ಪೂರ್ವದ ಕಡೆ ಇಕ್ಕಟ್ಟಾದ ಫ್ಲ್ಯಾಟ್‌ ಇದ್ದರೆ ಏನಾಗುತ್ತೆ ಗೊತ್ತಾ?


Team Udayavani, Dec 25, 2017, 2:28 PM IST

vastu.jpg

ಮನೆ ಕಟ್ಟುವ ಪ್ಲಾನ್‌ ಇರಲಿ, ಬ್ಯೂಸಿನೆಸ್‌ಗಾಗಿನ ಸ್ಥಳಗಳೇ ಇರಲಿ ಪ್ಲಾಟ್‌ನ ಮಟ್ಟಿಗೆ ಹೆಚ್ಚು ಮುತುವರ್ಜಿಯಿಂದ ಆಯ್ಕೆ ಆದಲ್ಲಿ ಸೂಕ್ತವಾದದ್ದು ಇತ್ತೀಚೆಗೆ ಬಹು ಬೆಲೆ ಬಾಳುವ ಸ್ಥಳದಲ್ಲಿ ತಮ್ಮ ಚಟುವಟಿಕೆಗಳ ಬಗೆಗೆ ಸ್ಥಳ ಪಡೆದ ಉದ್ಯಮಿಗಳೊಬ್ಬರು ಕೋಟಿಗಟ್ಟಲೆ ರೂಪಾಯಿಗಳ ವಹಿವಾಟು ನಡೆಸುತ್ತಾ, ನಡೆಸುತ್ತ ಹೋದವರೇ ನಿಷ್ಕಾರಣವಾಗಿ ಸೋಲನ್ನು ಕಾಣುತ್ತ ಹೋದರು. ತುಂಬಿದ್ದ ಸಂಪತ್ತು ಕರಗತೊಡಗಿತ್ತು.

ಶ್ರೀಮತಿಗೆ ವಿಚಿತ್ರವಾದ ಕಾಯಿಲೆಯಿಂದ ಬಳಲುವ ವರ್ತಮಾನ ಎದುರಾಗಿ, ಅಕ್ಷರಶಃ ಹಾಸಿಗೆವಾಸಿಯಾದಳು. ಯಕೃತ್ತಿನ ಚಟುವಟಿಕೆಯ ಸಮತೋಲನಕ್ಕಾಗಿ ಆಪರೇಷನ್‌ ಮಾಡಿಸಬೇಕಾಗಿ ಬಂತು. ಕೆಲಸಗಾರರಿಗೆ ಸಂಬಳ ಕೊಡುವುದಕ್ಕೂ ಪರದಾಟ ಪ್ರಾರಂಭವಾಗುತ್ತಲೇ ಹೋಯ್ತು. ವಾಣಿಜ್ಯ ಸಂಕೀರ್ಣದಲ್ಲಿನ ಬ್ಯೂಸಿನೆಸ್‌ಗಾಗಿನ ಸ್ಥಳದಲ್ಲಿ ತೊಂದರೆ ಇದೆಯೆ ಎಂದು ಉದ್ಯಮಿಗಳಿಗೆ ಯೋಚನೆ ಹತ್ತಿತ್ತು. ಜಾತಕ ಕುಂಡಲಿಯಲ್ಲಿ ತೊಂದರೆಗಳು ತಲೆ ದೋರಿರಬಹುದೆ ಎಂಬ ವಿಚಾರವೂ ಸುಳಿದು ಹೋಯ್ತು. 

ಹೌದು! ಈ ಎರಡೂ ಅಂಶಗಳಲ್ಲೂ ತೊಂದರೆ ತುಂಬಿಕೊಂಡಿದ್ದವು. ಅದೃಷ್ಟದ ರೀತಿ ಹೇಗಿರುತ್ತದೆ ಎಂದರೆ ಎಲ್ಲವೂ ಒಂದು ಇನ್ನೊಂದನ್ನು ಕೂಡಿಕೊಳ್ಳುವ ರೀತಿಯಲ್ಲಿ ಅದೃಷ್ಟ ನಮ್ಮನ್ನು ಸುಖಕ್ಕೋ, ದುಃಖಕ್ಕೋ ದೂಡುತ್ತಿರುತ್ತದೆ. ಈ ಉದ್ಯಮಿಗಳ ಪತ್ನಿಯ ಜಾತಕ ಕುಂಡಲಿಯಲ್ಲಿ ಛಿದ್ರ ಸ್ಥಾನಕ್ಕೆ ತೊಂದರೆ ಒದಗಿತ್ತು. ಬುಧನ ಜೊತೆಗಿನ ರಾಹು ( ಮಿಥುನ ಲಗ್ನದಲ್ಲಿ ಜನಿಸಿದ್ದು ಉದ್ಯಮಿಯ ಪತ್ನಿ) ಪತ್ನಿಯ ಆರೋಗ್ಯದ ವಿಚಾರದಲ್ಲಿ ಧಕ್ಕೆ ತಂದಿದ್ದ.

