ಮೋಸ ಹೋಗುವುದೇ ಜಾಯಮಾನವಾದಾಗ ಕಾನೂನು ಕೈಹಿಡಿದೀತೇ?


Team Udayavani, Dec 4, 2017, 2:31 PM IST

04-43.jpg

ಈ ದೇಶದಲ್ಲಿ ಹಣಕಾಸು ವಂಚನೆಗಳು ಹೊಸದಲ್ಲ. ತಥಾಕಥಿತ ಬ್ಲೇಡ್‌ ಕಂಪನಿಗಳು ಕಳೆದ ಅನೇಕಾನೇಕ ವರ್ಷಗಳಿಂದ ಹುಟ್ಟಿವೆ, ಹುಟ್ಟುತ್ತಲಿವೆ, ಬೆಳೆಯುತ್ತವೆ, ವಂಚಿಸುತ್ತವೆ, ರಾತ್ರೋರಾತ್ರಿ ಮಾಯವಾಗುತ್ತವೆ. ಪಿಗ್ಗಿ ಬೀಳುವ ಹಣ ತೊಡಗಿಸಿದವರು ಮತ್ತೆ ಮತ್ತೆ ಲಬೋ ಲಬೋ ಎನ್ನುವುದನ್ನು ನೋಡುತ್ತಿದ್ದೇವೆ. ಒಬ್ಟಾತ ಇವೆಲ್ಲ ಗೊತ್ತಿದ್ದೂ ಅವ ಹೇಳುವುದು ಒಂದೇ, ಎಂತಹ ಗುಳುಂ
ಕಂಪನಿಯಾದರೂ ಮೊದಲ ಕೆಲಕಾಲ ಒಂದಕ್ಕೆ ದುಪ್ಪಟ್ಟು ಹಣ ಕೊಡುತ್ತದೆಯಲ್ಲವೇ, ಅಂಥ ಫ‌ಲಾನುಭವಿ ನಾನಾಗುತ್ತೇನೆ!

ಕೆಲವು ದಿನಗಳ ಹಿಂದೆ ಸಾಗರದ ಬಳಕೆದಾರರ ವೇದಿಕೆಗೆ ಬಂದ ಸಂತ್ರಸ್ತ ಗ್ರಾಹಕನೋರ್ವನ ದೂರು ಚಿತ್ರವಾಗಿತ್ತು. ಆತ ಒಂದು ಹಣಕಾಸು ಸಂಸ್ಥೆಯಲ್ಲಿ ತುಸು ದೊಡ್ಡ ಮೊತ್ತದ ಹಣವನ್ನು ಜಮಾ ಮಾಡಿದ್ದ. ಈ ಠೇವಣಿಯಿಂದ ಬರುವ ಬಡ್ಡಿ ಹಣ ಅವನಿಗೆ ಆ ಕಾಲಕ್ಕೆ ಆಕರ್ಷಕವಾಗಿ ಕಂಡಿತ್ತು. ಆದರೆ ಕೆಲ ದಿನಗಳ ನಂತರ ಅದರ “ದೈಹಿಕ ಪರಿಭಾಷೆ’ಯನ್ನು ನೋಡಿದವನಿಗೆ ಅನುಮಾನ ಮೂಡಲಾರಂಭಿಸಿತ್ತು. ನಿಶ್ಚಿತ ಅವಧಿಯ ಠೇವಣಿಯನ್ನು ಮರಳಿಸಲು ಒತ್ತಾಯಿಸಿದ, ಅವರು ಬಗ್ಗಲಿಲ್ಲ. ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ. ಊಹಾತ್ಮಕ ಕಾರಣಗಳ ಮೇಲೆ ಪ್ರಸ್ತುತದಲ್ಲಿ ಕಾನೂನುಬದ್ಧವಾಗಿದ್ದು ಯಾವುದೇ ವಂಚನೆಯ ದೂರು ಬರದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿಯೂ ಅವಕಾಶವಿಲ್ಲ ಎಂಬ ಸಬೂಬು ಪೊಲೀಸರದ್ದು. 
ದುರಂತವೆಂದರೆ ಆ ಜಾಣ ದಡ್ಡನ ಅನಿಸಿಕೆಯೇ ನಿಜವಾಗಿತ್ತು. ಕಂಪನಿ ರಾತ್ರೋರಾತ್ರಿ ಟೆಂಟ್‌ ಕಳಚಿತ್ತು. ಈಗ ಪೊಲೀಸರು ಕ್ರಮ ಕೈಗೊಳ್ಳಲು ಅವಕಾಶ ಪಡೆಯುತ್ತಾರೆ! ಆದರೆ ಮೋಸ ಮಾಡಿದ ವಂಚಕ ಮೂಲಸೂತ್ರಧಾರರು ಎಲ್ಲಿಯೋ ಅಡಗಿದರು. ಈ ರೀತಿ ನಷ್ಟಕ್ಕೊಳಗಾದ ಗ್ರಾಹಕ ನ್ಯಾಯಕ್ಕಾಗಿ ಅಲೆದಾಡುತ್ತಲೇ ಇದ್ದಾರೆ.

