ಕಂತು ಕಾಯುವುದಿಲ್ಲ!

ಇಎಂಐ ಮಾಡಿಸುವ ಮುನ್ನ

Team Udayavani, Dec 16, 2019, 6:12 AM IST

kantu

ಇಎಂಐಗಳು ಎಷ್ಟೇ ಆಕರ್ಷಕವಾಗಿ ಕಂಡರೂ ಅವುಗಳು ಅನವಶ್ಯಕ ಹೊರೆ ಎನ್ನುವುದು ಅನುಭವಸ್ಥರ ಮಾತು. ಇದೇ ವೇಳೆ, ಅದನ್ನು ತಮಗೆ ಬೇಕಾದಂತೆ ಪಳಗಿಸಿ ಬಳಸಿಕೊಳ್ಳುವಂತಾದರೆ ಅದರಿಂದ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವುದು ಕೂಡಾ ಅನುಭವಸ್ಥರ ಮಾತೇ. ಇಎಂಐ ನಿರ್ವಹಣೆಗಾಗಿ ಕೆಲ ಟಿಪ್ಸ್‌ಗಳು ಇಲ್ಲಿವೆ.

ಹಿಂದೆಲ್ಲಾ ಒಂದು ಕಾರು, ಒಂದು ಮನೆ ಅಥವಾ ಟಿ.ವಿ ಕೊಳ್ಳುವುದೆಂದರೆ ಅದು ಜೀವಮಾನ ಸಾಧನೆಯಂತೆ ಬಿಂಬಿತವಾಗುತ್ತಿತ್ತು. ಅದರ ಹಿಂದೆ ಸಾಲ ಮತ್ತು ದಶಕಗಳ ಕಾಲ ಹಣಕಾಸು ನಿರ್ವಹಣೆ ಮಾಡಬೇಕಿರುತ್ತಿತ್ತು. ಆದರೆ ಇಂದು ಹಾಗಿಲ್ಲ. ತಮಗೆ ಬೇಕಾದುದನ್ನು ಕೊಳ್ಳುವ ಸ್ವಾತಂತ್ರ್ಯ ಜನರಿಗಿದೆ. ಬ್ಯಾಂಕ್‌ ಲೋನ್‌, ಕ್ರೆಡಿಟ್‌ ಕಾರ್ಡುಗಳಂಥ ಸವಲತ್ತುಗಳಿಂದ ಒಂದೇ ದಿನದಲ್ಲಿ ಸಾಲ ಪಡೆದು ಏನು ಬೇಕಾದರೂ ಖರೀದಿಸಬಹುದು ಎಂಬ ನಂಬಿಕೆಯಂತೂ ಜನರಲ್ಲಿ ಮೂಡಿದೆ.

ಅದರಲ್ಲೂ, ಇಎಂಐ ಎಂಬ ಕಂತು ಸಾಲ ಪಾವತಿಸುವ ವ್ಯವಸ್ಥೆಯಿಂದ ಪ್ರತಿಯೊಂದು ಮನೆಗಳಲ್ಲೂ ತಿಂಗಳಿಗೆ ಎರಡೋ ಮೂರೋ ಇಎಂಐ ಕಮಿಟ್‌ಮೆಂಟುಗಳು ಇರುವುದನ್ನು ಕಾಣಬಹುದಾಗಿದೆ. ಇಎಂಐ ಎಂದರೆ “ಈಕ್ವೇಟೆಡ್‌ ಮನಿ ಇನ್‌ಸ್ಟಾಲ್‌ಮೆಂಟ್ಸ್‌’. ಸರಳವಾಗಿ ಹೇಳುವುದಾದರೆ- ಕಂತು ಸಾಲ. ಮಾಡಿರುವ ಸಾಲದ ಒಟ್ಟು ಮೊತ್ತಕ್ಕೆ ಇಂತಿಷ್ಟು ಬಡ್ಡಿ ಸೇರಿಸಿ ಪ್ರತಿ ತಿಂಗಳ ಲೆಕ್ಕದಲ್ಲಿ ನಿಗದಿತ ಮೊತ್ತವನ್ನು ಕಟ್ಟುತ್ತಾ ಬರುವುದು ಅದರ ವ್ಯವಸ್ಥೆ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಮೊತ್ತವನ್ನು ಕಟ್ಟುವುದರಿಂದ ಹೊರೆಯಾಗದು ಎನ್ನುವುದು ಇಎಂಐನ ಹೆಗ್ಗಳಿಕೆ.

