ನವರಾಗ ದೀಪ : ಲಂಡನ್‌ಗೆ ವಿದಾಯ, ಕೃಷಿಯಲ್ಲಿ ಆದಾಯ

ಬಹು ಧಾನ್ಯ

Team Udayavani, Oct 7, 2019, 4:28 AM IST

addur-Navdeep-

ಲಂಡನ್‌ನ ಬ್ಯಾಂಕಿನಲ್ಲಿ ಲಕ್ಷ ಲಕ್ಷ ಪಗಾರ ಎಣಿಸುತ್ತಿದ್ದ ಯುವಕ, ನವದೀಪ್‌ ತನ್ನ ಹುಟ್ಟೂರಿಗೆ ವಾಪಸ್ಸಾಗಲು ಒಂದು ಫೋನ್‌ ಕರೆ ಕಾರಣವಾಗಿತ್ತು. ಇಂದು 12,500 ದಾಳಿಂಬೆ, 7,500 ಪಪ್ಪಾಯಿ ಮತ್ತು 200 ನಿಂಬೆ ಗಿಡಗಳೊಂದಿಗಿನ ಒಡನಾಟ ಅವರದು. ಬ್ಯಾಂಕ್‌ ಉದ್ಯೋಗದಲ್ಲಿದ್ದಾಗ ಲಕ್ಷ ಲಕ್ಷ ಎಣಿಸುತ್ತಿದ್ದವರು, ಈಗ ಎಷ್ಟು ಎಣಿಸುತ್ತಿದ್ದಾರೆ ಗೊತ್ತಾ?

ಕೇವಲ ಐದು ವರ್ಷಗಳ ಹಿಂದೆ ಬ್ರಿಟನ್‌ನ ಪ್ರಸಿದ್ಧ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ರೂಪಾಯಿ ವೇತನದ ಉದ್ಯೋಗ; ಗಾಜಿನ ಪುಟ್ಟ ಆವರಣದೊಳಗೆ ಹಣಕಾಸಿನ ಲೆಕ್ಕಾಚಾರದ ಬದುಕು. 2015ರಿಂದ ಈಚೆಗೆ ಹಣ್ಣಿನ ಗಿಡಗಳೊಂದಿಗೆ ಬದುಕು; 12,500 ದಾಳಿಂಬೆ, 7,500 ಪಪ್ಪಾಯಿ ಮತ್ತು 200 ನಿಂಬೆ ಗಿಡಗಳೊಂದಿಗೆ ಒಡನಾಟ. ಇದು ನವದೀಪ್‌ ಗೊಲೇಚಾ ಎಂಬ 30 ವರುಷದ ಯುವಕ, ಆರ್ಥಿಕ ಸಲಹೆಗಾರನ ಉದ್ಯೋಗ ತೊರೆದು, ತನ್ನೂರಿಗೆ ಹಿಂತಿರುಗಿ ಕೃಷಿಕನಾದ ಕತೆ. ಇದಕ್ಕೆ ಕಾರಣವಾಗಿದ್ದು ಒಂದು ಫೋನ್‌ ಕರೆ.

ಲಂಡನ್‌ ದಿನಗಳು…
“ವರ್ತಕ ಕುಟುಂಬದಲ್ಲಿ ಹುಟ್ಟಿದ ನವದೀಪ್‌ ಕಲಿತದ್ದು ರಾಜಸ್ಥಾನದ ಜೋಧಪುರದಲ್ಲಿ. ಅನಂತರ ಕಾಲೇಜು ಶಿಕ್ಷಣಕ್ಕಾಗಿ ತೆರಳಿದ್ದು ಮುಂಬೈಗೆ. ಅಲ್ಲಿ ಪದವಿ ಪಡೆದ ಬಳಿಕ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಲಿಕ್ಕಾಗಿ ಹಾರಿದ್ದು ಸಂಯುಕ್ತ ರಾಷ್ಟ್ರಕ್ಕೆ (ಯುನೈಟೆಡ್‌ ಕಿಂಗ್‌ಡಮ…). “ರಾಜಸ್ಥಾನದಿಂದ ಲಂಡನ್‌ಗೆ ಬಂದಿದ್ದೆ
. ಆರಂಭದಲ್ಲಿ ಎಲ್ಲವೂ ವಿಭಿನ್ನ ಮತ್ತು ಕಠಿಣ ಅನ್ನಿಸುತ್ತಿತ್ತು. ವರ್ತಕ ಕುಟುಂಬದವನಾದ ನಾನು, ಅಂಕೆ  ಸಂಖ್ಯೆಗಳಲ್ಲಿ ಲೀಲಾಜಾಲವಾಗಿ ಕಲಿಯಬಲ್ಲೆ ಎಂದು ಭಾವಿಸಿದ್ದೆ
. ಆದರೆ ತರಗತಿಗಳಿಗೆ ಹಾಜರಾದಾಗಲೇ ಅದೆಲ್ಲ ಎಷ್ಟು ಕಷ್ಟವೆಂದು ತಿಳಿಯಿತು. ಅಲ್ಲಿ ಕಾಲೇಜಿನಲ್ಲಿ ಕಲಿಸುವ ವಿಧಾನವೇ ಬೇರೆ. ನಾನು ತರಗತಿಗಳಲ್ಲಿ ಶೂನ್ಯಭಾವದಿಂದ ಕುಳಿತಿರುತ್ತಿದ್ದೆ ಎಂದು ಅವರು ಲಂಡನ್‌ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಮರಳಿ ಬೇರುಗಳಿಗೆ
ಅನಂತರ, ಸಿಎಫ್ಎ ಕೋರ್ಸ್‌ಗಾಗಿ ಸ್ಕಾಲರ್‌ಶಿಪ್‌ ಗಳಿಸಿ, ರಾಯಲ್‌ ಬ್ಯಾಂಕ್‌ ಆಫ್ ಸ್ಕಾಟ್‌ಲ್ಯಾಂಡ್‌ ಸೇರಿಕೊಂಡರು ನವದೀಪ್‌. 23ನೇ ವಯಸ್ಸಿನಲ್ಲೇ ಅವರ ವಾರ್ಷಿಕ ಗಳಿಕೆ 25,000 ಪೌಂಡುಗಳಷ್ಟಿತ್ತು (22 ಲಕ್ಷ ರೂ.). ಅಲ್ಲಿಗೆ ಜೀವನ ಸಾರ್ಥಕವಾಯಿತು ಎಂದುಕೊಂಡರು.

