ಚಿನ್ನ ಚಿನ್ನ  ಆಸೆ, ಬಂಗಾರದ ಮೇಲೆ ದುಡ್ಡು ಹಾಕಬಹುದಾ? 


Team Udayavani, Feb 5, 2018, 5:50 PM IST

gold.jpg

ಚಿನ್ನ ಕೊಳ್ಳುವುದೂ ಕೂಡ ಉಳಿತಾಯದ ಮಾರ್ಗವಾಗಿದೆಯಾ? ಚಿನ್ನವನ್ನು ಹೂಡಿಕೆಗಾಗಿ, ಮುಂಬರುವ ದಿನಗಳಲ್ಲಿ ಅಧಿಕ ಲಾಭ ಬರಬಹುದೆಂಬ ನಿರೀಕ್ಷೆಯಿಂದ ಖರೀದಿಸುತ್ತಿದ್ದೇವಾ? ಚಿನ್ನ ಕಷ್ಟ ಕಾಲಕ್ಕಾಗುವ ಆಪದ್ಧನವಾ? ಚಿನ್ನ- ಬೆಳ್ಳಿ ವಹಿವಾಟು ಕಮಾಡಿಟಿ ಪೇಟೆ ಪರಿಚಿತರನ್ನು ಸೆಳೆಯುತ್ತಿದೆಯಾ? ಚಿನ್ನದ ಖರೀದಿಯ ಹಿಂದಿನ ವಿವಿಧ ಆಯಾಮಗಳ ಕಿರು ನೋಟ ಇಲ್ಲಿದೆ.

ದುಡ್ಡಿದೆ ಚಿನ್ನ ಖರೀದಿಸಿ ಇಟ್ಟರಾಯಿತು ಎನ್ನುವವರೂ, ಅವರ ಬಳಿ ಇರುವ ಚಿನ್ನದ ಪ್ರಮಾಣವನ್ನು ಮುಚ್ಚಿಡುವ ಹಾಗಿಲ್ಲ. ಇದು ಒಂದು ಆಸ್ತಿ ಖರೀದಿಯ ಹಾಗೆ. ಅದಕ್ಕಾಗಿಯೇ ಚಿನ್ನದ ಬೆಲೆಯಲ್ಲಿ ಧಿಡೀರ್‌ ಏರಿಕೆ ಆಗುವುದಿಲ್ಲ. ಒಂದು ರೇಂಜಿನಲ್ಲಿ ವಹಿವಾಟಾಗುತ್ತಿದೆ. ಉಳಿತಾಯ ಮಾಡಲೇ ಬೇಕಿದ್ದರೆ ಇವತ್ತಿಗೂ ಬ್ಯಾಂಕಿನ ಆರ್‌.ಡಿ ಉಪಯುಕ್ತವಾಗಿ ಇದ್ದೇ ಇದೆ. ಮ್ಯೂಚುವಲ್‌ ಫ‌ಂಡ್‌ನ‌ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ (ಎಸ್‌.ಐ.ಪಿ.) ಸಣ್ಣ ಹೂಡಿಕೆದಾರರಿಗೆ, ಉಳಿತಾಯ ಮಾಡುವವರಿಗೆ ಸೂಕ್ತವಾಗಿದೆ.