ವ್ಯಾಖ್ಯಾನಕ್ಕೆ ಮೀರಿದ ದಡ್ಡತನ
ದಡ್ಡತನ ಎಂಬುದು ತರ್ಕ ಶಕ್ತಿಯ ಕೊರತೆಯನ್ನು ಸೂಚಿಸುವಂತದು. ಅಕ್ಷರತೆ ಹೆಚ್ಚುತ್ತಿದ್ದೂ ತೀರಾ ಸರಳವಾಗಿ ನಾವು ನೀವೂ ಮೋಸ ಹೋಗುತ್ತಿರುವಾಗ ದಡ್ಡತನದ ವ್ಯಾಖ್ಯಾನವೂ ತರ್ಕ ಮೀರಿರುವುದನ್ನು ಈಗ ನೋಡಬಹುದು. ಈ ದೇಶದಲ್ಲಿ
ಹಣಕಾಸು ವಂಚನೆಗಳು ಹೊಸದಲ್ಲ. ತಥಾಕಥಿತ ಬ್ಲೇಡ್‌ ಕಂಪನಿಗಳು ಕಳೆದ ಅನೇಕಾನೇಕ ವರ್ಷಗಳಿಂದ ಹುಟ್ಟಿವೆ,
ಹುಟ್ಟುತ್ತಲಿವೆ, ಬೆಳೆಯುತ್ತವೆ, ವಂಚಿಸುತ್ತವೆ, ರಾತ್ರೋರಾತ್ರಿ ಮಾಯವಾಗುತ್ತವೆ. ಪಿಗ್ಗಿ ಬೀಳುವ ಹಣ ತೊಡಗಿಸಿದವರು ಮತ್ತೆ
ಮತ್ತೆ ಲಬೋ ಲಬೋ ಎನ್ನುವುದನ್ನು ನೋಡುತ್ತಿದ್ದೇವೆ. ಒಬ್ಟಾತ  ಇವೆಲ್ಲ ಗೊತ್ತಿದ್ದೂ ಹಣ ಕಟ್ಟಿದ ಘಟನೆ ಕಣ್ಣಮುಂದಿದೆ.
ಸಾಕಷ್ಟು ಸ್ಥಿತಿವಂತನಾದ ಅವ ಹೇಳುವುದು ಒಂದೇ, ಎಂತಹ ಗುಳುಂ ಕಂಪನಿಯಾದರೂ ಮೊದಲ ಕೆಲಕಾಲ
ಒಂದಕ್ಕೆ ದುಪ್ಪಟ್ಟು ಹಣ ಕೊಡುತ್ತದೆಯಲ್ಲವೇ, ಅಂಥ ಫ‌ಲಾನುಭವಿ ನಾನಾಗುತ್ತೇನೆ! 

