ಡ್ರೋನ್ ಬಳಸಿ ಔಷಧ ಸಿಂಪಡಣೆ
Team Udayavani, Jul 23, 2018, 12:03 PM IST
ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದ್ದರೂ ಔಷಧ ಸಿಂಪರಣೆ ಮಾತ್ರ ಬಹುತೇಕ ಕಡೆ ಇನ್ನೂ ಹಳೆಯ ಪದ್ಧತಿಯಲ್ಲೇ ಮುನ್ನಡೆಯುತ್ತಿದೆ. ಈ ಪದ್ಧತಿಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇದರಿಂದ ಮುಕ್ತಗೊಳ್ಳಲು ರೈತ ಮತ್ತು ಉದ್ಯಮಿ ಮಲ್ಲಿಕಾರ್ಜುನ ಮರ್ಚೇಡ್‌ಗೌಡ ಎಂಬಾತ, ಇಸ್ರೇಲ್ ಮಾದರಿಯ “ಡ್ರೋಣ್ ಪೆಸ್ಟಿಸೈಡ್ ಸ್ಪ್ರೆàಯರ್’ ಎಂಬ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಆ ಮೂಲಕ ಔಷಧ ಸಿಂಪರಣೆಗೆ ವೈಜ್ಞಾನಿಕ ರೂಪ ನೀಡಿದ್ದಾರೆ.
ಬೆಳೆ ಬೆಳೆಯಲು ತಗಲುವ ವೆಚ್ಚದಲ್ಲಿ ಶೇ.50ರಷ್ಟು ಹಣ ಕ್ರಿಮಿನಾಶಕ ಸಿಂಪರಣೆಗಾಗಿ ಖರ್ಚಾಗುತ್ತಿದೆ. ಜೊತೆಗೆ ಕೃಷಿನಾಶಕ ಸಿಂಪರಣೆ ವೇಳೆ ಸೂಕ್ತ ಸುರûಾ ಕ್ರಮ ಕೈಗೊಳ್ಳದೆ ಕೃಷಿಕಾರ್ಮಿಕರು ಮೃತಪಟ್ಟಿರುವ ಉದಾಹರಣೆಗಳೂ ಇವೆ. ಔಷಧ ಸಿಂಪರಣೆಗೆ ಈ ಹೊಸ ಡ್ರೋಣ್ ಪೆಸ್ಟಿಸೈಡ್ ಸ್ಪ್ರೆàಯರ್ ಬಳಸುವುದರಿಂದ ರೈತರಿಗೆ, ಅಧಿಕ ವೆಚ್ಚ, ಕೃಷಿ ಕಾರ್ಮಿಕರ ಅಭಾವ ನೀಗುವುದಲ್ಲದೆ, ಸಮಯವೂ ಉಳಿತಾಯವಾಗಲಿದೆ.
ಏನಿದು ಡ್ರೋಣ್ ಸ್ಪ್ರೆàಯರ್?
ಡ್ರೋಣ್ ಕ್ಯಾಮೆರಾ ಮಾದರಿಯಲ್ಲೇ ಡ್ರೋಣ್ ಪೆಸ್ಟಿಸೈಡ್ ಸ್ಪ್ರೆàಯರ್‌ನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಕ್ಯಾಮೆರಾ ಮತ್ತು ವಸ್ತುಗಳನ್ನು ಪತ್ತೆ ಹಚ್ಚಲು ರಾಡರ್, ಪ್ರೊಫೈಲ್ಸ್, ಆಟೋ ಪೈಲೆಟ್ (ಪ್ರೊಸೆಸರ್), ಅದನ್ನು ನಿಯಂತ್ರಿಸಲು ರಿಮೋಟ್ ಕಂಟ್ರೋಲ್‌ನ್ನು ಅಳವಡಿಸಲಾಗಿದೆ. ಔಷಧ ಸಿಂಪರಣೆ ಮಾಡಲು 6 ಲೀಟರ್ ಸಾಮರ್ಥ್ಯದ ಕ್ಯಾನ್ ಅಳವಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಜಿಪಿಎಸ್ ಸೌಲಭ್ಯವುಳ್ಳ ಈ ಡ್ರೋಣ್ ಸ್ಪ್ರೆàಯರ್‌ನಲ್ಲಿ ಹೊಲದ ನಾಲ್ಕು ದಿಕ್ಕುಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ನಂತರ ಸೂಚಿಸಿದ ಹೊಲದಲ್ಲಷ್ಟೇ ಸ್ಪ್ರೆàಯರ್ ಔಷಧ ಸಿಂಪರಣೆ ಮಾಡುತ್ತದೆ. ಒಂದು ವೇಳೆ ಪಕ್ಕದ ಹೊಲಕ್ಕೆ ಹೋದರೂ, ಸಿಂಪರಣೆ ಸ್ಥಗಿತಗೊಳ್ಳುವ ತಂತ್ರಜ್ಞಾನ ಹೊಂದಿದೆ. ಈ ಯಂತ್ರದಿಂದ ಕೇವಲ 8 ನಿಮಿಷದಲ್ಲಿ ಒಂದು ಎಕರೆ ಔಷಧವನ್ನು ಸಿಂಪರಣೆ ಮಾಡಬಹುದಾಗಿದೆ. 100 ಮೀ. ಎತ್ತರದ ತನಕ ಈ ಡ್ರೋನ್ ಹಾರುತ್ತದೆ.
