ಮನೆಯ ಪಕ್ಕದ ಜಾಗ ಖರೀದಿಗೆ ವಾಸ್ತು ನಿಯಮ ಇದೆ ಗೊತ್ತಾ?


Team Udayavani, Aug 28, 2017, 5:32 PM IST

vastu.jpg

ನಮ್ಮ ದೈನಂದಿನ ಚಟುವಟಿಕೆಗಳು ವ್ಯವಹಾರಿಕ ಸಾಮಾಜಿಕ ಬದುಕಿನ ಸಂದರ್ಭಗಳು ಆಗಾಗ ಏನನ್ನಾದರೂ ಕೊಂಡು ಕೊಳ್ಳುವ, ಮಾರುವ ವಿಚಾರದಲ್ಲಿ ದಿಢೀರಾದ ನಿರ್ಧಾರಗಳನ್ನು ತಳೆಯಲು ಒತ್ತಡ ತರುತ್ತಿರುತ್ತದೆ. ಆದರೆ ಮನಬಂದಂತೆ ಖರೀದಿಗೆ ಮುಂದಾಗಬಾರದು. ಯಾರೇ ಆಗಲಿ ತಮ್ಮ ನಿವೇಶನದ ದಕ್ಷಿಣದ ಅಥವಾ ಪಶ್ಚಿಮದ 
ಭಾಗಗಳನ್ನು ಖರೀದಿಸಲು ಮುಂದಾಗಬಾರದು. ಕೃಷಿ ಭೂಮಿಯ ವಿಚಾರವಾಗಿಯೂ ಈ ಅಂಶವನ್ನು ಗಮನಿಸಬೇಕು. ಪೂರ್ವದ ಜಾಗವೋ, ಜಮೀನೋ ಆದರೆ ಖರೀದಿಯ ಮೂಲಕ ವಿಸ್ತರಿಸಿಕೊಳ್ಳಬಹುದು.  ಎಷ್ಟು ಬೇಕಾದರೂ ಕೊಂಡುಕೊಳ್ಳಬಹುದು. ಇಂಥ ಖರೀದಿಯಿಂದ ಸಂವರ್ಧನೆಗೆ ಅವಕಾಶ ಉತ್ತಮ.

ಹೀಗೆ ಕೊಂಡುಕೊಳ್ಳುವಾಗ ಖರೀದಿಸುವವನ ಮನೆಗ ಪೂರ್ವದಿಕ್ಕಿನ ಭಾಗದ ಮುಂಬಾಗಿಲು ಆಗಿದ್ದರೆ ಇಂಥ ಮನೆಗೆ ಉತ್ತರದಲ್ಲಿರುವ ಜಾಗವನ್ನು ಮತ್ತೆ ಪರಿಶೀಲಿಸಬೇಕು. ಏಕೆಂದರೆ ಖರೀದಿ ಮಾಡುತ್ತಿರುವ ಜಾಗ ಖರೀದಿದಾರನ ಮನೆಯ ಸಮತಟ್ಟಿಗಿಂತ ಎತ್ತರವಾಗಿದ್ದರೆ ಖರೀದಿ ನಿಷಿದ್ಧ. ಇನ್ನು ಖರೀದಿಸುವವನ ನಿವೇಶನವು ಪೂರ್ವದ ಕಡೆಯಿಂದ ಈಶಾನ್ಯದ ಬೀದಿಯನ್ನು ದರ್ಶಿಸುತ್ತಿದ್ದರೆ, ಉತ್ತರದ ಜಾಗ ಕೊಳ್ಳುವ ಸಮಯಕ್ಕೆ ಅದರದ್ದೇ ಆದ ನಿಯಮ ಒಂದಿದೆ. ಪೂರ್ತಿ ನಿವೇಶನಕ್ಕೆ ಪೂರ್ವದ ಆಗ್ನೇಯ ಕಡಿತಕ್ಕೊಳಗಾಗಿದ್ದರೆ, ಈ ಜಾಗವನ್ನು ಕೊಂಡು ಕೊಳ್ಳಲೇ ಬಾರದು. ಇದು ಗಮನಾರ್ಹ ಅಂಶ. ಇದೇ ರೀತಿ ಖರೀದಿ ಮಾಡುವವನ ನಿವೇಶನ, ಪಶ್ಚಿಮ ವಾಯುವ್ಯ ಬೀದಿಯ ಕಡೆ ನೋಟ ಪಡೆದಿದ್ದರೆ ಉತ್ತರದ ಭಾಗ ಕೊಳ್ಳುವಾಗ ಜಾಗ್ರತೆ ಬೇಕು. ಕೊಳ್ಳುವವನ ನಿವೇಶನಕ್ಕೆ ಈ ಉತ್ತರದ ಭಾಗ ಪಶ್ಚಿಮ ನೈಋತ್ಯವು ಕಡಿತಕ್ಕೊಳಗಾಗಿದ್ದರೆ ಖರೀದಿಯನ್ನು ಕೈಬಿಡುವುದು ಸರಿಯಾದ ನಿರ್ಧಾರ.  ನಿರ್ಲಕ್ಷ್ಯ ಬೇಡ. 

