ಫಾರಂ ನಂಬರ್‌ 26 AS ಮತ್ತು ಇತರ ಕಥೆಗಳು


Team Udayavani, Jul 10, 2017, 2:55 PM IST

10-ISIRI-9.jpg

ಜುಲೈ ತಿಂಗಳು ಬಂತೆಂದರೆ ಆದಾಯ ಕರದ ಬಗ್ಗೆ ಗೊಂದಲ ಶುರುವಾಗುತ್ತದೆ. ಮಾಸಾಂತ್ಯದಲ್ಲಿ ರಿಟರ್ನ್ ಸಲ್ಲಿಕೆ ಮಾಡಿ ಎಲ್ಲಾ ಲೆಕ್ಕ ಚುಕ್ತಾ ಮಾಡಿಬಿಡಬೇಕು ಎನ್ನುವ ಆತುರ ಎಲ್ಲರಿಗೂ ಇರುತ್ತದೆ. ಆದರೆ ಗೊಂದಲಗಳು ಮುಗಿಯುವುದೇ ಇಲ್ಲ. ಈ ಕೆಳಗೆ ಕೆಲ ಪ್ರಮುಖ ಗೊಂದಲಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ. ಪರಿಶೀಲಿಸಿಕೊಳ್ಳಿ. 

ವಿತ್ತ ವರ್ಷ 2016-17, ಮಾರ್ಚ್‌ 31, 2017ರಂದು ಕೊನೆಗೊಂಡಿದ್ದು ಆ ವರ್ಷದ ಆದಾಯ ಮತ್ತು ಕರದ ಬಗ್ಗೆ ಕರ ಹೇಳಿಕೆ ಅಥವಾ ರಿಟರ್ನ್ಸ್ ಫೈಲಿಂಗ್‌ ಅನ್ನು ಇದೇ ಜುಲೈ ತಿಂಗಳ ಒಳಗಾಗಿ ಮಾಡಬೇಕಾಗಿದೆ. ಮೊತ್ತ ಮೊದಲನೆಯದಾಗಿ ಸರ್ವರೂ ಈ ಒಂದು ಅಂಶವನ್ನು ಸರಿಯಾಗಿ ಮನನ ಮಾಡಿ ಕೊಳ್ಳಬೇಕು. ಮೊನ್ನೆ ಫೆಬ್ರವರಿಯಲ್ಲಿ ಘೋಷಣೆ ಯಾದ ಬಜೆಟ್ಟಿನ ಅಂಶಗಳು ಸದರಿ ಕರ ಸಲ್ಲಿಕೆಗೆ ಅನ್ವಯವಾಗುವುದಿಲ್ಲ. (ಫೆಬ್ರವರಿ 2017 ರಲ್ಲಿ ಘೋಷಣೆಯಾದ ಬಜೆಟ್‌ ವಿತ್ತೀಯ ವರ್ಷ 2017-18 ಅಂದರೆ ಅಸೆಸೆ¾ಂಟ್‌ ವರ್ಷ 2018-19 ಕ್ಕೆ ಅನ್ವಯವಾಗುತ್ತದೆ.) ಸದರಿ ರಿಟರ್ನ್ ಫೈಲಿಂಗ್‌ ವಿತ್ತೀಯ ವರ್ಷ 2016-17 ಅಂದರೆ ಅಸೆಸೆ¾ಂಟ್‌ ವರ್ಷ 2017-18 ಕ್ಕೆ ಸಂಬಂಧ ಪಟ್ಟದ್ದಾಗಿದೆ. ಇದಕ್ಕೆ ಅನ್ವಯವಾಗುವ ಬಜೆಟ್‌ 2016ರಲ್ಲಿ ಘೋಷಿತವಾದದ್ದು. ಈ ಸರಳ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಸಾವಿರಾರು ಜನ ಗೊಂದಲಕ್ಕೆ ಒಳಗಾಗುತ್ತಾರೆ. ನೀವು ಆ ಕೆಲಸ ಮಾಡಬೇಡಿ. 

