ಲೂವರ್‌ ಲಾಭಗಳು ಏನು ಗೊತ್ತಾ?


Team Udayavani, Mar 27, 2017, 12:49 PM IST

fashion_lover_home_4.jpg

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಗಾಜಿನ ಭರಾಟೆ ಹೆಚ್ಚಿದೆ. ತಲೆತಲಾಂತರಗಳಿಂದ ನಮ್ಮ ಆರೋಗ್ಯವನ್ನು ಕಾಪಿಡುತ್ತಿದ್ದ “ಸಂದಿ ಪಟ್ಟಿ’- ಲೂವರ್‌ಗಳ ಬಳಕೆ ಕಡಿಮೆ ಆಗಿದೆ. ಮೊದಲೆಲ್ಲ ಈ ಲೂವರ್‌ಗಳು ಎಷ್ಟು ಜನಪ್ರಿಯವಾಗಿದ್ದವೆಂದರೆ, ಕಿಟಕಿಗಳಿಗಿರಲಿ, ಬಾಗಿಲುಗಳಿಗೂ ಅಳವಡಿಸಲಾಗುತ್ತಿತ್ತು. ಹೀಗೆ ಮಾಡುವುದು ಅಂದಿನ ಕಾಲದಲ್ಲಿ ಅನಿವಾರ್ಯವೂ ಆಗಿತ್ತು. ಕಾರಣ- ವಿದ್ಯುತ್‌ ಪಂಖಗಳು ಬರುವ ಮೊದಲು, ನಮಗೆ ಬಿರುಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ಒಳಹರಿಸಲು ಇದ್ದ ಸುರಕ್ಷಿತ ವಿಧಾನ ಈ ಸಂದಿ ಪಟ್ಟಿಗಳೇ ಆಗಿದ್ದವು! ಖಾಸಗಿತನ ಬಯಸುವ ಮಲಗುವ ಕೋಣೆಗಳಿಗೂ ಕೂಡ ಕೋನ ಬದಲಿಸುವ ಅಂದರೆ ಬೇಕೆಂದಾಗ ತೆರೆದಂತಿರುವ, ಇತರೇ ಸಮಯದಲ್ಲಿ ಮುಚ್ಚಿಕೊಳ್ಳುತ್ತಿದ್ದ ಲೂವರ್‌ ಪಟ್ಟಿಗಳು ಸಾಕಷ್ಟು ಬಂಗಲೆಗಳಲ್ಲಿ ಬಳಕೆಯಲ್ಲಿದ್ದವು.

ನಿರಂತರ ಗಾಳಿಯ ಹರಿವು
ಹೇಳಿಕೇಳಿ ಗಾಜು ಪಾರದರ್ಷಕ. ಇತರೆ ಸಮಯದಲ್ಲಿ ಪರವಾಗಿಲ್ಲ ಎಂದೆನಿಸಿದರೂ, ಖಾಸಗಿತನ ಬಯಸುವಾಗ, ಗಾಜಿನ ಕಿಟಕಿ ತೆಗೆದಿಟ್ಟು ಪರದೆ ಎಳೆದರೆ, ಗಾಳಿಗೆ ಅದು ಅಲುಗಾಡಿ ಪ್ರ„ವೆಸಿಗೆ ಭಂಗ ಬರಬಹುದು ಎಂಬ ಆತಂಕ ಇರುತ್ತದೆ. ಆದರೆ ನಾವು ನಮ್ಮ ಕಿಟಕಿಯ ಒಂದು ಭಾಗದಲ್ಲಾದರೂ ಲೂವರ್‌ಗಳನ್ನು ಅಳವಡಿಸಿದರೆ, ಗಾಳಿಯನ್ನು ನಿರಂತರವಾಗಿ ಒಳಗೆ ಹರಿಸುತ್ತಲೇ ಹೊರಗಿನಿಂದ ಏನೂ ಕಾಣದಂತೆ ನೊಡಿಕೊಳ್ಳುತ್ತದೆ! ಒಮ್ಮೆ ಲೂವರ್‌ ಅಳವಡಿಸಿದರೆ, ಕರ್ಟನ್‌ಗಳು ಗಾಳಿಗೆ ಸರಿದುಹೋಗುವ ಆತಂಕ ಇರುವುದಿಲ್ಲ. ಲೂವರ್‌ಗಳನ್ನು ಕಿಟಕಿಯ ಕೆಳಭಾಗದಲ್ಲಿ ಹಾಗೂ ಮೇಲು ಭಾಗದಲ್ಲಿ ಅಳವಡಿಸಿದರೆ, ಅವುಗಳ ಉಪಯುಕ್ತತೆ ಹೆಚ್ಚಿರುತ್ತದೆ. ಒಮ್ಮೆ ಏನಾದರೂ ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಎರಡು ಮೂರು ಭಾಗಗಳಿರುವ ಕಿಟಕಿಗಳಲ್ಲಿ, ಒಂದು ಭಾಗವನ್ನಾದರೂ ಸಂದಿ ಪಟ್ಟಿಗಳಿಂದ ಮಾಡಿದರೆ, ನಿಮ್ಮ ಕೋಣೆಗೆ ನಿರರ್ಗಗಳವಾಗಿ ತಾಜಾ ಗಾಳಿ ಹರಿದು ಬರುತ್ತದೆ. ತೀರ ಚಳಿ ಎಂದೆನಿಸುವಂಥ ವಾತಾವರಣ ನಿಮ್ಮ ಪ್ರದೇಶದಲ್ಲಿ ಇದ್ದರೆ, ಆಗ ತೆರೆದು ಮುಚ್ಚಬಹುದಾದ ಲೂವರ್‌ಗಳನ್ನು ಬಳಸಬಹುದು!

