ನೋಡಿಯೇಕೊಳ್ಳಬೇಕೆಂದರೆ ದರ ದುಬಾರಿ!
Team Udayavani, Oct 5, 2020, 8:22 PM IST
ಆನ್‌ಲೈನ್‌ನಲ್ಲಿ ಮೊಬೈಲ್‌ಗಳನ್ನು ಮಾರಾಟ ಮಾಡುವಲ್ಲಿಕೆಲವುಕಂಪನಿಗಳು ಮುಂಚೂಣಿ ಯಲ್ಲಿದ್ದರೆ, ಇನ್ನು ಕೆಲವು ಬ್ರಾಂಡ್‌ಗಳು ಆಫ್ಲೈನ್ (ಅಂಗಡಿಗಳ ಮೂಲಕ ಮಾರಾಟ) ಮಾರಾಟದಲ್ಲಿ ಮುಂದಿವೆ. ಸ್ಯಾಮ್ ಸಂಗ್, ವಿವೋ, ಒಪ್ಪೊಗಳನ್ನು ಇದರಲ್ಲಿ ಹೆಸರಿಸಬಹುದು.
ಕೆಲವು ಗ್ರಾಹಕರಿಗೆ, ತಾವುಕೊಳ್ಳುವ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್ ಗಳನ್ನು ಮೊಬೈಲ್ ಅಂಗಡಿಗಳಿಗೆ ಹೋಗಿ ಕೊಂಡರಷ್ಟೇ ಸಮಾಧಾನ. ಅದರ ಆಕಾರ, ಬಣ್ಣ, ಅಳತೆ ಇತ್ಯಾದಿಗಳನ್ನುಕೈಯಲ್ಲಿ ಹಿಡಿದು ಅದರ ಚೆಂದ ನೋಡುತ್ತಾರೆ. ಒಳಗೆ ಯಾವ ಪ್ರೊಸೆಸರ್ ಇದೆ ಎಂಬಿತ್ಯಾದಿ ತಾಂತ್ರಿಕ ಅಂಶಗಳತ್ತ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಮೊಬೈಲ್‌ಗಳ ದರವೂ ಜಾಸ್ತಿ ಇರುತ್ತದೆ. ಉದಾಹರಣೆಗೆ, ಆನ್‌ಲೈನ್ ಮಾರಾಟಕ್ಕಾಗಿಯೇ ತಯಾರಿಸಿದ ಮೊಬೈಲ್‌ಗಳಿಗೆ 15-20 ಸಾವಿರ ರೂ. ದರವಾದರೆ, ಅದೇ ಸ್ಪೆಸಿಫಿಕೇಷನ್ ಉಳ್ಳ ಆಫ್ಲೈನ್ ಮಾರಾಟದ ಮೊಬೈಲ್ ದರ ಸುಮಾರು27ರಿಂದ35 ಸಾವಿರ ರೂ.ವರೆಗೆ ಇರುತ್ತದೆ!
ಅಂಥದೇ ಒಂದು ಮೊಬೈಲ್ ವಿವೋ ಎಕ್ಸ್ 50. ಇದರ ಸ್ಪೆಸಿಫಿಕೇಷನ್‌ಗಳು ಪರವಾಗಿಲ್ಲ. ಆದರೆ ದರ ದುಬಾರಿಯಾಯಿತು. ಈ ಮೊಬೈಲ್‌ನ128 ಜಿಬಿ ಆಂತರಿಕ ಸಂಗ್ರಹ,8 ಜಿಬಿ ರ್ಯಾಮ್ ಮಾದರಿಗೆ35 ಸಾವಿರ ರೂ.,256 ಜಿಬಿ ಆಂತರಿಕ ಸಂಗ್ರಹ8 ಜಿಬಿ ರ್ಯಾಮ್ ಮಾದರಿಗೆ38 ಸಾವಿರ ರೂ., ಈ ಮೊಬೈಲ್ ಒಳಗೆ ಏನೇನು ಅಂಶಗಳಿವೆ ನೋಡೋಣ. ಇದು6.56 ಇಂಚಿನ ಪರದೆ ಹೊಂದಿದೆ. ಪರದೆಯ ಮೇಲ್ಭಾಗದ ಎಡಮೂಲೆಯಲ್ಲಿ ಪಂಚ್ ಹೋಲ್‌ಕ್ಯಾಮೆರಾ ಇದೆ.7.49 ಮಿ.ಮೀ. ದಪ್ಪ ಇರುವುದರಿಂದ ಬಹಳ ಸ್ಲಿಮ್ ಆಗಿ ಇದೆ. ಪರದೆಯ ಅಂಚು ಬಹಳಕಡಿಮೆ. ಹಾಗಾಗಿ ಪರದೆ ಹೆಚ್ಚಿನ ಜಾಗ ಹೊಂದಿದೆ.
