ಹೈನಿನಿಂದ ಜೀವನ ಫೈನು


Team Udayavani, Jun 11, 2018, 11:27 AM IST

hainu.jpg

ಸುವರ್ಣಾ ಮಾರುತಿ ಜಾಡರ್‌ರ ಪತಿ, ಜೀವನ ನಿರ್ವಹಣೆಗಾಗಿ ಕೂಲಿ ಅವಲಂಬಿಸಿದ್ದರು. ಬೆಳಗಿನಿಂದ ಸಂಜೆಯವರೆಗೆ ದುಡಿದರೂ ಉಳಿತಾಯ ಅಷ್ಟಕ್ಕಷ್ಟೇ. ಕೂಲಿಗೆ ಪರ್ಯಾಯ ಆಲೋಚನೆಯಲ್ಲಿದ್ದಗಾಲೇ ಹೊಳೆದದ್ದು ಹೈನುಗಾರಿಕೆ. ಆರಂಭದಲ್ಲಿ  ಒಂದು ಎಚ್‌.ಎಫ್ ಹಸು ಖರೀದಿಸಿದರು. ಮುಂದೆ ಏನಾಯ್ತು ಅನ್ನೋದು ಇಲ್ಲಿದೆ ಓದಿ.

ಕೃಷಿ ಭೂಮಿ ಇದ್ದವರು ಅಂದರಿಂದ ಏನೂ ಲಾಭವಿಲ್ಲವೆಂದು ಯೋಚಿಸಿ ಜಮೀನನ್ನೇ ಮಾರಿ ನಗರಗಳಿಗೆ ಸೇರುವುದು ಸಾಮಾನ್ಯವಾಗಿದೆ. ಹಾಗೆಯೇ, ಕೃಷಿಯೇ ಒಳ್ಳೆಯದು ಎಂದು ಭೂಮಿ ರಹಿತರು ಕ್ರಯದ ಆಧಾರದಲ್ಲಿ ಭೂಮಿ ಪಡೆದು ಕೃಷಿ ಆರಂಭಿಸಿ ಗೆಲುವು ಸಾಧಿಸಿರುವುದು ಕೂಡ ಅಲ್ಲಲ್ಲಿ ಕಂಡುಬರುತ್ತದೆ. ತಮ್ಮದೇ ಭೂಮಿ ಇಲ್ಲದಿದ್ದರೂ ಕೃಷಿ ಮಾಡಬೇಕೆಂಬ ಉತ್ಕಟ ಆಸೆಯಿಂದ ಕೃಷಿ ಭೂಮಿಗಿಳಿದು ಯಶಸ್ವಿಯಾಗಿದ್ದಾರೆ ಸುವರ್ಣಾ ಮಾರುತಿ ಜಾಡರ್‌.

ಕೃಷಿಗಿಳಿದ ಪರಿ
ಸುವರ್ಣಾ ಮಾರುತಿ ಜಾಡರ್‌ ಹುಬ್ಬಳ್ಳಿಯ ನೂಲ್ವಿ ಗ್ರಾಮದವರು. ಪತಿ, ಜೀವನ ನಿರ್ವಹಣೆಗಾಗಿ ಕೂಲಿ ಅವಲಂಬಿಸಿದ್ದರು. ಬೆಳಗಿನಿಂದ ಸಂಜೆಯವರೆಗೆ ದುಡಿದರೂ ಉಳಿತಾಯ ಅಷ್ಟಕ್ಕಷ್ಟೇ. ಕೂಲಿಗೆ ಪರ್ಯಾಯ ಆಲೋಚನೆಯಲ್ಲಿದ್ದರು. ಹೈನುಗಾರಿಕೆ ಆರಂಭಿಸಿದರೆ ಒಳಿತು ಎನ್ನುವ ಅಭಿಪ್ರಾಯ ಇವರ ಆಪ್ತ ವಲಯದಲ್ಲಿ ಕೇಳಿ ಬಂದಿದ್ದರಿಂದ  25,000 ವೆಚ್ಚ ಮಾಡಿ ಒಂದು ಎಚ್‌.ಎಫ್ ಹಸು ಖರೀದಿಸಿದರು. ದಿನಕ್ಕೆ ಹದಿನಾರು ಲೀಟರ್‌ ಹಾಲು ಕೊಡುವ ಹಸು ಅದು. ಒಳ್ಳೆಯ ಗಳಿಕೆ ತಂದುಕೊಟ್ಟಿತ್ತು. ಒಂದು ಆಕಳಲ್ಲಿಯೇ ಹೈನುಗಾರಿಕೆ ಮೂಡಿಸಿದ ಭರವಸೆ ಇವರಿಗೆ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸುವಂತೆ ಪ್ರೇರೇಪಿಸಿತು. ವರ್ಷ ಕಳೆಯುವುದರೊಳಗೆ ಪುನಃ 40,000 ವೆಚ್ಚ ಮಾಡಿ ಇನ್ನೊಂದು ಆಕಳು ಖರೀದಿಸಿದರು. ದಿನಕ್ಕೆ ಹದಿನೈದು ಲೀಟರ್‌ ಹಾಲು ಹಿಂಡುವ ಆಕಳದು. ಎರಡು ಆಕಳಿನಿಂದ ಭರ್ತಿ ಆದಾಯ ಕೈ ಸೇರುತ್ತಿತ್ತು.

ಜಮೀನು ರಹಿತರಾದ ಇವರಿಗೆ ಆಕಳಿಗೆ ಹಸಿರು ಮೇವು ಒದಗಿಸುವುದೇ ದೊಡ್ಡ ಸಮಸ್ಯೆಯಾಯಿತು. ಕ್ರಯದ ಆಧಾರದಲ್ಲಿ ಭೂಮಿಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಯಿತು. ರೈತರೊಬ್ಬರಿಂದ ಒಂದು ಎಕರೆ ಭೂಮಿಯನ್ನು ಲಾವಣಿಗೆ ಪಡೆದರು.

