ಜಿಎಸ್‌ಟಿ ; ಇಲ್ಲಿದೆ ಗ್ರಾಹಕ ರಕ್ಷಣೆಯ ಭರವಸೆ


Team Udayavani, Jun 18, 2018, 4:27 PM IST

gst.jpg

ಜಿಎಸ್‌ಟಿ ಕಾಯ್ದೆಯಲ್ಲಿ ಜಿಎಸ್‌ಟಿಯಲ್ಲಿ ಹೊಸ ತೆರಿಗೆ ಪದ್ಧತಿಯಿಂದ ಗ್ರಾಹಕರಿಗೆ ಮೋಸವಾದರೆ ಅದಕ್ಕೆ ರಕ್ಷಣೆ ಕೊಡಲು ಅವಕಾಶಗಳನ್ನು ಇಡಲಾಗಿದೆ. ಲಾಭಕೋರತನ ತಡೆ ಪ್ರಾಧಾನಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ. ಇದಕ್ಕಾಗಿ ಆ್ಯಂಟಿ ಪ್ರಾಫಿಟಿಯರಿಂಗ್‌ ಅಥಾರಿಟಿ, ಹೃಸ್ವವಾಗಿ ಹೇಳುವುದಾದರೆ ಎಪಿಎಯನ್ನು ಸ್ಥಾಪಿಸಲಾಗಿದೆ. ಜಿಎಸ್‌ಟಿ ಕಾಯ್ದೆಯಲ್ಲಿರುವ ಕಲಂ 171ರ ಅನ್ವಯ ಜೂನ್‌ 2017ರಲ್ಲಿ ಕೇಂದ್ರ ಮಂತ್ರಿಮಂಡಲದ ಒಪ್ಪಿಗೆ ಪಡೆದು ಎಪಿಎ ನಿಯಮಗಳ ಅನ್ವಯ ರಾಷ್ಟ್ರೀಯ ಲಾಭಕೋರತನ ಪ್ರಾಧಿಕಾರ ಎನ್‌ಎಎಯನ್ನು ರಚಿಸಲಾಗಿದೆ.

ಜಾಗತೀಕರಣದ ಪರಿಣಾಮ ಗ್ರಾಹಕರ ಮೇಲಾಗುತ್ತದೆ. ರೈತರ ಬದುಕಿನಲ್ಲಾಗುತ್ತದೆ ಎಂಬ ಮಾತುಗಳನ್ನು ಆ ಕಾಲದಲ್ಲಿ ಹೇಳಲಾಗಿತ್ತು. ಆ ಕ್ಷಣದಲ್ಲಿ ಗ್ಲೋಬಲೈಸೇಶನ್‌ನ ಪ್ರಭಾವದಿಂದ ಸರ್ಕಾರಗಳು ಟಿಪಿಕಲ್‌ ಉದ್ಯಮದ ರೀತಿಯ ಮನೋಭಾವವನ್ನು ಬೆಳೆಸಿಕೊಳ್ಳುತ್ತವೆ ಎಂದು ಯಾರೂ ಹೇಳಿರಲಿಲ್ಲ. ಉದ್ಯಮ ವ್ಯವಸ್ಥೆಗೆ ಪೂರಕವಾದ ಕಾನೂನು ನಿಯಮಗಳನ್ನು ಜಾರಿಗೆ ತರುತ್ತವೆ. ಆ ಮೂಲಕ ಪಟ್ಟಭದ್ರರನ್ನು ಬೆಂಬಲಿಸುತ್ತವೆ ಎಂಬ ನಂಬಿಕೆ ಇತ್ತು. ಆದರೆ ಸರ್ಕಾರವೇ ಖುದ್ದು ವ್ಯಾಪಾರಿಯಂತೆ ವರ್ತಿಸುತ್ತದೆ ಎಂಬ ನಿರೀಕ್ಷೆ ಇರಲಿಲ್ಲ.