ಆದಾಯದ ಮಾಹಿತಿ
ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಆ ಬಳಿಕ. ಆದರೆ  ಆದಾಯ  ತೆರಿಗೆಯಿಂದ  ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿರುತ್ತದೆ. ಕರ ಕಾನೂನು ತೆರಿಗೆಯನ್ನು ತಪ್ಪಿಸುವ ಕೆಲವು ಕಾನೂನಿನ್ವಯ ಹಾದಿಗಳನ್ನು ಕೊಟ್ಟಿದೆ. ಆದರೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ತಪ್ಪಿಸಲು ಹವಣಿಸುವುದು ಶುದ್ಧತಪ್ಪು ಮತ್ತು ಅದು ಕರಕಳ್ಳತನ.
ನಮ್ಮಲ್ಲಿ ಬಹುತೇಕ ಜನರು ತಪ್ಪು ದಾರಿಯಲ್ಲಿ ಹೋಗಿ ಕರಕಳ್ಳತನ ಮಾಡುವುದು ವ್ಯಾಪಕವಾಗಿ ನಡೆಯುತ್ತಿದೆ. ಅದರಲ್ಲಿ ಅತ್ಯಂತ ಮೂಲಭೂತವಾದ ಪ್ರಕಾರವೆಂದರೆ ಆದಾಯದ ಬಗ್ಗೆ ಚಕಾರ ಸುದ್ದಿ ಎನ್ನುತ್ತದೆ.  ಹಾಗೆಯೇ ಸುಮ್ಮನೆ ಇದ್ದು ಬಿಡುವುದು, ಸಂಬಳದ ಆದಾಯ ಮತ್ತಿತರ ಸಾಂಸ್ಥಿಕ ಆದಾಯಗಳನ್ನು ಹೊರತುಪಡಿಸಿ ಉಳಿದವರು ಈ ರೀತಿಯಲ್ಲಿ ಆದಾಯವನ್ನು ತೋರಿಸದೆ ಸುಮ್ಮನಿದ್ದು ಕರಕಳ್ಳತನ ಮಾಡುವುದೇ ಜಾಸ್ತಿ. ಕೇಳಿದರೆ ಯಾವನಿಗೆ ಗೊತ್ತಾಗುತ್ತದೆ?ಎನ್ನುವ ಭಾವ, ಸಿಕ್ಕಿ ಬಿದ್ರೆ ಅಲ್ವಾ? ಆಮೇಲೆ ನೋಡೋಣ ಎನ್ನುವ ಹಾರಿಕೆಯ ಉತ್ತರ. ಇದು ಶುದ್ಧ ಅಪರಾಧ ಹಾಗೂ ಭ್ರಷ್ಟಾಚಾರದ ಮೇಲೆ ನಾವುಗಳು ಇಟ್ಟಿರುವ ನಂಬಿಕೆಗೆ ಸಾಕ್ಷಿ$. ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿದ್ದು ಮಾತ್ರ ಕಾನೂನುಬಾಹಿರ ಕಪ್ಪು ಹಣ. ನಾವು ಕರ ತಪ್ಪಿಸಿ ಮನೆಯೊಳಗೆ ಇಟ್ಟಿದ್ದು ಜಾಣ್ಮೆಯ ಉಳಿತಾಯ ಎನ್ನುವ ಭೂಪರು ನಮ್ಮಲ್ಲಿ ಹಲವರಿದ್ದಾರೆ. 

ಅದೇನೇ ಇರಲಿ; ಕರ ಇಲಾಖೆ ಲಾಗಾಯ್ತಿನಿಂದ ಕರಚೋರರನ್ನು ಹಿಡಿಯಲು ಬಹುಕೃತ ವೇಷವನ್ನು ಹಾಕುತ್ತಲೇ ಇದೆ. ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಈ ಕೆಲಸ ತುಂಬಾ ಸುಲಭವಾಗಿಯೂ ನಡೆಯುತ್ತಿದೆ. ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಎಷ್ಟೋ ವಿವರಗಳನ್ನು ಕಲೆ ಹಾಕಿ, ಆ ಮೂಲಕ ಆದಾಯ ತೆರಿಗೆಯನ್ನು  ಸಮರ್ಪಕವಾಗಿ  ಸಲ್ಲಿಕೆಯಾಗುವಂತೆ ನೋಡಿಕೊಳ್ಳುವುದು ಇಲಾಖೆಯ ಕರ್ತವ್ಯ. 

