ವಿದ್ಯುತ್ ನಿಯಮಗಳು ಗ್ರಾಹಕನ ಹಿತ ಕಾಯುವವು!
Team Udayavani, Mar 5, 2018, 1:05 PM IST
ಕೆಇಆರ್‌ಸಿ ನಿಯಮಗಳನ್ನು ಪಾಲಿಸದಿರಲು ಎಸ್ಕಾಂಗಳು ಈಗಲೂ ರಂಗೋಲಿ ಕೆಳಗೆ ನುಸುಳುವ ಕೆಲಸವನ್ನು ಮಾಡುತ್ತಿವೆ. ಅಧಿಕೃತ ಲೋಡ್ ಶೆಡ್ಡಿಂಗ್ ದಿನದಲ್ಲಿ ಆರು ಘಂಟೆ ಮೀರುವಂತಿದ್ದರೆ ಗ್ರಾಹಕನ ಮಾಸಿಕ ಸೇವಾ ಶುಲ್ಕ ಅರ್ಥಾತ್ ಮೀಟರ್ ಮಿನಿಮಮ್‌ನಲ್ಲಿ ಸೋಡಿ ಕೊಡಬೇಕು ಎಂಬುದು ಒಂದು ನಿಯಮ.
ಜೂನ್ 2003ರಲ್ಲಿ ನೂತನ ದ್ಯುತ್ಛಕ್ತಿ ಕಾಯ್ದೆ ಜಾರಿಗೆ ಬಂದಿತು. ಈ ಹೊಸ ಕಾಯ್ದೆಯಿಂದಾಗಿ ಅಲ್ಲಿಯವರೆಗೆ ಜಾರಿಯಲ್ಲಿದ್ದ ಎಲ್ಲಾ ವಿದ್ಯುತ್ಛಕ್ತಿ ಕಾನೂನುಗಳು ತೆರೆಮರೆಗೆ ಸರಿದವು. ಗ್ರಾಹಕ ಚಳವಳಿಯ ಪರಿಣಾಮ ಎಂಬಂತೆ ವಿದ್ಯುತ್ ಸೇವೆ ಸುಧಾರಿಸುವ ದೃಷ್ಟಿಯಿಂದ ಹಲವು ಗ್ರಾಹಕ ಕೇಂದ್ರಿತ ಅಂಶಗಳನ್ನು ಈ ಕಾಯ್ದೆಯೊಳಗೆ ಸೇರಿಸಲಾಯಿತು. ಇವುಗಳಿಂದಾಗಿ ಗ್ರಾಹಕರಿಗೆ ವಿದ್ಯುತ್ಛಕ್ತಿ ಸೇವೆಯ ಗುಣಮಟ್ಟ ಹೀಗೆಯೇ ಇರಬೇಕೆಂಬ, ಹಾಗಿರದಿದ್ದರೆ ದಂಡ ಕೇಳಿಪಡೆಯುವ ಹಕ್ಕುಗಳು, ಇನ್ನಿತರ ಹಕ್ಕುಗಳ ಸಿಕ್ಕಿದವು.
ವಿದ್ಯುತ್ಛಕ್ತಿ ಕಾಯ್ದೆಯು ರಾಜ್ಯಗಳ ಮಟ್ಟದಲ್ಲಿ ವಿದ್ಯುತ್ ಕಂಪನಿಗಳ ನಿಗಾ ನೋಡಿಕೊಳ್ಳಲಿರುವ “ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ’ಗಳನ್ನು ಸ್ಥಾಪಿಸುವುದನ್ನು ಕಡ್ಡಾಯ ಮಾಡಿತು. ಮತ್ತು ಈಗಾಗಲೇ ಇದ್ದವನ್ನು ಬಲಪಡಿಸಿತು. ಈ ಕಾಯ್ದೆಯು ವಿದ್ಯುತ್ ದರಗಳ ನಿಷ್ಕರ್ಷೆ ಮಾಡುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಇಂಧನ ಇಲಾಖೆಯಿಂದ ಬೇರ್ಪಡಿಸಿ ಈ ‘ಆಯೋಗ’ಗಳಿಗೆ ಕೊಟ್ಟಿತು. ಇದಲ್ಲದೆ ವಿದ್ಯುತ್ಛಕ್ತಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ನಿಯಮಾವಳಿಗಳನ್ನು ರೂಪಿಸುವ ಮತ್ತು ಆಚರಣೆಗೆ ಹೊರಡಿಸುವ ಅಧಿಕಾರವನ್ನೂ ಇವಕ್ಕೆ ಕೊಡಲಾಯಿತು. ಅಂತಹ ನಿಯಮಾವಳಿಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಂಸ್ಥೆಗಳನ್ನು ರಚಿಸುವ ಜವಾಬ್ದಾರಿಯನ್ನೂ ಅವಕ್ಕೆ ನೀಡಲಾಯಿತು.
