ಎಲ್ಲರಿಗೂ ಬೇಕು ಮಾಲೂರು ಸಮೋಸ


Team Udayavani, Jun 3, 2019, 6:00 AM IST

z-5

ಮಧ್ಯಾಹ್ನ ಎರಡು ಗಂಟೆಗೆ ಮಾಲೂರಿನ ಮಾರುತಿ ಬಡಾವಣೆಯಲ್ಲಿರುವ ನಂಜಮ್ಮ ಆಸ್ಪತ್ರೆ ಮುಂಭಾಗದ ರಸ್ತೆಗೆ ಬಂದ್ರೆ ಸಾಕು ಸಮೋಸದ ಗಮಲು ಬೇಕರಿ ಅಬ್ದುಲ್‌ ರಶೀದ್‌ ಅವರ ಮನೆಯತ್ತ ತಿರುಗುವಂತೆ ಮಾಡುತ್ತದೆ. ಅಲ್ಲಿ ಎರಡು ಟ್ರೇನಲ್ಲಿ ಆಗತಾನೆ ಕರಿದ ಬಿಸಿ ಬಿಸಿಯಾದ, ಗರಿ ಗರಿಯಾದ ಸಮೋಸಗಳು ಕಣ್ಮನ ಸೆಳೆಯುತ್ತವೆ. ಬಾಯಿ ಚಪ್ಪರಿಸುವಂತೆ ಮಾಡುತ್ತವೆ.

ಅಬ್ದುಲ್‌ ರಶೀದ್‌, ಮೂಲತಃ ಬೇಕರಿ ತಿಂಡಿಗಳ ತಯಾರಕರು. 35 ವರ್ಷಗಳಿಂದ ಮಾಲೂರಿನ ಬಹುತೇಕ ಅಂಗಡಿ, ಬೇಕರಿ, ಹೋಟೆಲ್‌ಗ‌ಳಲ್ಲಿ ಇವರು ತಯಾರಿಸಿದ ಸಿಹಿ ತಿಂಡಿ, ಕರಿದ ಐಟಂಗಳನ್ನು ಮಾರಾಟ ಮಾಡಲಾಗುತ್ತದೆ. ಮನೆಯಲ್ಲೇ ಬ್ರೆಡ್‌, ಬಿಸ್ಕೆಟ್‌, ವರ್ಕಿ, ದಿಲ್‌ಪಸಂದ್‌ ಹೀಗೆ ತರಹೇವಾರಿ ಸಿಹಿ ತಿಂಡಿಗಳನ್ನು ತಯಾರಿಸಿ ಮಾಲೂರು ಪಟ್ಟಣದ ಬೇಕರಿ, ಕಾಂಡಿಮೆಂಟ್ಸ್‌, ಟೀ ಸ್ಟಾಲ್‌ ಸೇರಿ ಸುತ್ತಮುತ್ತಲ ಹಳ್ಳಿಯ ಅಂಗಡಿಗಳಿಗೆ ಹೋಲ್‌ಸೆಲ್‌ ದರದಲ್ಲಿ ಮಾರಾಟ ಮಾಡ್ತಾರೆ.

ಸಮೋಸ ತಯಾರಿ ಆರಂಭ:
ಮೊದಲು ಬೇಕರಿ ತಿಂಡಿ ಗಷ್ಟೇ ಸೀಮಿತವಾಗಿದ್ದ ರಶೀದ್‌ಗೆ, ಪಟ್ಟಣದಲ್ಲಿ ಉತ್ತಮ ಸಮೋಸ ತಯಾರಿಕರು ಯಾರೂ ಇಲ್ಲ ಎಂಬುದು ಗಮನಕ್ಕೆ ಬಂತು. 12 ವರ್ಷಗಳ ಹಿಂದೆ ಹಲವರ ಬೇಡಿಕೆ ಮೇರೆಗೆ ರಂಜಾನ್‌ ಪ್ರಾರಂಭಕ್ಕೂ ಒಂದು ತಿಂಗಳ ಮೊದಲು ಸಮೋಸ ತಯಾರಿಸಿ ಇತರೆ ಹೋಟೆಲ್‌, ಬೀದಿಬದಿ ಅಂಗಡಿಗಳಿಗೆ ನೀಡುವುದರ ಜೊತೆಗೆ ಮನೆಯ ಮುಂದೆಯೂ ಮಾರಾಟ ಮಾಡಲು ಆರಂಭಿಸಿದರು. ಈಗ ರಂಜಾನ್‌ ಬಂದರೆ ಸಾಕು; ಬೆಳಗ್ಗಿನಿಂದ ರಾತ್ರಿಯವರೆಗೂ ಸಮೋಸ ತಯಾರಿಸುವುದೇ ಒಂದು ಉದ್ಯೋಗವಾಗಿ ಪರಿಣಮಿಸಿದೆ. ಇಬ್ಬರು ನೌಕರರು ಈಗ ಖಾಯಂ ಆಗಿ ಮನೆಯ ಮುಂದೆಯೇ ಸ್ಟಾಲ್‌ ತೆರೆದು ಅಲ್ಲೇ ಕರಿದು ಗ್ರಾಹಕರಿಗೆ ಬಿಸಿ ಬಿಸಿಯಾದ ಸಮೋಸ ಮಾಡಿ ಕೊಡುತ್ತಾರೆ. ಇದರ ಜೊತೆಗೆ ಬೇಕರಿ ಸಿಹಿ ತಿಂಡಿಗಳನ್ನೂ ಮಾರಾಟ ಮಾಡ್ತಾರೆ.

