ಹ್ಯಾಟ್ರಿಕ್ “ಹೀರೋ’; ಮೂರು ಬೈಕುಗಳ ಅನಾವರಣ
Team Udayavani, Feb 24, 2020, 5:00 AM IST
ಬೈಕುಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೀರೋ ಮೋಟೋ ಕಾರ್ಪ್ ಕಂಪನಿ, ಮೂರು ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿರುವ ಜೈಪುರದಲ್ಲಿ ಇತ್ತೀಚಿಗೆ ಮೂರು ಬೈಕುಗಳನ್ನೂ ಅನಾವರಣಗೊಳಿಸಿತು. ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮತ್ತು ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್ ವಿಭಾಗದ ಮುಖ್ಯಸ್ಥ ಮಾಲೋ ಲೇ ಮ್ಯಾಷನ್ ಅವರು ಈ ಮೂರು ಬೈಕ್‌ಗಳನ್ನು ಅನಾವರಣ ಮಾಡಿದರು. ಅಷ್ಟೇ ಅಲ್ಲ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಚಾರ ಪರಿಹಾರಗಳನ್ನು ಕಂಡುಕೊಳ್ಳುವ ಸಂಬಂಧ ಮುಂದಿನ 5- 7 ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ 10 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಿದ್ದೇವೆ ಎಂದೂ ಡಾ. ಪವನ್ ಮುಂಜಾಲ್ ಹೇಳಿಕೊಂಡರು.
ಹೀರೋ ಎಕ್ಸ್‌ಟ್ರೀಮ್ 160ಆರ್
ಪಕ್ಕಾ ನ್ಪೋರ್ಟ್ ಬೈಕ್ ಮಾದರಿಯಲ್ಲಿರುವ ಇದು, ಕಡಿಮೆ ತೂಕವನ್ನು ಹೊಂದಿದೆ. ಆದರೆ, ಶಕ್ತಿಯಲ್ಲಿ ಅಸಾಧಾರಣ ಸಾಮರ್ಥ್ಯ. ಕೇವಲ 4.7 ಸೆಕೆಂಡ್‌ಗಳಲ್ಲಿ 0-60 ಕಿ.ಮೀ. ವೇಗ ಮುಟ್ಟಬಲ್ಲ ಶಕ್ತಿ ಇರುವ ಈ ಬೈಕ್, 160 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದು, ಸಂಪೂರ್ಣವಾಗಿ ಬಿಎಸ್6 ಎಂಜಿನ್ ಹೊಂದಿದೆ.
5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಬೈಕು ರೈಡ್ ಮಾಡಲು ಥ್ರಿಲ್ ಕೊಡುತ್ತದೆ. ಹಾಗೆಯೇ ಹಿಂಬದಿಯಲ್ಲಿ 7 ಹಂತಗಳಲ್ಲಿ ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಮೋನೋ ಶಾಕ್ ಸಸ್ಪೆನÒನ್ ನೀಡಲಾಗಿದೆ. ಅದರಿಂದಾಗಿ ಚಾಲನೆಯಲ್ಲಿ ಉತ್ತಮ ಅನುಭವ ನೀಡುತ್ತದೆ. ಹಿಂಬದಿಯ 130/70-17 ರೇಡಿಯಲ್ ಟೈರ್ ಉತ್ತಮ ರೋಡ್ ಗ್ರಿಪ್ ಒದಗಿಸುತ್ತದೆ. ಡಿಸ್ಕ್ ಬ್ರೇಕ್, ಎಬಿಎಸ್ ವ್ಯವಸ್ಥೆ ಬ್ರೇಕಿಂಗ್ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸುತ್ತವೆ.
ಮುಂಭಾಗದ ಎಲ್‌ಇಡಿ ಹೆಡ್ ಲ್ಯಾಂಪ್, ಹಿಂಬದಿಯಲ್ಲಿನ ಎಚ್ ಸಿಗ್ನೇಚರ್ ಎಲ್‌ಇಡಿ ಟೇಲ್ ಲ್ಯಾಂಪ್‌ಗ್ಳನ್ನು ಈ ಬೈಕ್ ಒಳಗೊಂಡಿದೆ. ಜತೆಗೆ ಎಲ್‌ಇಡಿ ಇಂಡಿಕೇಟರ್ ಕೂಡಾ ಇದೆ. ಈ ಬೈಕು ಎರಡು ಆವೃತ್ತಿಗಳಲ್ಲಿ ಸಿಗುತ್ತದೆ. ಒಂದು, ಫ್ರಂಟ್ ಡಿಸ್ಕ್ ಸಿಂಗಲ್ ಚಾನೆಲ್ ಎಬಿಎಸ್, ಮತ್ತೂಂದು, ಡಬಲ್ ಡಿಸ್ಕ್ (ಮುಂದೆ ಮತ್ತು ಹಿಂದೆ) ಸಿಂಗಲ್ ಚಾನೆಲ್ ಎಬಿಎಸ್‌ನಲ್ಲಿ ಲಭ್ಯವಿದೆ. ಮೂರು ಬಣ್ಣಗಳ ಆಯ್ಕೆಯನ್ನು, ಸಂಸ್ಥೆ ಗ್ರಾಹಕರಿಗೆ ನೀಡಿದೆ.
