ಈ ರೈತರಿಗೆ ವಿದ್ಯುತ್ ಕೃಷಿಯೇ ಲಾಭಕರ!
Team Udayavani, Feb 12, 2018, 4:00 PM IST
ಕೆಲವರಿಗೆ ಗುಜರಾತ್ ಎಂದರೆ ಅಲರ್ಜಿ. ಕಾರಣ- ಮೋದಿ ಫೋಬಿಯಾ! ಈ ಅಂಶದ ಹೊರತಾಗಿ ಕೂಡ ನಾವು ಗುಜರಾತ್‌ನ ಮಾದರಿಯನ್ನು ಅನುಸರಿಸುವ ದಿನ ಬಂದಿದೆ. ಗುಜರಾತ್‌ನ ರೈತರು ಹೊಸ ವ್ಯವಸಾಯವನ್ನು ಕಳೆದ 20 ತಿಂಗಳಿನಿಂದ ಮಾಡಿದ್ದಾರೆ. ಅದು ಸೌರ ಶಕ್ತಿಯ ವಿದ್ಯುತ್ ಯೂನಿಟ್‌ನ ಬೆಳೆ!
ಗುಜರಾತ್‌ನ ಅಹ್ಮದಾಬಾದ್‌ನಿಂದ 90 ಕಿಮೀ ದೂರದಲ್ಲಿರುವ ಖೇದಾ ಜಿಲ್ಲೆಯ ದುಂಡಿ ಎಂಬ ಗ್ರಾಮದ 9 ರೈತರ ಕಥೆ ಅಥವಾ ಸಾಧನೆ ಮೊನ್ನೆ ಮೊನ್ನೆ ಅರುಣ್ ಜೇಟಿÉ ಅವರ ಕೇಂದ್ರ ಬಜೆಟ್ ಸಂದರ್ಭದಲ್ಲೂ ಪ್ರಸ್ತಾಪವಾಯಿತು. ಮತ್ತೆ ಕೇಂದ್ರದ ಬಿಜೆಪಿ ಸರ್ಕಾರ ಪ್ರಸ್ತಾಪಿಸಿತು ಎಂಬ ಕಾರಣಕ್ಕೆ ಅವಜ್ಞೆ ಸಮ್ಮತವಲ್ಲ. ಇಲ್ಲಿನ ಒಂಭತ್ತು ಜನ ರೈತರು, ಸೇರಿ ದುಂಡಿ ಸೌರ ಊಜಾì ಉತ್ಪಾದಕ್ ಸಹಕಾರಿ ಮಂಡಳಿ ಸ್ಥಾಪಿಸಿಕೊಂಡಿದ್ದಾರೆ. ಪ್ರವೀಣ್ ಪಾರ್ಮರ್ ಎಂಬ ರೈತ ಇದರ ಕಾರ್ಯದರ್ಶಿ. ಈ ರೈತರು ತಮ್ಮ ಹೊಲಗಳಿಗೆ ಬೇಕಾದ ನೀರು ಹಾಯಿಸುವ ಉದ್ದೇಶಕ್ಕೆ ಪೂರಕವಾಗಿ ಸೋಲಾರ್ ಪ್ಯಾನೆಲ್‌ಗಳನ್ನು ಹಾಕಿದ್ದಾರೆ. 56.4 ಕಿ.ವ್ಯಾ ಪೀಕ್ ಅವರ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆ 2016ರ ಮೇ 10ರಿಂದ ಚಾಲನೆಗೊಂಡಿದೆ. 25 ವರ್ಷಗಳ ಒಪ್ಪಂದದ ಅನುಸಾರ ಅಲ್ಲಿನ ಮಧ್ಯ ಗುಜರಾತ್ ವಿಜ್ ಕಂಪನಿ ಎಂಜಿಸಿಎಲ್ ಯೂನಿಟ್‌ಗೆ 4.63ರಂತೆ ಗ್ರಿಡ್‌ಗೆ ವಿದ್ಯುತ್ ಪಡೆಯುತ್ತದೆ.
