ಅಂಗಳವಿರುವ ಮನೆಯನ್ನು ಹೇಗೆ ಕಟ್ಟಬೇಕು ಗೊತ್ತಾ?
Team Udayavani, Sep 18, 2017, 1:50 PM IST
ಕರಾವಳಿ ಕಡೆಯಲ್ಲಿ ಅಂಗಳವಿರುವ ಮನೆಯನ್ನು ಕಟ್ಟುವ ವಿಧಾನವಿದೆ. ಬಹುತೇಕ ಕೇರಳದಲ್ಲಿ ಇದು ಹೆಚ್ಚು ಪ್ರಚಲಿತ. ಪ್ರತಿ ಊರಿನ ಬೆಳೆಗಳು ಆಹಾರ ಕ್ರಮಗಳು ಹೇಗೆ ಬದಲಾವಣೆ ಹೊಂದಿರುತ್ತವೋ ಹಾಗೇ ಪ್ರತಿ ಭೌಗೋಳಿಕ ಪ್ರದೇಶದಲ್ಲಿ ಮನೆಯ ರಚನೆಗಳು ಭಿನ್ನತೆಯನ್ನು ಪಡೆದಿರುತ್ತದೆ. ಆದರೆ ದುರ್ದೈವ ವಶಾತ್ ಕಾಂಕ್ರೀಟ್ ಕಾಡಾಗಿ ಕಾಂಕ್ರೀಟ್ ಕಾರಣವಾಗಿ ಉರಿಯುವ ಅಗ್ನಿ ಕುಂಡಗಳಾಗಿ ಇದು ದೇಶದಾದ್ಯಂತ ತಲೆಯೆತ್ತಿ ಮನೆಗಳು ನಿಂತಿದೆ. ಒಂದೇ ವಿಧ, ಒಂದೇ ಮಾದರಿ ಅಳತೆ ಆಕಾರಗಳು ಯಾವುದೋ ಒಂದು ವಿಧದ. ಅಂಗಳ ಇರುವ ಮನೆಯ ವಿಚಾರವಾಗಿ ಯೋಚಿಸಿದಾಗ ಜಾತಕ ಕುಂಡಲಿಯಲ್ಲಿ ಜಲತತ್ವವನ್ನು ಪ್ರಧಾನವಾಗಿ ಪರಿಗಣಿಸಿ ಅಂಗಳದ ಆಯ-ಪಾಯಗಳ ವಿಚಾರದಲ್ಲಿ ನಿರ್ಧಾರಕ್ಕೆ ಬರಬೇಕು. ಮಳೆಗಾಲದ ನೀರು ಇಂಥ ಮನೆಗಳಲ್ಲಿ ವಾಸವಿರುವ ಕುಂಟುಂಬಕ್ಕೆ ಹೆಚ್ಚಿನ ಸಿದ್ಧಿಯನ್ನು ವರುಣದೈವ ಒದಗಿಸುತ್ತದೆ. ಅಂಗಳ ಇರುವ ಮನೆಯನ್ನು ಚತುಶ್ಯಾಲ ಎಂದು ಗುರುತಿಸುತ್ತಾರೆ. ಅಂಗಳದ ಸುತ್ತ ಸುಮಾರಾಗಿ ನಾಲ್ಕು ಕೊಠಡಿಗಳಿರುತ್ತದೆ.
ಮನೆಯ ಯಜಮಾನನ ವಿಚಾರದಲ್ಲಿ, ಸಮೃದ್ಧಿಯ ವಿಷಯದಲ್ಲಿ ದೃಷ್ಟಿಯಲ್ಲಿಟ್ಟುಕೊಂಡೇ ಇಂಥ ಮನೆಗಳ ವಿನ್ಯಾಸ ನಡೆಯಬೇಕು. ಪ್ರಸ್ತುತ ಯಜಮಾನನ ಕಾಲಾನಂತರವೂ ಮುಂದಿನ ಮನೆ ಯಜಮಾನನ ವಿಚಾರವಾಗಿ ಮತ್ತೆ ವಾಸ್ತು ಬದಲಾವಣೆಯ ಏಳಲಾರದು. ಪಿತೃ, ಪಿತಾಮಹ, ಪ್ರಪಿತಾಮಹ ವಿಷಯಗಳಲ್ಲಿ ಎಚ್ಚರವಿಟ್ಟುಕೊಂಡೇ ಯಾರ ಕಾಲಾವಧಿಯಲ್ಲಿ ಕಟ್ಟಿದ್ದಾರೋ ಅದು ಮನೆಯ ಸಕಾರಾತ್ಮಕ ಸ್ಪಂದನಕ್ಕೆ ಕೇಂದ್ರವಾಗಿರುತ್ತದೆ. ಸರಿಯಾದ ದಿಕ್ಕಿಗೆ ಯಜಮಾನನ ಸಂಬಂಧವಾದ ಗ್ರಹ ಸಂಪತ್ತಿನ ವಿಚಾರ ಗಮನಿಸಿ ರಚನೆಯ ವಿಚಾರವಾಗಿ ಮುಂದುವರೆದರಾಯ್ತು. ಯಜಮಾನ ಅಥವಾ ಯಜಮಾನಿ ಮುಖ್ಯಭೂಮಿಕೆ ನಿರ್ವಹಿಸುತ್ತಾರೆ. ಯಜಮಾನ ಅಥವಾ ಯಜಮಾನಿಯ ಹಸ್ತದ ಅಳತೆಯನ್ನು ಗಮನಿಸುವುದು ಇಲ್ಲಿ ಮುಖ್ಯ. ಹಸ್ತದ ಅಳತೆಯ ಮೇಲಿಂದ ಆಯಾದಿ ಷಡ್ವರ್ಗ ಸೂತ್ರಗಳು ಮುಖ್ಯವಾಗುತ್ತದೆ.
