ಎಂಜನಿಯರ್ ಚಿತ್ತ ಸಾವಯವದತ್ತ
Team Udayavani, Jun 19, 2017, 5:39 PM IST
ವೃತ್ತಿಯಿಂದ ಸಾಪ್ಟ್ವೇರ್ ಎಂಜನಿಯರ್. ಬಿಡುವಿನ ವೇಳೆಯಲ್ಲಿ ಈ ನಾಗರಾಜ್ ಖುಷಿ ಪಡುವುದು ತಮ್ಮ ಹೆಸರುಘಟ್ಟದ ಸಾವಯವ ತರಕಾರಿ ತೋಟದಲ್ಲಿ. ಬೆಂಗಳೂರಿನ ತಮ್ಮ ಮನೆಯಿಂದ 20ಕಿ.ಮೀ ದೂರದಲ್ಲಿದೆ ತೋಟ. ನಾಗರಾಜ್ ಅವರದು ನಾಲ್ಕು ಎಕರೆ ತೋಟ.
ನಾಗರಾಜ್ ಅವರು ಮೂಲತ ಕೃಷಿ ಕುಟುಂಬದಿಂದ ಬರದೇ ಇದ್ದರೂ ತಮ್ಮ ಕಾಲೇಜು ಜೀವನದಲ್ಲಿಯೇ ಬೇರೆಯವರ ಭೂಮಿಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಬಿ.ಎಸ್.ಸಿ ಕೃಷಿ ಪದವಿ ಮಾಡಬೇಕೆಂಬ ಕನಸನ್ನು ಹೊತ್ತರೂ ಅದು ಫಲಿಸದೇ ಬಿ.ಇ ಪದವಿ ಮುಗಿಸಿ ಬೆಂಗಳೂರಲ್ಲಿ ಎಂಜನೀಯರ್ ಆಗಿ ಕಳೆದ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ನಾಗರಾಜ್ ವಾರದಲ್ಲಿ ಶನಿವಾರ ಒಂದು ದಿನ ಪೂರ್ತಿ ಹಾಗೂ ನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಫಾರ್ಮ್ನಲ್ಲಿ ನೀರು ಹರಿಸುತ್ತಾರೆ. ಕಳೆ ಕೀಳುವ ಕೆಲಸದಲ್ಲಿ ತಲ್ಲೀನರಾಗುತ್ತಾರೆ. 4 ಎಕರೆಯಲ್ಲಿ 1,000 ಹೂಕೋಸು, ಒಂದೂವರೆ ಎಕರೆಯಲ್ಲಿ ಬೆಂಡೆ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಉಳಿದಂತೆ ಕ್ಯಾರೆಟ್, ಹಾಗಲಕಾಯಿ, ಹೀರೆಕಾಯಿ, ನುಗ್ಗೆಕಾಯಿ, ಉರುಳಿಕಾಯಿ ,ಮೆಂತ್ಯ ಹಾಗೂ ದಂಟಿನ ಸೊಪ್ಪು, ಕೊತ್ತಂಬರಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ವರ್ಷಕ್ಕೆ ಖರ್ಚು ಎಲ್ಲಾ ಖರ್ಚು ತೆಗೆದರೂ 2 ಲಕ್ಷ ರೂಗಳ ನಿವ್ವಳ ಆದಾಯ.
ಕಳೆದ ಐದು ವ‚ರ್ಷಗಳಿಂದ ಬಾದಾಮಿ, ಮಲ್ಲಿಕಾ, ರಸಪುರಿ 200 ಮಾವು, 15 ಸಪೊಟಾ, 5 ಸೀತಾಫಲ, 20 ನುಗ್ಗೆ, 10 ಹಲಸು, 7 ನೆಲ್ಲಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಎಲ್ಲ ಹಣ್ಣುಗಳ ಫಸಲಿನಿಂದ ವರ್ಷಕ್ಕೆ 2 ಲಕ್ಷ ರೂ. ಆದಾಯ ಬರುತ್ತಿದೆ. ಮಾವು ಫಸಲು ಬರುವ ಸಂದರ್ಭದಲ್ಲಿ ಕುಂಬಳ ಬೆಳೆ ಬೆಳೆಯುತ್ತಾರೆ.
ಎರಡು ಸೀಮೆ ಹಸುವಿನಿಂದ ಬೆಳಗ್ಗೆ ಸಂಜೆ 10 ಲೀಟರ್ ಹಾಲು ನೀಡುತ್ತಿದೆ. ಇದರಿಂದ ತಿಂಗಳಿಗೆ 30 ಸಾವಿರ ರೂಗಳ ಆದಾಯ ದೊರೆಯುತ್ತಿದೆ.
ಜೊತೆಗೆ ಸಗಣಿ, ಅರಿಷಿಣ, ಗಂಜಲಾ ಹಾಗೂ ಬೇವಿನೆಣ್ಣೆಗಳನ್ನು ಸೇರಿಸಿ ಜೀವಾಮೃತ ತಯಾರಿಸುತ್ತಾರೆ. ಗಿಡ ಚಿಕ್ಕದಿದ್ದಾಗ, ಹೂ ಬಿಡುವ ಸಮಯದಲ್ಲಿ ಹಾಗೂ ಕಾಯಿ ಬಿಡುವ ಸಂದರ್ಭದಲ್ಲಿ ಜೀವಾಮೃತ ಹೊರತು ಪಡಿಸಿ ಯಾವುದೇ ರಾಸಾಯನಿಕ ಔಷಧಗಳನ್ನು ಸಿಂಪಡಿಸುವುದಿಲ್ಲ. ಮೂರು ಇಂಚಿನ ಬೋರವೆಲ್ ನಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸುತ್ತಾರೆ.
ಇನ್ನೊಂದು ವಿಶೇಷ ಎಂದರೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ ಇವರು ಬೆಂಗಳೂರಿನ ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್‌ಗಳ ಸುಮಾರು 100 ಮಧ್ಯಮ ವರ್ಗ ಕುಟುಂಬಗಳಿಗೆ ಹಾಪ್ ಕಾಮ್ಸ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ವ್ಯಾಟ್ಸ್ ಆಫ್ ಗುಂಪು ಸಹ ಮಾಡಿಕೊಂಡಿದ್ದಾರೆ. “ಮಧ್ಯಮ ವರ್ಗದ ಜನರಿಗೆ ವಿಷರಹಿತ ಶುದ್ಧ ತರಕಾರಿ ಹಾಗೂ ಹಣ್ಣು ತಲುಪಿಸುವ ಮಹಾದಾಸೆ ನನ್ನದು’ ಎನ್ನುತ್ತಾರೆ ನಾಗರಾಜ್.
– ಗುರುರಾಜ.ಬ.ಕನ್ನೂರ.ಆರೂಢನಂದಿಹಾಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.