ಫ್ಯಾಮಿಲಿಗೆ ಬಿಆರ್
Team Udayavani, Nov 27, 2017, 1:02 PM IST
ಪ್ರತಿಯೊಬ್ಬರಿಗೂ ಕಾರು ಕೊಂಡುಕೊಳ್ಳುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ಹಣ ಹೇಗೇ ಜೋಡಿಸೋದು ಅನ್ನೋದು ಒಂದಾದರೆ, ಬಜೆಟ್ ಏನು ಅನ್ನೋದನ್ನೂ ನಿರ್ಧರಿಸಬೇಕಾಗುತ್ತದೆ. ಇಷ್ಟಕ್ಕೇ ಮುಗಿಯುತ್ತಾ? ಯಾವ ಕಂಪನಿಯ ಯಾವ ಕಾರಾದರೆ ಒಳ್ಳೆಯದು? ಯಾವ ವೇರಿಯಂಟ್ ಉತ್ತಮ? ಐಷಾರಾಮಿ ಪ್ರಯಾಣ ಬೇಕಾ? ಮೈಲೇಜ್ ಇದ್ದರೆ ಸಾಕಾ? ಹೈಎಂಡ್ ಆಗಿರಬೇಕಾ, ಮಿಡ್ ಎಂಡ್ ಆಗಿದ್ದರೆ ಸಾಕಾ? ಪ್ರತಿದಿನ ಬಳಸುತ್ತೀರಾ, ಅಪರೂಪಕ್ಕೊಮ್ಮೆ ಬಳಸಲಿಕ್ಕಾ? ಹೀಗೆ ತರಹೇವಾರಿ ಪ್ರಶ್ನೆಗಳು ಕಾಡುತ್ತವೆ. ಅದೆಷ್ಟೋ ಸಲ ಕಾರು ಬುಕ್ ಮಾಡಲಿಕ್ಕೆಂದು ಶೋರೂಂವರೆಗೆ ಹೋಗಿ ಇಂಥ ಕಾರಣಗಳಿಗೆ ಉತ್ತರ ಸಿಗದೇ ಹಿಂದಿರುಗಿರುವ ಉದಾಹರಣೆಗಳೂ ಸಿಗುತ್ತವೆ.
ಆದರೆ ಒಂದಂತೂ ಖರೆ, ಬಜೆಟ್ ಮಿತಿಯೂ ಇಲ್ಲದೇ ಮಲ್ಟಿ ಪರ್ಪಸ್ ಬಳಕೆಗೆ ಕೊಂಡುಕೊಳ್ಳಬೇಕೆನ್ನುವ ಉದ್ದೇಶ ಹೊಂದಿದ್ದರೆ ಆಯ್ಕೆ ಸುಲಭವಾಗಲಿದೆ. ಇಂಥ ಸಮಯದಲ್ಲಿ ಕೆಲವೊಂದು ಕಾರುಗಳು ಉದ್ದೇಶಕ್ಕೆ ಪೂರಕವಾಗಿವೆ ಅನಿಸುವುದುಂಟು. ಅಷ್ಟೇ ಅಲ್ಲ, ಯಾವುದೇ ಮುಲಾಜಿಲ್ಲದೇ ಕೊಂಡುಕೊಳ್ಳಲೂ ಅಡ್ಡಿ ಏನಿರುವುದಿಲ್ಲ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಬಹುತೇಕ ಮಂದಿಯ ಮೊದಲ ಆಯ್ಕೆಗಳಲ್ಲಿ ಹೋಂಡಾ ಕಂಪನಿಯ ಕಾರುಗಳು ಇದ್ದೇ ಇರುತ್ತವೆ. ಇತ್ತೀಚೆಗಷ್ಟೇ 7 ಇಂಚಿನ ಟಚ್ ಸ್ಕ್ರೀನ್ ಡಿಜಿಪ್ಯಾಡ್ ಅಳವಡಿಕೆಯೊಂದಿಗೆ ಒಂದಿಷ್ಟು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿರುವ, ಎಸ್‌ಯು ಸೆಗೆ¾ಂಟ್‌ನ ಹೋಂಡಾ ಬಿಆರ್- ಎಕ್ಸ್ ವೇರಿಯಂಟ್ ಇದೀಗ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯಕ್ಕೆ ಎಕ್ಸ್ ವೇರಿಯಂಟ್‌ನಲ್ಲಿ ಮಾತ್ರ ಇದು ಲಭ್ಯವಿದೆ. ಹೊಸ ಮಾಡೆಲ್‌ನ ಸಿಟಿ, ಅಮೇಜ್ ಮತ್ತು ಜಾಜ್‌ನಲ್ಲೂ ಇದನ್ನೇ ಬಳಸಲಾಗಿದೆ.