ಈಗ ಆಡಿದ್ದೇ ಆಟ ಅಲ್ಲ!
ಈ ಗ್ರಾಹಕ ಸ್ನೇಹಿ ನಿಯಮಗಳು ಬಂದ ನಂತರ ವಿದ್ಯುತ್ ಸರಬರಾಜು ಕಂಪನಿಗಳು ಆಡಿದ್ದೇ ಆಟ ಎಂಬ ಸ್ಥಿತಿ ಇಲ್ಲ. ಕೆಇಆರ್‌ಸಿ ನಿಯಮಗಳನ್ನು ಪಾಲಿಸದಿರಲು ಎಸ್ಕಾಂಗಳು ಈಗಲೂ ರಂಗೋಲಿ ಕೆಳಗೆ ನುಸುಳುವ ಕೆಲಸವನ್ನು ಮಾಡುತ್ತಿವೆ. ಅಧಿಕೃತ ಲೋಡ್ ಶೆಡ್ಡಿಂಗ್ ದಿನದಲ್ಲಿ ಆರು ಘಂಟೆ ಮೀರುವಂತಿದ್ದರೆ ಗ್ರಾಹಕನ ಮಾಸಿಕ ಸೇವಾ ಶುಲ್ಕ ಅರ್ಥಾತ್ ಮೀಟರ್ ಮಿನಿಮಮ್‌ನಲ್ಲಿ ಸೋಡಿ ಕೊಡಬೇಕು ಎಂಬುದು ಒಂದು ನಿಯಮ. ಈ ಅಂಶವನ್ನು ಜಾರಿಗೆ ಒತ್ತಾಯಿಸಿದ ನಂತರ ಆದಾಯ ಕಳೆದುಕೊಳ್ಳಲಿಚ್ಚಿಸದ ಎಸ್ಕಾಂಗಳು ಅಧಿಕೃತ ಪವರ್‌ಕಟ್ ವೇಳಾಪಟ್ಟಿಯನ್ನು ಪ್ರಕಟಿಸುತ್ತಲೇ ಇಲ್ಲ!
ಇಂಧನ ಸಚಿವರು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದರೆ ನಾವು ಗೊಣಗುತ್ತೇವಷ್ಟೇ. ಆರು ಘಂಟೆಗೂ ಮಿಕ್ಕು ವಿದ್ಯುತ್ ಕಡಿತ ಜಾರಿಯಲ್ಲಿರುವ ಅಂಶ ನಮ್ಮ ಗಮನದಲ್ಲಿದ್ದರೂ ನಾವು ರಿಯಾಯಿತಿ ನಿಯಮ ಜಾರಿಗೆ ಒತ್ತಾಯಿಸದಿದ್ದರೆ ಅವರು ಕೈಎತ್ತಿ ಕೊಡುವುದನ್ನು ನಿರೀಕ್ಷಿ$ಸಲಾಗುತ್ತದೆಯೇ? ಇದೊಂದೇ ಅಂತಲ್ಲ, ಸಿಓಎಸ್ ಅಂದರೆ ವಿದ್ಯುತ್ ಕಾಯ್ದೆಯ ಸರಬರಾಜಿನ ವಿವಿಧ ನಿಯಮಗಳು ಜನಪರವಿದೆ. ಅವುಗಳತ್ತ ಒಂದು ನೋಟ ಹರಿಸೋಣ. ಇವುಗಳ ಪಾಲನೆಯಾಗದ ಸಂದರ್ಭದಲ್ಲಿ ನಾವು ಪ್ರತಿಭಟಿಸದಿದ್ದರೆ ಅವುಗಳಿದ್ದೂ ವ್ಯರ್ಥ!
