ಇಂಧನ ದುಬಾರಿ ಕಣ್ರೀ…ಎಲೆಕ್ಟ್ರಿಕ್ ಮಚ್ ಬೆಟರ್!
Team Udayavani, Sep 17, 2018, 4:34 PM IST
ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವುದರ ಪರಿಣಾಮ ನೇರವಾಗಿ ಆಟೋಮೊಬೈಲ್ ಮಾರುಕಟ್ಟೆಯ ಮೇಲೇ ಆಗುತ್ತಿದೆ. ಹೆಚ್ಚಿನವರು ಎಲೆಕ್ಟ್ರಿಕ್ ಬೈಕ್, ಕಾರುಗಳೇ ಲೇಸು ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂದಲ್ಲ ನಾಳೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಆಗುವ ದಿನಗಳು ದೂರವಿಲ್ಲ. ಇದರಿಂದ ಪಾರಾಗಬೇಕೆಂದರೆ ಎಲೆಕ್ಟ್ರಿಕ್ ಬೈಕ್, ಕಾರುಗಳನ್ನೇ ಹೊಂದುವುದು ಉತ್ತಮ ಎಂದು ಬಹುತೇಕ ಮಂದಿ ಅಭಿಪ್ರಾಯಪಡುತ್ತಿದ್ದಾರೆ.
ಅಫ್ಕೋರ್ಸ್, ಆಟೋಮೊಬೈಲ್ ಗ್ರಾಹಕರಿಗೆ ಇದು ಸದ್ಯದ ಅನಿವಾರ್ಯತೆ. ಬದಲಾವಣೆಗೆ ತಕ್ಕಂತೆ ಒಗ್ಗಿಕೊಳ್ಳುವುದು ಭಾರತೀಯರಿಗೆ ಹೊಸದೇನಲ್ಲ. ಇದೀಗ ಹತ್ತರ ಜೊತೆ ಹನ್ನೊಂದು ಅಷ್ಟೆ. ಕಾಲಘಟ್ಟಕ್ಕೆ ತಕ್ಕುದಾದ, ಆರ್ಥಿಕ ಸ್ಥಿತಿಗತಿಯ ಸಮತೋಲನ ತಪ್ಪದಂತೆ ನೋಡಿಕೊಂಡು ಹೋಗುವ ಜಾಣ್ಮೆ ತೋರುತ್ತಾರೆ. ಅದೂ ಸಾಧ್ಯವಾಗದೇ ಇದ್ದಾಗ ಸಾಕಪ್ಪಾ ಸಾಕು ಎಂದು ಅಂಥ ವ್ಯವಸ್ಥೆ, ಸೌಕರ್ಯಗಳಿಂದಲೇ ದೂರ ಇರುತ್ತಾರೆ. ಈಗ ವಾಹನ ಖರೀದಿ ಅಥವಾ ಬದಲಾವಣೆ ವಿಚಾರದಲ್ಲಿಯೂ ಭಾರತೀಯರ ದಾರಿ ನಿಧಾನವಾಗಿ ಬದಲಾಗಲಾರಂಭಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿರ್ವಹಣೆ ಮುಂಬರುವ ದಿನಗಳಲ್ಲಿ ಇನ್ನಷ್ಟು ದುಬಾರಿ ಆಗುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಎಲೆಕ್ಟ್ರಿಕ್ ವಾಹನಗಳೇ ಲೇಸೆನ್ನುವ ನಿರ್ಧಾರಕ್ಕೆ ದೇಶದ ಸಾಮಾನ್ಯ ಹಾಗೂ ಬಡ ವರ್ಗದವರು ಬರುತ್ತಿದ್ದಾರೆ. ಇಂಧನ ಬಳಕೆಯೇ ದೊಡ್ಡ ಹೊರೆಯಾಗುತ್ತಿರುವ ಕಾರಣ, ಈಗಾಗಲೇ ಇದಕ್ಕೆ ಆಟೋಮೊಬೈಲ್ ಕಂಪನಿಗಳೂ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಹೆಚ್ಚಿನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಕಡೆ ಒಲವು ತೋರುತ್ತಿವೆ. ಇದಕ್ಕೆ ಸರ್ಕಾರವೂ ಹೆಚ್ಚಿನ ಸಹಕಾರ ನೀಡುತ್ತಿದ್ದು, 2030ರ ವೇಳೆಗೆ ತೈಲ ಇಂಧನ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
ತೈಲ ಆಮದು, ಸರ್ಕಾರಕ್ಕೆ ಅನಿವಾರ್ಯ ಆಗಿರುವುದರಿಂದ ಹೇಗೂ ದರ ನಿಗದಿ ವಿಚಾರದಲ್ಲಿ ತಲೆಹಾಕಲು ಸಾಧ್ಯವಿಲ್ಲ. ಇದರಿಂದಾಗಿಯೇ ದೇಶದಲ್ಲಿ ಪೆಟ್ರೋಲಿಯಂ ಉತ್ಪಾದನೆಗಳ ಬೆಲೆ ಗಗನಕ್ಕೇರುತ್ತಿದೆ. ಇದು ನೇರವಾಗಿ ಗ್ರಾಹಕನಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಹೀಗಾಗಿ, ಇಂಧನ ಉಳಿತಾಯವೂ ನಮ್ಮೆಲ್ಲರ ಜವಾಬ್ದಾರಿಗಳಲ್ಲಿ ಒಂದಾಗಿದೆ.
