀಚಿಕೆಯಾಗಿದೆ. ವಾಸ್ತು ಸಂಬಂಧಿತ ಗುಣಧರ್ಮಗಳ ಅಳತೆಗೋಲಿನೊಂದಿಗೆ ಮನೆ ಕಟ್ಟಿದ್ದರೂ, ಜಾಗಕ್ಕೆ ಒಂದು ಸುಸಂಬದ್ಧ ವಾಸ್ತವ ಪಾಸಿಟಿವ್ ವೈಬ್ರೇಷನ್ ಇರದೇ ಹೋದರೆ ಎಲ್ಲವೂ ಇದ್ದಾಗಲೂ ಸಮಾಧಾನದ ಕೊರತೆ ಇದ್ದೇ ಇರುತ್ತದೆ.
– ಅನಂತಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.