ನುಗ್ಗೆ ಬೆಳೆಯಲು ನುಗ್ಗಿ
Team Udayavani, Mar 17, 2019, 12:06 PM IST
ನುಗ್ಗೆ ಬೆಳೆಯುವುದು ತೀರ ಕಷ್ಟದ ಕೆಲಸವಲ್ಲ. ಆದರೆ ನಿರ್ವಹಣೆ ಮಾತ್ರ ಅಚ್ಚುಕಟ್ಟಾಗಿರಬೇಕು. ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್ ಇಳುವರಿ ಗ್ಯಾರಂಟಿ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಮಾಹಿತಿ.
ನುಗ್ಗೆ ಬೆಳೆಯ ಬೇಕೆಂದಿರುವ ಕೃಷಿಕರೇ ಕೆಲ ಸತ್ಯ ತಿಳಿದುಕೊಳ್ಳಿ. ರಾಸಾಯನಿಕ ಬಳಸಿ ನುಗ್ಗೆ ಕೃಷಿ ಮಾಡಲು ಆಗದು. ಚೆನ್ನಾಗಿ ಬೆಳೆ ಬರಬೇಕು, ಲಾಭ ಮಾಡಬೇಕು ಅಂದರೆ ಮೊದಲು ನುಗ್ಗೆಗೆ ಯಥೇಚ್ಚವಾಗಿ ಪೋಷಕಾಂಶಗಳು ದೊರೆಯುವಂತೆ ಮಾಡಬೇಕು.
ನುಗ್ಗೆ ತೀರ ದೊಡ್ಡ ಗಿಡವಾಗುವ ಬೆಳೆ ಅಲ್ಲ, ಆರೇಳು ಅಡಿ ಎತ್ತರಕ್ಕೆ ಪೊದೆಯಾಕಾರದಲ್ಲಿ ಬೆಳೆಸಬೇಕು, ಹೀಗಾಗಿ ಜಾಸ್ತಿ ಅಂತರ ಇಟ್ಟು ಬೆಳೆಯುವ ಅವಶ್ಯಕತೆ ಇಲ್ಲ. ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಆರು ಅಡಿ ಸಾಕು. ಹೀಗೆ ನಿಮ್ಮ ಜಮೀನಿನಲ್ಲಿ ಅಳತೆ ಪ್ರಕಾರ ಗುರುತು ಮಾಡಿಕೊಂಡು ಒಂದೂವರೆ ಅಡಿ ಆಳ-ಅಗಲದ ಗುಂಡಿ ತೆಗೆಸಬೇಕು. ಗುಂಡಿಯಿಂದ ತೆಗೆದ ಮಣ್ಣು ಹಾಗೂ ಅಷ್ಟೇ ಪ್ರಮಾಣದ ಒಳ್ಳೆಯ ಕೊಟ್ಟಿಗೆ ಗೊಬ್ಬರ ಬೆರೆಸಿ ಅದೇ ಗುಂಡಿಗೆ ತುಂಬಬೇಕು. ಹೀಗೆ ರೆಡಿಯಾದ ಗುಂಡಿಯಲ್ಲಿ ಸದೃಢವಾದ ಸಸಿ ನೆಡಬೇಕು.
ನಿಮಗೆ ಗೊತ್ತೇ ಇರುವಂತೆ, ನುಗ್ಗೆಗಿಡಗಳು ಸಾರಜನಕ ಸ್ಥಿರೀಕರಣ ಮಾಡುವ ಸಾಮರ್ಥ್ಯ ಹೊಂದಿವೆ. ಇದಕ್ಕೆ ನೀವು ಒಂದೇ ಒಂದು ಕಾಳು ಯೂರಿಯಾ ಗೊಬ್ಬರ ಕೊಡುವುದು ಬೇಡ. ಪ್ರತಿ ಎರಡು ತಿಂಗಳಿಗೊಮ್ಮೆ ಬುಡದ ಸುತ್ತ ಪಾತಿ ಮಾಡಿ ನಾಲ್ಕೈದು ಬೊಗಸೆ ಎರೆಹುಳು ಗೊಬ್ಬರ ಕೊಟ್ಟರೆ ಸಾಕು. ಜೊತೆಗೆ ಜೀವಾಮೃತ ತಯಾರಿಸಿಕೊಂಡು ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಕಡ್ಡಾಯವಾಗಿ ಸಿಂಪಡಿಸಬೇಕು ಹಾಗೂ ಗಿಡಗಳ ಬುಡದಲ್ಲಿ ಹಾಕಬೇಕು. ಇಷ್ಟಾದರೆ ಸಾಕು, ಮತ್ಯಾವುದೇ ಮೇಲುಗೊಬ್ಬರದ ಅವಶ್ಯಕತೆ ಇಲ್ಲ.
