ಫಾಸ್ಟ್ “ಟ್ರ್ಯಾಕ್ ಕಾರ್’!
ರಸ್ತೆ ಮೇಲಿನ ವೇಗದೂತ
Team Udayavani, Aug 5, 2019, 5:44 AM IST
ಸೂಪರ್ ಕಾರು ರಸ್ತೆಯಲ್ಲಿ ಹೋಗುತ್ತಿದ್ದರೆ ಅದರ ಟ್ರಾನ್ಸ್‌ಮಿಷನ್ ಸದ್ದು ಸಂಗೀತ ಹಾಡುವಂತಿರುತ್ತಿದೆ. ಈ ಸದ್ದಿನಿಂದಲೇ ಸುತ್ತಮುತ್ತಲ ಜನರಿಗೆ ಅದರ ಬರುವಿಕೆ ತಿಳಿದುಹೋಗುತ್ತದೆ. ಅದು ಹಾದು ಹೋಗುವವರೆಗೂ ಅದರತ್ತ ಕಣ್ಣುಗಳೆಲ್ಲವೂ ನೆಟ್ಟಿರುತ್ತದೆ. ರಸ್ತೆಗಳಲ್ಲಿ ತನ್ನ ಅಂದದಿಂದ ಗಮನ ಸೆಳೆಯುವ ಸೂಪರ್ ಕಾರು, ರೇಸ್ ಟ್ರ್ಯಾಕಿನಲ್ಲಿ ಕಣ್ಣಿಗೂ ನಿಲುಕದ ವೇಗದಲ್ಲಿ ಭೋರ್ಗರೆದು ಓಡುತ್ತದೆ. ಅಂಥದ್ದೊಂದು ಕಾರು ಲ್ಯಾಂಬೋರ್ಗಿನಿ ಇವೋ.
ನ್ಪೋರ್ಟ್ಸ್ ಕಾರು ಪ್ರಿಯರಿಗೆ “ಲ್ಯಾಂಬೋರ್ಗಿನಿ’ ಸಂಸ್ಥೆ ಚಿರಪರಿಚಿತ. ಕಾಲೇಜು ಹಾಸ್ಟೆಲ್ಲುಗಳ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ಪೋಸ್ಟರುಗಳಲ್ಲಿ ಲ್ಯಾಂಬೋರ್ಗಿನಿ ಕಾರಿನವೇ ಹೆಚ್ಚು. ಇಂತಿಪ್ಪ ಲ್ಯಾಂಬೋರ್ಗಿನಿ, ಇತ್ತೀಚಿಗಷ್ಟೆ “ಹ್ಯುರಕ್ಯಾನ್ ಇವೊ’ ಎಂಬ ಹೊಸ ಕಾರೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ಸವಲತ್ತುಗಳಿಂದ ಕಾರು ಕ್ರೇಝ್ ಹುಟ್ಟುಹಾಕಿದೆ.
ಗಾಳಿಯನ್ನು ಸೀಳುವ ವಿನ್ಯಾಸ
ಯಾವುದೇ ವಾಹನಕ್ಕೂ “ಏರೋಡೈನಾಮಿಕ್ಸ್’ ವಿನ್ಯಾಸ ಮುಖ್ಯವಾದುದು. ಅದರಲ್ಲೂ ಲ್ಯಾಂಬೋರ್ಗಿನಿಯಂಥ ಸೂಪರ್ ಕಾರುಗಳಿಗೆ ಅದೇ ಬಹಳ ಮುಖ್ಯ. ಅತ್ಯಂತ ವೇಗವಾಗಿ ಚಲಿಸುವುದರಿಂದ, ಗಾಳಿಯನ್ನು ಸೀಳಿಕೊಂಡು ಹೋಗಲು ಅನುವು ಮಾಡಿಕೊಡುವ ಏರೋಡೈನಾಮಿಕ್ಸ್ ವಿನ್ಯಾಸ ನ್ಪೋರ್ಟ್ಸ್ ಕಾರುಗಳ ವೈಶಿಷ್ಟéವಾಗಿರುತ್ತದೆ. ಈ ಕಾರಿನಲ್ಲಿ ಇದರತ್ತ ಹೆಚ್ಚು ಗಮನ ವಹಿಸಲಾಗಿದ್ದು ಇಟಾಲಿಯನ್ ಡಿಸೈನರ್‌ಗಳು ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಕಾರಿನ ಮುಂಭಾಗವನ್ನು ಕಾರಿಗೆ ವೇಗ ನೀಡುವಂತೆ ರೂಪಿಸಲಾಗಿದೆ. ಇದರಿಂದ ಮುಂಭಾಗದಿಂದ ಹಾಯ್ದು ಬರುವ ಗಾಳಿ ಮೇಲ್ಭಾಗವನ್ನು ಸವರಿ ಯಾವುದೇ ಪ್ರತಿರೋಧವಿಲ್ಲದೆ ಹಿಂದಕ್ಕೆ ಹರಿದುಹೋಗುತ್ತದೆ. ಈ ಕಾರಿನಲ್ಲಿ ಏರೋಡೈನಾಮಿಕ್ಸ್ ವಿನ್ಯಾಸದಿಂದಾಗಿ ಚಾಲನೆಯ ಮೇಲಿನ ನಿಯಂತ್ರಣ ಸುಲಭವಾಗಿದೆ.