ಒಂದು ವಿನಿವಿಂಕ್‌, ಗುರುಟೀಕ್‌, ಸಹಾರಾ ತರದ ಮಾದರಿ ವಂಚನೆಗಳನ್ನು ನೋಡಿದ ಮೇಲೂ ಹಣ ತೊಡಗಿಸುವವರು ಅದೇ ತರಹದ ಹೊಸ ಹೊಸ ವಂಚನೆಯ ಆಮಿಷಗಳಿಗೆ ಬಲಿಯಾಗುವುದೇಕೆ? ಒಂದಕ್ಕೆ ಎರಡರಷ್ಟು ಕೊಡುತ್ತೇವೆ ಎನ್ನುವುದು ಅಸಾಧ್ಯ
ಎಂಬುದು ಗೊತ್ತಿದ್ದರೂ ಅಲ್ಲಿಯೇ ಹಣ ತೊಡಗಿಸುವ ಭೂಪರಿಗೆ ಏನು ಹೇಳಬೇಕು? ಅತ್ಯಂತ ಸರಳವಾದ ಸಂಖ್ಯಾಬಂಧ ತುಂಬಿದರೆ ಬೈಕ್‌, ಟಿವಿ ಉಚಿತವಾಗಿ ಕೊಡುತ್ತೇನೆಂದರೆ ನಂಬುವ ಮೇಧಾವಿಗಳು ಅಧಿಕ ಬೆಲೆ ಬಾಳುವ ವಸ್ತುಗಳನ್ನು ತನ್ನ ಕಾಸು ಕಳೆದುಕೊಂಡು ಕೊಡಲು ಜಾಹೀರಾತು ಕೊಟ್ಟವನಿಗೆ ಸಾಧ್ಯವೇ ಎಂದೇಕೆ ಯೋಚಿಸುವುದಿಲ್ಲ?

ಅಗ್ರಿಗೋಲ್ಡ್‌ನಲ್ಲಿ ತೊಡಗಿಸಿದ ಹಣ ಮರಳಿ ಬರುತ್ತದೆ ಎಂದು ಈಗಲೂ ನಂಬಿಕೊಂಡವರಿದ್ದಾರೆ. ಮ್ಯೂಚುಯಲ್‌ ಫ‌ಂಡ್‌ಗಳು ನಷ್ಟದ ಬಾಬತ್ತೇ ಅಲ್ಲ ಎಂಬ ಪ್ರತಿಪಾದನೆಯನ್ನೂ ಕೇಳುತ್ತೇವೆ. ಈ ಹಿನ್ನೆಲೆಯಲ್ಲಿಯೇ ಹೊಸ ಹೊಸ ವಂಚಕ ಕಂಪನಿಗಳು
ಹುಟ್ಟಿಕೊಳ್ಳುತ್ತಲೇ ಇವೆ.

ವಂಚಕರಿಗೇ ಹೆಚ್ಚು ಕಾನೂನು ಗೊತ್ತು!
ಎಲ್ಲವನ್ನೂ ಕಾಯ್ದೆಯಡಿಗೇ ಮಣಿಸಬೇಕಿರುವ ಸರ್ಕಾರದ್ದೂ ವಿಚಿತ್ರ ಸ್ಥಿತಿ ಇತ್ತು. ಒಂದು ವಂಚನೆ ಆಗುವವರೆಗೆ ಅಥವಾ ವಂಚನೆಯಾದರೂ ಯಾರಾದರೂ ದೂರು ಕೊಡುವವರೆಗೂ ಅಂತಹ ಕಂಪನಿ ವಿರುದ್ಧ ಪ್ರಕರಣವನ್ನೇ ದಾಖಲಿಸಲಾಗದ
ಅಸಹಾಯಕ ಪ್ರಸಂಗವನ್ನು ಸರ್ಕಾರ ಎದುರಿಸುತ್ತಿತ್ತು. ಕೊನೆಪಕ್ಷ ಹಾಗಂತ ಪ್ರತಿಬಿಂಬಿಸುತ್ತಿತ್ತು. ರಾಜ್ಯದ ಆರಕ್ಷಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿದರು ಎಂಬ ಒಂದೇ ಕಾರಣಕ್ಕೆ ಒಬ್ಬನನ್ನು ತಿಂಗಳುಗಟ್ಟಲೆ ಜೈಲಿಗೆ  ಅಟ್ಟಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವಾಗ, ಅದಕ್ಕೆ ಯಾವುದೋ ಖೊಟ್ಟಿ ಪ್ರಕರಣ ದಾಖಲಿಸಬಹುದಾದರೆ ಮೇಲ್ನೋಟದಲ್ಲಿಯೇ ಬ್ಲೇಡ್‌ ಕಂಪನಿಯೆಂಬ ಅನುಮಾನ ಮೂಡಲು ಕಾರಣವಾಗುವಂತಹ ಹಗಲು ವಂಚಕರನ್ನು ತಡೆಯಲು ಇಚ್ಛಾಶಕ್ತಿ ಸಾಕಾಗುತ್ತಿತ್ತು. ಬಲಾಡ್ಯರು, ಧನಾಡ್ಯರು ಮಾಡುವ ವಂಚನೆಯನ್ನು ಸರ್ಕಾರ ಕೃಪಾಪೋಷಣೆ ಮಾಡುವುದು ಲಾಗಾಯ್ತಿನ ಮಾತು.