ಕೆಲವೊಮ್ಮೆ ಬಳಕೆಗಿಂತ ಹೆಚ್ಚು ಬಿಲ್ ಪ್ರಮಾದವಶಾತ್ ಆಗಿದೆ ಎಂದಿಟ್ಟುಕೊಳ್ಳೋಣ. ಇಂತಹ ಪ್ರಕರಣಗಳು ಎಸ್ಕಾಂಗಳಲ್ಲಿ ನೂರಾರು. ಈ ರೀತಿ ಅಧಿಕ ಬೇಡಿಕೆಯಿಂದ ಹಣ ಸಂಗ್ರಹಿಸಿರುವುದು ತಿಳಿದುಬಂದ ಒಂದು ತಿಂಗಳ ಒಳಗೆ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್ ಬಡ್ಡಿದರದೊಡನೆ ಗ್ರಾಹಕರಿಗೆ ಹಿಂತಿರುಗಿಸಬೇಕು. ಸದರಿ ಹಿಂಪಾವತಿ 2 ತಿಂಗಳೊಳಗೆ ಆಗದಿದ್ದರೆ ಹೆಚ್ಚುವರಿ ಶೇ. 2ರ ಬಡ್ಡಿದರವನ್ನು ಗ್ರಾಹಕರಿಗೆ ನೀಡಬೇಕು. ಸಿಓಎಸ್‌ನ ಸೆಕ್ಷನ್ 29.08 ಇದನ್ನು ಸ್ಪಷ್ಟಪಡಿಸುತ್ತದೆ.
ಒಂದೊಮ್ಮೆ ಹೆಚ್ಚು ಬಿಲ್ ಆದ ಸಂದರ್ಭದಲ್ಲಿ ಗ್ರಾಹಕ ಕಚೇರಿ ಟೇಬಲ್‌ಗಳಿಗೆ ಅಲೆಯದೆ, ಸ್ಪಷ್ಟವಾಗಿ ಎಸ್ಕಾಂ ನಿಯಮಬಾರವಾಗಿ ಹೆಚ್ಚುವರಿ ಬಿಲ್ ಮಾಡಿದೆ ಎಂಬುದನ್ನು ಪ್ರತಿಪಾದಿಸಿ ಪತ್ರ ಬರೆದು ತಣ್ಣಗೆ ಕುಳಿತುಕೊಳ್ಳಬೇಕು. ತಿಂಗಳು, 2 ತಿಂಗಳ ನಂತರ ಬಡ್ಡಿ, ಚಕ್ರಬಡ್ಡಿಗಳನ್ನು ಕೇಳಬೇಕು. ಇದನ್ನು ವಸೂಲಿಸಿಕೊಂಡ ನಂತರ, ಈ ಹಣ ತಪ್ಪು ಮಾಡಿದ ಅಧಿಕಾರಿಯ ವೇತನದಿಂದ ಕಡಿತಗೊಳ್ಳಬೇಕು. ಈ ಪ್ರಮಾದ ಆ ಅಧಿಕಾರಿಯ ಸೇವಾ ಪುಸ್ತಕದಲ್ಲಿ ದಾಖಲಾಗಬೇಕು ಎಂಬ ತಗಾದೆ ಎತ್ತಬೇಕು. ಈ ಥರದ ಒಂದಿಷ್ಟು ಪ್ರಕರಣಗಳು ನಡೆದರೆ, ತಪ್ಪು ಬಿಲ್ಲಿಂಗ್ ಆಗುವುದು ನಿಲ್ಲುತ್ತದೆ ಎನ್ನಲಾಗದಿದ್ದರೂ, ಗ್ರಾಹಕ ತಪ್ಪಿನ ಬಗ್ಗೆ ಗಮನ ಸೆಳೆದ ತಕ್ಷಣ ತಡಬಡಿಸಿ ಅಧಿಕಾರಿಗಳು ಸರಿಪಡಿಸಲು ಮುಂದಾಗುವುದನ್ನು ನಿರೀಕ್ಷಿಸಬಹುದು!
ಮೀಟರ್ ಹಾಳಾದರೆ ನಮ್ ತಲೆಗೇ!