ಅದೊಂದು ದಿನ ತಂದೆಯವರಿಂದ ನವದೀಪ್‌ರವರಿಗೆ ಫೋನ್‌ ಕರೆ ಬಂತು. “ಊರಿಗೆ ಮರಳಿ ಬಾ’ ಎಂದು ತಂದೆ ಕರೆದಾಗ ನವದೀಪ್‌ರಿಗೆ “ಇಲ್ಲ’ ಎನ್ನಲಾಗಲಿಲ್ಲ. ರಾಜಸ್ಥಾನಕ್ಕೆ ಹಿಂತಿರುಗಿದ ನವದೀಪ್‌, ಕುಟುಂಬದ ವ್ಯವಹಾರದಲ್ಲಿ ತೊಡಗುವುದಿಲ್ಲ ಎಂದು ನಿರ್ಧರಿಸಿದರು. ಬೇರೆ ಏನಾದರೂ ಚಟುವಟಿಕೆ ಶುರು ಮಾಡಬೇಕೆಂದು ಯೋಚಿಸುತ್ತಿದ್ದಾಗ, ತಂದೆ ಜಮೀನು ಖರೀದಿಸಿದ್ದು ತಿಳಿಯಿತು. ಅಲ್ಲಿ ಹಣ್ಣಿನ ತೋಟ ರೂಪಿಸುವ ಯೋಜನೆ ಅವರ ಮನದಲ್ಲಿ ಮೊಳಕೆಯೊಡೆಯಿತು.

ಆ ಕನಸು ಸುಂದರವಾಗಿತ್ತು. ಆದರೆ, ಕೃಷಿಯ ಹಿನ್ನೆಲೆಯೇ ಇಲ್ಲದ, ಯಾವುದೇ ಕುಟುಂಬ ಸದಸ್ಯನಿಂದ ಸಹಾಯದ ಸಾಧ್ಯತೆಯೇ ಇಲ್ಲದ ನವದೀಪ್‌ನದು ಗಾಢ ಕತ್ತಲಿನಲ್ಲಿ ಸೂಜಿಗಾಗಿ ತಡಕಾಡಿದ ಪರಿಸ್ಥಿತಿಯಾಗಿತ್ತು.

ವಿಷಮುಕ್ತ ಕೃಷಿ
ಮುಂದಿನ ಕೆಲವು ತಿಂಗಳುಗಳಲ್ಲಿ ರಾಜಸ್ಥಾನ ಕೃಷಿ ಇಲಾಖೆಯ ಪರಿಣತರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದರು. 2015ರಲ್ಲಿ ಮಹಾರಾಷ್ಟ್ರದ ಸಲಹೆಗಾರನ ನೆರವಿನಿಂದ ತಮ್ಮ ತೋಟ ನ್ಯಾಚುರಾ ಫಾರ್ಮಿಗಾಗಿ ಜಮೀನು ಹದಗೊಳಿಸಿ, ಗಿಡ ನೆಡಲು ತಯಾರಿ ನಡೆಸಿದರು.

ಬಹುಪಾಲು ಗ್ರಾಹಕರ ಪ್ರಥಮ ಕಾಳಜಿ ಆರೋಗ್ಯ ರಕ್ಷಣೆ ಎಂಬುದನ್ನು ನವನೀತ್‌ ಗಮನಿಸಿದ್ದರು. ಹಲವಾರು ಕೃಷಿಕರು ಸಾವಯವ ಕೃಷಿಯಲ್ಲಿ ತೊಡಗಲು ಗ್ರಾಹಕರ ಬೇಡಿಕೆಯೇ ಪ್ರೇರಣೆ ಎಂದು ಅವರಿಗೆ ಅರ್ಥವಾಗಿತ್ತು. ಹಾಗಾಗಿಯೇ ತನ್ನ ಫಾರ್ಮ್ನಲ್ಲಿ ವಿಷಮುಕ್ತ ಕೃಷಿ ವಿಧಾನ ಅನುಸರಿಸಲು ನಿರ್ಧರಿಸಿದರು.