ಹೀರೋ ಗ್ಲಾಮರ್ ಬಿಎಸ್6
ಹಿಂದಿನ ಗ್ಲಾಮರ್‌ಗಿಂತ ತುಸು ಹೆಚ್ಚೇ ಸಾಮರ್ಥ್ಯದೊಂದಿಗೆ ಮತ್ತು ಬಿಎಸ್-6 ಎಂಜಿನ್‌ನೊಂದಿಗೆ ಮತ್ತೆ ಮಾರುಕಟ್ಟೆಗೆ ಬರುತ್ತಿದೆ ಗ್ಲಾಮರ್ ಬೈಕ್. 125ಸಿಸಿ ಎಂಜಿನ್ ಸಾಮರ್ಥ್ಯದ ಈ ಬೈಕು, ಹೀರೋ ಕಂಪನಿ ಹೇಳಿಕೊಂಡಿರುವ ಹಾಗೆ ಕ್ರಾಂತಿಕಾರಿ ಸಂಶೋಧನೆ ಐ3ಎಸ್(ಐಡಲ್ ಸ್ಟಾರ್ಟ್ ಸ್ಟಾಪ್ ಸಿಸ್ಟಮ್)ಅನ್ನು ಅಳವಡಿಸಿಕೊಂಡಿದೆ. ಹಿಂದಿನ ಬೈಕ್‌ಗಿಂತ ಶೇ.19ರಷ್ಟು ಹೆಚ್ಚಿನ ಶಕ್ತಿ ಹಾಗೂ ಶೇ.20ರಷ್ಟು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇದೆ, ಇದು ಸೆಲ್ಫ್ ಡ್ರಮ್ ಅಲಾಯ್ (68,900 ರೂ.) ಮತ್ತು ಸೆಲ್ಫ್ ಡಿಸ್ಕ್ ಅಲಾಯ್ (72,400 ರೂ.) ಎಂಬ ಎರಡು ವರ್ಷನ್‌ನಲ್ಲಿ ಸಿಗುತ್ತದೆ.
ಹೀರೋ ಪ್ಯಾಷನ್ ಪ್ರೊ ಬಿಎಸ್6
110 ಸಿಸಿ ಸಾಮರ್ಥ್ಯದ ಹೀರೋ ಪ್ಯಾಷನ್ ಪೊ› ಬಿಎಸ್6 ಎಂಜಿನ್ ಅಳವಡಿಸಿಕೊಂಡು ಬರುತ್ತಿದೆ. ಉತ್ತಮ ಮೈಲೇಜ್ ಮತ್ತು ಸಾಮರ್ಥ್ಯದ ಭರವಸೆಯೊಂದಿಗೆ ಅನಾವರಣಗೊಂಡಿದೆ. ಇದರಲ್ಲೂ ಹೀರೋದ ಕ್ರಾಂತಿಕಾರಿ ಸಂಶೋಧನೆ ಐ3ಎಸ್ ಫೀಚರ್ ಇದೆ. ಹಿಂದಿನ ಬೈಕ್‌ಗೆ ಹೋಲಿಕೆ ಮಾಡಿದರೆ ಗ್ರೌಂಡ್ ಕ್ಲಿಯರೆನ್ಸ್ ಮತ್ತಷ್ಟು ಚೆನ್ನಾಗಿದೆ. ಹಾಗೆಯೇ ಸಸ್ಪೆನÒನ್ ಕೂಡ ಉತ್ತಮವಾಗಿವೆ. ಇದೂ ಕೂಡ ಎರಡು ಮಾದರಿಗಳಲ್ಲಿ ಸಿಗುತ್ತದೆ. ಸೆಲ್ಫ್ ಡ್ರಮ್ ಅಲಾಯ್ (64,990ರೂ.) ಮತ್ತು ಸೆಲ್ಫ್ ಡಿಸ್ಕ್ ಅಲಾಯ್(67,190 ರೂ.)ನಲ್ಲಿ ಲಭ್ಯವಿದೆ.
ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.