ಫಾರ್ಮ್ 26ಎಎಸ್‌
ಏನಿದು ಫಾರ್ಮ್ 26ಎಎಸ್‌? ಕರಕಟ್ಟುವವರೂ ಹಾಗೂ ಕರಕಳ್ಳತನ ಮಾಡುವವರೂ ಅತ್ಯಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರ ಇದು. ಆದಾಯ ತೆರಿಗೆ ಇಲಾಖೆ ಪಾನ್‌ಕಾರ್ಡ್‌ ಮುಖಾಂತರ ಎಲ್ಲಾ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪಾನ್‌ಕಾರ್ಡ್‌ ಮುಖಾಂತರ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಪ್ರತಿಯೊಬ್ಬರೂ ಕಟ್ಟಿದ ಆದಾಯಕರದ ಪಟ್ಟಿಯನ್ನು ಫಾರ್ಮ್ 26 ಎಎಸ್‌ ಎಂಬ ವೈಯಕ್ತಿಕ ಪಟ್ಟಿಯಲ್ಲಿ ನೋಂದಾಯಿಸುತ್ತಾ ಹೋಗುತ್ತದೆ. ನಿಮ್ಮ ಸಂಬಳದಿಂದ,  ಬ್ಯಾಂಕ್‌ ಬಡ್ಡಿಯಿಂದ, ಕಮಿಷನ್‌ ಪಾವತಿಯಿಂದ ಕಡಿತವಾದ ಟಿಡಿಎಸ್‌ (ಟ್ಯಾಕ್ಸ್‌ ಡೆಡಕ್ಟೆಡ್‌ ಅಟ್‌ ಸೋರ್ಸ್‌) ಅಲ್ಲದೆ ನೀವು ಸ್ವತಃ ಕಟ್ಟಿದ ಅಡ್ವಾನ್ಸ್‌ ಟ್ಯಾಕ್ಸ್‌ ಮತ್ತು ಸೆಲ್ಫ್ ಅಸೆಸ್ಸೆ$¾ಂಟ್‌ ಟ್ಯಾಕ್ಸ್‌ ವಿವರಗಳು ಈ ಫಾರ್ಮ್ 26 ಎಎಸ್‌ನಲ್ಲಿ ದಾಖಲಾಗುತ್ತಾ ಹೋಗುತ್ತದೆ. 