ಆದಾಯವೇ ಸರ್ಕಾರದ ಮಂತ್ರ!
ದೇಶದ ತೆರಿಗೆ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾಯಿಸಿರುವ ಸರಕು ಮತ್ತು ಸೇವಾ ಕಾಯ್ದೆ ಯಾನೆ ಜಿಎಸ್‌ಟಿ ಆಗಮನಕ್ಕೆ ಮುನ್ನ ದೇಶದೆಲ್ಲೆಡೆಯ ತೆರಿಗೆ ವ್ಯವಸ್ಥೆ ಒಂದೇ ತೆರನಾಗಿರುವುದರಿಂದ ಅತ್ಯಂತ ಹೆಚ್ಚಿನ ಲಾಭ ಗ್ರಾಹಕರಿಗೆ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜಿಎಸ್‌ಟಿ ಕಾರಣದಿಂದ ಸರಕುಗಳು ಬೆಲೆ ಏರಿಸಿಕೊಂಡಿರುವುದು ಪ್ರಮುಖವಾಗಿ ಕಾಣುತ್ತದೆಯೇ ವಿನಃ ಇಳಿಕೆಯ ಉದಾಹರಣೆಗಳು ತೀರಾ ಕಡಿಮೆ. ತೆರಿಗೆ ಪದ್ಧತಿ ಸಮತೂಕದ್ದಾಗಿದ್ದರೆ ಆರ್ಥಿಕ ವರ್ಷಾಂತ್ಯದಲ್ಲಿ ನಾಗರಿಕ ತೆರವು, ತೆರಿಗೆ ಮೊತ್ತದಲ್ಲಾದರೂ ವ್ಯತ್ಯಾಸ ಆಗಬಾರದಿತ್ತು. ಇತ್ತ ಗ್ರಾಹಕನಿಗೆ ನೇರವಾಗಿ ಲಾಭವಾಗಬಹುದಾದ ಪೆಟ್ರೋಲಿಯಂ ಸರಕನ್ನು ಜಿಎಸ್‌ಟಿಯೊಳಗೆ ತಾರದಿರುವುದೇ ಸರ್ಕಾರದ ಮಾರ್ವಾಡಿತನದ ಸ್ಪಷ್ಟ ದೃಷ್ಟಾಂತ.

ಜಿಎಸ್‌ಟಿ ಕಾಯ್ದೆಯಲ್ಲಿ ಜಿಎಸ್‌ಟಿಯಲ್ಲಿ ಹೊಸ ತೆರಿಗೆ ಪದ್ಧತಿಯಿಂದ ಗ್ರಾಹಕರಿಗೆ ಮೋಸವಾದರೆ ಅದಕ್ಕೆ ರಕ್ಷಣೆ ಕೊಡಲು ಅವಕಾಶಗಳನ್ನು ಇಡಲಾಗಿದೆ. ಲಾಭಕೋರತನ ತಡೆ ಪ್ರಾಧಾನಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ. ಇದಕ್ಕಾಗಿ ಆ್ಯಂಟಿ ಪ್ರಾಫಿಟಿಯರಿಂಗ್‌ ಅಥಾರಿಟಿ, ಹೃಸ್ವವಾಗಿ ಹೇಳುವುದಾದರೆ ಎಪಿಎಯನ್ನು ಸ್ಥಾಪಿಸಲಾಗಿದೆ. ಜಿಎಸ್‌ಟಿ ಕಾಯ್ದೆಯಲ್ಲಿರುವ ಕಲಂ 171ರ ಅನ್ವಯ ಜೂನ್‌ 2017ರಲ್ಲಿ ಕೇಂದ್ರ ಮಂತ್ರಿಮಂಡಲದ ಒಪ್ಪಿಗೆ ಪಡೆದು ಎಪಿಎ ನಿಯಮಗಳ ಅನ್ವಯ ರಾಷ್ಟ್ರೀಯ ಲಾಭಕೋರತನ ಪ್ರಾಧಿಕಾರ ಎನ್‌ಎಎಯನ್ನು ರಚಿಸಲಾಗಿದೆ. ಪ್ರಸ್ತುತ 5 ಸದಸ್ಯರ ಸಮಿತಿಗೆ 1985ರ ಐಎಎಸ್‌ ಬ್ಯಾಚ್‌ನ ರಾಜಸ್ತಾನದ ನಿವೃತ್ತ ಅಧಿಕಾರಿ ಬದ್ರಿ ನಾರಾಯಣ್‌ ಶರ್ಮ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 