ಇಎಂಐ ನಿರ್ವಹಣೆಗೆ ಸಲಹೆಗಳು
ನೂರು ಸಾರಿ ಯೋಚಿಸಿ: ಸಾಲ, ಯಾವತ್ತಿಗೂ ಶೂಲ ಎಂಬ ಹಿರಿಯರ ಮಾತು ನೆನಪಿರಲಿ. ಕಂತಿನಲ್ಲಿ ಯಾವುದೇ ವಸ್ತು ಅಥವಾ ಆಸ್ತಿ ಖರೀದಿ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ನಿಜವಾಗಿಯೂ ಅದರ ಅಗತ್ಯವಿದ್ದರೆ ಮಾತ್ರ ಖರೀದಿಸಿ. ಸಾಲ ಮತ್ತು ಇಎಂಐಗಳು ಯಾವತ್ತೂ ಅಸೆಟ್‌ ಎಂದು ಪರಿಗಣಿತವಾಗುವುದಿಲ್ಲ. ಏಕೆಂದರೆ, ಅವುಗಳಿಂದ ಯಾವುದೇ ಮೊತ್ತ ಉತ್ಪನ್ನವಾಗದ ಕಾರಣ. ಈ ವಿಷಯದಲ್ಲಿ, ಶಿಕ್ಷಣ ಸಾಲಕ್ಕೆ ಮಾತ್ರ ವಿನಾಯಿತಿ ನೀಡಬಹುದಾಗಿದೆ. ಏಕೆಂದರೆ, ಅದು ಬದುಕಿಗೆ ಅಸೆಟ್‌ ದೊರಕಿಸಿಕೊಡುವ ಮಾರ್ಗವಾಗಿರುವುದರಿಂದ ಈ ವಿನಾಯಿತಿ. ಆದರೆ, ತುರ್ತಿದ್ದರೆ ಮಾತ್ರ ಇವು ಆಪ‌ತ್ಬಾಂಧವ ಎನ್ನುವುದರಲ್ಲೂ ಸತ್ಯಾಂಶವಿದೆ.

ಪರ್ಯಾಯ ಆದಾಯ ಮೂಲ ಇರಲಿ: ದೀರ್ಘಾವಧಿಯ ಕಾಲ ಕಂತು ಸಾಲ ತೀರಿಸಬೇಕಿರುವಾಗ, ಅಷ್ಟೂ ಸಮಯ ಆದಾಯ ಬರುತ್ತಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕಂತು ಸಾಲ ತೀರಿಸಲು ಒಂದೇ ಉದ್ಯೋಗವನ್ನು ನೆಚ್ಚಿಕೊಳ್ಳದೆ, ಇನ್ನಿತರೆ ಆದಾಯದ ಮೂಲಗಳನ್ನೂ ಆಶ್ರಯಿಸಿಕೊಂಡರೆ ಅನಿಶ್ಚಿತತೆ ಇರುವುದಿಲ್ಲ. ಉದ್ಯೋಗ ಇಲ್ಲದೇ ಹೋದರೂ ಕಂತು ಸಾಲ ಕಟ್ಟಲು ಧಕ್ಕೆಯಾಗದಂತೆ ಪರ್ಯಾಯ ದಾರಿಗಳನ್ನು ನೋಡಿಕೊಂಡಿರಬೇಕಾಗುತ್ತದೆ. ಒಬ್ಬ ವ್ಯಕ್ತಿ ತಿಂಗಳಿಗೆ 25,000 ಸಂಬಳ ಪಡೆಯುತ್ತಿದ್ದಾನೆ ಅಂತಿಟ್ಟುಕೊಳ್ಳಿ. ಅವನು 4 ಲಕ್ಷ ರೂ. ಕಂತು ಸಾಲ ಪಡೆಯುತ್ತಾನೆ. ಇದಾಗಿ ಮೂರು ವರ್ಷಕ್ಕೆ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿಹೋಗುತ್ತೆ. ಆ ಕೂಡಲೆ ಇನ್ನೊಂದು ಕೆಲಸ ಸಿಗದೇ ಇದ್ದರೆ ಆ ತಿಂಗಳ ಕಂತಿಗೆ ಹಣ ಹೊಂದಿಸುವುದು ಕಷ್ಟವಾಗಬಹುದು.