ಈವರೆಗೆ ಬೆತ್ತಲೆ ಸಾಮ್ರಾಜ್ಯದಲ್ಲಿ ಉಡುಗೆ ತೊಟ್ಟವನೇ ಹುಚ್ಚ ಎಂದೆನಿಸಿಕೊಳ್ಳುತ್ತಿದ್ದ. ಈ ಕಂಪನಿ ಹೆಚ್ಚು ದಿನ ಬಾಳುವುದಿಲ್ಲ.
ಇದರ ಒಟ್ಟಾರೆ ಸ್ವರೂಪದಲ್ಲಿಯೇ ಮೋಸದ ವಾಸನೆ ಹೊಡೆಯುತ್ತಿದೆ. ಈ ರೀತಿ ಚೈನ್‌ ಯೋಜನೆಗಳ ಅಂತ್ಯ ದೊಡ್ಡ ಪ್ರಮಾಣದ
ಮೋಸದಲ್ಲಿಯೇ ಅಂತ್ಯವಾಗುತ್ತದೆ ಎಂದು ತಿಳುವಳಿಕೆಯ ಮಾತನ್ನು ಹೇಳುತ್ತಿದ್ದರೆ ಈವರೆಗೆ ಅಂಥವರದ್ದು ಅರಣ್ಯ ರೋದನವಾಗುತ್ತಿತ್ತು. ಜೀವವಿಮೆಯ ಯುನಿಟ್‌ ಲಿಂಕ್ಡ್ ಪ್ಲಾನ್‌ ಒಂದನ್ನು ಅತಿರಂಜಿತವಾಗಿ ವರ್ಣಿಸಿ, ಅಗಾಧ ಪ್ರಮಾಣದ ಪ್ರತಿಫ‌ಲ ಸಿಗುತ್ತದೆ ಎಂಬ ಕರಪತ್ರ ನೋಡಿದವರು ಏಜೆಂಟರ ಮನೆ ಮುಂದೆ ಕ್ಯೂ ನಿಂತ ದೃಷ್ಟಾಂತವನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ ಖುದ್ದು ಏಜೆಂಟರು, ನನ್ನ ಕಮಿಷನ್‌ ಮುಖ್ಯವಲ್ಲ. ಈ ತರ ಪ್ರತಿಫ‌ಲ ಬರುವುದು ಅಂದಾಜೇ ವಿನಃ ವಾಸ್ತವವಲ್ಲ.
ಭ್ರಮನಿರಸನಗೊಳ್ಳುವ ಬದಲು ಪಾಲಿಸಿ ಮಾಡಿಸದಿರಿ ಎಂದಿದ್ದರೆ ಯಾರು ಕೇಳುತ್ತಿದ್ದರು? ಹಾಗೆ ಹೇಳಿದ ವಿಮಾ ಏಜೆಂಟರಿದ್ದಾರೆ.
ಕೇಳಿದವರು ಮಾತ್ರ ಯಾರೂ ಇಲ್ಲ!

ಈಗ ಕೇಂದ್ರ ಸರ್ಕಾರ ಇಂತಹ ಮೋಸಗಾರರ ನಿರ್ಬಂಧಕ್ಕೆ ಅನ್‌ರೆಗ್ಯುಲೇಟೆಡ್‌ ಡಿಪಾಸಿಟ್‌ ಯೋಜನೆಗಳನ್ನು ನಿರ್ಬಂಧಿಸಲು
ಹಾಗೂ ಠೇವಣಿದಾರರ ಸಂರಕ್ಷಣೆಯ ಉದ್ದೇಶದ ಕಾನೂನೊಂದನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಅದುವೇ, ಅನಿಯಂತ್ರಿತ
ಠೇವಣಿ ಯೋಜನೆಗಳ ನಿಷೇಧಿಸುವಿಕೆ ಮತ್ತು ಠೇವಣಿದಾರರ ತರಕ್ಷಣಾ ಮಸೂದೆ, 2016. ಇದರ ಅಂಶಗಳು ಠೇವಣಿದಾರರ ಹಿತ
ಕಾಯುತ್ತದೆ. ಏನೂ ಇಲ್ಲದ ಸ್ಥಿತಿಗಿಂತ ಇದು ಸಂಖ್ಯಾಬಲ ಹೊಂದಿಲ್ಲದ ಪ್ರಜಾnವಂತರ ನೆರವಿಗೆ ಸಿಕ್ಕ ಅಸ್ತ್ರ ಎನ್ನಬಹುದು.

