ಹೆಲ್ತ್ “ಪಾಲಿಸಿ’ ಹಿರಿಯ ನಾಗರಿಕರ ಆರೋಗ್ಯ ವಿಮೆ
Team Udayavani, Jul 22, 2019, 5:00 AM IST
ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆದುಬಾರಿಯಾಗುತ್ತಿದ್ದು ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ.ಸೀಮಿತ ಆದಾಯದ ಹಿರಿಯ ನಾಗರಿಕರಿಗೆ ಇದೊಂದು ಭರಿಸಲಾರದ ಸಂಕಟ. ಅದರಲ್ಲೂ hand to mouth ಸ್ಥಿತಿಯಲ್ಲಿ ಜೀವನದ ರಥ ಸಾಗಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಚಿಕಿತ್ಸೆಯ ವೆಚ್ಚ ಅವರ ಬದುಕನ್ನು ಕಂಗೆಡಿಸುತ್ತದೆ. ಹಿರಿಯ ನಾಗರಿಕರು ಸಾಮಾನ್ಯವಾಗಿ ತಮಗೆ ದೊರಕುವ ಪಿಂಚಣಿ, ಕಷ್ಟದಲ್ಲಿ ಉಳಿಸಿದ ಠೇವಣಿ ಮೇಲಿನ ಬಡ್ಡಿಯಲ್ಲಿ ಬದುಕು ಸಾಗಿಸುವುದರಿಂದ ಮತ್ತು ಬೇರೆ ಆದಾಯದ ಮೂಲ ಇರದಿರುವುದರಿಂದ ಅನಿರೀಕ್ಷಿತ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ಅವರ ಅಸಹಾಯಕತೆಯನ್ನು ಮನಗಂಡು ಅವರಿಗಾಗಿಯೇ ಆರೋಗ್ಯ ವಿಮಾ ಕಂಪನಿಗಳು ವಿಶೇಷ ವಿಮಾ ಪಾಲಿಸಿಗಳನ್ನು ರೂಪಿಸಿವೆ. ಇವು ಜನಸಾಮಾನ್ಯರಿಗೆ ನೀಡುವ ಆರೋಗ್ಯ ವಿಮಾ ಪಾಲಿಸಿಗಳಿಗಿಂತ ಸ್ವಲ್ಪ ಭಿನ್ನವಾಗಿವೆ.
ಈ ಪಾಲಿಸಿಗಳ ವಿಶೇಷವೇನು?
60- 75 ವರ್ಷದ ಹಿರಿಯ ನಾಗರಿಕರಿಗೆ ಈ ಪಾಲಿಸಿಯನ್ನು ನೀಡಲಾಗುವುದು.
ಸಾಮಾನ್ಯವಾಗಿ ನೀಡುವ ಆರೋಗ್ಯ ವಿಮಾ ಪಾಲಿಸಿಗಳನ್ನು ನೀಡುವಾಗ pre medical test ಇರುತ್ತಿದ್ದು, ಈ ನಿಟ್ಟಿನಲ್ಲಿ ಹಿರಿಯನಾಗರಿಕರಿಗೆ ವಿನಾಯಿತಿ ನೀಡಲಾಗಿದೆ.