ಇನ್ನು ಈ ಉದ್ಯಮಿಗಳು ತಮ್ಮ ವಹಿವಾಟಿಗಾಗಿ ಪಡೆದಿದ್ದ ವಾಣಿಜ್ಯ ಸಂಕೀರ್ಣದಲ್ಲಿನ ಭಾಗದಲ್ಲಿ ವಾಸ್ತು ದೋಷ ಹರಳುಗಟ್ಟಿತ್ತು. ಮುಖ್ಯವಾಗಿ ಇಡೀ ಸಂಕೀರ್ಣದಲ್ಲೇ ತೊಂದರೆ ಉದ್ಬವಿಸಿದ್ದಲ್ಲ. ಅಸಲಿಗೆ ಈ ಉದ್ಯಮಿಗಳು ತಾವು ಬ್ಯೂಸಿನೆಸ್‌ ನಡೆಸುತ್ತಿದ್ದ ಭಾಗದಲ್ಲಿ ವಾಸ್ತು ದೋಷ ಕಾಣಿಸಿತ್ತು. ಈ ಉದ್ಯಮಿಗಳು ಕ್ರಿಯಾಶಕ್ತಿಗೆ ಧಕ್ಕೆಯಾದದ್ದು ಇವರಿಗೆ ಒದಗಿದ್ದ ಉದ್ಯಮದ ಸ್ಥಳದ ಪೂರ್ವಭಾಗ ಮುಕ್ಕಾಗಿತ್ತು.

ಅದು ಪಿರಪೂರ್ಣತೆಯನ್ನು ಪಡೆಯಬೇಕಾದ ಭಾಗದಲ್ಲಿ ಮತ್ತೂಬ್ಬರಿಂದ ಅವರ ವಹಿವಾಟಿಗೆ ಉಪಯೋಗಿಸಲ್ಪಟ್ಟಿತ್ತು. ಹೀಗಾಗಿ ಇಲ್ಲೀಗ ವಿಶ್ಲೇಷಿಸಿದ ಕೆಲಸದ ಸ್ಥಳದ ವ್ಯಾಪ್ತಿಯು ಪೂರ್ವದಲ್ಲಿ ಮುಕ್ಕಾಗಿ ಕಿರಿದಾಗಲ್ಪಟ್ಟಿದ್ದರಿಂದ ಉದ್ಯಮಿಗಳಿಗೆ ವಹಿವಾಟಿನಲ್ಲಿ ತೊಂದರೆಗಳು ಹರಳುಗಟ್ಟಲು ಅವಕಾಶವಾಗಿತ್ತು. ಜೊತೆಗೆ ಪೂರ್ವಭಾಗಿ ಕ್ಷೀಣಿಸಿದ ಸ್ಥಳದಲ್ಲಿ ವಹಿವಾಟುಗಳು ಚೇತರಿಸಿಕೊಳ್ಳುವುದು ದುಸ್ತರ.

ಪೂರ್ವ ಭಾಗವು ಯಾವಾಗಲೂ ಕಾಂತೀಯ ಶಕ್ತಿಯ ದಕ್ಷಿಣೋತ್ತರಗಳ ನಡು ರೇಖೆಗೆ ಹೃದಯದ ಭಾಗವಾಗುವುದರಿಂದ ಅರ್ಥಪೂರ್ಣವಾಗಬೇಕಾದ ಚೈತನ್ಯಗಳು ಅಕ್ಷರಶಃ ಸೊರಗಲು ಪ್ರಾರಂಭಿಸುತ್ತವೆ. ಇಷ್ಟು ಸಾಕಾಗದು ಎಂಬಂತೆ ಟಾಯ್ಲೆಟ್‌ ಕೂಡ ಪೂರ್ವದಿಕ್ಕಿನ ಮೂಲೆಯಲ್ಲಿ ಸಂಯೋಜಿಸಲ್ಪಟ್ಟಿತ್ತು. ಪೂರ್ವ ಭಾಗದಲ್ಲಿ ಟಾಯ್ಲೆಟ್‌, ಮುಕ್ಕುಗೊಂಡ ಪೂರ್ವಭಾಗ ಇತ್ಯಾದಿ ಇತ್ಯಾದಿ ವಾಸ್ತು ಶಿಸ್ತಿಗೆ ಭಂಗ ತರುವ ಸರಕುಗಳು.

