ಆಡು ಆಟ ಆಡೂ…
ಶಿಯೋಮಿಯಿಂದ ಗೇಮಿಂಗ್ ಫೋನ್!
Team Udayavani, Jul 22, 2019, 5:00 AM IST
ಈ ಫೋನು ಡಿಸ್‌ಪ್ಲೇಯಲ್ಲೇ ಬೆರಳಚ್ಚು ಸ್ಕ್ಯಾನರ್ ಹೊಂದಿದೆ. ಫೋನಿನ ಪರದೆ ಹಾಗೂ ಹಿಂಬದಿ ಎರಡಕ್ಕೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಇದೆ. ಇದು 6.39 ಇಂಚಿನ ಪರದೆ ಹೊಂದಿದೆ. ಸೆಲ್ಫಿ ಕ್ಯಾಮರಾ ಪಾಪ್ ಆಪ್ ಇರುವುದರಿಂದ ನೀರಿನ ಹನಿಯಂತಹ ಡಿಸ್‌ಪ್ಲೇ ಗೊಡವೆಯಿಲ್ಲ. ಇದೇ ಮೊದಲ ಬಾರಿಗೆ ರೆಡ್‌ಮಿ ಫೋನ್‌ವೊಂದಕ್ಕೆ ಅಮೋಲೆಡ್ ಪರದೆ ಅಳವಡಿಸಲಾಗಿದೆ.
ಉನ್ನತ ದರ್ಜೆಯ ತಾಂತ್ರಿಕ ಸೌಲಭ್ಯಗಳುಳ್ಳ ಮೊಬೈಲ್‌ಗಳನ್ನು ಫ್ಲಾಗ್‌ಶಿಪ್ ಮೊಬೈಲ್ ಎನ್ನಲಾಗುತ್ತದೆ. ಹಲವಾರು ಬಾರಿ ಈ ಅಂಕಣದಲ್ಲಿ ಹೇಳಿರುವಂತೆ ಇದರಲ್ಲಿ ಅತ್ಯುನ್ನತ ಪ್ರೊಸೆಸರ್, ಹೆಚ್ಚಿನ ರ್ಯಾಮ್, ಉತ್ತಮ ಕ್ಯಾಮರಾ ಮತ್ತು ಮೊಬೈಲ್‌ನಲ್ಲಿ ಬಳಸಿರುವ ಬಿಡಿಭಾಗಗಳು ಉನ್ನತ ಗುಣಮಟ್ಟದ್ದಾಗಿರುತ್ತವೆ. ಹಾಗಾಗಿ ಇಂಥ ಮೊಬೈಲ್‌ಗಳಿಗೆ ದರವೂ ಜಾಸ್ತಿ. 70- 80 ಸಾವಿರ ರೂ.ನಷ್ಟಿದ್ದ ಫ್ಲಾಗ್‌ಶಿಪ್ ಫೋನ್‌ಗಳನ್ನು ಒನ್‌ಪ್ಲಸ್ ಕಂಪೆನಿ ಮೂರ್ನಾಲ್ಕು ವರ್ಷಗಳ ಹಿಂದೆ 20 ಸಾವಿರಕ್ಕೆ ನೀಡುತ್ತಿತ್ತು. ಫ್ಲಾಗ್‌ಶಿಪ್ ಫೋನ್‌ಗಳು ಜನ ಸಾಮಾನ್ಯರ ಕೈಗೆ ದೊರಕುವ ಹಾಗೆ ಮಾಡಿದ ಶ್ರೇಯ ಒನ್‌ಪ್ಲಸ್‌ಗೆ ಸಲ್ಲಬೇಕು. ಈಗ ಅದರ ಫ್ಲಾಗ್‌ಶಿಪ್ ಮೊಬೈಲ್‌ಗಳು 33 ಸಾವಿರದಿಂದ ಆರಂಭವಾಗಿ 58 ಸಾವಿರದವರೆಗೆ ತಲುಪಿವೆ! ಆದರೂ 33 ಸಾವಿರಕ್ಕೆ ದೊರಕುವ ಒನ್‌ಪ್ಲಸ್ 7 ಮಿತವ್ಯಯಕರ ಎನ್ನಲಡ್ಡಿಯಿಲ್ಲ.