ಹೊಲದಲ್ಲಿ ಒಂದು ಕಡೆ ಕ್ರಿಮಿಗಳು ಕಾಣಿಸಿಕೊಂಡರೂ, ರೈತರು ಇಡೀ ಹೊಲಕ್ಕೆ ಔಷಧಿ ಸಿಂಪರಣೆ ಮಾಡುತ್ತಾರೆ. ಇದು ಅನಗತ್ಯ. ಜತೆಗ ವೆಚ್ಚವೂ ಹೆಚ್ಚು. ಆದರೆ, ಡ್ರೋನ್ ಸ್ಪ್ರೆàಯರ್ ಬಳಸಿಕೊಂಡು, ಮೊದಲು ಹೊಲವನ್ನು ಒಮ್ಮೆ ಕ್ಯಾಮೆರಾ ಮೂಲಕ ಕ್ಯಾಪcರ್ ಮಾಡಬಹುದು. ಬಳಿಕ ಕ್ರಿಮಿಗಳು ಇರುವ ಪ್ರದೇಶದಲ್ಲಿ ಮಾತ್ರ ಔಷಧಿಯನ್ನು ಸ್ಪ್ರೆà ಮಾಡಬಹುದು ಎನ್ನುತ್ತಾರೆ ಮಲ್ಲಿಕಾರ್ಜುನ.
5 ಲಕ್ಷ ರೂ. ವೆಚ್ಚ
ಇಸ್ರೇಲ್ ಮತ್ತು ಜಪಾನ್‌ನಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇದನ್ನು ಬಳ್ಳಾರಿಯಲ್ಲಿ ಆರಂಭಿಸಲಾಗುತ್ತಿದೆ. ಬೇರೆ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಒಂದಕ್ಕೆ 5 ಲಕ್ಷ ರೂ. ವೆಚ್ಚವಾಗಲಿದ್ದು, ಸದ್ಯ ನಾಲ್ಕು ಡ್ರೋಣ್ ಸ್ಪ್ರೆàಯರ್‌ಗಳನ್ನು ಸಿದ್ಧಪಡಿಸಲಾಗಿದೆ. ಇನ್ನೂ 16 ಸಿದ್ಧಪಡಿಸಲಾಗುವುದು. ಅದಕ್ಕಾಗಿ 20 ಜನರಿಗೆ ತರಬೇತಿ ನೀಡಿ ಪೈಲೆಟ್‌ಗಳನ್ನಾಗಿ ರೂಪಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.
ಡ್ರೋಣ್ ಸ್ಪ್ರೆಯರ್ ಸಂಪರ್ಕ ಹೇಗೆ?
ಕೃಷಿ ಇಲಾಖೆಯ ಕೃಷಿ ಯಂತ್ರಧಾರೆ ಯೋಜನೆಯಡಿ ವರ್ಷಾ ಅಗ್ರಿ ಬಿಜಿನೆಸ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಲಿಮಿಟೆಡ್ ಕಂಪನಿಯು ರಾಜ್ಯದ 10 ಜಿಲ್ಲೆಗಳ 66 ಕೇಂದ್ರಗಳಲ್ಲಿ ಕೃಷಿ ಯಂತ್ರಗಳನ್ನು ರೈತರಿಗೆ ಬಾಡಿಗೆ ನೀಡುತ್ತದೆ. ಅದರಲ್ಲಿ ಬಳ್ಳಾರಿಯಲ್ಲಿನ 8 ಕೇಂದ್ರಗಳಲ್ಲಿ ಮೊದಲ ಬಾರಿಗೆ ಡ್ರೋಣ್ ಪೆಸ್ಟಿಸೈಡ್ ಸ್ಪ್ರೆàಯರ್ ಯಂತ್ರವನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಒಂದು ಎಬಿಸಿ 4ಡಿ ಆ್ಯಪ್ ಸಿದ್ಧಪಡಿಸಿದ್ದು, ಅಗತ್ಯವುಳ್ಳ ರೈತರು ಆ್ಯಪ್‌ನಲ್ಲಿ ಅರ್ಜಿ ಭರ್ತಿ ಮಾಡಿದರೆ ಸ್ಪ್ರೆàಯರ್‌ನ ಪೈಲಟ್‌ಗಳೇ ಹೊಲಕ್ಕೆ ಬಂದು ಪರಿಶೀಲನೆ ನಡೆಸಿ, ಔಷಧಿಯನ್ನು ಸಿಂಪಡಣೆ ಮಾಡಲಿದ್ದಾರೆ.
– ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.