ಪದವೀಧರನ ಕೈ ಹಿಡಿದ ಜೇನು ಕೃಷಿ

Team Udayavani, Apr 26, 2021, 7:38 PM IST

Untitled-1

ಓದಿದ್ದು ಬಿ.ಕಾಂ. ಆದರೆ, ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಆರಿಸಿಕೊಂಡಿದ್ದು ಕೃಷಿಯನ್ನು. ಅರ್ಧ ಎಕರೆ ತೋಟದಲ್ಲಿ ಆಗುತ್ತಿರುವ ಕೃಷಿಯನ್ನು ನಂಬಿ ಕೊಂಡರೆ ಜೀವನ ನಿರ್ವಹಣೆ ಕಷ್ಟವೆಂದು ಅರಿವಾದಾಗ, ಜೇನು ಕೃಷಿಯನ್ನು ಆರಂಭಿಸಿ ಯಶಸ್ವಿಯಾದ ಯುವಕನೊಬ್ಬನ ಯಶೋಗಾಥೆ ಇದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಕ್ಲಮನೆ ಗ್ರಾಮದ ಸಂತೋಷ ಹೆಗಡೆ, ತೋಟಗಾರಿಕಾ ಬೆಳೆಯ ಜೊತೆಗೆ ಜೇನುಸಾಕಣೆ ಪ್ರಾರಂಭಿಸಿ ಯಶಸ್ವಿಯಾಗುವ ಮೂಲಕ ಯುವ ಕೃಷಿಕರಿಗೆ ಮಾದರಿ ಆಗಿದ್ದಾರೆ.

ಜೇನು ಕೃಷಿಯಲ್ಲಿ ಪರಿಣಿತಿ ಹೊಂದಿರುವ ಶಿರಸಿಯಓಣಿಕೇರಿಯ ಗುರುಮೂರ್ತಿ ಹೆಗಡೆ ಅವರಿಂದ ಮಾಹಿತಿ ಪಡೆದು, ಅವರಿಂದಲೇ ಒಂದು ಪೆಟ್ಟಿಗೆಯನ್ನು ತಂದು ಹವ್ಯಾಸಕ್ಕಾಗಿ ಜೇನು ಸಾಕಣೆ ಆರಂಭಿಸಿದ ಸಂತೋಷ ಹೆಗಡೆ, ಬಳಿಕ ಹಂತ-ಹಂತವಾಗಿ ಪೆಟ್ಟಿಗೆಯನ್ನು ಹೆಚ್ಚಿಸುತ್ತಾ ಇದೀಗ ಸುಮಾರು 40 ಪೆಟ್ಟಿಗೆಯಲ್ಲಿ ಜೇನು ಸಾಕಣೆ ನಡೆಸುತ್ತಿದ್ದಾರೆ. ವಾರಕ್ಕೊಮ್ಮೆ ಪ್ರತಿಯೊಂದು ಪೆಟ್ಟಿಗೆಯಿಂದ ಸರಾಸರಿ ಒಂದರಿಂದ ಒಂದೂವರೆ ಕೆ. ಜಿ ತುಪ್ಪ ದೊರಕುತ್ತಿದೆ.

ಖರ್ಚು, ನಿರ್ವಹಣೆ ಸುಲಭ: ಜೇನು ಸಾಕಣೆಗೆ ಒಮ್ಮೆ ಖರ್ಚು ಮಾಡಿದರೆ ಸಾಕಾಗುತ್ತದೆ. ನಂತರ ಸಣ್ಣಪುಟ್ಟ ಖರ್ಚನ್ನು ಹೊರತುಪಡಿಸಿದರೆ ಹೆಚ್ಚಿನ ಹಣ ವ್ಯಯಿಸುವ ಪ್ರಮೇಯ ಇರುವುದಿಲ್ಲ. ಚಿಗಳಿ ಇರುವೆಯಂತಹ ಕೆಲವು ಸಣ್ಣ ಸಣ್ಣ ಹುಳುಗಳ ಹಾವಳಿ ಬಿಟ್ಟರೆ ಬೇರೆ ಸಮಸ್ಯೆಗಳು ಎದುರಾಗುವುದು ಕಡಿಮೆ. ಜೇನುತುಪ್ಪದ ಜೊತೆಗೆ ಪೆಟ್ಟಿಗೆ, ಜೇನು ಮೇಣವನ್ನೂಮಾರಾಟ ಮಾಡುತ್ತೇನೆ. ಹಿಂದಿನ ವರ್ಷದಲ್ಲಿಸುಮಾರು 50 ಸಾವಿರ ಆದಾಯ ಬಂದಿದೆ. ಪ್ರಸಕ್ತ ವರ್ಷದಲ್ಲಿ 1-1.5 ಲಕ್ಷ ರೂ.ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ಸಂತೋಷ ಹೆಗಡೆ.

ಕುರಿ ಸಾಕಣೆ: ಜೇನಿನ ಜೊತೆಗೆ ಎರಡು ಎಮ್ಮೆ, ನಾಲ್ಕು ಕುರಿಯನ್ನೂ ಸಾಕುತ್ತಿದ್ದಾರೆ. ವಾರಕ್ಕೆ 4-5 ಬುಟ್ಟಿ ಕುರಿಗೊಬ್ಬರ ಕುರಿ ಸಾಕಣೆಯಿಂದ ಲಭ್ಯವಾಗುತ್ತಿದ್ದು,ಇದನ್ನ ತೋಟಗಾರಿಕಾ ಬೆಳೆಗಳಿಗೆ ಬಳಸುತ್ತಿದ್ದಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಕುರಿ ಸಾಕಣೆಯನ್ನು ಇದರ ಉಪಯುಕ್ತತೆಯಿಂದಾಗಿ ಮುಂದೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಲೋಚನೆ ಕೂಡಾ ಇವರಿಗಿದೆ.