ಕಡಿಮೆ ಅವಧಿಯ ಪ್ಲ್ರಾನ್‌ ಆರಿಸಿ: ನಿಮ್ಮ ಹಣಕಾಸು ಸ್ಥಿತಿಗತಿ ಚೆನ್ನಾಗಿದ್ದರೆ ಬಹಳ ಬೇಗನೆ ಮುಗಿದುಹೋಗುವ ಇಎಂಐ ಪ್ಲ್ರಾನುಗಳನ್ನು ಆರಿಸಿಕೊಳ್ಳಿ. ಅಂದರೆ, ಆಗ ತಿಂಗಳ ಕಂತಿನ ರೂಪದಲ್ಲಿ ಹೆಚ್ಚು ಹಣ ಕಟ್ಟಬೇಕಾಗುತ್ತದೆ. ಅದಕ್ಕಿಂತ ಮಿಗಿಲಾಗಿ, ಕೆಲ ಬ್ಯಾಂಕುಗಳು ಮುಂದಿನ ತಿಂಗಳುಗಳ ಇಎಂಐ ಕಂತುಗಳನ್ನು ಮುಂಚಿತವಾಗಿ ಕಟ್ಟುವ ಸವಲತ್ತನ್ನೂ ನೀಡುತ್ತವೆ. ಉದ್ಯೋಗದಲ್ಲಿ ಸಂಬಳ ಹೆಚ್ಚಳ ಮಾಡಿದರೆ, ಉಡುಗೊರೆಯಾಗಿ ಹಣ ಬಂದರೆ ಇಲ್ಲವೇ ಆರ್‌ಡಿ/ ಎಫ್ಡಿ ಮೆಚೂರ್‌ ಆಗಿ ಅದರ ಹಣ ಕೈ ಸೇರಿದರೆ, ಆ ಮೊತ್ತವನ್ನು ಇಎಂಐ ಕಂತುಗಳಿಗೆ ಸೇರಿಸಿ ಕಂತು ಸಾಲ ಬಹಳ ಬೇಗ ಮುಗಿಯುವಂತೆ ಮಾಡಬಹುದು. ಆಗ ಹೆಚ್ಚುವರಿಯಾಗಿ ಬೀಳಬಹುದಾಗಿದ್ದ ಬಡ್ಡಿ ತಪ್ಪಿದಂತಾಗುತ್ತದೆ.

ಕ್ರೆಡಿಟ್‌ ಸ್ಕೋರ್‌ ನಿರ್ವಹಣೆ: ಗ್ರಾಹಕನ ಹಣಕಾಸು ವ್ಯವಹಾರ ನಿರ್ವಹಣೆ ಕುರಿತಾದ ಮಾಹಿತಿಯನ್ನು ಪ್ರತಿ ತಿಂಗಳು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು CIBIL (ಕ್ರೆಡಿಟ್‌ ಇನ್‌ಫಾರ್ಮೇಷನ್‌ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್‌)ಗೆ ನೀಡುತ್ತದೆ. ಅದು ಮಾಹಿತಿಯೆಲ್ಲವನ್ನೂ ಪರಿಶೀಲಿಸಿ ಮಾನದಂಡಗಳಿಗೆ ಅನುಗುಣವಾಗಿ ಅಂಕಗಳನ್ನು ದಯಪಾಲಿಸುತ್ತದೆ. ಅದನ್ನು ಕ್ರೆಡಿಟ್‌ ಸ್ಕೋರ್‌ ಎಂದು ಕರೆಯಲಾಗುತ್ತದೆ. ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದರೆ ಇಎಂಐ ಕಂತುಗಳ ಮೇಲೆ, ಸಾಲದ ಮೇಲೆ ಒಳ್ಳೆಯ ಆಫ‌ರ್‌ ದೊರೆಯುವುದು.

ಹೋಲಿಕೆ ಮಾಡಿ ನೋಡಿ: ಇಂಟರ್ನೆಟ್‌ ಇರುವುದರಿಂದ ಎಲ್ಲಾ ಬ್ಯಾಂಕುಗಳ ಇಎಂಐ ಸವಲತ್ತುಗಳನ್ನು ಹೋಲಿಕೆ ಮಾಡಿ ತಮಗೆ ಸೂಕ್ತವೆನಿಸುವುದನ್ನು ಆರಿಸಿಕೊಳ್ಳಬಹುದು. ಪ್ರತಿಯೊಬ್ಬರ ಹಣಕಾಸು ಸ್ಥಿತಿಗತಿಗಳು ಬೇರೆ ಬೇರೆಯಾಗಿರುವುದರಿಂದ ಎಲ್ಲರಿಗೂ ಸೂಕ್ತವಾಗುವ ಒಂದು ಇಎಂಐ ಕಂತು ವ್ಯವಸ್ಥೆ ಎಂಬುದು ಇರುವುದಿಲ್ಲ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ತಮಗೆ ಸೂಕ್ತವೆನಿಸಿದ್ದನ್ನು ಆರಿಸಿಕೊಂಡರೆ ಉತ್ತಮ.

ಕಂತು ಕಟ್ಟಲು ಮರೆಯದಿರಿ: ತಿಂಗಳ ಕಂತನ್ನು ಕಟ್ಟದೆ ಉಳಿಸಿಕೊಂಡರೆ ದಂಡದ ರೂಪದಲ್ಲಿ, ಹೆಚ್ಚುವರಿ ಹಣ ಕಟ್ಟಬೇಕಾಗಿ ಬರುವುದು. ಅಷ್ಟೇ ಅಲ್ಲ, ಕ್ರೆಡಿಟ್‌ ಸ್ಕೋರ್‌ ಮೇಲೂ ಇದು ದುಷ್ಪರಿಣಾಮ ಬೀರುವುದು.

* ಹವನ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.