ಗೊತ್ತಾ? ಮನೆಯ ವಾಯುವ್ಯ ಮೂಲೆಯಿಂದ ಲವಲವಿಕೆಯಿದೆ !
Team Udayavani, Aug 7, 2017, 11:21 AM IST
ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟ ವಾಯು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ, ಚೈತನ್ಯ, ಉತ್ಸಾಹಗಳೆಲ್ಲ ವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ, ಬಹುತೇಕವಾಗಿ ಸೋಲುಗಳೇ ಇರದೆ, ವಿಜಯದ ಮುಗುಳ್ನಗೆಗೆ ಹೆಚ್ಚಿನ ಅವಕಾಶ ಸಾಧ್ಯ…
ವಾಯುವ್ಯ ಮೂಲೆಯು ಉತ್ತರ ಹಾಗೂ ಪಶ್ಚಿಮ ದಿಕ್ಕನ್ನು ಸಮಾವೇಶಗೊಳಿಸುವ ಭಾಗವಾಗಿದೆ. ಅಗ್ನಿ ಮೂಲೆಗಿದು ಸಮಾನಾಂತರ ಭಾಗವಾಗಿದ್ದು ಅಗ್ನಿ ಧರ್ಮಕ್ಕೆ ವಿರುದ್ಧವಾದ ವಾಯು ತತ್ವಕ್ಕೆ ಒಂದರ್ಥದಲ್ಲಿ ಇಂಬು ಕೊಡುವಂಥದು. ಅಗ್ನಿ ಮತ್ತು ಗಾಳಿ ಎರಡೂ ಸೇರಿದರೆ ಆಗುವ ಅನಾಹುತವೇನು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಪ್ರತ್ಯೇಕವಾದ ವಿಶ್ಲೇಷಣೆ ಏನೂ ಬೇಕಾಗಿಲ್ಲ. ಆದರೂ ಅಗ್ನಿ ಹಾಗೂ ವಾಯು ತತ್ವ ಒಂದಕ್ಕೊಂಡು ಸ್ನೇಹ ಹಾಗೂ ಆತ್ಮೀಯತೆಗೆ ಪೂರಕವಾದುದೂ ಆಗಿವೆ. ಅಗ್ನಿಗೆ ವಾಯುವೇ ಪ್ರಾಣ.
ಹೀಗಾಗಿ ಅಗ್ನಿ ಮೂಲೆಯ ವಿಚಾರವಾಗಿ ಟಿಪ್ಪಣಿಗಳನ್ನು ಒದಗಿಸಿದ್ದನ್ನು ನೆನಪಿಸಿಕೊಳ್ಳುತ್ತಲೂ, ಒಂದೊಮ್ಮೆ ಅಗ್ನಿ ಮೂಲೆಯಲ್ಲಿ ಅಡುಗೆ ಮನೆ ಇರಿಸಲು, ಕೂಡ್ರಿಸಲು ಸಾಧ್ಯವಾಗದೇ ಇದ್ದಲ್ಲಿ ಮನೆಯ ವಾಯುವ್ಯ ಮೂಲೆಯಲ್ಲೂ ಅಡುಗೆ ಮನೆಯಲ್ಲೂ ಒಳಗೊಳ್ಳಬಹುದಾಗಿದೆ. ಹಾಗೇ ಒಳಗೊಳಿಸುವ ಸಂದರ್ಭದಲ್ಲಿ ಹೀಗೆ ನಿರ್ಮಿಸಿದ ಅಡುಗೆ ಮನೆಯ ಅಗ್ನಿ ಮೂಲೆಗೆ ಒಲೆಯು ಬರುವಂತೆ ನೋಡಿಕೊಂಡು ಅದರ ಪೂರ್ವಾಭಿಮುಖವಾಗಿ ಮನೆಯೊಡತಿ ಅಡುಗೆ ಮಾಡುವಂತಿರಬೇಕು.
ವಾಯುವ್ಯ ಮೂಲೆ ಈಶಾನ್ಯದಿಕ್ಕಿಗಿಂತ ತುಸು ಎತ್ತರವೇ ಇರಬೇಕು. ಈ ಎತ್ತರದ ಬಾಗದ ಉದ್ದ ತುಸು ನೈಋತ್ಯ ಮೂಲೆಗೆ ಸಮೀಪವಾಗುವ ಹಾಗೆ ರಚನೆ ಇದ್ದರೆ ಒಳ್ಳೆಯದು. ಆದರೆ ನೈಋತ್ಯಕ್ಕೆ ಹತ್ತಿರವಾಗಬೇಕು ಎಂಬ ಕಾರಣಕ್ಕೆ ಕ್ಲಿಷ್ಟತೆಗಳನ್ನು ರೂಪಿಸಿಕೊಳ್ಳುವುದು ಬೇಕಾಗಿಲ್ಲ. ಕ್ಲಿಷ್ಟತೆಗಳನ್ನೂ ಸಹಿಸಿ ಈ ರಚನೆ ಅಳವಡಿಸುವಂತಿರುವುದು ಬೇಕಾಗಿಲ್ಲ. ಹಾಗೆಯೇ ವಾಯು ಮೂಲೆ ನೆಂಟರಿಷ್ಟರು, ಬಂಧು-ಮಿತ್ರರಿಗಾಗಿನ ಕೊಠಡಿಗಳನ್ನು ಒಳಗೊಳ್ಳುವುದೇ ಸೂಕ್ತ. ಮನೆಯಲ್ಲಿನ ಚಿಕ್ಕ ಮಕ್ಕಳಿಗೂ ಕೂಡ ಇಲ್ಲಿ ಕೊಠಡಿಗಳಿರುವುದು ಸೂಕ್ತ. ಹೀಗಾಗದಿದ್ದಲ್ಲಿ ವಿಚಿತ್ರವಾದ ರೀತಿಯಲ್ಲಿ ಭಾರವಾಗುವ ಖರ್ಚುಗಳು ಬಂದೊದಗಿ ಬಿಡುತ್ತವೆ.