ಇರಲಿ, ಈಗ ನಾವು ವಿಷಯಕ್ಕೆ ಬರೋಣ. ಭಾರತದಲ್ಲಿ ಆರಂಭಿಕ ಮತ್ತು ಮಧ್ಯಮ ದರ್ಜೆಯ ಮೊಬೈಲ್‌ಗಳನ್ನಷ್ಟೇ ಬಿಡುಗಡೆ ಮಾಡಿ, ಇದಕ್ಕಿಂತ ಜಾಸ್ತಿ ಹೋದರೆ ಇಲ್ಲಿ ಯಶಸ್ಸು ಕಷ್ಟ ಎಂದು ಶಿಯೋಮಿ ಕಂಪೆನಿ ಭಾವಿಸಿತ್ತು. ಮಧ್ಯ ಒಂದೆರಡು ಹೆಚ್ಚಿನ ದರದ ಮೊಬೈಲ್‌ಗಳನ್ನು ಭಾರತಕ್ಕೆ ಬಿಟ್ಟಿತಾದರೂ ಅವು ಅಂಥ ಯಶಸ್ಸು ಕಾಣಲಿಲ್ಲ. ಹೀಗಾಗಿ ಈ ಕಂಪೆನಿ ಭಾರತದಲ್ಲಿ ಫ್ಲಾಗ್‌ಶಿಪ್ ತಂಟೆಗೆ ಹೋಗದೇ 17 ಸಾವಿರ ರೂ.ಗಳೊಳಗಿನ ಮೊಬೈಲ್‌ಗಳನ್ನು ಮಾರಾಟ ಮಾಡಿಕೊಂಡು ಹಾಯಾಗಿತ್ತು. ಆದರೆ ಕಳೆದ ವರ್ಷ ಒಂದು ಪ್ರಯೋಗ ಮಾಡಿತ್ತು. ಪೊಕೋ ಎಫ್1 ಎಂಬ ಮೊಬೈಲನ್ನು 20 ಪ್ಲಸ್ ಸಾವಿರದ ಆಸುಪಾಸಿನಲ್ಲಿ ಬಿಡುಗಡೆ ಮಾಡಿತು. ಇದಕ್ಕೆ ಸ್ನಾಪ್‌ಡ್ರಾಗನ್ ಫ್ಲಾಗ್‌ಶಿಪ್ ಪ್ರೊಸೆಸರ್ ಹಾಕಿತು. ದರ ಕಡಿಮೆ ಇಟ್ಟಿದ್ದರಿಂದಾಗಿ ಲೋಹದ ದೇಹದ ಬದಲು ಪ್ಲಾಸ್ಟಿಕ್ ಇತ್ತು. ಈ ಪ್ರಯೋಗ ಭಾರತದಲ್ಲಿ ಬಹಳ ಯಶಸ್ಸು ಕಂಡಿತು. ಇದರಿಂದ ಉತ್ತೇಜಿತವಾದ ಶಿಯೋಮಿ ಈಗ ರೆಡ್‌ಮಿ ಬ್ರಾಂಡ್‌ನಡಿಯಲ್ಲಿ ರೆಡ್‌ಮಿ ಕೆ20 ಪ್ರೊ ಎಂಬ ಹೊಸ ಮಿತವ್ಯಯ ದರದ ಫ್ಲಾಗ್‌ಶಿಪ್ ಮೊಬೈಲನ್ನು ಕಳೆದ ಬುಧವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.