ಇಳುವರಿ ಹೀಗಿದ್ದರೇನೇ ಲಾಭ
* ಒಂದು ಕಾಯಿ 60-70 ಸೆಂ.ಮೀ. (ಎರಡು ಅಡಿ) ಉದ್ದ ಇರಬೇಕು
* ಒಂದು ಕಾಯಿ 100-120 ಗ್ರಾಂ. ತೂಕ ಇರಬೇಕು
* ಒಂದು ಗಿಡ ಒಂದು ವರ್ಷಕ್ಕೆ ಕಮ್ಮಿಯೆಂದರೂ 250-300 ಕಾಯಿ ಬಿಡಬೇಕು.
ಸಸಿ ನಾಟಿ ಮಾಡಿದಾಗ ಯಾವುದೇ ರಾಸಾಯನಿಕ ಗೊಬ್ಬರ ಹಾಕಬೇಡಿ, ನಾಟಿಯಾದ ಮೂರು ತಿಂಗಳ ನಂತರ ಒಂದು ಎಕರೆಗೆ, 25 ಕೆ.ಜಿ ಡಿಎಪಿ, 10 ಕೆ.ಜಿ ಯೂರಿಯಾ, 7 ಕೆ.ಜಿ ಪೊಟ್ಯಾಷ್ ಗೊಬ್ಬರದ ಜೊತೆ ಸೇರಿಸಿ, ಗಿಡದ ಸುತ್ತ ರಿಂಗ್ ಮಾಡಿ ಹಾಕಿ. ನಂತರ ಮತ್ತೆ ಮೂರು ತಿಂಗಳು ಬಿಟ್ಟು ಇಷ್ಟೇ ಪ್ರಮಾಣದ ಗೊಬ್ಬರವನ್ನು ಹೀಗೇ ಕೊಡಿ.
ಇನ್ನು ಹಾಗೇ ಬಿಟ್ಟರೆ ನುಗ್ಗೆ 6-7 ಮೀಟರ್ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಹೀಗೆ ಎತ್ತರ ಬೆಳೆದರೆ ಕಾಯಿ ಕೀಳುವುದು ಕಷ್ಟ ಜೊತೆಗೆ ಇಳುವರಿಯಲ್ಲೂ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಗಿಡಗಳು ಗಿಡ್ಡಗೆ ಪೊದೆಯಾಕಾರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಒಂದು, ಒಂದೂವರೆ ಮೀಟರ್ ಬೆಳೆದಾಕ್ಷಣ ಕುಡಿ ಚಿವುಟಿ ಎತ್ತರ ಬೆಳೆಯದಂತೆ ಮಾಡಬೇಕು. ಇದರಿಂದ ಹೆಚ್ಚು ಕವಲುಗಳು ಬಂದು ಗಿಡ ಪೊದೆಯಂತಾಗಿ ಹೆಚ್ಚಿನ ಕಾಯಿ ಬಿಡುತ್ತವೆ. ನೀರಿನ ನಿರ್ವಹಣೆಯೂ ಅಷ್ಟೇ ಮುಖ್ಯ, ಪ್ರತಿ ಐದಾರು ದಿನಕ್ಕೊಮ್ಮೆ ತಪ್ಪದೇ ನೀರುಣಿಸಿ.
ಆಮೇಲೆ ನುಗ್ಗೆದು ಜೊತೆಗೇ ನುಗ್ಗಿ ಬರುತ್ತದೆ ಲಾಭ.
ಎಸ್.ಕೆ. ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.