ಚೆಂಡು ಎಂದರೆ ಚೆಂಡೂ…


Team Udayavani, Jun 17, 2019, 5:00 AM IST

CHENDU10

ಬಾಗಲಕೋಟೆಯ ಸನಿಹವಿರುವ ಶಿರೂರು ಗ್ರಾಮಕ್ಕೆ ಕಾಲಿಟ್ಟರೆ, ಹೂವಿನದ್ದೇ ಪರಿಮಳ. ದುಂಡುಮಲ್ಲಿಗೆ, ಗಲಾಟೆ ಹೂ, ಗುಲಾಬಿ, ಚಂಡು ಹೂಗಳು ಇಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತವೆ. ಕಬ್ಬು, ಬಾಳೆ, ಸಜ್ಜಿ, ಜೋಳ, ಕಡಲೆ, ಶೇಂಗಾ ಬೆಳೆಗೆ ಸೀಮಿತವಾಗಿದ್ದ ಶಿರೂರು ಗ್ರಾಮದಲ್ಲಿ ಈಗೀಗ ಹೂಗಳದ್ದೇ ಪಾರುಪತ್ಯ. ಅದರಲ್ಲೂ ಚೆಂಡು ಹೂ, ಇಲ್ಲಿನ ರೈತರಿಗೆ ಚೆಂದದ ಬದುಕು ಕಲ್ಪಿಸಿಕೊಟ್ಟಿದೆ.

ಆರಂಭದಲ್ಲಿ ಶಿರೂರಿನ ರೈತ ನಾಗಪ್ಪ ಅಚನೂರ ಅವರು ಚೆಂಡು ಹೂ ಬೆಳೆಯಲು ಮುಂದಾದಾಗ, ಯೋಗ್ಯ ಬೆಲೆ ಸಿಗದೇ ನಷ್ಟ ಅನುಭವಿಸಿದರಂತೆ. ಸತತ ನಷ್ಟದಿಂದ ಕಂಗೆಟ್ಟರೂ, ಧೃತಿಗೆಡದೆ, ಮತ್ತೆ ತಮ್ಮ ಎರಡು ಎಕರೆಯಲ್ಲಿ ಚೆಂಡು ಹೂ ಬೆಳೆದರು.
ಜಮೀನಿನಲ್ಲಿ 3 ಅಡಿಯ ಸಾಲುಗಳನ್ನು ಬಿಡಿಸಿ, 15 ಸಾವಿರ ಸಸಿಗಳನ್ನು, ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿಯ ಆಸರೆ ನೀಡಿದರು. ಕೇವಲ 45 ದಿನಗಳಲ್ಲಿ ಗಿಡಗಳು, ಹೂ ಬಿಡಲಾರಂಭಿಸಿದವು. ಸತತ ಬರದಿಂದ ಕಂಗೆಟ್ಟಿದ್ದ ರೈತನಿಗೆ ಬೇಸಿಗೆಯಲ್ಲಿ ಉತ್ತಮ ಲಾಭ ಬೆಳೆಯಾಗಿ, ಚೆಂಡು ಹೂ ಕಂಡಿತು. ಹೂ ಬಿಡಲು ಆರಂಭಿಸಿದ ಒಂದೇ ತಿಂಗಳಲ್ಲಿ ನಾಗಪ್ಪ, 1 ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾರೆ. ಪ್ರತಿವಾರ 2 ರಿಂದ 3 ಸಲ ಹೂ ಕಟಾವು ಮಾಡುತ್ತಾರೆ.