ಬರಲಿದೆ ಮಹೀಂದ್ರಾ ಟ್ರಿಯೋ
ನಿಮಗೇ ಗೊತ್ತಿರುವ ಹಾಗೆ ಭಾರತದಲ್ಲಿ ಮಲ್ಟಿ ಪರ್ಪಸ್ ವಾಹನಗಳು ಬಹುದೊಡ್ಡ ಮಾರುಕಟ್ಟೆ ಹೊಂದಿವೆ. ದೇಶದ ಪ್ರತಿಷ್ಟಿತ ಕಂಪನಿಗಳು ಈಗಾಗಲೇ ಇಂಧನ ಉಳಿಸುವಂಥ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತ ಬಂದಿವೆ. ಮಹೀಂದ್ರಾ ಆಂಡ್ ಮಹೀಂದ್ರಾದ ಎಲೆಕ್ಟ್ರಿಕ್ ವಾಹನಗಳ ಭಾಗ ಈಗಾಗಲೇ ರೆವಾದಂಥ ಮಿನಿ ಕಾರನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ರಸ್ತೆಗಿಳಿಸಿ ಒಂದು ಹಂತದ ಯಶಸ್ಸನ್ನೂ ಗಳಿಸಿದೆ.
ಇದೀಗ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಅಭಿವೃದ್ಧಿ ಪಡಿಸಿರುವ ಮಹೀಂದ್ರಾ, 2020ರ ಆರಂಭದಲ್ಲಿ ಅದನ್ನು ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ. ಆಟೋಕ್ಕೆ ಹೋಲುವ ಈ ವಾಹನಕ್ಕೆ ಟ್ರಿಯೋ ಎಂದು ನಾಮಕರಣ ಕೂಡ ಮಾಡಲಾಗಿದೆ. ದೇಶಾದ್ಯಂತ ತನ್ನದೇ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಬೇಕೆನ್ನುವ ಉದ್ದೇಶ ಹೊಂದಿರುವ ಮಹೀಂದ್ರಾ, ಒಂದು ಹಂತದ ಇನ್‌ಸ್ಟಾಲೇಷನ್ ಅಂದರೆ ಚಾರ್ಜಿಂಗ್ ಪಾಯಿಂಟ್ ಪ್ರತಿಷ್ಠಾಪನೆಯ ಬಳಿಕ ಹೊಸ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಕಂಪನಿ ಈಗಾಗಲೇ ಟ್ರಿಯೋ ವಾಹನವನ್ನು ನವದೆಹಲಿಯಲ್ಲಿ ನಡೆದ ಗ್ಲೋಬಲ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪದರ್ಶನಕ್ಕಿಟ್ಟಿದೆ. ಟ್ರಿಯೋದಲ್ಲಿ ಎರಡು ವೇರಿಯಂಟ್‌ಗಳನ್ನು ಸದ್ಯಕ್ಕೆ ಅಭಿವೃದ್ಧಿ ಪಡಿಸಲಾಗಿದೆ. ಟ್ರಿಯೋ ಯಾರಿ ಇನ್ನೊಂದು ವೇರಿಯಂಟ್ ಆಗಿದೆ.