ನೀರು, ವಿದ್ಯುತ್ ಮಾರಾಟವೇ ಕೃಷಿ!
ಸ್ವಾರಸ್ಯವೆಂದರೆ, ದುಂಡಿಯ ಈ ಕೃಷಿಕರು ಕೃಷಿ ನೀರಾವರಿಗೆಂದು ಸೋಲಾರ್ ಪ್ಯಾನೆಲ್ ಅಳವಡಿಸಿದ್ದರೂ ನೀರಾವರಿಗೆ ಗುಡ್ ಬೈ ಹೇಳಿದ್ದಾರೆ. ಅಲ್ಲಿನ ಒಂದು ಬಿಗಾ ಅಂದರೆ 0.4 ಎಕರೆ ಜಮೀನಿಗೆ ನೀರುಣಿಸಲು 4 ಗಂಟೆ ನೀರು ಕೊಡಬೇಕಾಗುತ್ತದೆ. ಇದಕ್ಕೆ 20 ಯೂನಿಟ್ ವಿದ್ಯುತ್ ಬೇಕು. ಇದೇ ಅವಧಿಯಲ್ಲಿ ನೀರಾವರಿ ಬಂದ್ ಮಾಡಿ ಗ್ರಿಡ್‌ಗೆ ವಿದ್ಯುತ್ ಮಾರಿದರೆ ಕನಿಷ್ಠ 93 ರೂ. ಸಿಗುತ್ತದೆ. ಡೀಸೆಲ್‌ನಲ್ಲಿ ಪಂಪ್ ಓಡಿಸಿದರೂ 4 ಗಂಟೆಗೆ 5 ಲೀಟರ್ ಬೇಕು, 300 ರೂ. ಖಾಲಿ! ಬೆಳೆಯ ಚಂಚಲ ಬೆಲೆ ನೀತಿ, ಪೈರು ಬರುವ ಕ್ರಿಯೆಯ ಇತರ ಸಂಕಷ್ಟದಲ್ಲಿ ವಿದ್ಯುತ್ ಕೊಯ್ಲು ಅಲ್ಲಿನವರನ್ನು ಆಕರ್ಷಿಸಿದೆ. ಅಷ್ಟಕ್ಕೂ ಪ್ರವೀಣ್ ಪಾರ್ಮರ್ ತನ್ನ ಬಾವಿಯಿಂದ ಇತರ ರೈತರಿಗೆ ನೀರನ್ನೂ ಕೂಡ ಸೋಲಾರ್ ವಿದ್ಯುತ್ ಬಳಸಿ ಎತ್ತಿ ಮಾರುತ್ತಿದ್ದಾರೆ. ಅದು ಕೂಡ ಬೆಳೆ ಬೆಳೆಯುವುದಕ್ಕಿಂತ ಲಾಭಕರ!