ಚಿನ್ನದ ಮೇಲೆ ಹಣ ಹೂಡಬಹುದಾ? ಈ ಪ್ರಶ್ನೆಯನ್ನು 10 ವರ್ಷಗಳ ಹಿಂದೆ ಯಾರಾದರೂ ಕೇಳಿದ್ದರೆ ಆಗ ಬರುವ ಉತ್ತರ ಖಂಡಿತಾ ಹಣ “ಹೂಡಿ’ ಎಂದಾಗಿತ್ತು.  ಇದೇ ಪ್ರಶ್ನೆಯನ್ನು ಆರು ವರ್ಷಗಳ ಹಿಂದೆ ಕೇಳಿದ್ದರೆ  ಪರವಾಗಿಲ್ಲ ಹಣ ಹೂಡಬಹುದು  ಎಂದಾಗಿತ್ತು. ಆದರೆ  ಈಗ ಇದೇ ಪ್ರಶ್ನೆಯನ್ನು ಕೇಳಿದಾಗ ಬರುವ ಖಚಿತ ಉತ್ತರ.  ಚಿನ್ನವೇ ಯಾಕೆ ಬೇಕು? ಬೇರೆ ಆಯ್ಕೆಗಳೂ ಇವೆಯಲ್ಲಾ? ಅಂದರೆ ಚಿನ್ನದ ಮೇಲೆ ಹಣ ಹೂಡಬೇಕೆಂಬ, ಚಿನ್ನವೂ ಹೂಡಿಕೆಯ ಅವಕಾಶವೆಂಬ ಮನೋಭಾವನೆಯಲ್ಲಿ ಬದಲಾವಣೆ ಆಗಿದೆ. ಹೀಗಾಗುವುದಕ್ಕೆ ಸಕಾರಣಗಳೂ ಇವೆ.

ನಮಗೆ ಅಂದರೆ ಭಾರತೀಯರಿಗೆ ಚಿನ್ನ ಎನ್ನುವುದು ಆಪದ್ಧನ. ಕಷ್ಟ ಕಾಲದಲ್ಲಿ ಸಹಾಯವಾಗುತ್ತದೆ. ಇದು ಒಂದು ರೀತಿಯಿಂದ ಹಣಕ್ಕೆ ಪರ್ಯಾಯವಾಗಿ ಇದೆಯೇನೋ ಎನ್ನುವಷ್ಟು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಈ ಹಿಂದೆಲ್ಲಾ ಚಿನ್ನವನ್ನು ಕೊಳ್ಳುವುದು ಮತ್ತು ಮಾರುವುದು ಎರಡೂ ಸುಲಭವಾಗಿತ್ತು. ಎಂಥ ಸಣ್ಣ ಪಟ್ಟಣಗಳಲ್ಲೂ ಇದಕ್ಕೆ ಅವಕಾಶ ಇತ್ತು. ಯಾವುದೇ ಹೂಡಿಕೆಯ ಮುಖ್ಯ ಆಶಯವೇ ಸುರಕ್ಷತೆ ಮತ್ತು ಬೇಕಾದಾಗ ಅದನ್ನು ಹಣದ ರೂಪದಲ್ಲಿ ಪರಿವರ್ತಿಸುವ ಲಿಕ್ವಿಡಿಟಿ. ಇವೆರಡೂ ದೃಷ್ಟಿಯಿಂದ ಚಿನ್ನಕ್ಕೆ ಸರಿಸಮನಾದ ಹೂಡಿಕೆ ಆಗ ಬೇರೆ ಇರಲಿಲ್ಲ. ಇಷ್ಟೇ ಅಲ್ಲ ಚಿನ್ನದ ಬೆಲೆಯಲ್ಲಿ ಆಗುತ್ತಿರುವ ಏರಿಕೆ ಚಿನ್ನವನ್ನು ಹೂಡಿಕೆಯ ಹಾಗೆ ಯೋಚಿಸಲು ಪುಷ್ಠಿಕೊಡುತ್ತಿತ್ತು. ಇದು ಒಂದು ರೀತಿಯಿಂದ ಸ್ಥಿರ ಆಸ್ತಿಯ ಹಾಗೆ ಆಗಿತ್ತು.