ದೂರಲೊಂದು ವ್ಯವಸ್ಥೆ
ಕಡಿಮೆ ಪೂರೈಕೆ ಇರುವ ಅಥವಾ ಯಾವುದೇ ಸರಕನ್ನು ವಾಸ್ತವಕ್ಕಿಂತ ಜಾಸ್ತಿ ಬೆಲೆಗೆ ಮಾರಾಟ ಮಾಡಿದಾಗ ಅದು ನಿಯಮಮೀರಿದ ಲಾಭವಾಗುತ್ತದೆ. ಈ ರೀತಿ ಜಿಎಸ್‌ಟಿಯ ಹೆಸರಿನಲ್ಲಿ ಗ್ರಾಹಕನನ್ನು ಕೊಳ್ಳೆ ಹೊಡೆಯುವುದನ್ನು ಕಾನೂನು ಪ್ರಕಾರವೇ ನಿರ್ಬಂಧಿಸಲಾಗಿದೆ. ಜಿಎಸ್‌ಟಿಯಿಂದ ಸರಕುಗಳ ಮೇಲೆ ಇಳಿತವಾಗಿರುವ ತೆರಿಗೆಯ ಸವಲತ್ತನ್ನು ಗ್ರಾಹಕನಿಗೆ ವರ್ಗಾಯಿಸುವುದು ತಯಾರಕ ಕಂಪನಿಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ವ್ಯತ್ಯಯವಾದರೆ ಸರಿಪಡಿಸುವ ಒಂದು ವ್ಯವಸ್ಥೆಯಾಗಿ ಎಪಿಎ ಬಂದಿದೆ. ಅಲ್ಲದೆ, ವ್ಯವಹಾರಸ್ಥರು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಅನ್ನು ಮರಳಿ ಪಡೆದರೆ ಅದನ್ನೂ ಗ್ರಾಹಕನಿಗೆ ದಾಟಿಸಬೇಕಾಗುತ್ತದೆ.

ಯಾವುದಾದರೂ ವ್ಯವಹಾರಸ್ಥ ಅಥವಾ ಕಂಪನಿ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಸರಕಿನ ಬೆಲೆ ಜಾಸ್ತಿಯಾಗಿದೆ ಎಂದು ಹೇಳಿ ಅಧಿಕ ಬೆಲೆ ವಸೂಲಿ ಮಾಡಿದರೆ ಈ ಲಾಭಕೋರತನ ತಡೆ ಕಲಂಗಳು ಗ್ರಾಹಕನ ನೆರವಿಗೆ ಬರುತ್ತವೆ. ಅಂಥ ಸಂದರ್ಭಗಳಲ್ಲಿ ಗ್ರಾಹಕ ರಾಷ್ಟ್ರೀಯ ಲಾಭಕೋರತನ ತಡೆ ಪ್ರಾಧಿಕಾರಕ್ಕೆ ಅಂಥವರ ವಿರುದ್ಧ ದೂರು ಕೊಡಬಹುದು. ಈ ತರಹದ ಸನ್ನಿವೇಶ ಸಿಂಗಾಪುರದಲ್ಲಿ ನಡೆದಿತ್ತು. ಅಲ್ಲಿ ಜಿಎಸ್‌ಟಿ ಬಂದ ಮೇಲೆ ಅದರ ಹೆಸರು ಹೇಳಿಕೊಂಡು ವ್ಯಾಪಾರಸ್ಥರು ಸರಕುಗಳ ಬೆಲೆ ಏರಿಸಿದ್ದರು. ಇದು ಹಣದುಬ್ಬರಕ್ಕೂ ಕಾರಣವಾಗಿತ್ತು. ಇಂಥ ನಿದರ್ಶನಗಳನ್ನು ಪರಿಗಣಿಸಿ ಭಾರತ ಸರ್ಕಾರ ಈ ಪ್ರಾಧಾನಗಳನ್ನು ಜಿಎಸ್‌ಟಿ ಕಾಯ್ದೆಯಲ್ಲಿ ಸೇರಿಸಿದೆ.

