ಡಿಜಿಟಲ್ ಶುಲ್ಕಕ್ಕೆ ವಿದಾಯ
Team Udayavani, Jul 15, 2019, 5:28 AM IST
ಬ್ಯಾಂಕುಗಳು ಇನ್ನು ಮುಂದೆ ಡಿಜಿಟಲ್ ಸೇವೆಗೆ ಅಂಗಡಿ- ಮಳಿಗೆಯವರ ಬಳಿ ಶುಲ್ಕ ಕೇಳುವುದಿಲ್ಲ. ಅದರ ಲಾಭ ಗ್ರಾಹಕನಿಗೆ ಸಿಗಲಿದೆಯೇ?
ಕೇಂದ್ರ ಸರ್ಕಾರ ಬಜೆಟ್ ಮಂಡಿಸುವಾಗ ಜನಸಾಮಾನ್ಯರು ಯಾರೂ ಅಷ್ಟಾಗಿ ಗಮನಿಸದ ಒಂದು ಸಂಗತಿಯನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಡಿಜಿಟಲ್ ವಹಿವಾಟಿನ ವೇಳೆ ಎಂಡಿಆರ್, ಅಂದರೆ, “ಮರ್ಚಂಟ್ ಡಿಸ್ಕೌಂಟ್ ರೇಟ್’ ಅನ್ನು ನಾವು ರದ್ದುಗೊಳಿಸಿದ್ದೇವೆ. ಇದು 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಹೊಂದಿರುವ ಎಲ್ಲ ಉದ್ಯಮಗಳಿಗೂ ಅನ್ವಯಿಸಲಿದೆ’ ಎಂದರು. ಆರಂಭದಲ್ಲಿ ಇದರ ಸಾಧಕ ಬಾಧಕವನ್ನೇನೂ ಜನರು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಈ ಪ್ರಸ್ತಾಪಕ್ಕೆ ಒಂದು ಸ್ಪಷ್ಟರೂಪ ಸಿಕ್ಕಿತು.
ಎಂಡಿಆರ್ ರದ್ದಿನಿಂದ ಲಾಭ
ಎಂಡಿಆರ್ ಅನ್ನು ರದ್ದುಗೊಳಿಸಿದ್ದರಿಂದ ಎಲ್ಲಾ ವರ್ಗದ ಜನರಿಗೆ ಭಾರಿ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ! ಅದು ಹೇಗೆ ಎನ್ನುತ್ತೀರಾ? ಅದೇ ಸ್ವಾರಸ್ಯ. ಸಾಮಾನ್ಯವಾಗಿ, ನಾವು ಏನನ್ನಾದರೂ ಖರೀದಿ ಮಾಡಿ ಕಾರ್ಡ್ ಬಳಸಿ ಪಾವತಿ ಮಾಡಿದಾಗ ಅದರ ಮೇಲೆ ಶೇ.1ರಿಂದ ಶೇ.2ರವರೆಗೂ ಶುಲ್ಕವನ್ನು ವಿಧಿಸಲಾಗುತ್ತದೆ. ಅಂದರೆ, ಅದನ್ನು ಎಂಡಿಆರ್ ಎಂದು ಕರೆಯಲಾಗುತ್ತದೆ. ಮೋದಿ ಸರ್ಕಾರ ಬಂದು 500 ಹಾಗೂ 1000 ರು. ನೋಟು ಅಮಾನ್ಯ ಮಾಡಿದ ನಂತರ ಈ ರೀತಿ ಶುಲ್ಕ ವಿಧಿಸುವುದನ್ನುತಾತ್ಕಾಲಿಕವಾಗಿ ನಿಲ್ಲಿಸಿ ಎಲ್ಲರೂ ಡಿಜಿಟಲ್ ಪಾವತಿ ಮಾಡಲು ನೆರವು ನೀಡಿದರು.
