ಅಂಗೈಯಲ್ಲಿ ಮನರಂಜನೆ
ಟಿವಿ. V/s ಇಂಟರ್ನೆಟ್
Team Udayavani, Aug 12, 2019, 6:23 AM IST
ಹಿಂದೆಲ್ಲಾ ಒಂದು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವ ಜರೂರತ್ತಿತ್ತು. ಟಿ.ವಿಯ ಆವಿಷ್ಕಾರದ ನಂತರ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಸಿನಿಮಾ ನೋಡಲು ಊರ ಮಂದಿಯೆಲ್ಲಾ ಟಿ.ವಿ. ಇರುತ್ತಿದ್ದ ಒಂದು ಮನೆಯಲ್ಲಿ ಕಿಕ್ಕಿರಿದು ನೆರೆಯುತ್ತಿದ್ದರು. ಮಹಾಭಾರತ, ರಾಮಾಯಣ, ಚಾಣಕ್ಯ ಧಾರಾವಾಹಿಗಳನ್ನು ನೋಡಲು ತಮ್ಮ ಮನೆಯ ಕೆಲಸಗಳನ್ನೆಲ್ಲಾ ಬೇಗನೆ ಮುಗಿಸಿಕೊಂಡು ಧಾರಾವಾಹಿ ಪ್ರಸಾರದ ಸಮಯಕ್ಕೆ ಸರಿಯಾಗಿ ಪಕ್ಕದ ಮನೆಯ ಟಿ.ವಿ ಮುಂದೆ ಹಾಜರಿರುತ್ತಿದ್ದರು. ಆದರೆ ಇಂದು ಥಿಯೇಟರ್‌ನಲ್ಲಿ ತೆರೆಕಂಡ ಭರ್ಜರಿ ಸಿನಿಮಾವೊಂದು ತಿಂಗಳಲ್ಲೇ, ಕೆಲವಂತೂ ವಾರದಲ್ಲೇ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿವೆ.
ಇಂಟರ್‌ನೆಟ್ ಯುಗದಲ್ಲಿ ಟಿ.ವಿ.ಯ ಸ್ಥಾನವನ್ನು ಓಟಿಟಿ (ಓವರ್ ದಿ ಟಾಪ್) ಮನರಂಜನಾ ವ್ಯವಸ್ಥೆ ಕಸಿದುಕೊಳ್ಳುತ್ತಿದೆ. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಝೀ5 ಇವೆಲ್ಲವೂ ಓಟಿಟಿ ವಿಭಾಗದಡಿ ಬರುತ್ತದೆ. ಅಂಕಿ ಅಂಶಗಳ ಪ್ರಕಾರ ಕಳೆದ ಕೆಲ ವರ್ಷಗಳಲ್ಲಿ ಮನರಂಜನೆಗಾಗಿ ಟಿ.ವಿ.ಯನ್ನು ಅವಲಂಬಿಸಿದ್ದ 15 ಶೇ.ರಷ್ಟು ಮಂದಿ ಇಂಟರ್‌ನೆಟ್‌ನ ಓಟಿಟಿ ಗೆ ಶಿಫಾrಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನ ಭರಾಟೆ ನಡುವೆ, ಭಾರತದ ಓಟಿಟಿ ಸಂಸ್ಥೆ ಹಾಟ್‌ಸ್ಟಾರ್ ಈಗಾಗಲೇ 30 ಕೋಟಿ ಚಂದಾದಾರರನ್ನು ಸಂಪಾದಿಸಿರುವುದು ಮನರಂಜನಾ ಉದ್ಯಮದಲ್ಲಿ ಬದಲಾಗುತ್ತಿರುವ ಶಕೆಗೆ ಹಿಡಿದ ಕೈಗನ್ನಡಿಯಾಗಿದೆ. ಜಗತ್ತಿನ ಹೆಸರಾಂತ ಉದ್ಯಮಿಗಳು, ಸಂಸ್ಥೆಗಳು ಓಟಿಟಿಯಲ್ಲಿ ಹೂಡಿಕೆ ಮಾಡುತ್ತಿರುವುದು ಭವಿಷ್ಯದಲ್ಲಿ ಅದರ ಸ್ಥಾನ ಉಜ್ವಲವಾಗಲಿದೆ ಎನ್ನುವುದರ ಸಂಕೇತ ಎಂದು ತಿಳಿಯಬಹುದು.
ಭಾರತದಲ್ಲಿ ಲಭ್ಯವಿರುವ ಓಟಿಟಿ ಆನ್‌ಲೈನ್ ಪ್ಲಾಟ್‌ಫಾರಂ ಗಳಲ್ಲಿ ಪ್ರಮುಖವಾದವು ಇಲ್ಲಿವೆ
1. ನೆಟ್‌ಫ್ಲಿಕ್ಸ್- 800 ರು. ತಿಂಗಳಿಗೆ
2. ಅಮೆಜಾನ್ ಪ್ರೈಮ್- 999 ರು. ವರ್ಷಕ್ಕೆ
3. ಹಾಟ್‌ಸ್ಟಾರ್- 999 ರು. ವರ್ಷಕ್ಕೆ
4. ವೂಟ್- ಉಚಿತ
5. ಝೀ5- 999 ರು. ವರ್ಷಕ್ಕೆ
6. ಇರೋಸ್ ನೌ- 99 ರು. ತಿಂಗಳಿಗೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.