ಲೂವರ್‌ ಲೆಕ್ಕಾಚಾರ
ಸುಮಾರು ಮೂರು ಇಂಚು ಅಗಲ ಹಾಗೂ ಅರ್ಧ ಇಂಚು ದಪ್ಪದ ಮರದ ರಿಪೀಸಿನಿಂದ ಮಾಡಲಾಗುವ ಸಂದಿಪಟ್ಟಿಗಳು ಕಿಟಕಿಯ ಒಂದು ಭಾಗಕ್ಕೆ ಅಂದರೆ ಸಾಮಾನ್ಯವಾಗಿ ಮೂರು ಭಾಗಗಳಲ್ಲಿ ಇರುವ ಕಿಟಕಿಗೆ ಮಧ್ಯಭಾಗದಲ್ಲಿ ಅಳವಡಿಸಲಾಗುತ್ತದೆ. ಫಿಕ್ಸೆಡ್‌ ಮಾದರಿಯದಾದರೆ ಸುಮಾರು ಒಂದು ಇಂಚಿನಷ್ಟು ಸಂದಿ ಬಿಟ್ಟು ಚೌಕಟ್ಟಿಗೆ ನೇರವಾಗಿ ಇಲ್ಲವೆ ಇಡೀ ಕಿಟಕಿ ಕೆಲವೊಮ್ಮೆ ಸಂಪೂರ್ಣವಾಗಿ ತೆರೆದಂತೆ ಇರಬೇಕು ಎಂದಿದ್ದರೆ, ಕಿಟಕಿ ಬಾಗಿಲಿಗೆ ಗಾಜಿನ ಭಾಗದಲ್ಲಿ ಹಾಕಲಾಗುತ್ತದೆ. ಈ ಮೂಲಕ ಈ ಮಾದರಿಯ ಲೂವರ್‌ ಕಿಟಕಿಗಳನ್ನು ಗಾಜಿನ ಕಿಟಕಿಗಳಂತೆಯೇ ತೆರೆಯಬಹುದು. ಪಟ್ಟಿ ತೆಳ್ಳಗಿರುವುದರಿಂದ ಅದು ಭಾಗುವ ಹಾಗೂ ಒಡೆಯುವ ಸಾಧ್ಯತೆ ಇರುವುದರಿಂದ ಸಾಮಾನ್ಯವಾಗಿ ಈ ರೀತಿಯ ಸಂಧಿಪಟ್ಟಿಗಳನ್ನು ತೇಗದ ಮರದಿಂದ ಮಾಡಲಾಗುತ್ತದೆ. 