ಹೋಂಡಾ ಬಿಆರ್- ಆರಂಭದಲ್ಲಿ ಟಚ್‌ಸ್ಕ್ರೀನ್ ಹೊಂದಿರಲಿಲ್ಲ. ಡಿಜಿಟಲ್ ಯುಗದಲ್ಲಿ ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ತಂತ್ರಜ್ಞಾನ ಅಳವಡಿಕೆಯಲ್ಲೂ ಒಂದು ಹೆಜ್ಜೆ ಮುಂದಿಟ್ಟಿರುವ ಹೋಂಡಾ ಕಂಪನಿ ತನ್ನ ಕಾರುಗಳಲ್ಲಿನ ಎಂದಿನ ಐಷಾರಾಮಿತನವನ್ನೂ ಹಾಗೇ ಉಳಿಸಿಕೊಂಡು ಬಂದಿದೆ. ಚಾಲಕ, ಇಬ್ಬರು ಮಕ್ಕಳು ಸೇರಿ ಐವರು ಆರಾಮದಾಯಕವಾಗಿ ಪ್ರಯಾಣ ಬೆಳೆಸಲು ಅನುಕೂಲಕರವಾಗಿರುವಂಥ ಕಾರುಗಳಲ್ಲಿ ಬಿಆರ್- ಕೂಡ ಒಳ್ಳೆಯ ಆಯ್ಕೆಯೇ ಆಗಿದೆ.
ಎಂಜಿನ್ ಪರ್ಫಾರ್ಮನ್ಸ್
ಸಾಮಾನ್ಯವಾಗಿ ಕಾರುಗಳ ಬಳಕೆಯ ವೇಳೆ ಎಂಜಿನ್ ಬಳಕೆ ಬಹಳ ಮಹತ್ವದ್ದಾಗಿರುತ್ತದೆ. ಬಿಆರ್- 1.5 ಲೀಟರ್‌ನ ಐ-ಟೆಕ್ ಪೆಟ್ರೋಲ್ ಹಾಗೂ ಐ-ಡಿಟೆಕ್ ಡೀಸೆಲ್ ವರ್ಷನ್‌ಗಳು ಲಭ್ಯದೆ. ಪೆಟ್ರೋಲ್ ಎಂಜಿನ್ 119ಪಿಎಸ್ ಮತ್ತು 145ಎನ್‌ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 4 ಸಿಲಿಂಡರ್ ಅಳವಡಿಕೆಯ ಡೀಸೆಲ್ ಎಂಜಿನ್ 100ಪಿಎಸ್ ಮತ್ತು 200ಎನ್‌ಎಂ ಟಾರ್ಕ್ ಸಾಮರ್ಥ್ಯದ್ದಾಗಿದೆ. 6ಸ್ಪೀಡ್ ಮ್ಯಾನ್ಯುವಲ್ ಸ್ಪೀಡ್‌ನ ಬಿಆರ್- 5ಮತ್ತು 6ನೇ ಗೇರ್‌ನಲ್ಲಿ ತ್ರಾಸಲ್ಲದ ಪ್ರಯಾಣದ ಅನುಭವ ನೀಡುತ್ತದೆ. ಮೊಬಿಲಿಯೋ ಪ್ಲಾಟ್‌ಫಾರ್ಮ್ನಲ್ಲೇ ಬಿಆರ್-ಅನ್ನು 2016ರ ಆಟೋ ಎಕ್ಸ್‌ಪೋನಲ್ಲಿ ಮೊದಲಬಾರಿಗೆ ಪರಿಚಯಿಸಿದ ಹೋಂಡಾ ಕಂಪನಿ ಇಂದು ಉತ್ತಮವಾದ ಮಾರುಕಟ್ಟೆಯನ್ನೇ ಕಂಡುಕೊಂಡಿದೆ.