ಈ ವಿಧಾನದಲ್ಲಿ ಫ‌ಸಲು ವೃದ್ಧಿಗಾಗಿ ಜೈವಿಕ ಗೊಬ್ಬರಗಳ ಬಳಕೆ ಮತ್ತು ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ಜೈವಿಕ ಪೀಡೆನಾಶಕಗಳ ಬಳಕೆ ಕಡ್ಡಾಯ. ಯಾಕೆಂದರೆ, ಸಸ್ಯಗಳು ಪೋಷಕಾಂಶಗಳನ್ನು ಮಣ್ಣಿನಿಂದ ಪಡೆಯುತ್ತವೆ. ಮಣ್ಣಿನಲ್ಲೇವಿಷವಿದ್ದರೆ, ಅದು ಸಸ್ಯಗಳನ್ನೂ, ಫ‌ಸಲನ್ನೂ ಸೇರಿಕೊಂಡು ಅವೂ ವಿಷಪೂರಿತವಾಗುತ್ತವೆ. ಆದ್ದರಿಂದ, ಸಸ್ಯಗಳ ಬೆಳವಣಿಗೆಗೆ ಸೂಕ್ತವಾದ ಮತ್ತು ಗ್ರಾಹಕರ ಆರೋಗ್ಯಕ್ಕೆ ಪೂರಕವಾದ ಫ‌ಸಲು ಒದಗಿಸುವ ವಿಷಮುಕ್ತ ಕೃಷಿ ವಿಧಾನವನ್ನು ತನ್ನ ತೋಟದಲ್ಲಿ ಅಳವಡಿಸಿಕೊಂಡರು ನವನೀತ್‌.

ಕೃಷಿಗೆ ಜಾಣ್ಮೆ ಬೇಕು
ವಾರದಲ್ಲಿ ನಾಲ್ಕೈದು ದಿನ ತೋಟದಲ್ಲಿ ನವದೀಪ್‌ ದುಡಿಯುತ್ತಾರೆ. ಇದು ಮುಖ್ಯ ಯಾಕೆಂದರೆ, ತೋಟದ ಕೆಲಸಗಳ ಬಗ್ಗೆ ನನಗೆ ನೇರಾನೇರ ಅನುಭವ ಸಿಗುತ್ತದೆ ಮತ್ತು ಕೆಲಸಗಾರರು ಮಾಡುವ ಕೆಲಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಕಳೆದ ವರ್ಷ ನ್ಯಾಚುರಾ ಫಾರ್ಮ್ನಿಂದ ನವದೀಪ್‌ ಗಳಿಸಿದ ಆದಾಯ ರೂ. 70 ಲಕ್ಷ ರೂ. ಈ ವರ್ಷ ಒಂದೂಕಾಲು ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಕೃಷಿ ಅತ್ಯಂತ ಜಾಣತನದ ಕಾಯಕ. ಯಾಕೆಂದರೆ ಅಂತಿಮವಾಗಿ ನಿಜವಾದ ಸಂಪತ್ತಿಗೆ ಮತ್ತು ಸಂತೋಷಕ್ಕೆ ಕೃಷಿಯಿಂದಲೇ ಅತ್ಯಧಿಕ ದೇಣಿಗೆ ಎಂಬುದು ನವದೀಪ್‌ ಗೊಲೇಚಾರ ಸಂದೇಶ.

ಕೆಲಸಗಾರರೂ ಸಂತೃಪ್ತರು!
ವೇರಾ ವಿಲ್ಪುರದಲ್ಲಿರುವ ಅವರ ತೋಟದಲ್ಲಿ 35 ಸ್ಥಳೀಯ ರೈತರು ದುಡಿಯುತ್ತಿದ್ದಾರೆ. ಆರಂಭದಲ್ಲಿ ನನ್ನ ತೋಟದಲ್ಲಿ ಕೆಲಸ ಮಾಡಲು ಜನರನ್ನು ಕರೆ ತರುವುದೇ ಕಷ್ಟವಾಗಿತ್ತು. ನಾನು ಅನುಸರಿಸುವ ಕೃಷಿ ವಿಧಾನದ ಬಗ್ಗೆ ಇಲ್ಲಿನವರು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕ್ರಮೇಣ, ಈ ವಿಧಾನದ ಬಗ್ಗೆ ಅವರೂ ತಿಳಿದುಕೊಂಡರು ಎಂದು ವಿವರಿಸುತ್ತಾರೆ ನವನೀತ್‌. ನನ್ನ ತೋಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಿಂಗಳಿಗೆ 10,000- 15,000 ರೂ. ತನಕ ಮಜೂರಿ ಗಳಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

-ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.