ಬಾಂಬೆಗೆ ಹೊರಟ ಹೂವು…
ನಾಗಪ್ಪ ಬೆಳೆದ ಚೆಂಡು ಹೂ ಬಾಂಬೆ ಮಾರುಕಟ್ಟೆಯಲ್ಲೂ ಭರ್ಜರಿ ಹಣ ಗಳಿಸಿತು. “ಕರ್ನಾಟಕದ ಮಾರುಕಟ್ಟೆಗಿಂತ ಹೂರ ರಾಜ್ಯದಲ್ಲಿ ಸಾಕಷ್ಟು ಲಾಭ ಸಿಗುತ್ತದೆ. ಒಂದು ಕೆ.ಜಿ.ಗೆ ಅಂದಾಜು 50- 80 ರೂ. ವರೆಗೆ ಲಾಭ ಸಿಗುತ್ತದೆ’ ಅಂತಾರೆ ನಾಗಪ್ಪ. ಅಲ್ಲಿ ಮಾರುಕಟ್ಟೆಯ ಬೆಲೆ ಇಳಿಮುಖ ಕಂಡಾಗ, ಬಾಗಲಕೋಟೆ ಮಾರುಕಟ್ಟೆಗೆ ಸಾಗಿಸುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30- 50 ರೂ. ವರೆಗೆ ಆದಾಯ ಸಿಗುತ್ತದೆ. ಹಬ್ಬ ಹರಿದಿನಗಳಲ್ಲಿ ಅಮವಾಸ್ಯೆಯ ದಿನಗಳಲ್ಲಿ 100 ರೂ.ವರೆಗೂ ಬೆಲೆ ಸಿಗುತ್ತದಂತೆ.

ಹಳದಿ ಚೆಂಡು ಹೂವಿನಲ್ಲಿ ಹಲವಾರು ತಳಿಗಳಿವೆ. ಆದರೆ, ಅದರಲ್ಲಿ ಗೋಲ್ಡ್‌ ಸ್ಪಾಟ್‌ 2 ಮತ್ತು ಕಲ್ಕತ್ತಾ ಆರೆಂಜ್‌ ತಳಿಯ ಚೆಂಡು ಹೂವಿಗೆ ಬೇಡಿಕೆ ಹೆಚ್ಚು. ಇವು ಗಾತ್ರದಲ್ಲಿ ದೊಡ್ಡದಾಗಿರದೇ, ನೋಡಲು ಆಕರ್ಷಕವಾಗಿರುತ್ತವೆ.ಓದಿದ್ದು ಎಸ್ಸೆಸ್ಸೆಲ್ಸಿಯೇ ಆದರೂ, ನಾಗಪ್ಪ (ಮೊ. 9008153295) ಇಂದು ಕೃಷಿಯಿಂದ ನೆಮ್ಮದಿ ಬದುಕು ಕಾಣುತ್ತಿದ್ದಾರೆ.

ಯಶಸ್ಸಿನ ಗುಟ್ಟು…
ಕ್ರಿಮಿನಾಶಕ ಸಿಂಪಡಣೆಯಿಂದ ಹೂವಿನ ಫ‌ಸಲು ಬೇಗ ಸಿಗುತ್ತದೆ. ಅಲ್ಲದೇ, ದುಂಡು ದುಂಡಾಗಿಯೂ ಅರಳುತ್ತವೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದರೆ, ಜಾಸ್ತಿ ನೀರು ಬೇಡುವುದಿಲ್ಲ. ನಾಗಪ್ಪ ಅವರು ತಮ್ಮ ಉಳಿದ 25 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಕಲ್ಲಂಗಡಿ ಬೆಳೆದಿದ್ದಾರೆ. ಹಬ್ಬದ ಸೀಜನ್‌ ನೋಡಿಕೊಂಡು ಮುಂಚಿತವಾಗಿ ಹಬ್ಬಕ್ಕೆ ಬರುವ ಹಾಗೆ ನಾಟಿ ಮಾಡಿದರೆ ಲಾಭ ನಿಶ್ಚಿತ ಎನ್ನುವುದು ನಾಗಪ್ಪ ಅವರ ಸಕ್ಸಸ್ಸಿನ ಗುಟ್ಟು.

ಪ್ರಶಾಂತ ಜಿ. ಹೂಗಾರ

ಟಾಪ್ ನ್ಯೂಸ್

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.