ಇ- ಸುರಕ್ಷೆ
Team Udayavani, Oct 21, 2019, 4:30 AM IST
ಇಂಟರ್‌ನೆಟ್ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲಾ ಎಚ್ಚರಿಕೆ ವಹಿಸಬೇಕು ಗೊತ್ತಾ?
ವಿಳಾಸ ನೋಡಿ
ಹಣಕಾಸು ವ್ಯವಹಾರ ನಡೆಸುವ ಸಂದರ್ಭದಲ್ಲಿ ಆನ್‌ಲೈನ್ ತಾಣ ಅಥವಾ ಬ್ಯಾಂಕ್ ವೆಬ್‌ಸೈಟ್ ತೆರೆಯುವಾಗ ಅದರ ವಿಳಾಸವನ್ನು (ಯು.ಆರ್.ಎಲ್) ಪರೀಕ್ಷಿಸಿ. ಮೋಸಗಾರರು ಬ್ಯಾಂಕ್ ವೆಬ್‌ಸೈಟನ್ನೇ ಹೋಲುವ ನಕಲಿ ಜಾಲತಾಣಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ನೀಡಿದರೆ ಅದನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ವಿಳಾಸ ನೋಡಿದರೆ ಅಸಲೀಯತ್ತು ಗೊತ್ತಾಗುತ್ತದೆ.
ಸಾರ್ವಜನಿಕ ವೈಫೈ ಬಳಕೆ ಬಗ್ಗೆ ಗಮನವಿರಲಿ
ವೈಯಕ್ತಿಕ ವ್ಯವಹಾರ ನಡೆಸಲು ಸುರಕ್ಷಿತ ಸ್ವಂತ ನೆಟ್‌ವರ್ಕ್ ಬರುವವರೆಗೆ ಕಾಯುವುದು ಉತ್ತಮ. ಸಾರ್ವಜನಿಕ ವೈಫೈಗಳಲ್ಲಿ ಹಣಕಾಸು ವ್ಯವಹಾರಗಳನ್ನು ಮಾಡದಿರುವುದು ಸೂಕ್ತ
ನಿಬಂಧನೆಗಳನ್ನು ತಿಳಿದುಕೊಳ್ಳಿ
ಶಾಪಿಂಗ್ ಮಾಡುವಾಗ, ಗ್ರಾಹಕರು ಪಾಲಿಸಬೇಕಿರುವ ನಿಬಂಧನೆಗಳ ಪಟ್ಟಿಯನ್ನು ಸಾಮಾನ್ಯವಾಗಿ ಯಾರೂ ಓದುವುದಿಲ್ಲ. ಆದರೆ ಅದನ್ನು ಓದುವುದರಿಂದ ತಿಳಿವಳಿಕೆ ಮತ್ತು ಜಾಗೃತಿ ಹೆಚ್ಚುತ್ತದೆ. ಆಯಾ ಉತ್ಪನ್ನದ ಕುರಿತಂತೆ ಬಳಕೆದಾರರ ರಿವ್ಯೂಗಳನ್ನು ಓದಿ.
ಬೇಕಾಬಿಟ್ಟಿ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
ವಿಶೇಷ ಡೀಲ್‌ಗಳು, ದರ ಕಡಿತ ಮಾರಾಟ ಅಥವಾ ಇನ್ನಾವುದೋ ಆಕರ್ಷಕ ಜಾಹೀರಾತಿಗೆ ಮರುಳಾಗಿ ಬ್ರೌಸರ್ ಬದಿಯಲ್ಲಿ ಕಾಣುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅದರಿಂದ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನುಗಳಿಗೆ ಮಾಲ್ ವೇರ್‌ಗಳು, ವೈರಸ್‌ಗಳು ದಾಳಿ ನಡೆಸಬಹುದು. ಅವು ಸ್ಮಾರ್ಟ್‌ಫೋನಿನಲ್ಲಿನ ಸೂಕ್ಷ್ಮ ಮಾಹಿತಿಯನ್ನು ಕದ್ದು ಮೂರನೆಯವರಿಗೆ ಕೊಡಬಹುದು.
ಇಮೇಲ್ ಗಾಳ
“ನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ. ಬಹುಮಾನದ ಮೊತ್ತ ನಿಮಗೆ ತಲುಪಲು ನಿರ್ದಿಷ್ಟ ಮೊತ್ತವನ್ನು ಡೆಪಾಸಿಟ್ ಆಗಿ ಕೊಡಬೇಕು. ನಂತರ ಅದನ್ನು ಮರಳಿಸಲಾಗುವುದು’ ಈ ರೀತಿಯ ಇಮೇಲ್ ಕಳಿಸಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಇಂಥ ಇಮೇಲ್‌ಗಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ಬದಲಿಗೆ ಸ್ಪಾಮ್ ಪಟ್ಟಿಗೆ ಸೇರಿಸಿ ನಂತರ ಡಿಲೀಟ್ ಮಾಡಿಬಿಡಬೇಕು.
– ವಿಜಯಕುಮಾರ್ ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.