ಮಾಪಕಗಳ ಸಮಸ್ಯೆಯನ್ನು ಗ್ರಾಹಕರ ತಲೆಗೆ ಕಟ್ಟುವುದು ಹಿಂದಿನಿಂದ ಬಂದ ರೂಢಿ. ಈಗ ಹಾಗಿಲ್ಲ ಅಥವಾ ಹಾಗೆ ಮಾಡುವಂತಿಲ್ಲ. ಮಾಪಕವು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುತ್ತಿದೆ ಎಂದಲ್ಲಿ ಮಾಪಕದಲ್ಲಿ ದಾಖಲಾದ ಹೆಚ್ಚುವರಿ ಬಳಕೆಯ ಬಾಬಿ¤ನ ಹೆಚ್ಚುವರಿ ಬಳಕೆಯನ್ನು ಗ್ರಾಹಕರಿಗೆ ಒಂದು ತಿಂಗಳೊಳಗೆ ಹಿಂತಿರುಗಿಸಬೇಕು. ತಡವಾದಲ್ಲಿ ಂದುರಿಗಿಸಬೇಕಾದ ಮೊತ್ತದ ಮೇಲೆ ಶೇ. ಒಂದರ ಬಡ್ಡಿಯನ್ನು ನೀಡಬೇಕು ಎಂದು ಸರಬರಾಜು ನಿಯಮದ ಸೆಕ್ಷನ್ 27.03(2) ಹೇಳಿದೆ. ಮಾಪಕ ನಿಧಾನ ಗತಿಯಲ್ಲಿ ಚಲಿಸಿದೆ ಎಂದು ಕಂಡುಬಂದಲ್ಲಿ ಯಾ ಮಾಪಕ ಹಾಳಾದಲ್ಲಿ ನಿಧಾನಗತಿಯ ಚಲನೆ ಯಾ ಮಾಪಕ ಹಾಳಾದ ಅವಧಿ ಒಂದು ವರ್ಷ ಮೀರಿದ್ದರೂ ಸರಾಸರಿ ಬಿಲ್ಲಿಂಗ್ 12 ತಿಂಗಳು ಮೀರುವಂತಿಲ್ಲ ಎಂಬುದು ಸಿಓಎಸ್‌ನ ಸೆಕ್ಷನ್ 27.04ರ ಪ್ರತಿಪಾದನೆಯಾಗಿದೆ. ಅಷ್ಟೇಕೆ, ಹಾಳಾದ ಮಾಪಕವನ್ನು 15 ದಿನಗಳ ಅವಧಿಯಲ್ಲಿ ಬದಲಾಯಿಸದಿದ್ದಲ್ಲಿ, ಮೀಟರ್ ಬದಲಾಯಿಸುವವರೆಗೂ ಗ್ರಾಹಕರಿಗೆ ನೀಡಬೇಕಾದ ಬಿಲ್‌ನಲ್ಲಿ ಶೇ. 5ರ ರಿಯಾಯಿತಿಯನ್ನು ಸಿಓಎಸ್‌ನ ಸೆಕ್ಷನ್ 27.04(ñ) ಸೂಚಿಸುತ್ತದೆ.
ಮೀಟರ್ ಸುಟ್ಟಲ್ಲಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಲಾಗುತ್ತದೆ. ಒಂದೊಮ್ಮೆ ಸರಬರಾಜು ಕಂಪನಿಯಿಂದ ಆಗಿರಬಹುದಾದ ತೊಂದರೆಯ ಕಾರಣದಿಂದ ಮೀಟರ್ ಸುಟ್ಟಿದ್ದಲ್ಲಿ ಗ್ರಾಹಕ ಹೊಸ ಮೀಟರ್ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ಈ ಲ್ಯಾಬ್ ವರದಿ ಬರುವುದೇ ಇಲ್ಲ. ಜನ ಮುಂಗಡವಾಗಿ ಕಟ್ಟುವ ಮೀಟರ್ ಶುಲ್ಕ ಬಗರ್‌ಹುಕುಂ ಸಕ್ರಮದಂತಾಗುತ್ತದೆ. ಆದರೆ ಸರಬರಾಜು ನಿಯಮದ ಸೆಕ್ಷನ್ 28.00(5) ಪ್ರಕಾರ, ಸುಟ್ಟುಹೋದ ಮಾಪಕದ ಪರೀûಾ ಫಲಿತಾಂಶವನ್ನು ಕೇವಲ 7 ದಿನಗಳಲ್ಲಿ ಪ್ರಯೋಗಾಲಯ ನೀಡಬೇಕು ಎಂದಿದೆ. ಕೊಟ್ಟಿಲ್ಲ ಎಂದರೆ ತಪ್ಪು ನನ್ನದಲ್ಲ ಎಂದು ಗ್ರಾಹಕ ಪ್ರತಿಪಾದಿಸಲು ಮುಕ್ತ ಅವಕಾಶ ಸಿಕ್ಕಂತೆ. ಬಳಸಿಕೊಳ್ಳುವವರು ಬೇಕಾಗಿದ್ದಾರೆ!