ಆದರೆ, ಈ ಶುಲ್ಕವನ್ನು ಗ್ರಾಹಕರಿಗೆ ವಿಧಿಸುತ್ತಿರಲಿಲ್ಲ. ಬದಲಿಗೆ ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುತ್ತಿದ್ದವು. ಅಂದರೆ, ನಾವು ಅಂಗಡಿಯಿಂದ 100 ರು.ನ ಸಾಮಗ್ರಿ ತೆಗೆದುಕೊಂಡು ಎಸ್‌ಬಿಐ ಕಾರ್ಡ್ ಉಜ್ಜಿ 100 ರು. ಕೊಟ್ಟು ಬಂದರೆ, ಅದರಲ್ಲಿ 99 ರು. ಅನ್ನು ಮಾತ್ರ ಅಂಗಡಿಯವನಿಗೆ ಎಸ್‌ಬಿಐ ನೀಡುತ್ತಿತ್ತು. ಉಳಿದ 1 ರು. ಅನ್ನು ಅದು ತಾನು ಡಿಜಿಟಲ್ ಸೇವೆ ಒದಗಿಸಿದ್ದಕ್ಕೆ ಶುಲ್ಕದ ರೂಪದಲ್ಲಿ ಕಡಿತಗೊಳಿಸಿಕೊಳ್ಳುತ್ತಿತ್ತು.
ಅಂಗಡಿ ಮಳಿಗೆಗಳಿಗೆ ಶುಲ್ಕವಿಲ್ಲ
ಈಗ ಸರ್ಕಾರದ ಹೊಸ ನಿರ್ಧಾರದಿಂದ ಬ್ಯಾಂಕುಗಳು ಡಿಜಿಟಲ್ ಸೇವೆಗೆ ಅಂಗಡಿಗಳಿಗೆ ಶುಲ್ಕ ವಿಧಿಸುವಂತಿಲ್ಲ! ಅಂದರೆ 100 ರು. ಪೈಕಿ 100 ರು. ಅನ್ನೂ ಅಂಗಡಿಗಳಿಗೆ ಬ್ಯಾಂಕ್‌ಗಳು ನೀಡಬೇಕು. ಈ ನಿಯಮ, ಇದು ಸಣ್ಣಪುಟ್ಟ ಅಂಗಡಿಗಳಿಗೆ ಅನ್ವಯಿಸುವುದಿಲ್ಲ. ಬದಲಿಗೆ ದೊಡ್ಡ ಮಳಿಗೆಗಳಿಗೆ ಅನ್ವಯವಾಗುತ್ತದೆ. ಇಲ್ಲಿ ಇನ್ನೂ ಒಂದು ಸಂಗತಿಯನ್ನು ಹೇಳಬೇಕು.
ಸಾಮಾನ್ಯವಾಗಿ ನಮ್ಮ ಬಳಿ ಇರುವ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ನಮ್ಮ ಬ್ಯಾಂಕ್ ನಮಗೆ ಕೊಟ್ಟಿರುತ್ತವೆಯಾದರೂ, ಆ ಕಾರ್ಡ್ ಅನ್ನುಎಲ್ಲಿ ಬೇಕಾದರೂ ನಾವು ಸ್ವೆ„ಪ್ ಮಾಡಲು ಅನುಕೂಲ ಕಲ್ಪಿಸುವ ನೆಟÌರ್ಕ್ ವ್ಯವಸ್ಥೆಯನ್ನು ಇತರ ಅಂತಾರಾಷ್ಟ್ರೀಯ ಕಂಪನಿಗಳು ಒದಗಿಸುತ್ತವೆ.
ಇದಕ್ಕೆಂದೇ ವೀಸಾ, ಮಾಸ್ಟರ್ ಕಾರ್ಡ್‌ಗಳಿವೆ. ಇತ್ತೀಚೆಗೆ ಭಾರತ ಸರ್ಕಾರದ ರುಪೇ ವ್ಯವಸ್ಥೆಯೂ ಇದೆ. ಈ ಸೇವೆಯನ್ನು ಬಳಸಿ ನಮಗೆ ಬ್ಯಾಂಕ್‌ಗಳು ಕಾರ್ಡ್ ನೀಡಿರುತ್ತವೆ. ಈ ಕಾರ್ಡ್ ಸೇವೆ ಒದಗಿಸುವ ಸಂಸ್ಥೆಗಳಿಗೆ ನಮ್ಮ ಬ್ಯಾಂಕ್ ಶುಲ್ಕ ಪಾವತಿಸಲೇಬೇಕಿರುತ್ತದೆ. ಕೇಂದ್ರ ಸರ್ಕಾರ ನೀಡಿದ ರಿಯಾಯಿತಿ, ಈ ಖಾಸಗಿ ಸೇವೆ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಬ್ಯಾಂಕ್‌ಗಳು ಈ ಹೊರೆಯನ್ನು ಭರಿಸಬೇಕಾಗುತ್ತದೆ.