ಮನೆಯಲ್ಲಿ ವಾಸಿಸುವವರು, ಯಜಮಾನ ಯಜಮಾನತಿಯ ಮೂಲ ನೆಲೆಯಿಂದ ಚತುಶ್ಯಾಲಾ ರೂಪದ ಮನೆಯಿಂದ ತಮ್ಮ ಸೌಖ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಮುಂದೊಂದು ಸಲ ಅಂದರೆ, ಜೀರ್ಣೋದ್ಧಾರದ ಸಮಯದಲ್ಲಿ ಯಾವನು ಯಜಮಾನನಿರುತ್ತಾನೋ ಅವನ, ಆ ಸಂದರ್ಭದ ಯಜಮಾನತಿಯ ವಿಚಾರ ಪ್ರಮುಖವಾಗುತ್ತದೆ. ಹೊಸದಾಗಿ ಮನೆಯನ್ನು ಕಟ್ಟಬೇಕೆಂದಾಗಲೂ ಇದು ಪ್ರಧಾನವಾಗುತ್ತದೆ. ಇಷ್ಟು ದೀರ್ಘ ಎನ್ನುವುದಾಗಿ ಕರೆಯಲ್ಪಡುವ ಸಂಗತಿ ಇದು.
ಆಯ, ವ್ಯಯ,ಯೋನಿ, ನಕ್ಷತ್ರ,ವಾರ, ತಿಥಿಗಳ ಲೆಕ್ಕಾಚಾರಗಳಿಂದ ಮನೆಯ ಮುಖ್ಯಸ್ಥನ ಹಸ್ತದಳತೆಗಳು ಇಷ್ಟದೀರ್ಘವನ್ನು ನಿರ್ಣಯಿಸುತ್ತದೆ. ಪರಮ ಸಾಯಿಕ ಮಂಡಲದ ಒಂಭತ್ತು ಚಚ್ಚೌಕ ಮಾದರಿ ರೂಪರೇಷೆಗಳನ್ನು ಮುಖ್ಯವಾಗಿರಿಸಿಕೊಂಡು ಕೊಠಡಿಗಳ ನಿರ್ಮಾಣ ಕೈಗೊಳ್ಳಬಹುದು. ಅಡುಗೆ ಮನೆಯನ್ನು ಒಟ್ಟಂದದಲ್ಲಿ ಸದಸ್ಯರೆಲ್ಲ ಸೇರುವ ಕೋಣೆಗಳು ಪರಮಸಾಯಿಕ ಮಂಡಲದಲ್ಲಿ ಕಲ್ಪನೆ ಹರಳುಗಟ್ಟುತ್ತದೆ. ಅಂಗಳದ ಒಂದು ನಿವೇಶನ ಮಂಡಲದ ಚೌಕ ಕಟ್ಟಡದ ಮುಂದರಿಕೆ ಇರದೆ ಖಾಲಿಯಾಗಿರಬೇಕು. ಈ ವಲಯವನ್ನು ಪೈಶಾಚ ಎಂದು ಕರೆಯುತ್ತಾರೆ. ಇದು ಶೂನ್ಯ ಅಥವಾ ನಕಾರಾತ್ಮಕ ಸ್ಪಂದನಗಳ ಗಂಟು ತುಂಬಿರುವ ಸ್ಥಳ. ಇದು ಖಾಲಿ ಇದ್ದಾಗ ಖಾಲಿಯಾದ ಜಾಗದಲ್ಲೇ ನಕಾರಾತ್ಮಕ ಧಾತುಗಳು ಇಂಗಿ ಭೂಗರ್ಭದ ಒಳಗೆ ಸೇರಿಕೊಳ್ಳುತ್ತದೆ. ಮನೆಯ ಯಜಮಾನನಿಗೂ ಇತರ ಸದಸ್ಯರಿಗೂ ಕೆಟ್ಟ ಪರಿಣಾಮಗಳು ಒದಗಿ ಬರದೆ ತಂತಾನೆ ನಾಶವಾಗಿ ಹೋಗುತ್ತದೆ.
ಒಟ್ಟಿನಲ್ಲಿ ಅಂಗಳದ ಮನೆ ಎಂಬುದು ಆಯಾ ಪ್ರದೇಶದ ಭೌಗೋಳೀಕ ಪರಿಸ್ಥಿತಿಯನ್ನು ಆಧರಿಸಿ ಕಟ್ಟಬೇಕು. ಅಂಗಳದ ಮನೆಗೆ ಅದರದೇ ಆದ ಸೊಗಸು. ಭದ್ರತೆಗಳಿರುತ್ತದೆ. ಮಳೆಗಾಲದ ಮಳೆಯ ಸೌಂದರ್ಯವನ್ನು ನೋಡುತ್ತ ಒತ್ತಡ ಖನ್ನತೆಗಳು ನಿವಾರಿಸಿಕೊಳ್ಳಲಿಕ್ಕೆ ಸೂಕ್ತವೂ ಆಗಿದೆ.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.