ಬಿಲ್ ಪಾವತಿಯಲ್ಲಿ ಶೀಘ್ರ ಪಾವತಿಗೆ ಮತ್ತು ಇಸಿಎಸ್ ಪಾವತಿಗೆ ಶೇ. 0.25ರಷ್ಟು ಬಿಲ್‌ನಲ್ಲಿ ರಿಯಾಯಿತಿ ಕೊಡಲು ಸೆಕ್ಷನ್ 29.04(ಜಿ) ಆಫ್ ಸಿಓಎಸ್ ಹೇಳಿರುವುದು ಉಲ್ಲೇಖಾರ್ಹ. ಅದೇ ರೀತಿ ಸೆಕ್ಷನ್ 29.05(2) ಮತ್ತು 29.06(ಇ) ಅನ್ವಯ 10 ರೂ. ಮತ್ತು ಅದಕ್ಕಿಂತ ಕಡಿಮೆ ಬಾಕಿ ಉಳಿದಿದ್ದರೆ ಅದಕ್ಕೆ ಬಡ್ಡಿ ಹಾಕುವಂತಿಲ್ಲ ಮತ್ತು ಸಂಪರ್ಕ ಸ್ಥಗಿತವಿಲ್ಲ. ಗ್ರಾಹಕರೇ ಮಾಪಕವನ್ನು ಕೊಂಡು ಅಳವಡಿಸಲು ಅನುವು ಮಾಡುವುದರಿಂದ ಮೀಟರ್ ಸೆಕ್ಯುರಿಟಿ ಠೇವಣಿ ಪಾವತಿಸಬೇಕಿಲ್ಲ.
ವಿದ್ಯುತ್ ಸಂಪರ್ಕ ನೀಡುವಲ್ಲಿ ಕಾಲಮಿತಿಯನ್ನು ಪ್ರಸ್ತಾಪಿಸಲಾಗಿದೆ. ಸರ್ವೀಸ್ ಮೈನ್‌ನಿಂದಾದಲ್ಲಿ 30 ದಿನಗಳ ಅವಧಿಯಲ್ಲಿ, ಲೈನ್ ವಿಸ್ತರಣೆ ಇದ್ದ ಸಂದರ್ಭಗಳಲ್ಲಿ ಎಲ್‌ಟಿ ಪೂರೈಕೆಗೆ 45 ದಿನ,11 ಕೆ ಹೆಚ್‌ಟಿ ಪೂರೈಕೆಗೆ 60 ದಿನ, 33 ಕೆ ಹೆಚ್‌ಟಿ ಪೂರೈಕೆಗೆ 90 ದಿನ,ಇಹೆಚ್‌ಟಿ ಪೂರೈಕೆಗೆ 180 ದಿನ ಹೇಳಲಾಗಿದೆ. ತತ್ಕಾಲ್ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವಿಕೆಗೆ 8 ದಿನದ ಅವಧಿ, ವರ್ಗಾವಣೆ ಯಾ ಹೆಸರು ಬದಲಾವಣೆಗೆ 7 ದಿನದ ಅವಧಿ ನಿಗದಿಪಡಿಸಲಾಗಿದೆ. ಕಾಲಮಿತಿಯಲ್ಲಿ ಕಾರ್ಯನಿರ್ವಹಣೆಯಾಗದಿದ್ದಲ್ಲಿ ಗ್ರಾಹಕರಿಗೆ ದಂಡ ರೂಪದ ಪರಿಹಾರ ಕೊಡಬೇಕಾಗುತ್ತದೆ.
ಉದಾಹರಣೆಗೆ 8 ದಿನಗಳಲ್ಲಿ ಸಂಪರ್ಕ ಕೊಡಲಾಗದಿದ್ದಲ್ಲಿ ತತ್ಕಾಲ್ ಯೋಜನೆ ಸಂಪರ್ಕಕ್ಕಾಗಿ ಪಾವತಿಸಿದ ಹಣದ ಂಪಾವತಿ ಜೊತೆಗೆ ಹೆಚ್ಚುವರಿ ಒಂದು ಸಾರ ರೂ. ದಂಡ ಪರಿಹಾರವನ್ನು ಎಸ್ಕಾಂ ಕೊಡಬೇಕು!
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.