ಕೊಳವೆ ಬಾವಿ ನೀರಿನ ಸೌಲಭ್ಯ ಹೊಂದಿರುವ ಭೂಮಿಯದು. ಅರ್ಧ ಎಕರೆಯಷ್ಟು ಹಸಿರು ಹುಲ್ಲು ನಾಟಿ ಮಾಡಿದರು. ಇನ್ನರ್ಧ ಎಕರೆಯನ್ನು ತರಕಾರಿ ಕೃಷಿಗೆ ಮೀಸಲಿಟ್ಟರು. ಬದನೆ, ಟೊಮೆಟೋ, ಮೂಲಂಗಿ, ಹೀರೆ, ಸೌತೆ ಮುಂತಾದ ತರಕಾರಿಗಳನ್ನು ಬೆಳೆಯತೊಡಗಿದರು. ಬೆಳೆದ ತರಕಾರಿಗಳನ್ನು ಸ್ವತಃ ತಾವೇ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಕುಳಿತು ಮಾರತೊಡಗಿದರು. ಪರಿಣಾಮ, ನಷ್ಟವಿಲ್ಲದ ಕೃಷಿ ಇವರದಾಯಿತು. ಆದಾಯ ನಿರಂತರ ದೊರೆಯುವಂತಾಯಿತು.

ಎರಡು ಆಕಳಿಂದ ಶುರು
ಎರಡು ಆಕಳಿನಿಂದ ದೊರೆಯುವ ಆದಾಯದೊಂದಿಗೆ ತರಕಾರಿ ಕೃಷಿಯಿಂದ ಗಳಿಸುವ ಮೊತ್ತ ಜೊತೆಯಾದಾಗ ಆರ್ಥಿಕ ಸ್ಥಿರತೆ ಇವರಲ್ಲಿ ಭದ್ರವಾಯಿತು. ಹೊಸ ಕನಸುಗಳು ಚಿಗುರೊಡೆದು ನಿಂತವು. ಹೈನುಗಾರಿಕೆ ವಿಸ್ತರಿಸಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಿ ಒಮ್ಮೆಲೇ ಇನ್ನೆರಡು ಆಕಳನ್ನು ಖರೀದಿಸಿದ್ದರು. ಆಕಳ ಸಂಖ್ಯೆ ನಾಲ್ಕಕ್ಕೇರಿತು. ಈಗ ಹೈನುಗಾರಿಕೆ ಆರಂಭಿಸಿ ನಾಲ್ಕು ವರ್ಷಗಳಾಗಿವೆ. ಒಂಭತ್ತು ಆಕಳುಗಳು ಇವರಲ್ಲಿವೆ. ದಿನ ನಿತ್ಯ ಮೂವತ್ತು ಲೀಟರ್‌ ಗಳಷ್ಟು ಹಾಲನ್ನು ಡೈರಿಗೆ ತಲುಪಿಸುತ್ತಿದ್ದಾರೆ. ಇಪ್ಪತ್ತು ಲೀಟರ್‌ಗಳಷ್ಟು ಹಾಲನ್ನು ಮನೆ ಬಾಗಿಲಲ್ಲೇ ಮಾರಾಟ ಮಾಡುತ್ತಾರೆ. ಹತ್ತಕ್ಕೂ ಅಧಿಕ ಖಾಯಂ ಗ್ರಾಹಕರು ಹಾಲನ್ನು ಒಯ್ಯತ್ತಾರೆ.

ಡೈರಿಗೆ ಹಾಕುತ್ತಿರುವ ಹಾಲಿಗೆ ಲೀಟರ್‌ ವೊಂದಕ್ಕೆ 26 ರೂ. ದೊರೆಯುತ್ತದೆ. ಮನೆ ಬಾಗಿಲಿಗೆ ಬಂದು ಒಯ್ಯುವ ಗ್ರಾಹಕರಿಗೆ ಲೀಟರ್‌ಗೆ 30 ರೂ.ನಂತೆ  ಮಾರುತ್ತಾರೆ. ಮನೆ ಪಕ್ಕದಲ್ಲಿಯೇ ಚಿಕ್ಕದಾದ ಕೊಟ್ಟಿಗೆ ಇದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಪಶು ಆಹಾರ, ನೀರು ಕುಡಿಸುವುದು, ಹಸಿರು ಮೇವಿನ ಪೂರೈಕೆಯನ್ನು ಕ್ಲುಪ್ತ ಸಮಯಕ್ಕೆ ಪೂರೈಸುತ್ತಾರೆ. ಪರಿಣಾಮ, ಹೈನುಗಾರಿಕೆಯಲ್ಲಿ ಲಾಭದಾಯಕ ಹಾದಿ ಕ್ರಮಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸುವರ್ಣಾ.

ಒಂದು ಕಾಲದಲ್ಲಿ ಕೂಲಿಗೆ ತೆರಳಿ ಕಷ್ಟ ಪಡುತ್ತಿದ್ದ ಇವರ ಪತಿ ಮಾರುತಿ ಜಾಡರ್‌ ಇದೀಗ ಪೂರ್ಣಕಾಲಿಕವಾಗಿ ಹೈನುಗಾರಿಕೆ ಹಾಗೂ ಕೃಷಿಗೆ ಇಳಿದಿದ್ದಾರೆ. ಇವರಿಗೀಗ ಆದಾಯದ ಭದ್ರತೆ ಇದೆ. ತಿಂಗಳಿಗೆ 30,000 ರೂ. ಗಳಿಸುತ್ತಿದ್ದಾರೆ.

– ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.