ಇದರಲ್ಲಿ ತಪ್ಪೇನೂ ಇಲ್ಲ. ಇಷ್ಟೇ ಅಲ್ಲ, ಇದೊಂದು ಅತ್ಯಂತ ಸುರಕ್ಷಿತ ಹಾಗೂ ವ್ಯವಸ್ಥಿತ ಉಳಿತಾಯವಾಗಿಯೂ, ಹೂಡಿಕೆಯಾಗಿಯೂ ಇತ್ತು. ನಮ್ಮೆಲ್ಲರ ಮೈಂಡ್‌ ಸೆಟ್‌ ಇರೋದೆ ಹೀಗೆ. ಸ್ವಲ್ಪ ದುಡ್ಡಿದೆಯಾ? ಚಿನ್ನ ಖರೀದಿಸೋಣ. ಮುಂದೆ ಮಕ್ಕಳಿಗೆ ಆಗತ್ತೆ, ಮನೆಯಲ್ಲಿ ಇರತ್ತೆ ಎಂದೇ ಯೋಚಿಸುತ್ತೇವೆ. ಇದೆಲ್ಲವೂ ಸರಿ. ಆದರೆ ಈಗ ಚಿನ್ನವನ್ನು ಹೂಡಿಕೆಯಾಗಿ ನೋಡಬೇಕಾ ಎಂದು ಕೇಳಿಕೊಂಡಾಗ ಮಾತ್ರ ಚಿನ್ನಕ್ಕೂ ಮಿಗಿಲಾದ ಹೂಡಿಕೆಯ ಆಯ್ಕೆ ಇರುವಾಗ ಚಿನ್ನವೇ ಯಾಕೆ ಚಿನ್ನಾ ಎಂದು ಕೇಳುವ ಹಾಗಾಗಿದೆ.

ಲಾಭ ಕಡಿಮೆ.
ಚಿನ್ನದ ಬೆಲೆ ಕಳೆದ 3-4 ವರ್ಷಗಳಿಂದ ತೀವ್ರ ಏರಿಕೆ ಕಾಣಲಿಲ್ಲ. ಈಗಾಗಲೇ ಏರಿರುವಾಗ ಇನ್ನಷ್ಟು ಏರುತ್ತದೆ ಎಂದು ಕಾಯುವುದು ತಪ್ಪು. ಕೆಳಗಿದ್ದಾಗ ಮೇಲೇರಲು ಅವಕಾಶ ಇರುತ್ತದೆ. ಅದೇ ಮೇಲೇರಿರುವಾಗ ಮತ್ತೆ ಏರುವುದಕ್ಕಿಂತ ಇಳಿಯುವ ಸಾಧ್ಯತೆ ಹೆಚ್ಚು. ಇದನ್ನು ಅರಿತಾಗ ಈಗ ಏರಿಕೆಯಲ್ಲಿರುವ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಕಡಿಮೆ ಎನ್ನುವುದು ಯಾರಿಗಾದರೂ ಅರಿವಾಗುವ ವಿಚಾರ. ಇನ್ನೂ ಬೆಲೆ ಏರುತ್ತದೆಂದು ಭಾವಿಸಿ ಚಿನ್ನ ಖರೀದಿಸಿದವರು ಅಧಿಕ ಲಾಭ ಕಾಣಲಿಲ್ಲ.   ಚಿನ್ನಕ್ಕೆ ಕೈಗಾರಿಕಾ ಬಳಕೆಯೂ ಹೆಚ್ಚಿಲ್ಲ. ಆಭರಣಕ್ಕೆ ಬೇರೆ ಲೋಹಗಳೂ ಬರುತ್ತಿದೆ. ಸರ್ಕಾರವಂತೂ ಚಿನ್ನದ ಆಮದು ಕಡಿಮೆ ಮಾಡಲು ಬೇರೆ ಬೇರೆ ಕ್ರಮ ತೆಗೆದುಕೊಂಡಿದೆ. ಈಗಂತೂ ಚಿನ್ನ ಖರೀದಿ ಕೂಡ ಲೆಕ್ಕಾಚಾರದ ವ್ಯಾಪ್ತಿಯಲ್ಲಿದೆ. ಬೇಕಾದಷ್ಟು ದುಡ್ಡಿದೆ ಚಿನ್ನ ಖರೀದಿಸಿ ಇಟ್ಟರಾಯಿತು ಎನ್ನುವವರೂ ಅವರ ಬಳಿ ಇರುವ ಚಿನ್ನದ ಪ್ರಮಾಣವನ್ನು ಮುಚ್ಚಿಡುವ ಹಾಗಿಲ್ಲ. ಇದು ಒಂದು ಆಸ್ತಿ ಖರೀದಿಯ ಹಾಗೆ. ಅದಕ್ಕಾಗಿಯೇ ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ ಆಗುವುದಿಲ್ಲ. ಒಂದು ರೇಂಜಿನಲ್ಲಿ ವಹಿವಾಟಾಗುತ್ತಿದೆ. ಉಳಿತಾಯ ಮಾಡಲೇ ಬೇಕಿದ್ದರೆ ಇವತ್ತಿಗೂ 
ಬ್ಯಾಂಕಿನ ಆರ್‌.ಡಿ ಉಪಯುಕ್ತವಾಗಿ ಇದ್ದೇ ಇದೆ. ಮ್ಯೂಚುವಲ್‌ ಫ‌ಂಡ್‌ನ‌ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ (ಎಸ್‌.ಐ.ಪಿ.) ಸಣ್ಣ ಹೂಡಿಕೆದಾರರಿಗೆ, ಉಳಿತಾಯ ಮಾಡುವವರಿಗೆ ಸೂಕ್ತವಾಗಿದೆ.