ಕರ ಇಲಾಖೆ ಈ ಪಟ್ಟಿಯನ್ನು ಹಿಡಿದುಕೊಂಡು ನೀವು ತುಂಬುವ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಕೂಲಂಕಶವಾಗಿ ಪರಿಶೀಲಿಸುತ್ತದೆ. ಫಾರ್ಮ್ 26 ಎಎಸ್‌ ಪ್ರಕಾರ ಟಿಡಿಎಸ್‌ ಮೂಲಕ ದಾಖಲಾದ ಎಲ್ಲಾ ಆದಾಯಗಳೂ ನಿಮ್ಮ ಟ್ಯಾಕ್ಸ್‌ ರಿಟರ್ನ್ ಫೈಲಿಂಗ್‌ನಲ್ಲಿ ಬಂದಿರಬೇಕು ಹಾಗೂ ಟಿಡಿಎಸ್‌ ಅಲ್ಲದೆ ಬಾಕಿ ಉಳಿದ ತೆರಿಗೆಯನ್ನು – ನಿಮ್ಮ ಸ್ಲಾಬ್‌ಗ ಅನ್ವಯವಾಗುವಂತೆ-ಕಟ್ಟಿರಬೇಕು. ಈ ರೀತಿ ತಾಳೆಯಾಗದ ಎಲ್ಲಾ ವ್ಯವಹಾರಗಳನ್ನೂ ಆದಾಯ ತೆರಿಗೆ ಇಲಾಖೆ ತನ್ನ ಬೃಹತ್‌ ಕಂಪ್ಯೂಟರಿನ ಸಹಾಯದಿಂದ ಪತ್ತೆ ಹಚ್ಚಿ ವೈಯಕ್ತಿಕ ನೋಟೀಸುಗಳನ್ನು ಕಳೆದ ಕೆಲ ವರ್ಷಗಳಿಂದ ಜಾರಿ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವು ಬಾರಿ ಚರ್ಚೆ ಮಾಡಿದ್ದರೂ ಎಂಥದೂ ಆಗುವುದಿಲ್ಲ ಮಾರಾಯೆ ಎಂದು ಸಮಾಧಾನ ಪಟ್ಟುಕೊಳ್ಳುವವರು ಈಗ ನಿಧಾನವಾಗಿ ಎಚ್ಚೆತ್ತುಕೊಂಡಿದ್ದಾರೆ. ಲೆಫ್ಟ್ರೈಟ್‌ ಐಂಡ್‌ ಸೆಂಟರ್‌ ಎನ್ನುವಂತೆ 26 ಎಎಸ್‌ನಲ್ಲಿ ಸಮಸ್ಯೆ ಇರುವವರೆಲ್ಲಾ ಈಗ ನೋಟೀಸು ಪಡೆದುಕೊಂಡು ಉತ್ತರಿಸಲು ಪರದಾಡುತ್ತಾ ಕಂಗಲಾಗಿದ್ದಾರೆ.

15ಜಿ/15ಎಚ್‌:
26 ಎಎಸ್‌ ಫಾರ್ಮು ಟಿಡಿಎಸ್‌ ಕಡಿತವಾದಾಗ ಮಾತ್ರವೇ ಆದಾಯವನ್ನು ದಾಖಲಿಸಿ ಪಟ್ಟಿ ಮಾಡುತ್ತದೆ ಎನ್ನುವ ಮೂಲಭೂತ ತತ್ವವನ್ನು ಹಲವು ಬುದ್ಧಿವಂತರು ಮನನ ಮಾಡಿಕೊಂಡಿದ್ದಾರೆ. ಹಾಗಾದರೆ ಟಿಡಿಎಸ್‌ ಕಡಿತವಾಗದಂತೆ ನೋಡಿಕೊಂಡರೆ ಸಾಕು; ಕರ ಇಲಾಖೆಯ ದೃಷ್ಟಿಯಿಂದ ತಪ್ಪಿಸಿಕೊಂಡಂತೆಯೇ ಸರಿಎನ್ನುವ ಮಹಾ ಸಂಶೋಧನೆಯನ್ನು ಹಲವರು ಮಾಡಿಕೊಂಡರು. ಆ ಪ್ರಕಾರ ಬ್ಯಾಂಕುಗಳಲ್ಲಿ ಇಟ್ಟ ಡೆಪಾಸಿಟ್ಟುಗಳಿಗೆ ಟಿಡಿಎಸ್‌ ಕಡಿತವಾಗದಂತೆ ಫಾರ್ಮ್ 15ಜಿ ಅಥವಾ 15ಜಿ ತುಂಬಿ ಕೊಡಲು ಆರಂಭಿಸಿದರು. 