ಮುಕ್ಕಾಗಲ್ಪಟ್ಟ ಭಾಗ ವಿಸ್ತರಿಸಿಕೊಳ್ಳಲ್ಪಡುವುದು ಸೂಕ್ತವಾದ ಬದಲಾವಣೆಗೆ ಕಾರಣವಾಗಬೇಕಾದ ವಿಷಯವಾಗುತ್ತಿತ್ತು. ಆದರೆ ಹೀಗೆ ವಿಸ್ತರಣೆಗೆ ಒಳಪಡಿಸಲು ಸಾಧ್ಯವಾಗುವ ಸ್ಥಿತಿ, (ಮುಕ್ಕಾಗಲ್ಪಟ್ಟ ಭಾಗದಲ್ಲಿ ವಿಸ್ತರಿಸಲ್ಪಡುವ ಜಾಗ ತುಂಬಿಕೊಂಡರೆ ಚೈತನ್ಯಕ್ಕೆ ಸಿದ್ಧಿ ಆಗಬಹುದಿತ್ತೋ) ಆ ಜಾಗದಲ್ಲಿ ಬೇರು ಬಿಟ್ಟಿದ್ದ ಅನ್ಯ ವ್ಯಕ್ತಿಯು ಸ್ಥಳ ತೆರವು ಮಾಡಿದರೆ ಮಾತ್ರ ಸಾಧ್ಯವಾಗುವಂಥದ್ದಾಗುತ್ತಿತ್ತು. 

ಆದರೆ ಆ ವ್ಯಕ್ತಿ ಅಷ್ಟು ಭಾಗವನ್ನು ತೆರವು ಮಾಡುಲ ಒಪ್ಪಿಕೊಳ್ಳಲೇ ಇಲ್ಲ. ಇದರಿಂದಾಗಿ ಆಯತಾಕಾರವನ್ನು ತನ್ನ ಕೆಲಸದ ವಹಿವಾಟಿನ ಪ್ಲಾಟ್‌ಗೆ ಒದಗಿಸಲು ಉದ್ಯಮಿಗಳಿಗೆ ಸಾಧ್ಯವಾಗಲೇ ಇಲ್ಲ. ಉಪಾಯವಿರದೆಯೇ ಈ ವಹಿವಾಟಿನ ಸ್ಥಳವನ್ನು ವಿಧಿ ಇರದೆ ತುಂಬಾ ಕಡಿಮೆ ಬೆಲೆಗೆ ಉದ್ಯಮಿಗಳು ಅನ್ಯರಿಗೆ ಒಪ್ಪಿಸಲು ಸಾಧ್ಯವಾಯ್ತು. ಅಲ್ಲೂ ನಷ್ಟವೇ ಆಯಿತು. ಆದರೆ ಆ ಸ್ಥಳದಲ್ಲಿ ಬಂದ ಯಾರೂ ಬ್ಯೂಸಿನೆಸ್‌ನಲ್ಲಿ ಮೇಲೇರಲು (ಆ ಸ್ಥಳದ ಮಿತಿಯೇ ಕಾರಣವಾಗಿ) ಸಾಧ್ಯವಾಗಲಿಲ್ಲ.

ಇದು ಒಂದು ಉದಾಹರಣೆಗೆ ಅಷ್ಟೇ. ಕೆಲ ವಿಶಿಷ್ಟ ಕಾರಣಗಳಿಂದಾಗಿ ಸೂಕ್ತವಲ್ಲದಿದ್ದರೂ, ಭಾರೀ ಲಾಭ ತರುವುದೇ ಇಲ್ಲ. ಹಾಗಾದರೆ ಏನೋ ತೊಂದರೆಗಳು, ಗಾಢವಾದ ಕಾರಣಗಳಂತೂ ಇರುತ್ತವೆ. ಆದರೆ ವಾಸ್ತುವಿನ ಕಾರಣಗಳು ನಿಗೂಢವಾಗಿವೆ. ವಾಸ್ತು ಶಿಸ್ತು ಇಂಥದ್ದನ್ನೇ ನಿರೀಕ್ಷಿಸುತ್ತದೆ. ಪೂರ್ವ, ಉತ್ತರ, ಈಶಾನ್ಯವನ್ನು ಅದು ಪ್ರಬಲವಾಗಿ ಅವಲಂಬನೆ ಮಾಡಿ ಎಂಬ ಸುಳಿವನ್ನು ನೀಡುತ್ತದೆ. ಇವೆಲ್ಲ ಮೂಢ ನಂಬಿಕೆಗಳು ಎಂದು ಹೇಳಲಾಗದ ಹಾಗೆ ವಾಸ್ತು ದೋಷ ಸರಿಪಡಿಸಿಕೊಂಡಾಗ ಲಾಭಕ್ಕೆ, ಹರ್ಷಕ್ಕೆ ಕಾರಣವಾಗು ಸೋಜಿಗ ಸಂಭವಿಸುತ್ತದೆ. 

* ಅನಂತಶಾಸ್ತ್ರಿ

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.