ಕಮಾಡಿಟಿ ವಹಿವಾಟು
ಚಿನ್ನವನ್ನು ಹೂಡಿಕೆಯ ದೃಷ್ಟಿಯಿಂದ,ಉಳಿತಾಯದ ದೃಷ್ಟಿಯಿಂದ ನೋಡುವಂತೆ ಚಿನ್ನ ಕೂಡ ಒಂದು ಕಮಾಡಿಟಿಯಾಗಿ. ಇದು ಅತಿ ಹೆಚ್ಚು ವಹಿವಾಟಾಗುತ್ತದೆ. ವಾಯದಾ ಪೇಟೆಯಲ್ಲಿಯೂ ಚಿನ್ನದ ವಹಿವಾಟಿದೆ. ಚಿನ್ನದ ಬಾಂಡ್‌ಗಳ ವಹಿವಾಟಿದೆ. ಕಮಾಡಿಟಿ ಮಾರುಕಟ್ಟೆಯಲ್ಲಿ ವಹಿವಾಟಾಗುವುದರಿಂದ ಚಿನ್ನದ ಬೆಲೆಯಲ್ಲಿ ಏರಿಳಿತವನ್ನು ಕಾಣುತ್ತಿದ್ದೇವೆ. ಷೇರುಗಳು ವಹಿವಾಟಾದಂತೆ ಇದು ಈಗ ಹೆಚ್ಚು ಜನಪ್ರಿಯ ಕಮಾಡಿಟಿಯಾಗಿದೆ. ಇದರೊಂದಿಗೆ ಬೆಳ್ಳಿಯ ವಹಿವಾಟೂ ಇದೆ. ವಹಿವಾಟುದಾರರು ಚಿನ್ನ ಬೆಳ್ಳಿಯನ್ನು ಇಂತಹ ವಹಿವಾಟಾಗಿ ನೋಡಿದಾಗ ಅದು ಹೂಡಿಕೆಯಾಗದೇ ಕೇವಲ ವಹಿವಾಟಾಗುತ್ತದೆ. ಚಿನ್ನ ಬೆಳ್ಳಿಯ ವ್ಯಾಪ್ತಿ ಹಿಗ್ಗಿದೆ.

