![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 20, 2020, 5:15 AM IST
– ದೀರ್ಘ ಕಾಲ ಲ್ಯಾಪ್‌ಟಾಪನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದರಿಂದ ಲ್ಯಾಪ್‌ಟಾಪ್‌ನ ಆಂತರಿಕ ಭಾಗಗಳು ಬಹಳ ಬೇಗ ಹೀಟ್ ಆಗುತ್ತವೆ. ಹೇಗೆಂದರೆ ಒಳಗಡೆ ಗಾಳಿಯಾಡಲಿ ಎಂದು ನೀಡಿರುವ ವೆಂಟ್‌ಗಳು ಲ್ಯಾಪ್‌ಟಾಪ್‌ನ ಅಡಿ ಇರುತ್ತವೆ. ಆದ್ದರಿಂದ ಲ್ಯಾಪ್‌ಟಾಪನ್ನು ಸಮತಟ್ಟಾದ ಜಾಗದಲ್ಲಿ ಇಟ್ಟು ಕೆಲಸ ಮಾಡಬೇಕು.
– ಲ್ಯಾಪ್‌ಟಾಪನ್ನು ಶಟ್‌ಡೌನ್ ಮಾಡದೆ, ಸ್ಲಿàಪ್ ಮೋಡ್‌ನಲ್ಲಿ ಹಾಕುವುದರಿಂದ ಆನ್ ಮಾಡುವಾಗ ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ನಿಜ. ಆದರೆ ಆಗಾಗ್ಗೆ ಶಟ್‌ಡೌನ್ ಅಥವಾ ರೀಸ್ಟಾರ್ಟ್ ಮಾಡುತ್ತಿರಬೇಕಾಗುತ್ತದೆ. ಇದರಿಂದ ಅಪ್‌ಡೇಟ್‌ಗಳು, ಸಾಫ್ಟ್ವೇರ್ ರಿಪೇರಿ ಕೆಲಸಗಳು ಪೂರ್ತಿಯಾಗುತ್ತವೆ.
– ತೆರೆದಿಟ್ಟ ಲ್ಯಾಪ್‌ಟಾಪನ್ನು ಎತ್ತಿಕೊಳ್ಳುವಾಗ ಸ್ಕ್ರೀನನ್ನು ಹಿಡಿದೆತ್ತಬಾರದು ಕೀಬೋರ್ಡ್ ಇರುವ ಭಾಗದಿಂದಲೇ ಹಿಡಿದೆತ್ತಬೇಕು. ಇದರಿಂದ ಸ್ಕ್ರೀನ್ ಮತ್ತು ಕೆಳಭಾಗದ ನಡುವಿನ ಜಾಯಿಂಟ್ ಲೂಸಾಗಿ ಹೋಗಬಹುದು.
– ಲ್ಯಾಪ್‌ಟಾಪನ್ನು ಒಂದೆಡೆಯಿಂದ ಇನ್ನೊಂದೆಡೆ ಒಯ್ಯುವಾಗ ಬ್ಯಾಗಿನಲ್ಲಿ ಲ್ಯಾಪ್‌ಟಾಪ್ ಇಡಲೆಂದೇ ಇರುವ ಪಾಕೆಟ್ ಇದ್ದರೆ ಅದರೊಳಗೆ ಇಡಿ. ಅದಿಲ್ಲದೇ ಇದ್ದರೆ ಕುಷನ್, ಪ್ಯಾಡೆಡ್ ಇರುವ ಜಾಗದಲ್ಲಿಡಿ.
– ಲ್ಯಾಪ್‌ಟಾಪ್ ಆನ್ ಮಾಡಿದಾಗ ಶುರುವಿನಲ್ಲೇ ಒಂದಷ್ಟು ಪ್ರೋಗ್ರಾಮ್‌ಗಳು ತನ್ನಷ್ಟಕ್ಕೇ ಶುರುವಾಗುತ್ತವೆ. ಇವನ್ನು ಸ್ಟಾರ್ಟಪ್ ಪ್ರೋಗ್ರಾಮುಗಳು ಎನ್ನುತ್ತಾರೆ. ಅವುಗಳಲ್ಲಿ ಅನವಶ್ಯಕವಾದವೂ ಸೇರಿಕೊಂಡರೆ ಸಿಸ್ಟಮ್‌ನ ಕಾರ್ಯಕ್ಷಮತೆ ಕುಗ್ಗುತ್ತದೆ.
– ಬ್ರೌಸರ್‌ನಲ್ಲಿ ಹತ್ತಿಪ್ಪತ್ತು ಟ್ಯಾಬ್‌ಗಳನ್ನು ಏಕಕಾಲದಲ್ಲಿ ತೆರೆದಿಟ್ಟುಕೊಳ್ಳುವುದು, ಅದೇ ಸಮಯಕ್ಕೆ ಅಷ್ಟೇ ಸಂಖ್ಯೆಯ ವಿಂಡೋಗಳನ್ನು ತೆರೆದಿಟ್ಟುಕೊಳ್ಳುವುದು. ಹೀಗೆ ಮಾಡುವುದರಿಂದ ಪ್ರಾಸೆಸರ್ ಮತ್ತು ಮೆಮೋರಿ ಮೇಲೆ ಅನವಶ್ಯಕ ಹೊರೆ ಬೀಳುತ್ತದೆ. ಅಗತ್ಯವಿರುವಷ್ಟೇ ವಿಂಡೋಗಳನ್ನು ತೆರೆದಿಟ್ಟುಕೊಂಡು ಬೇಡದಿದ್ದಾಗ ಕ್ಲೋಸ್ ಮಾಡಿಬಿಡಬೇಕು.
– ಲ್ಯಾಪ್‌ಟಾಪ್ ಒಯ್ಯುವಾಗ ಒರಟಾಗಿ ಬಳಸಬಾರದು. ಸ್ಮಾರ್ಟ್‌ಫೋನನ್ನು ಕೈಯಲ್ಲಿ ಹಿಡಿದು ಅತ್ತಿತ್ತ ಜೋರಾಗಿ ಅಲುಗಾಡಿಸಿದರೆ ಒಳಗಿರುವ ಬಿಡಿಭಾಗಗಳಿಗೆ ಏನೂ ಹಾನಿಯಾಗುವುದಿಲ್ಲ. ಆದರೆ ಲ್ಯಾಪ್‌ಟಾಪ್‌ನ ಒಳಗೆ ಹಾರ್ಡ್ ಡಿಸ್ಕ್ನಂಥ ಸೂಕ್ಷ್ಮ ಬಿಡಿಭಾಗಗಳು ಹಲವಾರಿವೆ. ಅವುಗಳಿಗೆ ಹಾನಿಯಾಗಬಹುದು.
You seem to have an Ad Blocker on.
To continue reading, please turn it off or whitelist Udayavani.