ತೂಕವಿಲ್ಲದ ಕಾರು
ಈ ಕಾರು, ಲ್ಯಾಂಬೋರ್ಗಿನಿಯ ಈ ಹಿಂದಿನ ಕಾರುಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ. ಅದಕ್ಕೆ ಕಾರಣ, ಸಂಸ್ಥೆ ಈ ಬಾರಿ ಕಾರಿನ ಬಾಡಿಯನ್ನು ವಿಶೇಷವಾಗಿ ಅಭಿವೃದ್ದಿಪಡಿಸಿದ ಹೊಸ ವಸ್ತುವಿನಿಂದ ರೂಪಿಸಿರುವುದು. ಅದನ್ನು “ಫೋರ್ಜ್x ಕಂಪೋಸಿಟ್’ ಎಂದು ಸಂಸ್ಥೆ ಕರೆದಿದೆ. ಸದೃಢತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತೂಕವನ್ನು ಕಡಿಮೆ ಮಾಡಿರುವುದು ಈ ಕಾರಿನ ಹೆಗ್ಗಳಿಕೆ. ಈ ಕಾರು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಟ್ರಾನ್ಸ್‌ಮಿಷನ್, ವೇಗ ಎಲ್ಲವನ್ನೂ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ ಮೂಲಕ ನಿಯಂತ್ರಿಸಬಹುದು. ಅದಕ್ಕಾಗಿ ಮಧ್ಯಭಾಗದಲ್ಲಿ ಟಚ್‌ಸ್ಕ್ರೀನ್ ಪ್ಯಾನಲ್‌ಅನ್ನು ನೀಡಲಾಗಿದೆ.
ಸೂಪರ್ ಗೇರ್ ಬಾಕ್ಸ್
ಕಾರು 7 ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸನ್ನು ಹೊಂದಿದ್ದು ತ್ವರಿತ ಗತಿಯಲ್ಲಿ ಅಗತ್ಯವಾದ ಶಕ್ತಿಯನ್ನು ಕಾರಿನ ಚಕ್ರಗಳಿಗೆ ತಲುಪಿಸುತ್ತದೆ. ಸಾಮಾನ್ಯವಾಗಿ ಗೇರ್ ಹಾಕಿದ ನಂತರ ಕೆಲ ಕ್ಷಣಗಳನ್ನು ತೆಗೆದುಕೊಳ್ಳುವುದುಂಟು, ಅದು ಮಿಲಿ ಸೆಕೆಂಡಿನಷ್ಟಿರುವುದರಿಂದ ನಿರ್ಲಕ್ಷಿಸಬಹುದು. ಆದರೆ ಸೂಪರ್‌ಕಾರ್ ವಿಚಾರದಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವ ಹಾಗೆಯೇ ಇಲ್ಲ. ಎಲ್ಲವೂ ಪರ್ಫೆಕ್ಟ್ ಎನ್ನುವ ರೀತಿಯಲ್ಲಿ ರೂಪಿಸಲಾಗಿರುತ್ತದೆ. ಹೀಗಾಗಿ ಎಲ್ಲೂ ತಡ ಎನ್ನುವ ಪ್ರಶ್ನೆಯೇ ಮೂಡದು. ಕಾರು ಮೂರು ಮೋಡ್‌ಗಳನ್ನು ಹೊಂದಿದೆ. ರೇಸ್ ಟ್ರ್ಯಾಕ್, ನ್ಪೋರ್ಟ್ಸ್ ಮತ್ತು ರಸ್ತೆ. ಒಂದು ಮೋಡ್‌ನಿಂದ ಇನ್ನೊಂದು ಮೋಡ್‌ಗೆ ಹೋಗುವಾಗ ಸ್ಮೋತ್‌ನೆಸ್‌ಅನ್ನು ಕಾಪಾಡಿಕೊಳ್ಳಲಾಗಿದೆ. ಇದು ಲ್ಯಾಂಬೋರ್ಗಿನಿ ತಂತ್ರಜ್ಞರ ಕಾರ್ಯಕುಶಲತೆಗೆ, ನಿಖರತೆಗೆ ಹಿಡಿದ ಕೈಗನ್ನಡಿ. ಅಂದ ಹಾಗೆ ಈ ಕಾರಿನ ಬೆಲೆ 3.7 ಕೋಟಿ ರು.
1422 ಕೆ.ಜಿ. ತೂಕ
ವಿ10 ಪೆಟ್ರೋಲ್ ಎಂಜಿನ್
80ಲೀ. ಟ್ಯಾಂಕ್ ಸಾಮರ್ಥ್ಯ
7.1 KM ಮೈಲೇಜ್
ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
2 ಸೀಟುಗಳು
325KMPH ಟಾಪ್ ಸ್ಪೀಡ್
0- 100 KM ವೇಗ- 2.9 ಸೆಕೆಂಡುಗಳಲ್ಲಿ
5204 ಸಿ.ಸಿ
640 ಬಿಎಚ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.