ಲೀಥಿಯಂ ಅಯಾನ್ ಬ್ಯಾಟರಿ ಬಳಕೆ
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ಯಾಟರಿಗಳಲ್ಲಿರುವಂತೆ ಲೀಥಿಯಂ ಅಯಾನ್ ಬ್ಯಾಟರಿಯನ್ನೇ ಟ್ರಿಯೋ ತ್ರಿಚಕ್ರ ವಾಹನದಲ್ಲಿಯೂ ಬಳಸಿಕೊಳ್ಳಲಾಗಿದೆ. ಎಲೆಕ್ಟ್ರಿಕ್ ಜತೆಗೆ, ಒಂದಿಷ್ಟು ಡಿಜಿಟಲ್ ಆಪರೇಟಿಂಗ್ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ. ಕಂಪನಿ ಲೆಕ್ಕಾಚಾರದ ಪ್ರಕಾರ ಶೇ.50ರಷ್ಟು ವಾಹನ ನಿರ್ವಹಣೆ ಟ್ರಿಯೋದಲ್ಲಿ ಸಾಧ್ಯ. ಇಂಧನ ಉಳಿತಾಯವೇ ಇವುಗಳಲ್ಲಿ ಮಹತ್ವದ್ದಾಗಿದೆ.
ರಾಜ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಸಂಸ್ಥೆ ಎಥೆರ್‌ನ ಎರಡು ಸ್ಮಾರ್ಟ್ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. 340 ಮತ್ತು 450 ಮಾಡೆಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಎರಡು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಿವೆ ಎಂದು ಕಂಪನಿ ಹೇಳಿಕೊಂಡಿದೆ. ನೋಡಲು ಎರಡೂ ಒಂದೇ ವಿನ್ಯಾಸದಲ್ಲಿ ಇದ್ದರೂ, ಶಕ್ತಿ ಉತ್ಪಾದನೆಯಲ್ಲಿ ಈ ಎರಡೂ ಸ್ಕೂಟರ್‌ಗಳದ್ದು ಬೇರೆ ಬೇರೆಯೇ ಆಗಿದೆ.
ಎಲೆಕ್ಟ್ರಿಕ್ ವ್ಯಾಗನ್‌ಆರ್!
ಹೌದು, ಶೀಘ್ರದಲ್ಲಿಯೇ ಮಾರುತಿ ಸುಜುಕಿ ಅವರ ಎಲೆಕ್ಟ್ರಿಕ್ ವ್ಯಾಗನ್‌ಆರ್ ಕಾರು ಅನಾವರಣಗೊಳ್ಳಲಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಈ ಹೊಸ ವಾಹನವು 2020ರಲ್ಲಿ ಬಿಡುಗಡೆ ಆಗಲಿದ್ದು, ಟೊಯೋಟ ವಾಹನ ಸಂಸ್ಥೆಯ ಜತೆಗೂಡಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ ಎಂದೂ ಕಂಪನಿ ತಿಳಿಸಿದೆ. ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಕಾರು ಇದಾಗಿರಲಿದೆ ಎಂದು ಆಟೋಮೊಬೈಲ್ ವಿಶ್ಲೇಷಕರು ಹೇಳುತ್ತಿದ್ದಾರೆ.
ಬೆಲೆ ಹೆಚ್ಚಿಸಿದ ಹೋಂಡಾ
ದೇಶದೆಲ್ಲೆಡೆ ಸೆಪ್ಟೆಂಬರ್ 1ರಿಂದಲೇ ಹೊಸ ವಿಮಾ ನೀತಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಕಂಪನಿ ಹೋಂಡಾ ಮೋಟಾರ್, ತನ್ನ ಉತ್ಪಾದನೆಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ದೀರ್ಘಾವಧಿಯ ವಿಮೆ ಹೊಂದಿರಬೇಕಾದುದು ಕಡ್ಡಾಯವಾಗಿದ್ದರಿಂದ ಹೋಂಡಾ ವಾಹನಗಳ ಬೆಲೆಯನ್ನೇ ಹೆಚ್ಚಿಸಿದೆ. ಇದು ಸಹಜವಾಗಿ ಮಧ್ಯಮ ಮತ್ತು ಮಧ್ಯಮ ಮೇಲ್ವರ್ಗದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಬೈಕ್‌ಗಳ ಮೇಲೆ ಐದು ವರ್ಷಗಳ ಥರ್ಡ್ ಪಾರ್ಟಿ ವಿಮೆ, ಕಾರುಗಳ ಮೇಳೆ ಮೂರು ವರ್ಷಗಳ ಥರ್ಡ್ ಪಾರ್ಟಿ ವಿಮೆ ಕಡ್ಡಾಯಗೊಳಿಸಿರುವುದೇ ಇದಕ್ಕೆ ಕಾರಣವಾಗಿದೆ.
ಗಣಪತಿ ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.