ನಮ್ಮ ಆಯ್ಕೆ ಏನು?
ಹಾಗಾದರೆ ಈಗ ನಮ್ಮ ಆಯ್ಕೆ ಯಾವುದು. ನಮಗೆ ಹಣದ ಉಳಿತಾಯ ಆಗಬೇಕಾ? ಉಳಿಸಿದ ಹಣ ಮತ್ತೆ ಬೆಳೆಯ ಬೇಕಾ ಅಥವಾ ಕೇವಲ ಚಿನ್ನ ಖರೀದಿಸಿ ಮನೆಯಲ್ಲಿ ಇರಲಿ ಯಾವಾಗಾದರೂ ಆಭರಣವಾಗಲಿ, ಇಲ್ಲ ಸ್ಥಿರ ಆಸ್ಥಿಯಂತೆ ಇದೂ ಇರಲಿ ಎಂದು ಭಾವಿಸುತ್ತೀರಾ? ಇಂತಹ ಹಲವು ಆಯ್ಕೆಗಳು ಎದುರಿಗಿದೆ. ಮೊದಲು ನಮಗೆ ನಮ್ಮ ಹಣಕಾಸಿನ ಶಿಸ್ತು ಇದ್ದರೆ ಹಣಕಾಸು ನಿರ್ವಹಣೆ ಸುಲಭ. ಈಗ ಏನನ್ನೇ ಆದರೂ ಬೆರಳ ತುದಿಯಲ್ಲಿ ಕೊಳ್ಳಬಹುದು. ಅಷ್ಟು ಸುಲಭ, ಸರಳ. 
ನೆನಪಿಡಬೇಕು; ಹಾಗಾಗಿಯೇ ಕಷ್ಟವೂ ಆಗಿದೆ. ಹಲವು ಆಯ್ಕೆಗಳಿವೆ ನಿಜ, ಆದರೆ ಇದನ್ನೆಲ್ಲ ಆಯ್ಕೆ ಮಾಡಿಕೊಳ್ಳುವಾಗ ನಮಗೆ ಇವುಗಳ ಬಗೆಗೆ ಅರಿವಿರಬೇಕು. ಹಳೆಯ ಕಾಲದ ಯೋಚನಾ ಕ್ರಮದಿಂದ ನಾವು ಹೊರ ಬರಬೇಕು. ಹೊಸ ಕಾಲದ ಬದಲಾವಣೆಗೆ,  ಈಗಿರುವ ಅವಕಾಶಕ್ಕೆ ತೆರೆದುಕೊಂಡಾಗ ಹೂಡಿಕೆಯ, ಉಳಿತಾಯದ ಇನ್ನಷ್ಟು ದಾರಿಗಳು ಸುಲಭವಾಗಿ ಸಿಗುತ್ತದೆ.

ಉಳಿತಾಯ
ಸ್ನೇಹಿತರೊಬ್ಬರಿಗೆ ಆಫೀಸಿನಲ್ಲಿ ಸಂಬಳ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಎಲ್ಲರೂ ಕೇಳುವ ಹಾಗೆ ನಾನೂ ಕೇಳಿದೆ ಹೆಚ್ಚಿಗೆ ಹಣ ಬಂತಲ್ಲಾ ಏನು ಮಾಡಿದಿರಿ? ಏನಾದರೂ ಇನ್‌ವೆಸ್ಟ್‌ ಮಾಡಬಹುದಲ್ಲಾ?  ಅದಕ್ಕವರು ಅಂದರು.   ಚಿನ್ನವನ್ನು ಕೊಂಡೆವು. ಚಿನ್ನದ ಗಟ್ಟಿಯ ರೂಪದಲ್ಲಾ? ನಾನು ಕೇಳಿದೆ  “ಇಲ್ಲಾ ಆಭರಣವೇ. ಚಿನ್ನದ ಆಭರಣ. ಇದರಲ್ಲಿ ವೇಸ್ಟೇಜ್‌ ಕಳೆಯಲ್ಲ ಅಂದಿದ್ದಾರೆ, ಯಾವಾಗಾದರೂ ಹಾಕಿಕೊಳ್ಳೋದಕ್ಕೂ ಆಗತ್ತೆ. ಚಿನ್ನದ ಗಟ್ಟಿ ಆದರೆ ಸುಮ್ಮನೇ ಮನೆಯಲ್ಲಿ ಇಡಬೇಕಲ್ಲಾ? ಇದು ಹಾಗಾದರೆ ಹೂಡಿಕೆ ಅಲ್ಲ ‘ ಅಂದೆ ಹೌದು, ನನಗೂ ಅನ್ನಿಸಿತು ಆದರೆ ಏನು ಮಾಡೋದು ಚಿನ್ನದ ಮೇಲಿನ ವ್ಯಾಮೋಹ ನೋಡಿ. ಅವರು ನಕ್ಕರು.