ಈ ಪಾಲಿಸಿ ಅಡಿಯಲ್ಲಿ ಹಿರಿಯ ನಾಗರಿಕರು ವರ್ಷಕ್ಕೊಮ್ಮೆ ಉಚಿತ ಆರೋಗ್ಯ ಚೆಕಪ್ ಮಾಡಿಸಿಕೊಳ್ಳಬಹುದು. 24 ತಾಸಿಗಿಂತ ಹೆಚ್ಚು ಅವಧಿಗೆ ಆಸ್ಪತ್ರೆಗೆ ದಾಖಲಾದರೆ ಈ ಪಾಲಿಸಿ ಅಡಿಯಲ್ಲಿ ಹಿರಿಯ ನಾಗರಿಕರು cashless hospitalization ಸೇವೆಯನ್ನು ಪಡೆಯಬಹುದು. ಈ ಸೇವೆಯಲ್ಲಿ ಮೆಡಿಕಲ್ ಬಿಲ್, ಡಾಕ್ಟರ್ ಶುಲ್ಕ ಮತ್ತು ಕೊಠಡಿ ಶುಲ್ಕ ಒಳಗೊಂಡಿರುತ್ತದೆ. ಆಸ್ಪತ್ರೆಯಲ್ಲಿ ದಾಖಲಾದ ಅವಧಿಯ ಮೇಲೆ pre(ಆಸ್ಪತ್ರೆಗೆ ದಾಖಲಾಗುವ ಮೊದಲು) ಮತ್ತು post hospitalization (ಆಸ್ಪತ್ರೆಗೆ ದಾಖಲಾದ ನಂತರ) ಚಿಕಿತ್ಸೆಯ ವೆಚ್ಚವೂ ಕವರ್ ಆಗುತ್ತದೆ. ಈ ಪಾಲಿಸಿಗಳು, ಪಾಲಿಸಿ ನೀಡುವ ಮೊದಲೇ ಇರುವ (pre& existing) ಆರೋಗ್ಯ ಸಮಸ್ಯೆಗಳಿಗೂ ಮತ್ತು ಕೆಲವು ನಿರ್ದಿಷ್ಟ ಸಮಸ್ಯೆಗಳಿಗೂ ಕವರ್ ನೀಡುತ್ತವೆ. ಅಂಬ್ಯುಲೆನ್ಸ್ ಸೇವೆಯಂಥ ಕೆಲವು ಆರೋಗ್ಯ ಚಿಕಿತ್ಸಾ ಸೇವೆಗಳೂ ಈ ಪಾಲಿಸಿ ಅಡಿಯಲ್ಲಿ ಕವರ್ ಆಗುತ್ತವೆ.
ಆರೋಗ್ಯ ವಿಮಾ ಸೌಲಭ್ಯ ನೀಡುವ ಕಂಪನಿಗಳು ಯಾವುವು?
ಬಹುತೇಕ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುತ್ತಿದ್ದು, ಅವುಗಳಲ್ಲಿ ಬಜಾಜ್ ಅಲೈಯನ್l, ಸ್ಟಾರ್ ಹೆಲ್ತ್, ನ್ಯಾಷನಲ್ ಇನ್‌ಶೂರೆನ್ಸ್, ನ್ಯೂ ಇಂಡಿಯಾ ಇನ್‌ಶೂರೆನ್ಸ್, ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್, ಅಪೊಲೋ ಮ್ಯುನಿಚ್, ಓರಿಯಂಟಲ್ ಇನ್‌ಶೂರೆನ್ಸ್, ಎಸ್.ಬಿ.ಐ ಇನ್‌ಶೂರೆನ್ಸ್ ಮತ್ತು ಟಾಟಾ ಎಐಜಿ ಇನ್‌ಶೂರೆನ್ಸ್‌ಗಳು ಮುಖ್ಯವಾಗಿ ಕಾಣುತ್ತವೆ. ಮೇಲು ನೋಟಕ್ಕೆ ಎಲ್ಲಾ ಆರೋಗ್ಯ ವಿಮಾ ಕಂಪನಿಗಳೂ ಒಂದೇ ರೀತಿಯ ಪಾಲಿಸಿಗಳನ್ನು ಮತ್ತು terms conditions ನೀಡಿದರೂ, ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಹಲವು ಭಿನ್ನತೆಗಳನ್ನು ಕಾಣಬಹುದು. ಪಾಲಿಸಿಯನ್ನು ಪಡೆಯುವ ಮೊದಲು ಇವನ್ನೂ ಪರಿಶೀಲಿಸಬೇಕಾಗುತ್ತದೆ.
ಏನೇನು ಕವರ್ ಆಗುವುದಿಲ್ಲ?
