ದ್ರಾಕ್ಷಿ ಕೃಷಿ; ಸಿಹಿ ಸುದ್ದಿ ನೀಡಿದ ಫ‌ಲ


Team Udayavani, Jan 13, 2020, 5:35 AM IST

Draksi-article-jaivanth-(3)

“ನಮ್ಮದು ಲಾಭದಾಯಕ ಕೃಷಿ. ಸಾವಯವವಲ್ಲ, ರಾಸಾಯನಿಕವೂ ಅಲ್ಲ. ಇವೆರಡರ ಮಿಶ್ರಣ. ಎಂಟು ಎಕರೆಯಲ್ಲಿ ಗಿಡಗಳಲ್ಲಿ ನೇತಾಡುತ್ತಿದ್ದ ದ್ರಾಕ್ಷಿ ಗೊಂಚಲಿನಲ್ಲಿರುವ ಹಣ್ಣಿನ ಸವಿಯ ಹಿಂದಿನ ಗುಟ್ಟನ್ನು ವಿವರಿಸತೊಡಗಿದರು ಗುರುಪಾದಪ್ಪ ಪತಾಟೆ.

ಕಲಬುರ್ಗಿ ಜಿಲ್ಲೆ ಅಫ‌ಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ಗುರುಪಾದಪ್ಪ ದೂಳಪ್ಪ ಪತಾಟೆ, ಚಿಕ್ಕ ವಯಸ್ಸಿನಲ್ಲಿಯೇ ಕೃಷಿಗಿಳಿದವರು. ಇವರ ತಂದೆ ದೂಳಪ್ಪ ಪ್ರಯೋಗಶೀಲ ಕೃಷಿಕರು. ಜಿ9 ಬಾಳೆ ಮೊದಲಿಗೆ ಪರಿಚಯಿಸಲ್ಪಟ್ಟ ದಿನಗಳಲ್ಲಿ ತನ್ನ ಹೊಲದಲ್ಲಿ ಅದನ್ನು ಬೆಳೆದು ಬೃಹತ್‌ ಗಾತ್ರದ ಗೊನೆಗಳನ್ನು ಪಡೆದು ಮಾರುಕಟ್ಟೆಗೆ ಕಳುಹಿಸಿದ್ದರು. ಕಬ್ಬು, ತೊಗರಿ, ಕಡಲೆ, ಜೋಳ, ಕುಸುಬಿ… ಹೀಗೆ, ಯಾವ ಕೃಷಿ ಕೈಗೊಂಡರೂ ಸಾಂಪ್ರದಾಯಿಕ ಮಾದರಿಯೊಂದನ್ನೇ ನೆಚ್ಚಿಕೊಳ್ಳಲಿಲ್ಲ. ತಾಂತ್ರಿಕತೆಯನ್ನೂ ಅಳವಡಿಸಿಕೊಂಡು ಭೂಮಿಯಲ್ಲಿ ಹಸಿರು ವೃದ್ಧಿಸಿಕೊಂಡರು.

ಶುರುವಿಗೆ ಹದ ಸಿಗಲಿಲ್ಲ
ಗುರುಪಾದಪ್ಪ ಮೊದಲು ಮಾಡಿದ್ದು ಮಾಹಿತಿ ಸಂಗ್ರಹಣಾ ಕಾರ್ಯ. ಸುತ್ತಮುತ್ತಲ ರೈತರ ಬಳಿ ತೆರಳಿ ಅವರು ಬೆಳೆಯುತ್ತಿದ್ದ ಬೆಳೆಯ ಇತ್ಯೋಪರಿಯಷ್ಟನ್ನೂ ತಿಳಿದುಕೊಂಡರು. ಕಡೆಯಲ್ಲಿ ದ್ರಾಕ್ಷಿ ಬೆಳೆಯಲು ಮನಸ್ಸು ಮಾಡಿದರು. ಪರಿಚಯಸ್ಥರಿಂದ 1500 ಬೇರು ಸಸ್ಯಗಳನ್ನು ತಂದು ನರ್ಸರಿ ಮಾಡಿ ಗಿಡಗಳನ್ನು ತಯಾರಿಸಿಕೊಂಡರು. ಗಿಡ‌ದಿಂದ ಗಿಡಕ್ಕೆ ನಾಲ್ಕು ಅಡಿ, ಸಾಲಿನಿಂದ ಸಾಲಿಗೆ ಎಂಟು ಅಡಿ ಅಂತರದಲ್ಲಿ ಒಂದೂವರೆ ಅಡಿ ಘನ ಗಾತ್ರದ ಗುಣಿ ತೆಗೆದು ನಾಟಿ ಮಾಡಿದರು. ಡ್ರಿಪ್‌ ಅಳವಡಿಸಿ ನೀರುಣಿಸಲು ವ್ಯವಸ್ಥೆ ರೂಪಿಸಿಕೊಂಡರು. ಜೂನ್‌ ಮೊದಲ ವಾರದಲ್ಲಿ ನಾಟಿ ಮಾಡಿದರು. ಮೊದಲ ಬಾರಿ ಹೊಸ ಕೃಷಿ ಮಾಡುತ್ತಿದ್ದ ಗುರುಪಾದಪ್ಪರಿಗೆ ಹದ ಸಿಗಲಿಲ್ಲ. ಹದಿನೆಂಟು ತಿಂಗಳಿಗೆ ಹಣ್ಣುಗಳು ಕೊಯ್ಲಿಗೆ ಸಿಕ್ಕವು. ಇವರು ಪಡೆದ ಮೊದಲ ಇಳುವರಿ ಒಂದೂವರೆ ಟನ್‌ಗಳು. ಎಕರೆಯೊಂದರಿಂದ ವಾಸ್ತವವಾಗಿ ಹನ್ನೆರಡು ಟನ್‌ ಇಳುವರಿ ಬರಬೇಕಿತ್ತು.

