ಆಯುರ್ವೇದದಿಂದ ಆರೋಗ್ಯ ಸಂಪತ್ತು
Team Udayavani, Jul 20, 2020, 2:11 PM IST
ಇಂದಿನ ಹೈಪರ್ ಟೆನ್ಷನ್ ಪ್ರಪಂಚದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಚಿಕಿತ್ಸಾ ವೆಚ್ಚಗಳು ಗಗನಕ್ಕೇರಿರುವುದು ಅದಕ್ಕೊಂದು ಕಾರಣವಾದರೆ, ಯಾವಾಗ ಯಾವ ಕಾಯಿಲೆ ಜೊತೆಯಾಗುತ್ತದೆ ಎಂದು ಹೇಳಲು ಆಗದಿರುವುದು ಇನ್ನೊಂದು ಕಾರಣ ಆಗಿದೆ. ಹೀಗಾಗಿಯೇ ಆರೋಗ್ಯ ವಿಮೆಗಳ ಅವಶ್ಯಕತೆಯೂ ಹೆಚ್ಚಾಗಿರುವುದು.
ಹಣ -ಆಸ್ತಿ ಸಂಪಾದನೆ, ಉಳಿತಾಯ ಮುಂತಾದ ವಿಚಾರಗಳತ್ತ ಗಮನ ಹರಿಸುವಂತೆಯೇ, ಆರೋಗ್ಯದತ್ತಲೂ ಗಮನ ಹರಿಸುವುದರಿಂದ, ಆರ್ಥಿಕ ಸಮಸ್ಯೆಗಳೂ ಪರಿಹಾರ ಕಾಣುತ್ತವೆ. ಭಾರತದ ಪಾರಂಪರಿಕ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳು ವುದರಿಂದ, ಆರೋಗ್ಯ ಸಮಸ್ಯೆಗಳು ದೂರವಾಗು ತ್ತವೆ. ಜೊತೆಗೆ, ದೇಹ- ಮನಸ್ಸೂ ಸುಸ್ಥಿತಿಯಲ್ಲಿರುತ್ತದೆ. ಪ್ರಾಕೃತಿಕ ಆರೋಗ್ಯ ವನ್ನು ದಯಪಾಲಿಸುವ ಆಯುರ್ವೇದ ಕೇಂದ್ರಗಳಲ್ಲಿ ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯೂ ಒಂದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಆಸ್ಪತ್ರೆ, ದಶಕಗಳಿಂದ ಕಾರ್ಯಾಚರಿಸುತ್ತಿದೆ. ಸಂಶೋಧನೆಗಳನ್ನೂ ಕೈಗೊಳ್ಳುತ್ತಾ, ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಚಿಕಿತ್ಸೆ ನೀಡುವುದು ಸಂಸ್ಥೆಯ ವೈಶಿಷ್ಟ್ಯ. ಆಯುರ್ವೇದದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಂಸ್ಥೆ ನಿರತವಾಗಿದೆ.
ಸಾಂಕ್ರಾಮಿಕ ಪಿಡುಗುಗಳ ಕುರಿತಾಗಿಯೂ ಆಯುರ್ವೇದದಲ್ಲಿ ಉಲ್ಲೇಖವಿದೆ ಎಂಬ ಸಂಗತಿ ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಗಾಳಿ, ನೀರು, ವಾಸಸ್ಥಳ ಮತ್ತು ಕಾಲಗಳಿಗೆ ತಕ್ಕಂತೆ ಕಾಯಿಲೆಗಳು ಹುಟ್ಟಿಕೊಂಡು ಹೆಚ್ಚು ಜನರನ್ನು ಆಪೋಶನ ತೆಗೆದುಕೊಳ್ಳುತ್ತವೆ ಎಂದು ಹಿಂದೆಯೇ ಬರೆಯಲಾಗಿದೆ. ಅದರಂತೆ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕಾಯಿಲೆಗಳಿಂದ ಪಾರಾಗುವ ಅತ್ಯುತ್ತಮ ವಿಧಾನ. ವೈರಲ್ ಸೋಂಕುಗಳು ವರ್ಷದಲ್ಲಿ ಒಂದು ನಿರ್ದಿಷ್ಟ
ಕಾಲದಲ್ಲಿ ಮಾತ್ರವೇ ಕ್ರಿಯಾಶೀಲವಾಗಿರುತ್ತದೆ. ಆ ಕಾಲ ವೈರಾಣುಗಳ ಪ್ರಸರಣಕ್ಕೆ ಹೇಳಿ ಮಾಡಿಸಿದಂತಿರುತ್ತದೆ, ಆ ಕಾಲದಲ್ಲಿ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಆಯುರ್ವೇದ ಸಲಹೆಗಳಿಗೆ ಮೊರೆ ಹೋಗುವುದರಿಂದ, ಪ್ರಾಕೃತಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಬೇವಿನ ಎಲೆ, ಕರ್ಪೂರ ಮತ್ತಿತರ ಪ್ರಾಕೃತಿಕ ವಸ್ತುಗಳಿಗೆ ಬೆಂಕಿಯ ಸ್ಪರ್ಶ ನೀಡಿ, ಧೂಮ
ಹಬ್ಬಿಸಿಯೂ ರಕ್ಷಣೆ ಪಡೆಯಬಹುದಾಗಿದೆ. ಈ ರೀತಿಯ ಹಲವು ಮಾರ್ಗಗಳು ಆರ್ಯುವೇದದಲ್ಲಿ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.