ಈ ಫಾರ್ಮು ತುಂಬಿ ಕೊಟ್ಟರೆ ಟಿಡಿಎಸ್‌ ಕಡಿತ ಆಗುವುದಿಲ್ಲ ಎನ್ನುವುದೇನೋ ಸರಿ. ಆದರೆ ಮೂಲಭೂತವಾಗಿ ಕರಾರ್ಹರು ಈ ಫಾರ್ಮ ಅನ್ನು ತಮ್ಮ ಕೈಯಿಂದ ಮುಟ್ಟುವಂತೆಯೇ ಇಲ್ಲ. ಈ ಫಾರ್ಮಿನಲ್ಲಿ ನಾನು ಕರಾರ್ಹನಲ್ಲ, ಆದ ಕಾರಣ ನನ್ನ ಬಡ್ಡಿಯ ಮೇಲೆ ಟಿಡಿಎಸ್‌ ಕಡಿತ ಮಾಡಬೇಡಿ ಎಂದು ಬರೆದಿರುತ್ತದೆ. ಅದನ್ನು ಗಾಳಿಗೆ ತೂರಿ ಲಕ್ಷಾಂತರ ಜನರು ಬೇಕಾಬಿಟ್ಟಿ ಈ ಫಾರ್ಮುಗಳನ್ನು ತುಂಬಿ ಬ್ಯಾಂಕುಗಳಲ್ಲಿ ನೀಡಿದ್ದಾರೆ. ಕೆಲವೆಡೆ ಬ್ಯಾಂಕು ಸಿಬ್ಬಂದಿಗಳೇ ಅರಿತೋ ಅರಿಯದೆಯೋ ಈ ರೀತಿ ಮಾಡಲು ಠೇವಣಿದಾರರನ್ನು ಪ್ರೇರೇಪಿಸಿದ್ದಾರೆ. ಯಾರು ಏನೇ ಹೇಳಿದರೂ ಸಹಿ ಹಾಕಿದವನೇ ಅಂತಿಮ ಹೊಣೆಗಾರನಾಗುತ್ತಾನೆ ಎನ್ನುವುದನ್ನು ಜನರು ಮರೆಯಬಾರದು. ಈ ರೀತಿ ಟಿಡಿಎಸ್‌ ತಪ್ಪಿಸಿ ಫಾರ್ಮ್ 26 ಎಎಸ್‌ನ ಜಾಲದಿಂದ ತಪ್ಪಿಸಿಕೊಂಡೆ ಎಂದು ಬೀಗುತ್ತಿದ ಲಕ್ಷಾಂತರ ಜನರಿಗೆ ಈ ವರ್ಷ ಒಂದು ಸಣ್ಣ ಆಘಾತ ಕಾದಿದೆ.