ಹೊಸ ಕಾನೂನು ಅಗತ್ಯ
ಆ ಮಟ್ಟಿಗೆ ಹೊಸ ಉದ್ದೇಶಿತ ಕಾಯ್ದೆ ಸ್ವಾಗತಾರ್ಹ. ಇದರಲ್ಲಿ ಒಂದು ಡಿಪಾಸಿಟ್‌ ಯೋಜನೆಯ ಬಗ್ಗೆ ಅತಿರಂಜಿತವಾಗಿ ಜಾಹೀರಾತು ಮಾಡುವುದು ಕೂಡ ಶಿûಾರ್ಹ ಅಪರಾಧ. ಬಡ್ಡಿದರದ ನಿರ್ಧಾರದಲ್ಲಿ ಅನುಮಾನಗಳು ಕಂಡುಬಂದರೆ ಅದಕ್ಕೆ ಸಂಪೂರ್ಣ ನಿಷೇಧ ಹೇರುವ ಅಸ್ತ್ರ ಈ ಕಾನೂನಿನ ಭಾಗವಾಗಲಿದೆ. ಇದರಡಿ ಸೂಚನೆ ಉಲ್ಲಂಘನೆ ಪ್ರಕರಣದಲ್ಲಿ ದೂರು ಸಲ್ಲಿಸಬಹುದು. ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳನ್ನು ಒಳಗೊಡ ಸಮಿತಿಯೊಂದು ರಚನೆಯಾಗುವ ಉನ್ನತ ಮಟ್ಟದ ಸಮಿತಿಗೆ ಯಾವುದೇ ಹಂತದಲ್ಲಿ ದೂರು ಸಲ್ಲಿಸಲು ಗ್ರಾಹಕರಿಗೆ ಮತ್ತು ವಿಶೇಷವಾಗಿ ಗ್ರಾಹಕರಲ್ಲದ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಇದು ಕೂಡ ಕಾನೂನು ನಿಯಮಕ್ಕೆ ಶಕ್ತಿ ನೀಡುತ್ತದೆ. 

ಪ್ರಾಥಮಿಕ ಶಾಲೆಯಲ್ಲಿ ನಾವು ಮಗ್ಗಿ ಹೇಳುತ್ತಿದ್ದೆವು. ಪ್ರಭವ, ವಿಭವ ಸಂವತ್ಸರಗಳ ಬಾಯಿಪಾಠ ಒಪ್ಪಿಸುತ್ತಿದ್ದೆವು. ಅತಿಯಾಸೆ ಗತಿಗೇಡು, ದುರಾಸೆ ನಾಶಕ್ಕೆ ಕಾರಣ ಎಂಬಂತಹ ಗಾದೆ ಮಾತುಗಳನ್ನು ಮನನ ಮಾಡಿಕೊಳ್ಳುತ್ತಿದ್ದೆವು. ಅದನ್ನು ಮರೆತಿದ್ದರಿಂದಲೇ ವಂಚಕ ವ್ಯವಸ್ಥೆ ಅಧಿಕ ಬಡ್ಡಿಯ ಆಸೆ ಹುಟ್ಟಿಸುತ್ತದೆ. ಅಂತಹ ಸೀತೆಯೇ ಬಂಗಾರದ ಜಿಂಕೆಗೆ ಮರುಳಾದಾಗ ನಾವು ಹುಲುಮಾನವರಲ್ಲವೇ ಎಂಬ ಹುಂಬವಾದವೂ ಕೇಳಿಸೀತು. ಅಂಥವರಿಗೆ ಹೇಳಿ, ರಾಮಾಯಣಕ್ಕೊಂದು ಅರ್ಥವಿದೆ.
ಇಲ್ಲಿನ ಪ್ರಲೋಭನೆ ತೀರಾ ವೈಯುಕ್ತಿಕ ಲಾಭದ್ದು. ಕಾಯ್ದೆ ಬೇಕು. ಅದಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ವಿವೇಚನೆ!

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.