ಮುಖ್ಯವಾಗಿ ಕೊಂಡುಕೊಳ್ಳುವ ಖರೀದಿದಾರನ ಮನೆಯ ಈಶಾನ್ಯದ ಭಾಗ ಹಿಗ್ಗುವ ಹಾಗೆ ಜಾಗ ಖರೀದಿ ಅವಕಾಶ ನೀಡಬೇಕು. ಹಾಗಿಲ್ಲದೆ ಹೋದರೆ ಒಳ್ಳೆಯ ದಿನಗಳನ್ನು ಕಾಣುವಂತೆ ವರ್ತಮಾನ ಉತ್ಕರ್ಷವನ್ನು ಪಡೆಯದು. ಪೂರ್ವದ ಭಾಗ ಖರೀದಿಸುವಾಗಲೂ ಖರೀದಿ ಮಾಡುವವನ ಮನೆಗಿಂತಲೂ ಖರೀದಿಗೊಳಪಡುವ ಜಾಗ ಎತ್ತರದಲ್ಲಿರಬಾರದು. ಹೀಗೆ ಕೊಳ್ಳುವ ಪೂರ್ವದ ಜಾಗ ಖರೀದಿಸುವವನ ಮನೆಯ ಈಶಾನ್ಯದ ಕೊನೆಯ ತನಕವೂ ಹರಡಿಕೊಂಡಿರಬೇಕು. ಇಲ್ಲದಿದ್ದರೆ ಕಷ್ಟವೇ. ಖರೀದಿಯ ಸಂದರ್ಭದಲ್ಲಿ ಕೊಡಲ್ಪಡುವ ಜಾಗ ಸಂತೋಷದಿಂದ ನೀಡುವಂತಿದ್ದರೆ ಉತ್ತಮವಾದದ್ದು. ಯಾವ ಸಂದರ್ಭದಲ್ಲೂ ಮುನಿಸಿಗೆ ಅಸಮಾಧಾನಕ್ಕೆ ಅವಕಾಶ ಒದಗಿ ಬರಲೇಬಾರದು.

ಖರೀದಿ ಮಾಡಲ್ಪಟ್ಟ ಜಾಗ ಉಪಯೋಗಕ್ಕೆ ಕೂಡಲೇ ಸಿಗುವಂತೆ ಕಟ್ಟಡಗಳು ಎದ್ದೇಳುವುದಾದರೆ ಉತ್ತಮ. ಇಲ್ಲದಿದ್ದರೆ ಕೊಂಡವನ ಜಾಗೆಗೆ ಖರೀದಿಸಲ್ಪಟ್ಟ ಜಾಗ ಸೇರಿಕೊಂಡಾಗ ಅಖಂಡವಾಗಿ ಒಂದೇ ಆಗಿದ್ದು, ಬಹಳ ಕಾಲ ಕೊಂಡವನ ಮೂಲ ಮನೆಗಿಂತ ಖರೀದಿಸಲ್ಪಟ್ಟ ಜಾಗ ತಗ್ಗಿನಲ್ಲೇ ಇರುವಂತೆ ಆಗಬಾರದು. ಕಟ್ಟುವಾಗಲೂ ಕಟ್ಟಿದ ಜಾಗವನ್ನು ಬಾಡಿಗೆ ಕೊಡುವುದಾದರೆ ಎತ್ತರದ ಭಾಗ ಮಾಲೀಕನಿಗೆ ಉಪಯೋಗಕ್ಕೆ ಸಿಗಬೇಕು.  ತಗ್ಗಾದ ಜಾಗ ಬಾಡಿಗೆಯವನಿಗೆ ಸಿಗಬೇಕು. àಗೆ ಬಾಡಿಗೆ ತೆಗೆದುಕೊಂಡ ಜಾಗ ಯಾವುದಾದರೂ ಕಾರಣಕ್ಕೆ ಖಾಲಿ ಆದರೆ ಮನಸೋ ಇಚ್ಚೆ ಬಾಡಿಗೆದಾರರನ್ನು ಕಳಕೊಂಡ ವಸತಿಯ ಜಾಗ ಖಾಲಿ ಇರಬಾರದು. ಖಾಲಿ ಮಾಡುತ್ತಿರುವಂತೆಯೇ ಬೇರೊಬ್ಬ ಬಾಡಿಗೆದಾರ ಸಿಕ್ಕಿದರೆ ಕ್ಷೇಮ. ಯಾರೂ ಬರಲಿಲ್ಲವೆಂದರೆ ತಾವೇ ಆ ಜಾಗವನ್ನು ಉಪಯೋಗಿಸುತ್ತಿರಬೇಕು. ಇಲ್ಲವಾದಲ್ಲಿ ಮಾಲೀಕನಿಗೆ ತೊಂದರೆಗಳು ತಪ್ಪಿದ್ದಲ್ಲ. 

ಖಾಲಿಯಾಗಿ ಬಾಡಿಗೆಗೆ ಇಟ್ಟ ಜಾಗ ಬಹಳ ಕಾಲ ಖಾಲಿಯಾಗಿದ್ದರೆ ಆ ಜಾಗದ ಭಾರ ಮಾಲೀಕನ ಮನೆಯ ಮೇಲೆ ಬಿದ್ದು ಕುಸಿತದ ದಾರಿ ಕಂಡು ಬರಲು ಸಾಧ್ಯ. ಒಪಟ್ಟಿನಲ್ಲಿ ಇರುವ ಮನೆಯ ಅಕ್ಕಪಕ್ಕದಲ್ಲಿ ಜಾಗ ಕಡಿಮೆ ಹಣಕ್ಕೆ ಸಿಗುತ್ತದೆ ಎಂದ ಮಾತ್ರಕ್ಕೆ ಖರೀದಿಸಿ ಬಿಡಬಾರದು. ಖರೀದಿಗೂ ವಿಲೇವಾರಿಗೂ ಸಾಧಕಬಾಧಕಗಳಿಂದ ನಿಯಂತ್ರಿಸಲು ತನ್ನದೇ ಆದ ನಿಯಮಗಳಿವೆ. 

– ಅನಂತಶಾಸ್ತ್ರಿ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.