26 ಎಎಸ್‌ನ ಹೊಸ ಅವತಾರ
ಯಾವುದೇ ಸದ್ದುಗದ್ದಲವಿಲ್ಲದೆ ಈ ಫಾರ್ಮ್ 26 ಎಎಸ್‌ ಎನ್ನುವುದು ಇಂತಹ ಅತಿ ಜಾಣ್ಮೆಯನ್ನು ಹಿಡಿದು ಹಾಕಲು ಈ ವರ್ಷ ಹೊಸ ಅವತಾರ ಪಡೆದುಕೊಂಡಿದೆ. ಕಳ್ಳ ಚಾಪೆಯ ಕೆಳಗೆ ನುಸುಳಿಕೊಂಡರೆ ಪೊಲೀಸ್‌ ರಂಗೋಲೆಯ ಕೆಳಗೆ ನುಸುಳಿಕೊಂಡಿದ್ದಾನೆ. ಆ ಪ್ರಯುಕ್ತ ಈ ವರ್ಷ 26 ಎಎಸ್‌ ಫಾರ್ಮಿನಲ್ಲಿ ಈವರೆಗೆ ಅಷ್ಟೊಂದು ಗಂಭೀರವಾಗಿ ಮಾಡಿರದ ಹೊಸತೊಂದು ಮಾಹಿತಿ ನಿಖರಾಗಿ ದಾಖಲಾಗುತ್ತಿದೆ. ಯಾರೆಲ್ಲಾ ಎಲ್ಲೆಲ್ಲಾ 15ಜಿ ಅಥವಾ 15 ಎಚ್‌ ಫಾರ್ಮ್ ನೀಡಿ ಟಿಡಿಎಸ್‌ ತಪ್ಪಿಸಿಕೊಂಡಿದ್ದಾರೋ ಆ ಎಲ್ಲಾ ವ್ಯವಹಾರಗಳ  ಸಂಪೂರ್ಣ ವಿವರಗಳನ್ನು  ಫಾರ್ಮ್ 26 ಎಎಸ್‌ ಈ ವರ್ಷ ಕಟ್ಟುನಿಟ್ಟಾಗಿ ಹಿಡಿದಿಟ್ಟಿದೆ. ಈ ಮೊದಲು ಅದರಲ್ಲಿ ಆ ಕಾಲಂ ಇದ್ದರೂ ಸಹ ಅದು ಅಷ್ಟೊಂದು ಸರಿಯಾಗಿ ಭರ್ತಿಯಾಗಿದ್ದಿಲ್ಲ. ಅಂದರೆ ಟಿಡಿಎಸ್‌ ಕಡಿತವಾಗದಿದ್ದರೂ ನಿಮ್ಮ ಎಲ್ಲಾ ಎಫ್ಡಿ ಹಾಗೂ ಅವುಗಳ ಬಡ್ಡಿಗಳ ವಿವರ ಈಗ ಕರ ಇಲಾಖೆ ಕಂಪ್ಯೂಟರಿನಲ್ಲಿ ಶೇಖರವಾಗಿದೆ. ಅಷ್ಟೇ ಅಲ್ಲದೆ ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳು, ಕರಇಲಾಖೆಯಿಂದ ಹಿಂಪಡೆದ ಬಡ್ಡಿ ಇತ್ಯಾದಿಗಳೂ ಸಹ ಸ್ಪಷ್ಟವಾಗಿ ದಾಖಲಾಗುತ್ತಿದೆ. ನೀವು ರಿಟರ್ನ್ ಫೈಲ್‌ ಮಾಡುವ ಹೊತ್ತಿಗೆ ಅದನ್ನು ತಾಳೆಹಾಕಿ, ನೀವು ಕಟ್ಟಬೇಕಾದ ತೆರಿಗೆಯ ಸರಿಯಾದ ಲೆಕ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಅದರ ಮೇಲೆ ಪೆನಾಲ್ಟಿ, ಬಡ್ಡಿ ಹಾಗೂ ಕರಾರ್ಹನಲ್ಲವೆಂದು ಸುಳ್ಳು ಡಿಕ್ಲರೇಶನ್‌ ಕೊಟ್ಟ ಕಾರಣಕ್ಕೆ ಒಂದು ಶೋಕಾಸ್‌ ನೋಟೀಸ್‌ ಬರಲಿದೆ. 