ಗುಜರಾತ್‌ನಲ್ಲಿ ವಿದ್ಯುತ್ ಯೂನಿಟ್‌ಗೆ ಅಲ್ಲಿನ ವಿದ್ಯುತ್ ಕಂಪನಿ ಕೇವಲ 4.63 ರೂ. ಮಾತ್ರ ಬೆಲೆ ನಿಗದಿ ಮಾಡಿದೆ. ಈ 20 ತಿಂಗಳಲ್ಲಿ ಈ ಸಂಘಟನೆಯ ರೈತರು 98 ಸಾವಿರ ಯೂನಿಟ್ ವಿದ್ಯುತ್ ಮಾರಾಟ ಮಾಡಿ 6.98 ಲಕ್ಷ ರೂ.ಗಳನ್ನು ಖಾತೆಗೆ ಇಳಿಸಿಕೊಂಡಿದ್ದಾರೆ. ಅಲ್ಲಿನ ಕಡಿಮೆ ವಿದ್ಯುತ್ ದರದ ಬಗ್ಗೆ ಕೃಷಿಕರಿಗೆ ಅಸಮಾಧಾನವಿದೆ. ಇದನ್ನೊಂದಿಷ್ಟು ಹೆಚ್ಚಿಸುವ ಅಗತ್ಯವನ್ನು ಸರ್ಕಾರ ಶೀಘ್ರವಾಗಿ ಮಾಡಬೇಕು. ಮತ್ತೆ ಜೇಟಿÉ ಮಾತುಗಳಿಗೆ ಬಂದರೆ, ರಾಜ್ಯ ಸರ್ಕಾರಗಳು ರೈತರ ವಿದ್ಯುತ್ ಕೊಯ್ಲಿಗೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕು. ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2016ರಲ್ಲಿ ದೇಶದಲ್ಲಿ 92.305 ಸೋಲಾರ್ ನೀರಾವರಿ ಪಂಪ್‌ಗ್ಳ ಸ್ಥಾಪನೆಯಾಗಿದೆ. ಇದರಲ್ಲಿ 2015-16ರ ಒಂದು ಸಾಲಿನಲ್ಲಿಯೇ 31,472 ಸೋಲಾರ್ ಪಂಪ್‌ಗ್ಳ ಸ್ಥಾಪನೆಯಾಗಿದೆ. ಸ್ಥಾಪನಾ ವೆಚ್ಚ ಅಧಿಕ ಎಂಬುದನ್ನು ಹೊರತುಪಡಿಸಿದರೆ ಬಿಸಿಲು ಹೊಡೆದಂತೆ ನೀರು ಹೊಡೆಸಲು “ಪವರ್ ಕಟ್’ ಸಮಸ್ಯೆಇಲ್ಲ.
ಸಹಕಾರಿ ತತ್ವದ ಮಾಡೆಲ್ ಬರಲಿ
ಕರ್ನಾಟಕದಲ್ಲಿ ರೂಫ್ಟಾಪ್ ವಿದ್ಯುತ್ ಬೆಲೆ 6.61 ರೂ. ಇದು ಗುಜರಾತ್‌ಗಿಂತ ಸಾಕಷ್ಟು ಉತ್ತಮ. ಇದರ ಪ್ರಯೋಜನವನ್ನು ರೈತರಿಗೆ ಕಲ್ಪಿಸುವ ಕೆಲಸ ಆಗಬೇಕಾಗಿದೆ. ಆದರೆ ಈವರೆಗೆ ಈ ಕುರಿತಾದ ಸಾಮುದಾಯಿಕ ಚಳವಳಿ ನಡೆದ ದಾಖಲೆಗಳು ಸಿಗುವುದಿಲ್ಲ. ಇದೀಗ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವ ಇರಾದೆಯಿಂದ ಖಾಸಗಿಯಾದ, ಜನರ ಸಹಭಾಗಿತ್ವದ ಕಂಪನಿಯೊಂದು ಸಾಗರ ಉಪಭಾಗದ ಕೇಂದ್ರವಾಗಿಸಿಕೊಂಡು ನೋಂದಣಿಯಾಗಿದೆ. ಒಂದು ಉಪವಿಭಾಗೀಯ ವ್ಯವಸ್ಥೆಯನ್ನು ನಿರ್ವಹಿಸುವ ಗುರಿ ಆ ಸಂಸ್ಥೆಗಿದೆ. ವಿದ್ಯುತ್ ಬರ ಇರುವ ಕಾರಣ ನಿರಂತರ ವಿದ್ಯುತ್ ವಿತರಣೆ ಕಷ್ಟ ಇರುವಾಗ ಈ ತರಹದ ವ್ಯವಸ್ಥೆಗಳು ಗುಜರಾತ್‌ನ ದುಂಡಿ ಮಾದರಿಯನ್ನು ಅನುಸರಿಸಬಹುದು.
– ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.