ಕಷ್ಟ ಕಾಲಕ್ಕೆ ಆಗತ್ತೆ ಎಂದು ಆಭರಣ ಕೊಳ್ಳುವುದು ಹೂಡಿಕೆ ಅಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡಿದರೂ ಲಾಭ ಬಂದಾಗ ಮಾರುವುದೂ ಇಲ್ಲ. ಯಾವುದೇ ಹೂಡಿಕೆ ಎಂದಾಗ ಲಾಭವನ್ನು ಮರು ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅದನ್ನು ಮರು ಹೂಡಿಕೆ ಮಾಡಬೇಕು. ಈ ಮೂಲಕ ಹೂಡಿಕೆಯ ಮೊತ್ತ ಹೆಚ್ಚುತ್ತದೆ. ಹೂಡಿಕೆಯ ಉದ್ದೇಶವೇ ಒಟ್ಟೂ ಮೊತ್ತದಲ್ಲಿ ಆಗುವ ಏರಿಕೆ.  ಆದರೆ ಗಮನಿಸಿ; ಚಿನ್ನವನ್ನು ಕೊಳ್ಳುವಾಗ ಯಾರೂ ಸುಮ್ಮ ಸುಮ್ಮನೇ ಮಾರುವುದಿಲ್ಲ. ಬದಲಾಗಿ ಇರಲಿ ಬಿಡಿ ಎನ್ನುತ್ತಾರೆ. ಹಳದಿ ಲೋಹದ ಮೋಹವೇ ಹಾಗೆ. ಕಷ್ಟ ಕಾಲದಲ್ಲಿ ಆಗುತ್ತದೆ ಎನ್ನುತ್ತಾರೆ.  ಹಾಗಾಗಿ ಚಿನ್ನದ ಮೇಲಿನ ಹೂಡಿಕೆಯ ಲಾಭವೂ ಒಂದು ಭಾವನಾತ್ಮಕವೇ ಹೊರತು ನಿಜದಲ್ಲಿ ಅನುಭವಿಸುವವರ ಸಂಖ್ಯೆ ಕಡಿಮೆಯೇ. ಇಷ್ಟಾಗಿಯೂ ಹಣವನ್ನು ಬಟ್ಟೆಗೋ, ದಿನ ನಿತ್ಯದ ವಸ್ತುಗಳಿಗೋ, ಸೋಫಾ ಇತ್ಯಾದಿಗಳಿಗೋ ಬಳಸಿದ್ದರೆ ಅದು ವ್ಯರ್ಥವಾಗುತಿತ್ತು. ಬದಲಾಗಿ ಹೀಗೆ ಚಿನ್ನಕ್ಕೆ ಹಾಕಿರುವುದು ಉಳಿತಾಯ ಆದದ್ದು ಸುಳ್ಳಲ್ಲ. ಚಿನ್ನ ಹೂಡಿಕೆ ಆಗದಿದ್ದರೂ ಉಳಿತಾಯದ ದಾರಿಯಾಗುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಚಿನ್ನಕೊಳ್ಳುವ ನಮ್ಮ ಮೋಹ ಹೀಗೆ ಉಳಿತಾಯದ ಇನ್ನೊಂದು ಮಾರ್ಗವಾಗುತ್ತಿದೆ. ಆದರೆ ಸಾಲ ಮಾಡಿ ಚಿನ್ನ ಖರೀದಿಸುವುದು ಮಾತ್ರ ಸೂಕ್ತವಲ್ಲವೇ ಅಲ್ಲ.

– ಸುಧಾಶರ್ಮಾ ಚವತ್ತಿ

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.