ಸುರಕ್ಷತೆಗೆ ನೋ ಕಾಂಪ್ರಮೈಸ್
ಹೋಂಡಾ ಸುರಕ್ಷತೆಯಲ್ಲಿ ಅಷ್ಟು ಬೇಗ ಕಾಂಪ್ರಮೈಸ್ ಆಗುವ ಕಂಪನಿ ಅಲ್ಲ. ಅದರಲ್ಲೂ ಇಂದಿನ ಗ್ರಾಹಕರಿಗೆ ಬೇಕಾದ ಆಧುನಿಕ ವ್ಯವಸ್ಥೆಗಳನ್ನೆಲ್ಲ ಅಳವಡಿಸಿದೆ. ಮುಂಭಾಗದಲ್ಲಿ ಎರಡು ಎಸ್‌ಆರೆಸ್ ಏರ್ ಬ್ಯಾಗ್, ಎಬಿಡಿಯ ಎಬಿಎಸ್ ವ್ಯವಸ್ಥೆ ಸೇರಿ ಉಳಿದ ಆಧುನಿಕ ಲಾಕಿಂಗ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಡಿಜಿಪ್ಯಾಡ್‌ನಲ್ಲಿ ಏನೆಲ್ಲಾ ಇವೆ?
– 7 ಇಂಚಿನ ಟಎನ್ ಮಾದರಿಯ ಡಿಜಿಪ್ಯಾಡ್ ಬಳಕೆ
– ಸ್ಯಾಟ್‌ಲೆçಟ್ ಸಂಪರ್ಕದ ತ್ರಿಡಿ ನೇವಿಗೇಷನ್ ವ್ಯವಸ್ಥೆ
– 1.5ಜಿಬಿ ಡೇಟಾ ಸ್ಟೋರೇಜ್ ಇಂಟರ್ನಲ್ ಮೆಮೋರಿ
– ಮಿರರ್ ಲಿಂಕ್‌ಗೆ ನೆರವಾಗಬಲ್ಲ ಸ್ಮಾರ್ಟ್‌ಫೋನ್ ಸಂಪರ್ಕ ವ್ಯವಸ್ಥೆ
– ಬ್ರೌಸಿಂಗ್‌ಗೆ ಇಂಟರ್ನೆಟ್ ಸಂಪರ್ಕ ಸಾಧ್ಯ
– ಮೀಡಿಯಾ, ನೇವಿಗೇಷನ್ ಮತ್ತು ಮೊಬೈಲ್ ಕರೆಗಳಿಗೆ ವೈಸ್ ಕಮಾಂಡ್
– ಆಡಿಯೋ, ಟೆಲಿಫೋನ್ ಸ್ಟ್ರೀಮಿಂಗ್ ವ್ಯವಸ್ಥೆ
ಮೈಲೇಜ್
ಪೆಟ್ರೋಲ್ ವೇರಿಯಂಟ್: ಪ್ರತಿ ಲೀಟರ್‌ಗೆ 12ರಿಂದ 18 ಕಿಮೀ.
ಡೀಸೆಲ್ ವೇರಿಯಂಟ್: ಪ್ರತಿ ಲೀಟರ್‌ಗೆ 16ರಿಂದ 21 ಕಿಮೀ.
ಶೋ ರೂಂ ಬೆಲೆ
112.5 ಲಕ್ಷ ರೂ.ನಿಂದ 16ಲಕ್ಷ ರೂ.
ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.