ಅಮೋಲೆಡ್ ಪರದೆ ಮತ್ತು ಬ್ಯಾಟರಿ
ಈ ಫೋನು ಡಿಸ್‌ಪ್ಲೇಯಲ್ಲೇ ಬೆರಳಚ್ಚು ಸ್ಕ್ಯಾನರ್ ಹೊಂದಿದೆ. ಫೋನಿನ ಪರದೆ ಹಾಗೂ ಹಿಂಬದಿ ಎರಡಕ್ಕೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಇದೆ. ಇದು 6.39 ಇಂಚಿನ ಪರದೆ ಹೊಂದಿದೆ. ಯಾವುದೇ ನಾಚ್ ಇರದೆ ಸಂಪೂರ್ಣ ಪರದೆಯಿರುತ್ತದೆ. ಸೆಲ್ಫಿà ಕ್ಯಾಮರಾ ಪಾಪ್ ಆಪ್ ಇರುವುದರಿಂದ ನೀರಿನ ಹನಿಯಂತಹ ಡಿಸ್‌ಪ್ಲೇ ಗೊಡವೆಯಿಲ್ಲ. ಇದೇ ಮೊದಲ ಬಾರಿಗೆ ರೆಡ್‌ಮಿ ಫೋನ್‌ವೊಂದಕ್ಕೆ ಅಮೋಲೆಡ್ ಪರದೆ ಅಳವಡಿಸಲಾಗಿದೆ. ಅಮೋಲೆಡ್ ಪರದೆಯ ವೀಕ್ಷಣೆ ಆಕರ್ಷಕವಾಗಿರುತ್ತದೆ. ಕಣ್ಣಿಗೆ ಹಿತವಾಗಿದ್ದು, ಕಡಿಮೆ ಬ್ಯಾಟರಿ ಬಳಸುತ್ತದೆ. ಈ ಪರದೆ 1080×2340 ಪಿಕ್ಸಲ್‌ಗಳನ್ನು (ಎಫ್ಎಚ್‌ಡಿ ಪ್ಲಸ್) ಹೊಂದಿದೆ.
ಬ್ಯಾಟರಿ ಸಾಧಾರಣವಾಗಿದ್ದು 4000 ಎಂಎಎಚ್, ಇದಕ್ಕೆ 9ವಿ/2ಎ (27ವ್ಯಾಟ್) ಫಾಸ್ಟ್ ಚಾರ್ಜರ್ ನೀಡಲಾಗಿದೆ. ಟೈಪ್ ಸಿ ಪೋರ್ಟ್ ಹೊಂದಿದೆ. ಆಡಿಯೋ ಪ್ರಿಯರಿಗಾಗಿ ಕ್ವಾಲಕಾಂ ಡಬ್ಲೂಸಿಡಿ 9340 ಆಡಿಯೋ ಚಿಪ್ ನೀಡಲಾಗಿದೆ. 3.5 ಎಂ.ಎಂ. ಆಡಿಯೋ ಜಾಕ್ ಪ್ರಿಯರಿಗೆ ಸಂತಸದ ವಿಷಯವೆಂದರೆ, ಇದರಲ್ಲಿ 3.5 ಎಂ.ಎಂ. ಆಡಿಯೋ ಜಾಕ್ ಇದೆ!
ಮಧ್ಯಮ ದರ್ಜೆಯ ಕೆ 20
ಕೆ20 ಸರಣಿಯಲ್ಲೇ ಇನ್ನೊಂದು ಫೋನನ್ನು ಸಹ ರೆಡ್‌ಮಿ ಇದರ ಜೊತೆ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರೊಸೆಸರ್ ಒಂದನ್ನು ಹೊರತುಪಡಿಸಿದರೆ ಇನ್ನೆಲ್ಲಾ ತಾಂತ್ರಿಕ ಅಂಶಗಳು, ವಿನ್ಯಾಸ ಎಲ್ಲವೂ ಸೇಮ್ ಟು ಸೇಮ್ ಕೆ. 20 ಪ್ರೊ ತರಹವೇ. ಇದರಲ್ಲಿ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ಅಳವಡಿಸಲಾಗಿದೆ. ಇದು ಮಧ್ಯಮ ದರ್ಜೆಯ ಪ್ರೊಸೆಸರ್. ಈ ಮೊಬೈಲ್ ಸಹ ಎರಡು ಆವೃತ್ತಿ ಹೊಂದಿದೆ. ಇದರ ದರ ಪಟ್ಟಿ ಇಂತಿದೆ. 6 ಜಿಬಿ 64 ಜಿಬಿ ಆವೃತ್ತಿಯ ಬೆಲೆ 21,999 ರೂ., 6ಜಿಬಿ ರ್ಯಾಮ್128 ಜಿಬಿ ಆಂತರಿಕ ಸಂಗ್ರಹವುಳ್ಳ ಆವೃತ್ತಿಯ ಬೆಲೆ 23,999 ರೂ. ಈ ಎಲ್ಲ ಮೊಬೈಲ್‌ಗಳೂ ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯ. ಫ್ಲಿಪ್‌ಕಾರ್ಟ್, ಮಿ.ಕಾಂ, ಮಿಸ್ಟೋರ್‌ಗಳಲ್ಲಿ ಲಭ್ಯ. ಎಲ್ಲ ಸರಿ, ಶಿಯೋಮಿ ಬ್ರಾಂಡ್‌ನ ಒಂದು ದೊಡ್ಡ ತಲೆನೋವಾದ ಫ್ಲಾಶ್‌ಸೇಲ್‌ನಲ್ಲಿ ಕಾದು ಇದನ್ನು ಕೊಳ್ಳಬೇಕು!
