ಗೋಕಾಕ್‌ ಸದಾನಂದ ಸ್ವೀಟ್ಸ್‌ ನಲ್ಲಿ ಕರದಂಟಿನ ಕರಾಮತ್ತು..!

Team Udayavani, Jul 2, 2018, 12:46 PM IST

karadantu-photos-3.jpg

ಗೋಕಾಕನ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅಲ್ಲಿನ ನಯನ ಮನೋಹರವಾದ ಜಲಪಾತ ಹಾಗೂ ರುಚಿಕರವಾದ  ಕರದಂಟು. ಕರ್ನಾಟಕದಲ್ಲಿ, ಕರದಂಟಿನ ತವರೂರು ಎಂದೇ ಸುಪ್ರಸಿದ್ದವಾದ  ಗೋಕಾಕ್‌ಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.  ದಶಕಗಳ ಇತಿಹಾಸವಿರುವ ಈ ಕರದಂಟನ್ನು ಆರಂಭದಲ್ಲಿ ಮನೆಯಲ್ಲಿ ತಯಾರಿಸಿ ಅದನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ಒಯ್ದು ಮಾರುತ್ತಿದ್ದರಂತೆ. ಆಮೇಲೆ ಈ ತಿನಿಸಿಗೆ ಬೇಡಿಕೆ ಹೆಚ್ಚಿದ್ದರಿಂದ ಕರದಂಟು ತಯಾರಿಕೆಯ ಅಂಗಡಿಯೊಂದು ಹುಟ್ಟಿಕೊಂಡಿತು. ಅದರ ಹೆಸರು ಸದಾನಂದ ಸ್ವೀಟ್ಸ್‌.

ಆರಂಭದಲ್ಲಿ ಇದು ಚಿಕ್ಕ ಅಂಗಡಿಯಾಗಿತ್ತು. ಈಗ ದೊಡ್ಡದಾಗಿದೆ. ಬೆಳಗ್ಗೆ  7 ಗಂಟೆಗೆ ಪ್ರಾರಂಭವಾದರೆ ರಾತ್ರಿ 9 ಗಂಟೆಯವರೆಗೂ ಗ್ರಾಹಕರ ಸೇವೆಯಲ್ಲಿ  ನಿರತವಾಗಿರುತ್ತದೆ. ಈ ಅಂಗಡಿಯಲ್ಲಿ ಕೇವಲ ಕರದಂಟು ಮಾತ್ರವಲ್ಲ ಹಾಲಿನ ಪೆೇಡಾ , ಜಿಲೇಬಿ , ತುಪ್ಪದ ಮೈಸೂರ್‌ಪಾಕ್‌ , ಕಲಾಕಂದ್‌ ಹಾಗೂ ಇನ್ನು ಹಲವಾರು ಸಿಹಿಗಳು ಸಿಗುತ್ತದೆ.
ಕರದಂಟಿನಲ್ಲಿ  ಎರಡು ವಿಧವಿದೆ. ಮೊದಲನೆಯದು ಪೀÅಮಿಯಂ. ಇದರಲ್ಲಿ ಬೆಲ್ಲ ಕಡಿಮೆ ಹಾಗೂ ಒಣ ಹಣ್ಣುಗಳನ್ನು ಹೇರಳವಾಗಿ ಕಾಣಬಹುದು. ಎರಡನೇಯದು ಗೋಲ್ಡನ್‌.  ಬೆಲ್ಲದ ಅಂಶ ಹೆಚ್ಚಿರುವ ಇದರಲ್ಲಿ ಒಣ ಹಣ್ಣುಗಳನ್ನು ಅಷ್ಟೊಂದು ಸೇರಿಸುವುದಿಲ್ಲ.  