ಟೀಕ್‌ ಮರ ದುಬಾರಿ ಎಂದೆನಿಸಿದರೂ ಅದರ ಸಣ್ಣ ಪಟ್ಟಿಗಳನ್ನು ವೇಸ್ಟ್‌ ಮರದಿಂದ ಮಾಡಲಾಗುವುದರಿಂದ ಈ ಗಾತ್ರದವು ಕಡಿಮೆ ಬೆಲೆಗೆ ಸಿಗುತ್ತದೆ. ಹೊನ್ನೆ ಮರದಲ್ಲೂ ಮಾಡಬಹುದು. ಜೊತೆಗೆ ಚೆನ್ನಾಗಿ ಸೀಸನ್‌ ಆಗಿರುವ ಬೇವು, ಹಲಸು, ಮಾವು ಇತ್ಯಾದಿ ಮರದಿಂದಲೂ ಮಾಡಬಹುದು. ಆದರೆ ಇವು ದೊಡ್ಡ ಗಾತ್ರದ ಮರದಿಂದ ತಯಾರಾದವು ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಮರ ದೊಡ್ಡದಾದಷ್ಟೂ ಅದರ ಹೃದಯಭಾಗದ ಮರ ಗಾಢವಾದ ಬಣ್ಣವನ್ನು ಹೊಂದಿರುತ್ತದೆ. ಆದುದರಿಂದ ತೆಳು ಇಲ್ಲ ಬಿಳಿ ಬಣ್ಣಕ್ಕೆ ಹತ್ತಿರವಿರುವ ಮರ ಖರೀದಿಸದೆ, ಕಂದುಬಣ್ಣದ ಮರವನ್ನು ಬಳಸುವುದು ಉತ್ತಮ. 

ಅಡ್ಜಸ್ಟಬಲ್‌ ಲೂವರ್
ತೀರ ಚಳಿ ಎಂದೆನಿಸಿದರೆ ಇಲ್ಲ ಮಳೆಯ ಎರಚಲು ಹೆಚ್ಚಾಗಿ, ಜೋರುಗಾಳಿಯೊಂದಿಗೆ ಬೀಳುತ್ತಿದ್ದರೆ ಇಂಥ ಪರಿಸ್ಥಿತಿಯಲ್ಲಿ ಲೂವರ್‌ಗಳನ್ನು ಮುಚ್ಚುವಂತಿದ್ದರೆ ಹೆಚ್ಚು ಅನುಕೂಲಕರವಾಗುತ್ತದೆ. ಹಾಗಾಗಿ ಲೂವರ್‌ ಗಳಿಗೆ ಕೀಲು ಮಾದರಿಯಲ್ಲಿ ಮೇಲೆ ಕೆಳಗೆ ತಿರುಗುವಂತೆ ವಿನ್ಯಾಸ ಮಾಡಿದರೆ, ಬೇಕೆಂದಾಗ ಅಡ್ಡಡ್ಡಕ್ಕೂ ಇಟ್ಟುಕೊಳ್ಳಬಹುದು. ಆದರೆ ಅಡ್ಡಪಟ್ಟಿಗಳು ತೀರ ಅಡ್ಡಕ್ಕೆ ಅಂದರೆ “ಹಾರಿಜಾಂಟಲ್‌’ ಆಗಿದ್ದರೆ, ಒಳಗಿನದು ಹೊರಗೆ ಕಾಣುತ್ತದೆ. ಆದುದರಿಂದ, ಸಂಜೆಯ ನಂತರ, ಮನೆಯೊಳಗೆ ಬೆಳಕು ಬೆಳಗುವ ವೇಳೆಗೆ, ಲೂವರ್‌ಗಳ ಕೋನವನ್ನು ಮಾಮೂಲಿ 45 ಡಿಗ್ರಿಗೆ ಅಂದರೆ ಇಳಿಜಾರಾಗಿ ಇಡುವುದು ಅವಶ್ಯಕ. ಈ ಕೋನದಲ್ಲಿ ಹೊರಗಿನಿಂದ ಒಳಗೆ ಕಾಣುವುದಿಲ್ಲ.