ಆದರೆ ಈ ಹೊರೆಯನ್ನು ನಿವಾರಿಸುವುದಕ್ಕೂ ಕೇಂದ್ರ ಸರ್ಕಾರ ಒಂದು ಹಾದಿ ಕಂಡುಕೊಂಡಿದೆ. ಅಂದರೆ 2 ಕೋಟಿ ರು.ಗಿಂತ ಹೆಚ್ಚು ನಗದು ವಹಿವಾಟು ನಡೆಸುವವವರಿಗೆ ಶೇ. 2ರಷ್ಟು ಮೇಲು ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ವಿಧಾನದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಬ್ಯಾಂಕ್‌ಗಳಿಗೆ ಬರುವ ಹಣ ಮತ್ತು ಕಾರ್ಡ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಬ್ಯಾಂಕ್‌ಗಳು ನೀಡುವ ಹಣ ಸಮಾನವಾಗಬಹುದು ಎಂಬುದು ಸರ್ಕಾರದ ಯೋಚನೆ.
ಡಿಟಿಟಲ್ ವಹಿವಾಟು ಹೆಚ್ಚಲಿದೆಯೇ?
ಇದರಿಂದಾಗಿ ಇಡೀ ಬ್ಯಾಂಕಿಂಗ್‌ವಲಯ ಮತ್ತು ಖಾಸಗಿ ಪಾವತಿ ಸಂಸ್ಥೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಅಷ್ಟೇ ಅಲ್ಲ, ಮಾಲ್‌ಗಳು, ರೆಸ್ಟೋರೆಂಟ್‌ಗಳ ಮಾಲೀಕರಿಗೂ ಖುಷಿಯಾಗಿದೆ. ಯಾಕೆಂದರೆ ಕೋಟ್ಯಂತರ ರುಪಾಯಿ ಈ ಎಂಡಿಆರ್‌ನಿಂದಾಗಿ ಬ್ಯಾಂಕಿಗೆ ಹೋಗುತ್ತಿತ್ತು. ಇದು ಈಗ ತಪ್ಪಿದಂತಾಗಿದೆ. ಹೀಗಾಗಿ, ಈ ಮಾಲ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಇನ್ನು ಜನರು ಹೆಚ್ಚೆಚ್ಚು ಡಿಜಿಟಲ್ ವಹಿವಾಟು ಮಾಡುವಂತೆ ಪ್ರೋತ್ಸಾಹಿಸಬಹುದು. ಜನರಿಗೆ ಡಿಜಿಟಲ್ ವಹಿವಾಟು ಮಾಡಿದರೆ ರಿಯಾಯಿತಿಯನ್ನೂ ನೀಡಬಹುದು.
ಈ ಹೆಜ್ಜೆ ಮುಂದಿನ ದಿನದಲ್ಲಿ ಸರ್ಕಾರ ಇನ್ನೊಂದು ಮಹತ್ವದ ಹೆಜ್ಜೆ ಇಡುವುದಕ್ಕೆ ಪ್ರೇರಣೆಯೂ ಆಗಬಹುದು. ಈಗಾಗಲೇ ಆದಾಯ ತೆರಿಗೆ ಇಲಾಖೆಯು ಡಿಜಿಟಲ್ ಮೂಲಕ ವಹಿವಾಟು ನಡೆಸಿದವರಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ ಹಾಗೂ ಜಿಎಸ್‌ಟಿಯಲ್ಲಿ ವಿನಾಯಿತಿ ನೀಡುವ ಬಗ್ಗೆ ಜಿಎಸ್‌ಟಿ ಸಮಿತಿಗಳೆಲ್ಲ ಚರ್ಚೆ ನಡೆಸುತ್ತಿವೆ. ಒಂದು ವೇಳೆ ಇವೆಲ್ಲ ಜಾರಿಗೆ ಬಂದಲ್ಲಿ ಜನರು ತಮ್ಮ ವ್ಯಾಲೆಟ್‌ನಲ್ಲಿ ಕ್ಯಾಶ್ ಬಿಟ್ಟು ಬರಿ ಕಾರ್ಡ್‌ಗಳನ್ನು ಮಾತ್ರ ಇಟ್ಟುಕೊಂಡು ಓಡಾಡುವ ದಿನ ದೂರವಿಲ್ಲ.
– ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ
ಡಿ. 31: ಸಾಸ್ತಾನ ಟೋಲ್ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.