ನಿತ್ಯ ಸಂಜೆ ಟೀ ಜೊತೆಗೆ ಬಿಸಿ ಬಿಸಿಯಾದ, ಬಗೆ ಬಗೆಯ ಸಮೋಸಗಳು ಗ್ರಾಹಕರ ಜಿಹ್ವಾ ಚಾಪಲ್ಸವನ್ನು ತಣಿಸುತ್ತಿವೆ. ಬೇರೆ ಕಡೆಗಳಲ್ಲಿ ಈರುಳ್ಳಿ, ಮೊಟ್ಟೆ, ಚಿಕನ್‌ ಹೀಗೆ ವಿವಿಧ ಸ್ವಾದಗಳಲ್ಲಿ ಸಮೋಸ ತಯಾರಿಸಲಾಗುತ್ತದೆ. ಆದರೆ, ರಶೀದ್‌ ಅವರು ಸಸ್ಯಹಾರಿ ಸಮೋಸಗಳನ್ನು ಮಾತ್ರ ಮಾಡುತ್ತಾರೆ.

ಸದ್ಯ ಅಬ್ದುಲ್‌ ರಶೀದ್‌ಗೆ ವಯಸ್ಸಾಗಿರುವ ಕಾರಣ ಅವರ ಮಕ್ಕಳಾದ ಆಸೀಬ್‌ ಅಹಮದ್‌, ಹಸೀಬ್‌ ಅಹಮದ್‌ ಈಗ ಬೇಕರಿ ತಯಾರಿ ನೋಡಿಕೊಳ್ಳುತ್ತಿದ್ದಾರೆ. ಇವರ ತಾಯಿ ದಿಲ್‌ಶಾದ್‌ ಬೇಗಂ, ನಸೀಮಾ, ಸಲ್ಮಾಂ ಸಮೋಸ, ತಿಂಡಿಗಳ ತಯಾರಿಕೆಗೆ ಸಹಕಾರ ನೀಡುತ್ತಾರೆ. ಬೇರೆ ಕಡೆ 10 ರೂ.ರಿಂದ 15 ರೂ.ವರೆಗೂ ಮಾರಾಟವಾಗುವ ಸಮೋಸಗಳು, ಇಲ್ಲಿ ಕೇವಲ ಎಂಟು ರೂ.ಗೆ ಸಿಗುತ್ತವೆ.

ಈ ವರ್ಷದಿಂದ ಸ್ಟಾಲ್‌ ಆರಂಭ:
ಸದ್ಯ ರಂಜಾನ್‌ ತಿಂಗಳ ಹಿಂದೆ ಮುಂದೆ ಎರಡು ತಿಂಗಳು ಮಾತ್ರ ಮನೆಯ ಮುಂದೆ ಸ್ಟಾಲ್‌ ತೆರೆದು ಸಮೋಸ ಮಾರಾಟ ಮಾಡುತ್ತೇವೆ ಎನ್ನುವ ಆಸೀಬ್‌, ಮದುವೆ, ಸಭೆ, ಸಮಾರಂಭಗಳಿಗೂ ಸಮೋಸ ಮಾಡಿಕೊಡುತ್ತೇವೆ. ಮೊದಲಿಂದ ನಮ್ಮಲ್ಲಿ ಬೇಕರಿ ತಿಂಡಿ ಖರೀದಿಸುವ ತಿಂಡಿಪ್ರಿಯರು ವರ್ಷಪೂರ್ತಿ ಸಮೋಸ ಮಾಡುವಂತೆ ಒತ್ತಡ ಹಾಕುತ್ತಿದ್ದು, ಮಾಲೂರಲ್ಲೇ ಒಳ್ಳೆ ಜಾಗ ನೋಡಿ ಸ್ಟಾಲ್‌ ತೆರೆಯುತ್ತೇವೆ. ಗ್ರಾಹಕರು, ಬೇಕರಿ ತಿಂಡಿ ಜೊತೆ ಸಮೋಸವನ್ನೂ ಮನೆಗೆ ಪಾರ್ಸಲ್‌ ಕೊಂಡೊಯ್ಯುತ್ತಾರೆ. ಈಗ ಪ್ರತಿದಿನ 2000 ಸಾವಿರ ಸಮೋಸ ಖರ್ಚಾಗುತ್ತಿವೆ ಎನ್ನುತ್ತಾರೆ ಆಸೀಬ್‌.

ಮನೆ ವಿಳಾಸ:
ಬೇಕರಿ ರಶೀದ್‌, ನಂಜಮ್ಮ ಆಸ್ಪತ್ರೆ ಮುಂಭಾಗದ ರಸ್ತೆ, ಮಾರುತಿ ಬಡಾವಣೆ, ಮಾಲೂರು ಪಟ್ಟಣ.

ಮಾರಾಟದ ಸಮಯ:
ರಂಜಾನ್‌ ತಿಂಗಳಲ್ಲಿ ಮಾತ್ರ, ಮಧ್ಯಾಹ್ನ 2ರಿಂದ ರಾತ್ರಿ 8ಗಂಟೆವರೆಗೆ. ಈ ವರ್ಷದಿಂದ ಪ್ರತಿದಿನ ಮಾರಾಟ ಮಾಡಲು ಚಿಂತನೆ.

– ಭೋಗೇಶ ಎಂ.ಆರ್‌/ಎಂ.ರವಿಕುಮಾರ್‌

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.