ಗಾಜಿನ ಕಿಟಕಿಯ ಮಿತಿಗಳು
ದಕ್ಷಿಣ ಭಾರತದ ಬಹುಪಾಲು ಪ್ರದೇಶದಲ್ಲಿ ಗಾಜಿನಿಂದ ಕೂಡಿದ ಕಿಟಕಿಗಳು ಸೂರ್ಯನ ನೇರ ಕಿರಣಗಳನ್ನು ಶಾಖದೊಂದಿಗೆ ಮನೆಯೊಳಗೆ ಹರಿಸಿ, ವರ್ಷದ ಬಹುಪಾಲು ತಿಂಗಳುಗಳು ವಿದ್ಯುತ್‌ ಪಂಖಗಳ ಮೊರೆ ಹೋಗುವಂತೆ ಮಾಡುತ್ತವೆ. ಬಿಸಿಲುಗಾಲದಲ್ಲಂತೂ ಸೋಲಾರ್‌ ಮೀಟರ್‌ಗಳಂತೆ ಕಾರ್ಯ ನಿರ್ವಹಿಸುವ ಈ ಗಾಜಿನ ಕಿಟಕಿಗಳು, ಮನೆಯ ಒಳಾಂಗಣವನ್ನು ಅಸಹನೀಯ ಎಂದೆನಿಸುವಷ್ಟು ಬಿಸಿಯೇರುವಂತೆ ಮಾಡಿಬಿಡುತ್ತವೆ. ನಮ್ಮಲ್ಲಿ ಗಾಜಿನ ಕಿಟಕಿಗಳನ್ನು ಬೆಳಕಿಗಿಂತ ಶೋಕಿಗೆಂದೇ ಹೆಚ್ಚು ಹೆಚ್ಚು ಅಗಲ ಹಾಗೂ ಉದ್ದಕ್ಕೆ ಇಡುವ ಕಾರಣ, ಗ್ಲಾಸ್‌ ಹೌಸ್‌ಗಳಂತೆ ಕಾಣುವ ಅನೇಕ ಮನೆಗಳಲ್ಲಿ, ದುಬಾರಿ ಏರ್‌ ಕಂಡಿಷನರ್‌ಗಳನ್ನು ಫ್ಯಾನ್‌ ಗಳು ಜೋರಾಗಿ ತಿರುಗಿದಾಗಲೂ ತಂಪೆನಿಸಿದಷ್ಟು ಬಿಸಿಯೇರಿದಾಗ, ಅನಿವಾರ್ಯವಾಗಿ ಹಾಕಲಾಗುತ್ತದೆ. ಹೀಗಾಗಲು ಮುಖ್ಯಕಾರಣ ಗಾಜಿನ ಕಿಟಕಿಗಳ ಅತಿರೇಕ ಎಂದೆನಿಸುವಷ್ಟರ ಬಳಕೆ ಎಂಬುದನ್ನು ನಾವು ಮರೆಯುತ್ತೇವೆ.

ಗಾಜು ದುಬಾರಿಯಾಗಿರುವುದರ ಜೊತೆಗೆ ಸುಲಭದಲ್ಲಿ ಒಡೆದೂ ಹೊಗುತ್ತದೆ. ಆದರೆ ಮರದಿಂದ ಮಾಡಲಾಗುವ ಸಂದಿಪಟ್ಟಿಗಳು ಸುದೃಢವಾಗಿರುತ್ತವೆ. ನೋಡಲು ಚೆನ್ನಾಗಿರುತ್ತದೆ ಎಂಬ ಭ್ರಮೆಯಲ್ಲಿ ಗಾಜಿನ ಕಿಟಕಿಗಳನ್ನು ಎಲ್ಲೆಡೆ ಅಳವಡಿಸಿ, ಹೊರಗಿನಿಂದ ಎಲ್ಲ ಕಾಣುತ್ತದೆ ಎಂಬಕಾರಣಕ್ಕೆ ಅದನ್ನೆಲ್ಲ ಬಹುಪಾಲು ಸಮಯ ಮುಚ್ಚಿಡುವುದಕ್ಕಿಂತ, ಹೆಚ್ಚು ಕಾಲ ತೆರೆದಿಡಬಹುದಾದ ಲೂವರ್‌ಗಳನ್ನು ಬಳಸಿದರೆ, ಮನೆ ತಂಪಾಗಿರುವುದರ ಜೊತೆಗೆ ನಮ್ಮ ಖಾಸಗಿತನ- ಪ್ರ„ವೆಸಿಯನ್ನೂ ಕಾಪಾಡಿಕೊಳ್ಳಬಹುದು.