 ಕರದಂಟನ್ನು ತಯಾರಿಸುವ ಕೆಲಸ ರಾತ್ರಿಯೇ ಪ್ರಾರಂಭವಾಗಿರುತ್ತದೆ. ಒಂದೇ ಬಾರಿ ಕ್ವಿಂಟಾಲ್‌ ಗಟ್ಟಲೇ ತಯಾರಾಗುವ ಈ ಕರದಂಟಿನ ತಯಾರಿಕೆ ಕ್ರಿಯೆಯಲ್ಲಿ ಬೆಲ್ಲದ ಪಾತ್ರ ಪ್ರಮುಖವಾದದ್ದು. ಬೆಲ್ಲವನ್ನು ಕಾಯಿಸುವ ಕ್ರಿಯೆಯಲ್ಲಿ ಸ್ವಲ್ಪ ಏರುಪೇರಾದರು ರುಚಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಇದು, ಕರದಂಟಿನ ಟೇಸ್ಟ್‌ ಮೇಲೆಯೇ ನೇರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.  ಹಾಗಾಗಿ, ಬೆಲ್ಲ ಕಾಯಿಸುವ ಕ್ರಿಯೆ ತುಂಬಾ ಮುಖ್ಯ. ಕರದಂಟಿಗೆ ವಿಶೇಷ ರುಚಿ ನೀಡಲು ಖಾರೀಖ ಎಂಬ ಮತ್ತೂಂದು ವಸ್ತುವನ್ನು ಸೇರಿಸಲಾಗುತ್ತದೆ. ಕೊಬ್ಬರಿ ಕರದಂಟಿನ ತಯಾರಿಕೆಯಲ್ಲಿ ಪ್ರಾರಂಭದ ವಸ್ತುಗಳು, ತಯಾರಾದ ಕಚ್ಚಾ ಕರದಂಟನ್ನು ಕೆಲವು ಹೊತ್ತು ಆರಿಸಿ ಅದಕೇR  ತುಪ್ಪವನ್ನು ಸವರಿ ಚೌಕಾಕಾರದಲ್ಲಿ ಕತ್ತರಿಸಲು ಕಳುಹಿಸುತ್ತಾರೆ.

ಒಂದು ದಿನಕ್ಕೆ 7 ರಿಂದ 8 ಕ್ವಿಂಟಲ ತಯಾರಾಗುವ ಈ ಕರದಂಟಿಗೆ ಬೆಲ್ಲ ಪೊರೈಕೆಯಾಗುವುದು ಮಹಾರಾಷ್ಟ್ರದ ಕೊಲ್ಹಾಪುರದಿಂದ, ಕರದಂಟಿಗೆ ರುಚಿ ನೀಡುವ ಖಾರೀಖನ್ನು ಹೈದ್ರಾಬಾದನಿಂದ ತರಿಸಿಕೊಳ್ಳಲಾಗುತ್ತದೆ, ಅದೇ ರೀತಿ ಕೊಬ್ಬರಿಯನ್ನು ಅರಸೀಕೆರೆಯಿಂದ ಕೊಳ್ಳಲಾಗುತ್ತದೆ ಎನ್ನುತ್ತಾರೆ ಸದಾನಂದ ಸ್ವೀಟ್ಸ್‌ ಸ್ಟಾಲ್‌ನ ಪ್ರೊಡಕ್ಷನ್‌ ಮ್ಯಾನೆಜರ್‌ ಸುಭಾಸ್‌ ಕಲಬುರ್ಗಿ. ಗೋಕಾಕದಲ್ಲಿ ತಯಾರಾಗುವ ಈ ಕರದಂಟಿಗೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಹಿಡಿದು ಬೆಂಗಳೂರಿನ ವರೆಗೆ ಬೇಡಿಕೆ ಇದೆ. ಇಷ್ಟೊಂದು ಬೇಡಿಕೆ ಇರುವ ಈ ಕರದಂಟನ್ನು ನೀವು ಮಿಸ್‌ ಮಾಡದೇ ಸವಿಯಿರಿ. ಗೋಕಾಕ್‌ಗೆ ಹೋದಾಗ ಕರದಂಟನ್ನು ತರಲು ಮರೆಯದಿರಿ.

-ಪ್ರಜ್ವಲ್‌ ಹೂಲಿ

ಟಾಪ್ ನ್ಯೂಸ್

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Rafael Nadal: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ

Rafael Nadal Retire: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ

BJP-JDS-congress-Party

By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Rafael Nadal: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ

Rafael Nadal Retire: ದೈತ್ಯ ಆಟಗಾರ ನಡಾಲ್‌ಗೆ ಸೋಲಿನ ವಿದಾಯ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.