ಗ್ರಾಹಕರ ದೂರುಗಳನ್ನು ನಿರ್ವಹಿಸುವ ಎನ್‌ಎಎ ಪ್ರತಿ ರಾಜ್ಯದಲ್ಲೂ ಮೇಲ್ವಿಚಾರಣಾ ಸಮಿತಿಗಳನ್ನು ಹೊಂದಿರುತ್ತದೆ. ಸ್ಥಳೀಯ ದೂರುಗಳನ್ನು ಈ ಸಮಿತಿ ಪರಿಶೀಲಿಸುತ್ತದೆ. ರಾಷ್ಟ್ರ ಮಟ್ಟದ ದೂರುಗಳನ್ನು ಎನ್‌ಎಎ ಪರಿಗಣಿಸುತ್ತದೆ. ಸಮಿತಿಯ ಮುಂದೆ ಬಂದ ದೂರುಗಳ ತನಿಖೆಯನ್ನು ಪ್ರಾಧಿಕಾರವು ಡೈರೆಕ್ಟರೇಟ್‌ ಜನರಲ್‌ ಆಫ್ ಸೇಫ್ಗಾರ್ಡ್ಸ್‌ ಡಿಜಿಎಸ್‌ಗೆ ವರ್ಗಾಯಿಸುತ್ತದೆ. ಈ ಕುರಿತು ತನಿಖೆ ನಡೆಸಿ ಡಿಜಿಎಸ್‌ ಮೂರು ತಿಂಗಳೊಳಗೆ ವರದಿ ನೀಡಬೇಕು. ಇದರ ಆಧಾರದಲ್ಲಿ ಎನ್‌ಎಎ ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ.

ಒಂದೊಮ್ಮೆ ಈ ಹಿಂದಿನಿಂದಲೂ ಜಿಎಸ್‌ಟಿ ಲಾಭ ಗ್ರಾಹಕನಿಗೆ ವರ್ಗಾವಣೆಯಾಗದಿರುವುದು ಕಂಡುಬಂದ ಸಂದರ್ಭದಲ್ಲಿ ಗ್ರಾಹಕನಿಗೆ ವೈಯುಕ್ತಿಕವಾಗಿ ಲಾಭವನ್ನು ಮರುತರಿಸಲು ಸಾಧ್ಯವಾಗುವುದಿಲ್ಲ. ಇಂಥ ಪ್ರಕರಣಗಳ ಒಟ್ಟಾರೆ ಅಧಿಕ ಲಾಭವನ್ನು ಗ್ರಾಹಕ ಹಿತರಕ್ಷಣಾ ನಿಧಿಗೆ ವರ್ಗಾಯಿಸುವ ಆದೇಶವನ್ನು ಎನ್‌ಎಎ ನೀಡುತ್ತದೆ. ಒಂದು ಬ್ಯುಸಿನೆಸ್‌ ಕಾನೂನು ಬಾಹಿರ ಲಾಭಕೋರತನ ನಡೆಸಿದ್ದರೆ ಅದರ ಪರವಾನಗಿಯನ್ನು ರದ್ದುಗೊಳಿಸುವ ವಿಶೇಷ ಅಧಿಕಾರ ಎನ್‌ಎಎಗೆ ಇದೆ. ಪ್ರಕರಣವೊಂದರಲ್ಲಿ ಅಪರಾಧ ಸಾಬೀತಾದಲ್ಲಿ ಶೇ. 18ರ ಬಡ್ಡಿ ಸಮೇತ ವಿವಾದಿತ ಮೊತ್ತವನ್ನು ವಾಪಾಸು ಕೊಡಿಸುವ ಶಕ್ತಿಯನ್ನು ಎಪಿಎ ನಿಯಮ ಎನ್‌ಎಎಗೆ ನೀಡಿದೆ. ಅಷ್ಟೇಕೆ, ಇದೇ ಪ್ರಕರಣದಲ್ಲಿ ದಂಡ ವಿಧಿಸುವ ಪ್ರಾಧಾನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಒಂದೂ ಗ್ರಾಹಕ ಪರ ಇಲ್ಲ!
ಜಿಎಸ್‌ಟಿ ವ್ಯತ್ಯಯದ ವಂಚನೆಯನ್ನು ವೈಯುಕ್ತಿಕವಾಗಿ ಗ್ರಾಹಕ ಕಂಡುಕೊಳ್ಳುವುದೇ ಸಾಕಷ್ಟು ದೂರದ ಮಾತು. ಇಂತಹವುಗಳನ್ನು ವಿಶ್ಲೇಷಿಸಲು ಆರ್ಥಿಕ ತಜ್ಞರು ಹಾಗೂ ಲೆಕ್ಕ ಪರಿಶೋಧಕರನ್ನು ಒಳಗೊಂಡ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯವೆಸಗಿದರೆ ಚೆನ್ನ. ಈ ದೇಶದಲ್ಲಿ ಇಂತಹ ಉಪಸಮಿತಿಗಳನ್ನು ಹೊಂದಿದ ಗ್ರಾಹಕ ತರಕ್ಷಣಾ ಸಂಸ್ಥೆಗಳೂ ಕೂಡ ಕಂಡುಬರುತ್ತಿಲ್ಲ.  ಈವರೆಗೆ ಅಂತಹ ಬೆಳವಣಿಗೆಗಳನ್ನು ನಾವು ಕಂಡಿಲ್ಲ. ಜೂನ್‌ 12ರ ಮಾಹಿತಿಯಂತೆ, 300 ದಿನಗಳ ಕಾರ್ಯಾಚರಣೆಯಲ್ಲಿ ಎನ್‌ಎಎ 50 ದೂರುಗಳನ್ನು ಸ್ವೀಕರಿಸಿದೆ. ಮೂರು ತಿಂಗಳ ಡಿಜಿಎಸ್‌ ತನಿಖಾ ವರದಿಯ ಹಿನ್ನೆಲೆಯಲ್ಲಿ ಎನ್‌ಎಎ ವಿಚಾರಣೆ ನಡೆಸಬೇಕಿರುವುದರಿಂದ ಮೂರು ಪ್ರಕರಣಗಳ ಹೊರತು ಉಳಿದವಕ್ಕೆ ಅಂತಿಮ ತೀರ್ಪು ಹೊರಬಿದ್ದಿಲ್ಲ. ಈವರೆಗೆ ಆದೇಶ ಪಡೆದ ಮೂರು ಪ್ರಕರಣಗಳಲ್ಲೂ ವ್ಯಾಪಾರಿಗಳ ಮೇಲಿನ ದೂರನ್ನು ಕೈಬಿಡಲಾಗಿದೆ!