ಎರಡು ಎಕರೆ ವಿಸ್ತಾರವಾದ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದು, ಮೂರೇ ವರ್ಷಕ್ಕೆ ಫ‌ಲ ಕೊಡಲು ಆರಂಭಿಸಿದೆ. ಜೊತೆಗೆ ತೋಟದಲ್ಲಿ ಅಲ್ಲಲ್ಲಿ ಬಾಳೆ, ಉಪ್ಪಗೆ ಕಾಯಿ, ಗೇರು, ಸೀತಾಫ‌ಲ… ಹೀಗೆ ವಿವಿಧ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ. ವಿಶೇಷವೆಂದರೆ ಯಾವುದೇ ಸಾಲ, ಸಬ್ಸಿಡಿಸೌಲಭ್ಯಗಳನ್ನು ಪಡೆಯದೇಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ ಸಂತೋಷ ಹೆಗಡೆ.

ಹೊರ ರಾಜ್ಯಗಳಿಂದಲೂ ಬೇಡಿಕೆ: ಇಲ್ಲಿನ ಜೇನುತುಪ್ಪಕ್ಕೆ ರಾಜ್ಯ ಮಾತ್ರವಲ್ಲದೆಬೇರೆ ರಾಜ್ಯಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಕೇರಳ, ಗುಜರಾತ್‌, ಆಂಧ್ರಪ್ರದೇಶ,ತಮಿಳುನಾಡು, ಬೆಂಗಳೂರು ಮುಂತಾದ ಕಡೆ ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡುತ್ತಿದ್ದಾರೆ. ಕೆಲವು ಗ್ರಾಹಕರು ಇವರಲ್ಲಿಯೇ ಆಗಮಿಸಿ ಜೇನುತುಪ್ಪ ಖರೀದಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ಸಂತೋಷ ಹೆಗಡೆ ಅವರನ್ನು (91 97317 78127) ಸಂಪರ್ಕಿಸಬಹುದು.

ಹೊಸದಾಗಿ ಜೇನು ಸಾಕಣೆ ಮಾಡಲು ಬಯಸುವವರು ಪ್ರಾರಂಭದಲ್ಲಿ 1-2 ಪೆಟ್ಟಿಗೆಯಿಂದ ಆರಂಭಿಸುವುದು ಸೂಕ್ತ. ಬಳಿಕ ಹಂತಹಂತವಾಗಿ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದು. ಯಾವುದೇಕೃಷಿ ಇರಲಿ, ಆಸಕ್ತಿ, ಖುಷಿ ಹಾಗೂ ಪರಿಶ್ರಮ ಮುಖ್ಯ. ಆಗ ಯಶಸ್ಸು ಸಾಧಿಸಬಹುದು.ಸಂತೋಷ ಹೆಗಡೆ, ಯುವ ಜೇನುಕೃಷಿಕ

ಎಂ.ಎಸ್‌.ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

2-ramanagara

Ramanagara: ಅಗ್ನಿ ದುರಂತಕ್ಕೆ ಮತ್ತೊಂದು ಕಾರ್ಖಾನೆ ಸುಟ್ಟು ಭಸ್ಮ

1-horoscope

Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ,ಪ್ರಗತಿಯತ್ತ ವೇಗದ ನಡೆ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತ-ಬಾಂಗ್ಲಾ ಕ್ರಿಕೆಟ್‌ ಕೌತುಕ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತ-ಬಾಂಗ್ಲಾ ಕ್ರಿಕೆಟ್‌ ಕೌತುಕ

PWD: ಕಟ್ಟಡ ರೇಖೆ ಅಂತರ ಪರಿಷ್ಕರಣೆ: 6 ಮೀ.ಗೆ ನಿಗದಿಪಡಿಸಿ ಸರಕಾರ ಆದೇಶ

PWD: ಕಟ್ಟಡ ರೇಖೆ ಅಂತರ ಪರಿಷ್ಕರಣೆ: 6 ಮೀ.ಗೆ ನಿಗದಿಪಡಿಸಿ ಸರಕಾರ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

Untitled-1

ಪರಿಸರ ಪ್ರಿಯರ ಅಶೋಕ ವನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

Language War: ಭಾಷಾ ಸಮರಕ್ಕೆ ನಾವು ಸಿದ್ಧ: ಕೇಂದ್ರಕ್ಕೆ ತಮಿಳುನಾಡು ಡಿಸಿಎಂ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

RSS Headquarters: ಕೇಶವ ಕುಂಜ’ ಉದ್ಘಾಟನೆ… ಅಮಿತ್‌ ಶಾ, ನಡ್ಡಾ ಭಾಗಿ

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು

2-ramanagara

Ramanagara: ಅಗ್ನಿ ದುರಂತಕ್ಕೆ ಮತ್ತೊಂದು ಕಾರ್ಖಾನೆ ಸುಟ್ಟು ಭಸ್ಮ

1-horoscope

Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ,ಪ್ರಗತಿಯತ್ತ ವೇಗದ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.