“ಬಂಗಾರ’ದಂಥ ಉಳಿತಾಯ

Team Udayavani, Jan 6, 2020, 5:31 AM IST

6

ಹಣದುಬ್ಬರದಿಂದಾಗಿ ಇಂದು ಚಿನ್ನವು ಹಣ ಹೂಡಿಕೆಯ ಉತ್ತಮ ವಿಧಾನವಾಗಿದೆ. ಬಂಗಾರದ ಬೆಲೆ ಗಗನಕ್ಕೆ ಏರುತ್ತಿದೆ. ಆದರೆ, ಒಮ್ಮೆಲೇ ತುಂಬಾ ಬಂಗಾರ ಕೊಳ್ಳುವುದು ಸುಲಭವಲ್ಲ. ಸ್ವಲ್ಪ ಸ್ವಲ್ಪ ಬಂಗಾರವನ್ನು ಕೊಳ್ಳುತ್ತಾ ಬಂದಲ್ಲಿ ಮುಂದೆ ಇದೊಂದು ಹೆಚ್ಚಿನ ನಿಧಿಯಾಗಿ ಉಳಿತಾಯದ ದೃಷ್ಟಿಯಿಂದಲೂ ಹಾಗೂ ಸಂಪತ್ತಿನ ದೃಷ್ಟಿಯಿಂದಲೂ ಬಹಳ ಸಹಾಯವಾಗುತ್ತದೆ. ವ್ಯಕ್ತಿಯ ಉಳಿತಾಯದಲ್ಲಿ “ಬಂಗಾರ’ ಒಂದು ಅಂಶವಾಗಿರಬೇಕು. ಸಾಧ್ಯವಾದರೆ ಪ್ರತಿ ತಿಂಗಳೂ ಅಥವಾ ಮೂರು, ಆರು ತಿಂಗಳಿಗೊಮ್ಮೆಯಾದರೂ ಆದಷ್ಟು ಬಂಗಾರವನ್ನು ಕೊಂಡುಕೊಳ್ಳುತ್ತಾ ಬಂದಲ್ಲಿ ಇದರ ಸದುಪಯೋಗ ಮುಂದಕ್ಕೆ ಆಗುತ್ತದೆ.

ಉಳಿತಾಯದ ದೃಷ್ಟಿಯಿಂದ ಹಾಗೂ ಒಡವೆಯ ದೃಷ್ಟಿಯಿಂದ ಬಂಗಾರವನ್ನು ಕೊಳ್ಳಬಹುದು. ಬಂಗಾರದ ಒಡವೆಗಳ ಫ್ಯಾಷನ್‌ ಬದಲಾಗುತ್ತಿರುತ್ತದೆ. ಬಂಗಾರದ ಒಡವೆಗಳನ್ನು ಮುರಿಸಿ ಬೇರೊಂದು ಒಡವೆ ಮಾಡಿಸುವಾಗ, ಸವಕಳಿ(ವೇಸ್ಟೇಜ್‌) ರೂಪದಲ್ಲಿ ಕೆಲವು ಗ್ರಾಂಗಳಷ್ಟು ದಂಡ ತೆರಬೇಕಾಗುತ್ತದೆ. ಇದಕ್ಕಾಗಿಯೇ ಬಂಗಾರದ ಒಡವೆಗಳನ್ನು ಮಾಡಿಸಬಾರದು ಎನ್ನುವ ಮಾತು ಸರಿಯಲ್ಲ. ಆದರೆ, ಆಗಾಗ ಮುರಿಸಿ ಹೊಸತು ಮಾಡಿಸುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ಬಂಗಾರದ ನಾಣ್ಯಗಳನ್ನು, ಬ್ಯಾಂಕಿನ ಆರ್‌.ಡಿ. ಖಾತೆಯ ಮಾದರಿಯಲ್ಲಿ, ಪ್ರತಿ ತಿಂಗಳೂ ಕೊಂಡು ಬ್ಯಾಂಕ್‌ ಲಾಕರ್‌ಗಳಲ್ಲಿ ಇಟ್ಟುಕೊಳ್ಳಿ. ಇದರಿಂದ ಮಕ್ಕಳ ಮದುವೆ ಸಮಯದಲ್ಲಿ, ಒಮ್ಮೆಲೇ ಬಂಗಾರ ಖರೀದಿಸುವಾಗ ಎದುರಾಗಬಹುದಾದ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಮುಂದಿನ ಮಾರ್ಗ ಬಹಳ ಸುಗಮವಾಗುತ್ತದೆ.

ಬಂಗಾರದ ಮೇಲೆ ಹಣ ಹಾಕುವುದು ಒಂದು ಜಡ (Dead Investment) ಥರದ ಹೂಡಿಕೆ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ, ಬಂಗಾರದ ಹೆಲೆ ಏರಿದ ರೀತಿಯನ್ನು ನೋಡುವಾಗ ಈ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ ಅನ್ನಿಸುತ್ತದೆ. ಸರಕು ಪೇಟೆ, ಶೇರು ಪೇಟೆ ಹಾಗೂ ಯಾವುದೇ ವಸ್ತುಗಳ ಬೆಲೆಗಳಲ್ಲಿ ಏರುಪೇರು ಕಂಡು ಬಂದರೂ, ಬಂಗಾರದ ಬೆಲೆ ಎಂದಿಗೂ ಕಡಿಮೆಯಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಬಂಗಾರವನ್ನು “ಅಮೂಲ್ಯ ಲೋಹ'(Precious metal) ಎಂಬ ಮಾತನ್ನು ಪ್ರಪಂಚಾದ್ಯಂತ ಒಪ್ಪಿಕೊಳ್ಳಲಾಗಿದೆ. ದೇಶದ ಸಂಪತ್ತನ್ನು ಪರಿಗಣಿಸುವಾಗ ಕೂಡಾ ಬಂಗಾರದ ಪಾತ್ರ ಅತೀ ಮುಖ್ಯವಾಗಿದೆ. ಬಂಗಾರವನ್ನು ಮ್ಯೂಚುವಲ್‌ ಫ‌ಂಡುಗಳ ಯುನಿಟ್‌ಗಳಲ್ಲಿಯೂ (G.E.T.F) ಕೊಂಡುಕೊಳ್ಳಬಹುದು. ಒಟ್ಟಿನಲ್ಲಿ ಬಂಗಾರದಲ್ಲಿ ಹಣ ಹೂಡುವುದರಿಂದ ಬಾಳೇ ಬಂಗಾರವಾಗುತ್ತದೆ.

ಟಾಪ್ ನ್ಯೂಸ್

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.