ಹವಾನಿಯಂತ್ರಣ ಯಂತ್ರದಿಂದ ಹೊರಸೂಸುವ ಗಾಳಿ ಕೃತಕವಾಗಿದ್ದು, ಅದರಲ್ಲಿ ತೇವಾಂಶದ ಕೊರತೆ ಹೆಚ್ಚಿರುತ್ತದೆ. ಜೊತೆಗೆ ವಿದ್ಯುತ್‌ ಉಳಿಸಲು ಒಂದು ಪಾಲು ಗಾಳಿಯನ್ನು ಮರುಬಳಕೆ ಮಾಡುವುದರಿಂದ, ಅದರ ತಾಜಾತನವೂ ಕಡಿಮೆಯಾಗಿರುತ್ತದೆ. ನಿಮಗೆ ಸಂಪೂರ್ಣವಾಗಿ ನೈಸರ್ಗಿಕವಾದ ಆರೋಗ್ಯಕರ ಗಾಳಿಯ ಹರಿವು ಬೇಕೆಂದಿದ್ದಲ್ಲಿ ಲೂವರ್‌ ಗಳಿಗೆ ಮೊರೆಹೋಗಬಹುದು!

ಬೆಳಕು ಹೆಚ್ಚಿಸಲು ಒಂದಷ್ಟು ಐಡಿಯಾ

ಈಗಂತೂ ತೆಳುವಾದ ಅದರಲ್ಲೂ ಪಾರದರ್ಶಕ ಸನ್‌ಶೇಡ್‌ ಗಳತ್ತ ಒಲವು ಹೆಚ್ಚುತ್ತಿದೆ. ಗಾಜು ಮೊದಲಿನಂತಿಲ್ಲ, ಸುತ್ತಿಗೆಯಿಂದ ಒಡೆದರೂ ಬಿರುಕು ಬಿಡದ ಗಡಸುಗೊಳಿಸಿದ ಗಾಜು ಲಭ್ಯ. ಇವುಗಳ ಬೆಲೆ ಚದುರ ಅಡಿಗೆ ಸುಮಾರು ಇನ್ನೂರು ರೂಪಾಯಿ ಆದರೂ ಕಾಂಕ್ರಿಟ್‌ ಸಜಾjಗಿಂತ ಹೆಚ್ಚೇನೂ ಆಗುವುದಿಲ್ಲ. ಜೊತೆಗೆ ಸೆಂಟ್ರಿಂಗ್‌ ಹಾಕುವ, ಕಂಬಿ ಕಟ್ಟಿ ಕಾಂಕ್ರಿಟ್‌ ಸುರಿದು, ಕ್ಯೂರ್‌ ಮಾಡಿ ನಂತರ ಸೂಕ್ತ ಇಳಿಜಾರು- ನೀರುನಿರೋಧಕ ಪದರ ಎಳೆಯುವ ಗೋಜಿರುವುದಿಲ್ಲ! ಒಮ್ಮೆ ಸೂಕ್ತ ಅಳತೆಯ ಗಾಜನ್ನು ತಂದು ಸಿಗಿಸಿದರೆ ಆಯಿತು. ಪಾರದರ್ಶಕ ಸಜಾj ತಯಾರು.

ಸಜಾj ದೊಡ್ಡದಿದ್ದರೆ ಕಂಬಿ ಹಗ್ಗ ಬಳಸಿ
ಸಾಮಾನ್ಯವಾಗಿ ಎರಡು ಮೂರು ಅಡಿಯ ಅಗಲದ ಸಜಾjಗಳನ್ನೂ ಕೂಡ ಗೋಡೆಯಿಂದಲೇ ಹೊರಚಾಚಿ ನಿಲ್ಲುವಂತೆ ಆ್ಯಂಗಲ್‌ ಆಧಾರ ನೀಡಿ ಕೂರಿಸಬಹುದು. ಆದರೆ ಇದಕ್ಕೂ ಉದ್ದದ ಸಜಾjಗಳಿದ್ದರೆ ಸ್ಟೇನ್‌ಲೆಸ್‌ ಸ್ಟೀಲ್‌ ವೈರ್‌ ರೋಪ್‌ – ಕಂಬಿ ಹಗ್ಗ ಬಳಸಿ. ಈ ಹಗ್ಗಗಳ ಒಂದು ಕೊನೆಯನ್ನು ಸಜಾjಗಳ ಮೇಲೆ ಒಂದೆರಡು ಅಡಿ ಎತ್ತರದಲ್ಲಿ ಸಿಗಿಸಿ, ಮತ್ತೂಂದು ಕೊನೆಯನ್ನು ಸಜಾjಗಳ ಹೊರ ಕೊನೆಗೆ ಅಂದರೆ ಚಾಚಿಕೊಂಡಿರುವ- ಬಾಗಬಹುದಾದ ಕೊನೆಗೆ ಕಟ್ಟಲಾಗುತ್ತದೆ. ಈ ಕಂಬಿ ಹಗ್ಗಗಳು ತೆಳುವಾಗಿದ್ದು ನೋಡಿದ ತಕ್ಷಣ ಕಾಣುವುದಿಲ್ಲ. ಜೊತೆಗೆ ಗಾಜೂ ಕೂಡ ಪಾರದರ್ಶಕವಾಗಿರುವುದರಿಂದ ಮನೆ ಹೆಚ್ಚು ತೆರೆದುಕೊಂಡಂತೆ ಕಾಣುತ್ತದೆ.