ರಾಷ್ಟ್ರೀಯ ಲಾಭಕೋರತನ ಪ್ರಾಧಿಕಾರಕ್ಕೆ ಈ ಕುರಿತು ಅರಿವಿದೆ. ಒಂದೆಡೆ ಜಿಎಸ್‌ಟಿ ನಂತರ ಪ್ರತಿಯೊಬ್ಬ ನಾಗರಿಕನ ತಿಂಗಳ ಸಾಂಸಾರಿಕ ವೆಚ್ಚ ಜಾಸ್ತಿಯಾಗಿದೆ ಎಂತಾದರೆ ಅದು ಜಿಎಸ್‌ಟಿಯ ಪರಿಣಾಮವೇ. ಆದರೆ ವಸ್ತುಸ್ಥಿತಿಯಲ್ಲಿ ಈ ವ್ಯತ್ಯಯ ಆಗಬಾರದು. ಆಗಿದೆ ಎಂದರೆ ವ್ಯಾಪಾರಿಗಳು ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚಿನ ವಸೂಲಿಗಿಳಿದಿದ್ದಾರೆ ಮತ್ತು ವ್ಯಾಪಾರಿಗಳು ಇನ್‌ಪುಟ್‌ ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇದ್ದಿರಬಹುದು. ಈ ಹಿನ್ನೆಲೆಯಲ್ಲಿ ಎನ್‌ಎಎ ಆನ್‌ಲೈನ್‌ನಲ್ಲಿ ಗ್ರಾಹಕ ಗುಂಪನ್ನು ರೂಪಿಸಿದೆ. ಈಗಾಗಲೇ ದೇಶದ 60 ಸಾವಿರ ಗ್ರಾಹಕರು ಇದರ ಸದಸ್ಯರಾಗಿದ್ದಾರೆ. ಜೂನ್‌ 14ರ ಲೆಕ್ಕದಂತೆ, ಈ ಸಂಖ್ಯೆ 67,518ನ್ನು ದಾಟಿದೆ. ಈ ತಳಹದಿಯ ಮೇಲೆ ಗ್ರಾಹಕರು ತೆರಿಗೆ ವ್ಯವಸ್ಥೆಯಲ್ಲಿ ತಾವು ದುಬಾರಿ ಬೆಲೆ ತೆತ್ತಿದ್ದನ್ನು ಹೇಳಿಕೊಳ್ಳಬಹುದು. ಇದು ಅಧಿಕೃತ ದೂರು ವ್ಯವಸ್ಥೆ ಅಲ್ಲವಾದರೂ, ಗ್ರಾಹಕ ಅನುಭವಗಳ ಆಧಾರದ ಮೇಲೆ ವ್ಯಾಪಾರಿ ವಂಚನೆಗಳನ್ನು ತಡೆಯಲು ಎನ್‌ಎಎ ಸೂಚನೆ ನೀಡಲು ಹೆಚ್ಚು ಅನುಕೂಲವಾಗುತ್ತದೆ. ಲೋಕಲ್‌ ಸರ್ಕಲ್ಸ್‌ ಹೆಸರಿನಲ್ಲಿ ಖುದ್ದು ಎನ್‌ಎಎ ವೆಬ್‌ ಮೂಲಕ ಈ ವ್ಯವಸ್ಥೆ ಮಾಡಿದೆ. ವೆಬ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಕಮ್ಯುನಿಟಿಯನ್ನು ಸೇರಬೇಕಾಗುತ್ತದೆ. ಈ ಗುಂಪನ್ನು ಸೇರಲು ಕ್ಲಿಕ್‌ ಮಾಡಿ… http://bit.ly/antiprofiteering-community