ಈ ದಿಕ್ಕಿನಲ್ಲಿ ಬಾವಿ ತೆಗೆಯುವುದು, ತೊಟ್ಟಿಗಳನ್ನು ನಿರ್ಮಿಸುವುದು ಸೂಕ್ತವಾಗದು. ಮನೆಗೆ ಬೇಕಾದ ನೀರಿನ ವಿಚಾರದಲ್ಲಿ ಈ ದಿಕ್ಕಿಗೆ ಇದರದ್ದೇ ಆದ ಅನಿಷ್ಟ ಸ್ಪಂದನಗಳಿರುತ್ತವೆ. ಮೋಟರ್ ಪಂಪ್ ಕೂಡ ಇಲ್ಲಿ ಜೋಡಣೆಗೊಳ್ಳಕೂಡದು. ಮಕ್ಕಳಿಗೆ ಅನಾರೋಗ್ಯ ಒದಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ನೀರಿಗೆ ಸಂಬಂಧಿಸಿದ ವಿಚಾರವನ್ನು ಇಲ್ಲಿ ಹೆಚ್ಚಾಗಿ ಲಕ್ಷಿಸಿ, ಸಾಧ್ಯವಾದಷ್ಟೂ ಈ ಎಲ್ಲ ವಿಚಾರವನ್ನು ವರ್ಜಿಸುವುದು ಅವಶ್ಯಕವಾಗಿದೆ.
ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟಗಾಳಿಗಳು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ, ಚೈತನ್ಯ, ಉತ್ಸಾಹಗಳೆಲ್ಲ ಸಂವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ, ಬಹುತೇಕವಾಗಿ ಸೋಲುಗಳೇ ಇರದೆ, ವಿಜಯದ ಮುಗುಳ್ನಗೆಗೆ ಹೆಚ್ಚಿನ ಅವಕಾಶ ಸಾಧ್ಯ ಎಂಬುದೂ ಇಲ್ಲಿ ಹೆಚ್ಚೆ ಗಮನಾರ್ಹವಾದ ವಿಚಾರ. ಒಂದೊಮ್ಮೆ ಈ ಮೂಲೆ ಸರಿಯಾದ ಅನುಪಾತದೊಂದಿಗೆ ಇರದೇ ಹೋದರೆ ಕಾರಣವಲ್ಲದ ಕಾರಣಕ್ಕೆ ಅಶಾಂತಿ ತಲೆದೋರಬಹುದು. ಭಿನ್ನಾಭಿಪ್ರಾಯಗಳು, ವೃಥಾ ವ್ಯಾಜ್ಯಗಳು ಸಂಭವಿಸುವ ವಿಚಾರವನ್ನು ಅಲ್ಲಗಳೆಯಲಾರದು. ಮನೆ ಮಂದಿಗಾಗಲಿ, ಒಡೆಯನಿಗಾಗಲೀ ಕೆಟ್ಟದ್ದ ಆದ ಘಟನೆಗಳಿಂದ ವರ್ಚಸ್ಸಿಗೆ ಕುದುಗಳು ಉಂಟಾಗುವ ವಿಚಾರಗಳು ಬೇರು ಬಿಡಬಹುದು. ಮುಖ್ಯವಾಗಿ ಮಕ್ಕಳ ವಿಚಾರದಲ್ಲೇ ಎಲ್ಲವೂ ದುಷ್ಪರಿಣಾಮಗಳನ್ನು ಚಿಮ್ಮಿಸಲು ದಾರಿ ಮಾಡಿ ಕೊಡಬಲ್ಲವು. ಒಟ್ಟಿನಲ್ಲಿ ಮನೆಯ ವಾಯುವ್ಯ ಮೂಲೆ ಅತುಳ ಬಲಶಾಲಿಯಾದ ವಾಯು ದೇವನ ನಿವಾಸವಾಗಿದೆ. ಬಲವರ್ಧನೆಗೆ ಇವನೇ ಆಧಾರವಾಗಿದ್ದಾನೆ.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.