ಮೂರು ಲೆನ್ಸಿನ ಕ್ಯಾಮರಾ
ಕ್ಯಾಮರಾ ವಿಭಾಗಕ್ಕೆ ಬಂದರೆ ಇದು ಹಿಂಬದಿಯೇ ಮೂರು ಲೆನ್‌ಗಳುಳ್ಳ ಕ್ಯಾಮರಾ ಹೊಂದಿದೆ. 48 ಮೆ.ಪಿ. ಸೋನಿ ಐಎಂಎಕ್ಸ್ 586 ಮುಖ್ಯ ಸೆನ್ಸರ್, 13 ಮೆ.ಪಿ. ವೈಡ್ ಆ್ಯಂಗಲ್ (ಚಿಕ್ಕ ರೂಮಿನಲ್ಲಿ ದೊಡ್ಡ ಗುಂಪಿನ ಫೋಟೋ ತೆಗೆಯಬಹುದಾದ) ಸೆನ್ಸರ್ ಹಾಗೂ 8 ಮೆ.ಪಿ. ಟೆಲಿಫೋಟೋ ಸೆನ್ಸರ್ ಹೊಂದಿದೆ. 4ಕೆ ವಿಡಿಯೋ ರೆಕಾರ್ಡಿಂಗ್ ಇದೆ.ಸ್ಲೋ ಮೋಷನ್ ವಿಡಿಯೋ ತೆಗೆಯುವ ಸೌಲಭ್ಯ ಇದೆ. ಸೆಲ್ಫಿà ಕ್ಯಾಮರಾಕ್ಕೆ ಬಂದರೆ ಇದು 20 ಮೆಪಿ. ಪಾಪ್‌ಅಪ್ (ಮೊಬೈಲ್ ಫೋನ್‌ನೊಳಗಿಂದ ಚಿಮ್ಮುವ ಕ್ಯಾಮರಾ!) ಕ್ಯಾಮರಾ ಇದೆ.
ಉತ್ಕೃಷ್ಟ ಪ್ರೊಸೆಸರ್
ಇದರಲ್ಲಿ ಪ್ರಸ್ತುತ, ಮೊಬೈಲ್ ಪ್ರೊಸೆಸರ್‌ಗಳಲ್ಲೇ ಅತ್ಯುನ್ನತವಾದ ಸ್ನಾಪ್‌ಡ್ರಾಗನ್ 855 ಚಿಪ್‌ಸೆಟ್ ಇದೆ. ಇದರ ವೇಗ 2.84 ಗಿಗಾ ಹಟ್ಜ್ ಹೊಂದಿದ್ದು, ಗ್ರಾಫಿಕ್‌ಗಾಗಿ ಅಡ್ರೆನೋ 640ಚಿಪ್‌ಸೆಟ್ ಪ್ರತ್ಯೇಕವಾಗಿ ನೀಡಿದೆ. ಈ ಎಲ್ಲ ಅಂಶಗಳಿಂದ ಇದು ಅತ್ಯಂತ ವೇಗವಾದ ಕಾರ್ಯಾಚರಣೆ ನಡೆಸುತ್ತದೆ. ಗೇಮಿಂಗ್‌ಗೆ ಇದು ಸೂಕ್ತವಾಗಿದೆ. ಎರಡು ಆವೃತ್ತಿಗಳನ್ನು ಈ ಮೊಬೈಲ್ ಹೊಂದಿದೆ. ರೂ. 27999 ಕ್ಕೆ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ, 30,999ರೂ.ಗೆ 8ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ.
-ಕೆ. ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.