ವ್ಯವಸ್ಥೆ ಬದಲಾಗಲಿ!
ಎನ್‌ಎಎಯ ಅಧಿಕೃತ ವೆಬ್‌ಸೈಟ್‌ ಈ ದಿನಗಳಲ್ಲಿ ಪರಿಷ್ಕರಣಗೊಂಡಿದೆ. ಈಗ ಆನ್‌ಲೈನ್‌ ದೂರು ನೀಡಿಕೆ ಕೂಡ ಸಾಧ್ಯ. ಒಂದಷ್ಟು ಹೊತ್ತು ವೆಬ್‌ನಲ್ಲಿ ಸಂಚರಿಸಿದರೆ ಹೆಚ್ಚಿನ ಮಾಹಿತಿ ಲಭ್ಯ. ಆಫ್ಲೈನ್‌ನಲ್ಲಿ ದೂರು ನೀಡಲು [email protected]  ವೆಬ್‌ನಲ್ಲಿನ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ Bhai Vir Singh Sahitya Sadan, Bhai Vir Singh Marg, Gole Market, New Delhi, Delhi 110001 ವಿಳಾಸಕ್ಕೆ ಕಳುಹಿಸಬೇಕು.

ದೂರು ನೀಡುವ ವಿಧಾನಗಳು ನೂರಾರಿರಬಹುದು. ಮತ್ತೆ ಮತ್ತೆ ಈ ದೇಶದ ನಾಗರಿಕನೇ ತನ್ನ ಸಮಯ, ಹಣ ವ್ಯರ್ಥ ಮಾಡಿಯೇ ನ್ಯಾಯ ಪಡೆದುಕೊಳ್ಳಬೇಕೇ ಎಂಬ ಪ್ರಶ್ನೆ ಕಾಡುತ್ತದೆ. ಜಿಎಸ್‌ಟಿ ಅಡಿಯಲ್ಲಿ “ನಯವಂಚನೆ’ ನಡೆಯುವ ಪ್ರಕರಣಗಳ ಮಾಹಿತಿ ಪಡೆಯಲು ಎನ್‌ಎಎ ಹೆಚ್ಚು ಉತ್ಸುಕವಾಗಬೇಕು. ದಂಡದ ರೂಪದಲ್ಲಿ, ಗ್ರಾಹಕ ಹಿತರಕ್ಷಣಾ ನಿಧಿಗೆ ಬಂದ ಹಣವನ್ನೇ ಪಡೆದುಕೊಂಡು ಅದು ವಿಚಕ್ಷಣ ವ್ಯವಸ್ಥೆ ರೂಪಿಸಬೇಕು. ಗ್ರಾಹಕನ ದೂರಿಗೆ ಬೆನ್ನತ್ತಿ ಭಾರಿ ದಂಡವನ್ನು ವಿಧಿಸಬೇಕು. ಅಂಥದೊಂದು ದಂಡ, ಲೈಸೆನ್ಸ್‌ ರದ್ಧತಿ ಭಯ ತಾರದಿದ್ದರೆ ಜನರನ್ನು ವಂಚಿಸಲು ಸರ್ಕಾರದ ಪ್ರತಿಯೊಂದು ಕ್ರಮವೂ ವ್ಯಾಪಾರಿಗಳಿಗೆ ನೆಪವಾಗುತ್ತದೆ!

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Kannada-Replica

ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Kannada-Replica

ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?

Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.