ಸಿಹಿ ನೀಡಿದ ಹುಳಿ ದ್ರಾಕ್ಷಿ
ಗಿಡಗಳಲ್ಲಿ ಇಳುವರಿ ಕಡಿಮೆಯಾದರೂ ಅವರಲ್ಲಿನ ಉತ್ಸಾಹ ಕಡಿಮೆಯಾಗಲಿಲ್ಲ. ಎರಡನೆಯ ವರ್ಷ ಎರಡು ಎಕರೆಯಿಂದ ಪಡೆದ ಇಳುವರಿ 6 ಟನ್ನು ಮಾತ್ರ. ಬರಬೇಕಾಗಿದ್ದು 20 ಟನ್‌. ಗುರುಪಾದಪ್ಪನವರು ಈ ಬಾರಿಯೂ ಧೃತಿಗೆಡಲಿಲ್ಲ. ಮೂರನೆ ಬಾರಿಗೆ ದ್ರಾಕ್ಷಿ ಬೆಳೆದರು. ಈ ಸಲ ಎರಡೆಕರೆಯಲ್ಲಿ 22 ಟನ್‌ ಇಳುವರಿ ಪಡೆದರು. ಅದರಿಂದ ಒಣದ್ರಾಕ್ಷಿ ತಯಾರಿಸಿ ಮಾರುಕಟ್ಟೆಗೆ ಕಳುಹಿಸಿದರು. ಅಲ್ಲಿ ಉತ್ತಮ ಬೆಲೆಯೇ ಸಿಕ್ಕಿತು. ಈ ಹಿಂದೆ ನಷ್ಟವಾಗಿದ್ದ ಮೊತ್ತವೂ ಒಂದೇ ಬೆಳೆಯಿಂದ ಕೈಸೇರಿತ್ತು. ಮತ್ತೆ ಹಿಂತಿರುಗಿ ನೋಡಲಿಲ್ಲ. ಈಗ 8 ಎಕರೆಯಲ್ಲಿ ದ್ರಾಕ್ಷಿ ಬೆಳೆಯುವ ಇವರು ಪಡೆಯುತ್ತಿರುವ ಇಳುವರಿ, 100 ಟನ್‌.

ತಿಪ್ಪೆ ಗೊಬ್ಬರ ಮತ್ತು ಫಾಸೆ#àಟ್‌
ಗಿಡಗಳ ಬುಡಕ್ಕೆ ತಿಪ್ಪೆಗೊಬ್ಬರ ಹಾಗೂ ಸಿಂಗಲ್‌ ಸೂಪರ್‌ಫಾಸೇ³ಟ್‌ ಗೊಬ್ಬರ ಉಣಿಸುತ್ತಾರೆ. ಒಂದೇ ವಾರದಲ್ಲಿ ಗಿಡಗಳ ಬೇರುಗಳು ಕ್ರಿಯಾಶೀಲವಾಗಿಬಿಡುತ್ತವೆ. ಪರಿಣಾಮ, ಗಿಡಗಳಲ್ಲಿ ಹೊಸದಾಗಿ ಕಣ್ಣುಗಳು ಒಡೆಯಲಾರಂಭಿಸುತ್ತವೆ. ಈ ಸಮಯದಲ್ಲಿ ಗಿಡದ ಬುಡದಿಂದ ಎರಡು ಕಣ್ಣು ಬಿಟ್ಟು ಚಾಟನಿಗೆ ಒಳಪಡಿಸುತ್ತಾರೆ. ನಂತರ ಔಷಧಿ ಸಿಂಪಡಿಸುತ್ತಾರೆ.