48 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ, ಅದಕ್ಕೆ13+8+5 ಮೆಪಿ. ಉಪಕ್ಯಾಮೆರಾಗಳು. ಮುಂಬದಿ ಕ್ಯಾಮೆರಾ32 ಮೆ.ಪಿ. ಪರದೆಯ ರೆಸೂಲೇಷನ್1080 2376 ಇದೆ. ಈ ದರಕ್ಕೆ64 ಮೆ.ಪಿ.ಕ್ಯಾಮೆರಾ ಈಗ ಸಾಮಾನ್ಯ. ಆದರೆ ಪಿಕ್ಸಲ್ ಗಿಂತಕ್ಯಾಮೆರಾ ಲೆನ್ಸ್‌ನ ಗುಣಮಟ್ಟ ಮುಖ್ಯ. ಇದರ ಫೋಟೋ ಗುಣಮಟ್ಟ ಚೆನ್ನಾಗಿದೆ.
ಇದರಲ್ಲಿರುವ ಪ್ರೊಸೆಸರ್ ಕ್ವಾಲ್ಕಾಂ ಸ್ನಾಪ್ ಡ್ರಾಗನ್730. ಗಮನದಲ್ಲಿರಲಿ,ಕೆಲವು ಕಂಪನಿಗಳು ಈ ಪ್ರೊಸೆಸರನ್ನು14 ಸಾವಿರದ ಮೊಬೈಲ್‌ಗೆ ಹಾಕುತ್ತವೆ! ಆದರೆ ಈ ದರಕ್ಕೆ ಇನ್ನೂ ಹೆಚ್ಚಿನ ಶಕ್ತಿಯ ಪೊ›ಸೆಸರ್ ಹಾಕಬೇಕಿತ್ತು. ಅಂಡ್ರಾಯ್ಡ್ 10 ಓಎಸ್‌ಗೆ ಫನ್‌ಟಚ್ ಓಎಸ್10.5 ಅನ್ನು ಬೆರೆಸಲಾಗಿದೆ. ಇದರಲ್ಲಿ4200 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ33 ವ್ಯಾಟ್ ವೇಗದ ಜಾರ್ಜರ್ ನೀಡಲಾಗಿದೆ. ಯುಎಸಿ ಟೈಪ್ ಸಿ ಪೋರ್ಟ್ ಇದೆ. ಆದರೆ3.5 ಎಂ.ಎಂ. ಆಡಿಯೋ ಜಾಕ್ ಪೋರ್ಟ್ ಇಲ್ಲ. ವೈರ್ಡ್ ಇಯರ್ ಫೋನ್‌ಗಳನ್ನು ಬಳಸುವ ಸಲುವಾಗಿ ಹೆಚ್ಚುವರಿ ಅಡಾಪ್ಟರ್ ನೀಡಲಾಗಿದೆ. ಬೆಲೆ ಹೆಚ್ಚಾದರೂ ಪರವಾಗಿಲ್ಲ. ನೋಡಿಯೇ ಕೊಳ್ಳೋಣ ಎಂಬುವರಿಗೆ ವಿವೋ ಎಕ್ಸ್ 50 ಒಂದು ಹಂತ ಸಮಾಧಾನ ನೀಡಬಹುದು! ಆದಕ್ಕೆ ಸ್ಪೆಸಿಫಿಕೇಷನ್ ನಿರ್ಧರಿಸಿ ಅದಕ್ಕೆ ತಕ್ಕಂಥ ಮೊಬೈಲ್ ಕೊಳ್ಳುವಂಥವರಿಗೆ ಇದು ದುಬಾರಿ
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.