ಗಾಜಿನ ಆರ್ಚ್‌ ಪೋರ್ಚ್‌
ಬಾಗಿಸಿದ ಗಾಜಿನ ಸನ್‌ಶೇಡ್‌ ವಿವಿಧ ಆಕಾರ ಬಣ್ಣಗಳಲ್ಲಿ ಲಭ್ಯ. ಇವನ್ನು ಮುಂಬಾಗಿಲಿಗೆ ಹಾಕಿದರೆ ಸಾಕು – ಇದೇ ಮನೆಗೆ ವಿಶೇಷ ಮೆರಗನ್ನು ನೀಡಬಲ್ಲದು. ಮನೆಯ ಇತರೆ ಪ್ರದೇಶವನ್ನು ಸಿಂಪಲ್ಲಾಗಿ ನ್ಯಾಸ ಗೊಳಿಸಿದರೂ ನಡೆಯುತ್ತದೆ. ಗಾಜು ಪಾರದರ್ಶಕವಾದ ಕಾರಣ ಕಿಟಕಿ ಬಾಗಿಲುಗಳನ್ನು ತೆರೆದರೆ ಪ್ರಕಾಶಮಾನವಾಗಿ ಬೆಳಕು ಒಳಬರಲು ಇವು ಸಹಾ¿åಕಾರಿ.

ಎಲ್ಲಿ ಸಂಪೂOì ಪಾರದರ್ಶಕತೆ ಬೇಡವೋ ಅಲ್ಲಿ ಉಜ್ಜಿದ ಗಾಜನ್ನು ಬಳಸಬಹುದು. ಗಾಜನ್ನು ಮರಳು ಮಾದರಿಯ ವಸ್ತುಗಳಿಂದ ಉಜ್ಜಿ, ಬೆಳಕು ಸೋಸಿ- ಫಿಲ್ಟರ್‌ ಆಗಿ ಒಳಬರುವಂತೆ ಮಾಡುವುದರ ಮೂಲಕ, ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು.  ಹೀಗೆ ಗ್ರೌಂಡ್‌ ಗ್ಲಾಸ್‌ ಬಳಸುವಾಗ ಉಜ್ಜಿದ ತರಿತರಿಯಾದ ಮುಖ ಕೆಳಗೆ ಅಂದರೆ ಗಾಳಿ ಮಳೆಗೆ ಹೆಚ್ಚು ಒಡ್ಡಿಕೊಳ್ಳದಂತೆ ಇರಿಸುವುದರ ಮೂಲಕ ಅವು ಧೂಳನ್ನು ಹೆಚ್ಚು ಆಕರ್ಶಿಸದಂತೆ ತಡೆಯಬಹುದು.

ಗುಣಮಟ್ಟದ ಗಾಜು ಹಾಗೂ ಸ್ಟೆನ್‌ಲೆಸ್‌ ಸ್ಟೀಲ್‌ ಬಳಸಿದರೆ ಇವು ಕಾಂಕ್ರಿಟ್‌ ಸಜಾjಗಳಿಗೆ ದೀರ್ಘ‌ಕಾಲ ಬಾಳಿಕೆ ಬರುವಲ್ಲಿಯೂ ಪೈಪೋಟಿ ನೀಡಬಲ್ಲವು!

ಹೆಚ್ಚಿನ ಮಾಹಿತಿಗೆ: 9844132826 

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.