ಒಂದು ಗಿಡಕ್ಕೆ ಒಂದು ಚದರಡಿಗೆ ಒಂದರ ಲೆಕ್ಕಾಚಾರದಲ್ಲಿ ಮೂವತ್ತೆರಡು ಚಿಗುರು ಕಾಯ್ದುಕೊಳ್ಳಬೇಕು. ಏಳನೇ ಎಲೆಗೆ ಒಮ್ಮೆ ತುದಿ ಚಿವುಟಬೇಕು. ಎರಡನೆಯ ಬಾರಿ ಐದನೆಯ ಎಲೆಗೆ ತುದಿ ಚಿವುಟಬೇಕು. ಮೂರನೆಯ ಹಂತದಲ್ಲಿ ಮೂರನೆಯ ಎಲೆಗೆ ತುದಿ ಚಿವುಟಬೇಕು. ಇವಿಷ್ಟು ಮಾಡುವಾಗ ಅರವತ್ತು ದಿನ ಆಗಿರುತ್ತದೆ. ಪ್ರತಿ ಬಾರಿ ತುದಿ ಚಿವುಟಿದಾಗ ಸಸ್ಯ ಪ್ರಚೋದಕಗಳ ಬಳಕೆ, ಗೊಬ್ಬರ ಉಣಿಸುವಿಕೆ, ಕೀಟ ನಿಯಂತ್ರಣ ಮರೆಯಬಾರದು ಎನ್ನುತ್ತಾರೆ. ಬೋಡೋì ದ್ರಾವಣ ಹಾಗೂ ಸಲ#ರ್‌ ದ್ರಾವಣ ಸಿಂಪರಣೆ ತಪ್ಪಿಸಬಾರದು. ಇದರಿಂದ ಬೂದಿರೋಗ, ಎಲೆಚುಕ್ಕಿರೋಗ, ಬೂಜುತುಪ್ಪಟ ರೋಗವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎನ್ನುತ್ತಾರೆ ಗುರುಪಾದಪ್ಪ.

ನೀರಿನ ಅಭಾವ ಇಲ್ಲವೇ ಇಲ್ಲ
ಇವರ ನೀರಿಂಗಿಸುವ ಸಾಹಸ ಮಾದರಿಯಾಗುವಂತಿದೆ. ಅಫ‌ಜಲಪುರದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಮಳೆಯ ನೀರು ಹಿಡಿದಿಟ್ಟುಕೊಳ್ಳುವ ಅಥವಾ ಸಂಗ್ರಹಿಸಿಡುವ ಕೆಲಸ ಮಾಡಲೇಬೇಕು. ಇದಕ್ಕಾಗಿಯೇ ಇವರು ನೀರಿಂಗಿಸಲು ಬೃಹತ್‌ ಬಾವಿಯ ನಿರ್ಮಾಣ ಮಾಡಿದ್ದಾರೆ. ಎಂಟು ಅಡಿ ಅಗಲ, ನೂರು ಅಡಿ ಆಳವಿರುವ ನೀರು ಸಂಗ್ರಹಣಾ ಬಾವಿ ನಿರ್ಮಿಸಿದ್ದಾರೆ. ಇದಕ್ಕಾಗಿ ಹನ್ನೊಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಎಂಬತ್ತು ಲಕ್ಷ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯದ ಈ ಬಾವಿ 2014ರಲ್ಲಿ ತುಂಬಿ ನಿಂತಿತ್ತು.

ಮಳೆಯ ನೀರನ್ನು ಸಂಗ್ರಹಿಸಿ, ಸಂಗ್ರಹವಾದ ನೀರನ್ನು ಕೃಷಿಗೆ ಬಳಸಿಕೊಳ್ಳಲು ಇನ್ನೊಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಇನ್ನೂರು ಅಡಿ ಉದ್ದ, ಇನ್ನೂರಿಪ್ಪತ್ತು ಅಡಿ ಅಗಲ,ಇಪ್ಪತ್ತೇಳು ಅಡಿ ಆಳದ ಹೊಂಡವದು. ಇದಕ್ಕಾಗಿ ಇವರು ಖರ್ಚು ಮಾಡಿದ ಮೊತ್ತ ಹನ್ನೆರಡು ಲಕ್ಷ ರುಪಾಯಿ. ಎರಡೂವರೆ ಕೋಟಿ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಇದರಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಕೃಷಿಗೆ ಬಳಸಿಕೊಳ್ಳುವ ಮುಂದಾಲೋಚನೆ ಮಾಡಿದ್ದಾರೆ.

ಸಂಪರ್ಕ: 9590055427

– ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.