ಕರ ಪಾವತಿ ಯಾವಾಗ?
ಈ ವರ್ಷಕ್ಕೆ ಸಂಬಂಧಪಟ್ಟಂತೆ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31. ಹಲವಾರು ಜನರು ಕರ ಕಟ್ಟಲೂ ಹೂಡಿಕೆ ಮಾಡಲೂ ರಿಟರ್ನ್ ಫೈಲಿಂಗ್‌ ಮಾಡಲೂ – ಸಕಲ ಕರ ಸಂಬಂಧಿ ಕೆಲಸಗಳಿಗೆ ಜುಲೈ 31 ಕೊನೆಯ ದಿನಾಂಕವೆಂಬ ಭ್ರಮೆಯಲ್ಲಿ ಇರುತ್ತಾರೆ. ವಾಸ್ತವ ಹಾಗಿಲ್ಲ. ಈ ವಿತ್ತೀಯ ವರ್ಷ ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತದೆ. ಅದರೊಳಗೆ ಈ ವರ್ಷಕ್ಕೆ ಸಂಬಂಧಪಟ್ಟ ಕರಸಂಬಂಧಿ ಹೂಡಿಕೆ ಹಾಗೂ ಅಂತಿಮ ಆದಾಯ ಕರವನ್ನು ಕಟ್ಟಿ ಲೆಕ್ಕ ಮುಗಿಸಿಬಿಡುವುದೊಳಿತು. ಮಾರ್ಚ್‌ 31 ದಾಟಿದರೆ ಈ ವರ್ಷಕ್ಕೆ ಸಂಬಂದಪಟ್ಟಂತೆ ಕರ ಉಳಿತಾಯದ ಹೂಡಿಕೆ ಮಾಡಲು ಬರುವುದಿಲ್ಲ. ಬಾಕಿ ಕರ ಆಮೇಲೆ ಕಟ್ಟಬಹುದಾದರೂ ಅದರ ಮೇಲೆ ಬಡ್ಡಿ ಬೀಳುತ್ತದೆ. ಹೂಡಿಕೆಯಂತೂ ಆಮೇಲೆ ಮಾಡಲೂ ಬರುವುದೇ ಇಲ್ಲ!
ಹಾಗಾಗಿ ಮಾರ್ಚ್‌ 31ರ ಮೊದಲು ಪ್ರತಿ ಯೊಬ್ಬರೂ ತಮ್ಮ ಎಲ್ಲಾ ಕರಾರ್ಹ ಆದಾಯವನ್ನೂ ತೋರಿಸಿ ಕರಕಟ್ಟುವುದು ಒಳಿತು. ಫಾರ್ಮ್ 26 ಎಎಸ್‌ನಲ್ಲಿ ನಮೂದಿತ ಎಲ್ಲಾ ಆದಾಯಗಳನ್ನು ಖಂಡಿತವಾಗಿಯೂ ತೋರಿಸಲೇ ಬೇಕು. ಇಲ್ಲ ವಾದಲ್ಲಿ ಇಲಾಖೆಯ ಕಂಪ್ಯೂಟರ್‌ ನೋಟೀಸು ಇಶ್ಯೂ ಮಾಡುವುದು ನೂರಕ್ಕೆ  ನೂರು ಶತಸ್ಸಿದ್ಧ. ಸುಖಾಸುಮ್ಮನೆ 15 ಜಿ/ಎಚ್‌ ನೀಡಿದವರು ಆ ಬಾಬ್ತು ಸರಿಯಾದ ಕರ ಲೆಕ್ಕ ಹಾಕಿ ಈಗಲಾದರೂ ಕರಕಟ್ಟುವುದು ಒಳ್ಳೆಯದು. ಕೊನೆ ದಿನಾಂಕ ಕಳೆದರೆ ಬಡ್ಡಿ/ಪೆನಾಲ್ಟಿಗಳ ಭಾರ ಜಾಸ್ತಿಯಾದೀತು.

ಎಲ್ಲಿದೆ ಫಾರ್ಮ್ 26 ಎಎಸ್‌?

TRACES ಎಂಬ ಹೆಸರುಳ್ಳ ಈ ಸೌಲಭ್ಯಕ್ಕೆ tdscpc.gov. in ಜಾಲತಾಣಕ್ಕೆ ಹೋಗಿ ರಿಜಿಸ್ಟರ್‌ ಮಾಡಿಕೊಳ್ಳಿ ಹಾಗೂ ನಿಮ್ಮ ವೈಯಕ್ತಿಕ ಫಾರ್ಮ್ 26 ಎಎಸ್‌ ಅನ್ನು ಪರಿಶೀಲಿಸಿಕೊಳ್ಳಿ. ಪರ್ಯಾಯವಾಗಿ ಆದಾಯ ತೆರಿಗೆಯ ಜಾಲತಾಣವಾದ incometaxindiaefi ling. gov.in ಮೂಲಕ ಅಥವಾ ನಿಮ್ಮ ಬ್ಯಾಂಕುಗಳ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕವೂ ಈ ತಾಣಕ್ಕೆ ಭೇಟಿ ನೀಡಿ 26 ಎಎಸ್‌ಅನ್ನು ನೋಡಬಹುದು. ನಿಮ್ಮ ರಿಟರ್ನ್ ಫೈಲಿಂಗ್‌ ಈ ಫಾರ್ಮ್ನೊಂದಿಗೆ ತಾಳೆಯಾಗಲೇ ಬೇಕು. ನಿಮ್ಮ ಟಿಡಿಎಸ್‌, ನೀವು ಕೊಟ್ಟ 15 ಜಿ/ಎಚ್‌ ವಿವರಗಳೂ ಹಾಗೂ ಇತರ ಎಲ್ಲಾ ಆದಾಯಗಳ ಲಭ್ಯ ವಿವರಗಳೂ ಅಲ್ಲಿರುತ್ತವೆ. 

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3(1

Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.