ಹಿರಿಯ ನಾಗರಿಕರ ಆರೋಗ್ಯ ವಿಮಾ ಪಾಲಿಸಿ ಬಹುತೇಕ ಎಲ್ಲಾ ಅರೋಗ್ಯ ಸಮಸ್ಯೆಗಳನ್ನು ಕವರ್ ಮಾಡಿದರೂ, ಕೆಲ ಖರ್ಚುಗಳನ್ನು ಕವರ್ ಮಾಡುವುದಿಲ್ಲ. ಪಾಲಿಸಿ ಪಡೆಯುವ ಮೊದಲು ಇದ್ದ ರೋಗಗಳು (pre existing) ಮತ್ತು ಗಾಯಗಳು(injuries), ಪಾಲಿಸಿ ಪಡೆದು 30 ದಿನಗಳೊಳಗಾಗಿ ಕಂಡುಬಂದ ಹೊಸ ಅರೋಗ್ಯ ಸಮಸ್ಯೆಗಳು, ಔಷಧ ದುರುಪಯೋಗದಿಂದ ಉಂಟಾದ ವೆಚ್ಚ, ಅಲೋಪಥಿಯೇತರ ಚಿಕಿತ್ಸೆಗೆ ಉಂಟಾದ ವೆಚ್ಚ., ಕಾಸೆ¾ಟಿಕ್ ಸರ್ಜರಿ, ಕನ್ನಡಕಗಳು ಮತ್ತು ಹಲ್ಲು ಸೆಟ್‌ಗಳು ಮತ್ತು ದಂತವೈದ್ಯ ಚಿಕಿತ್ಸೆ. (ಅಪಘಾತದಿಂದ ಅಗದಿರದ ಸಮಸ್ಯೆಗಳು), ಏಡ್ಸ್ ರೋಗದ ಚಿಕಿತ್ಸಾ ವೆಚ್ಚ… ಇವೆಲ್ಲವನ್ನೂ ಪಾಲಿಸಿ ಒಳಗೊಳ್ಳುವುದಿಲ್ಲ.
ಹಿರಿಯ ನಾಗರಿಕರು cashless treatment ಸೌಲಭ್ಯ ಪಡೆಯಬಹುದು ಅಥವಾ ಅಮೇಲೆ ಕ್ಲೇಮ್ ಸಲ್ಲಿಸಿ ಪಡೆಯಬಹುದು. ಆಮೇಲೆ ಪಡೆಯುವುದಿದ್ದರೆ, ಅಸ್ಪತ್ರೆಗೆ ದಾಖಲಾದ 24 ಗಂಟೆ ಒಳಗೆ ಸಂಬಂಧ ಪಟ್ಟ ವಿಮಾ ಕಂಪನಿಗೆ ಮಾಹಿತಿ ನೀಡಬೇಕು.
ಟ್ಯಾಕ್ಸ್ ವಿನಾಯಿತಿಗಳು
ಹಿರಿಯ ನಾಗರಿಕರು ಆರೋಗ್ಯ ವಿಮಾ ಪಾಲಿಸಿಗೆ ನೀಡಿದ 50,000 ರು. ಪ್ರೀಮಿಯಂವರೆಗೆ ಅದಾಯಕರ ವಿನಾಯಿತಿ ಪಡೆಯಬಹುದು. ಒಂದು ವೇಳೆ ವಿಮಾ ಪಾಲಿಸಿ ಇಲ್ಲದಿದ್ದರೆ 50,000 ವೆಚ್ಚಕ್ಕೆ ವಿನಾಯಿತಿ ಪಡೆಯಬಹುದು.
ಪಾಲಿಸಿಯನ್ನು ಚಾಲ್ತಿಯಲ್ಲಿ ಇಡಲು ಅವಧಿಯೊಳಗೆ ಪ್ರೀಮಿಯಂ ಅನ್ನು ತುಂಬಬೇಕಾಗುತ್ತದೆ. ಕೆಲವು ಕಂಪನಿಗಳ ಆರೋಗ್ಯ ಪಾಲಿಸಿಗಳಿಗೆ ಒಂದು ಅಥವಾ ಎರಡು ವರ್ಷಗಳ ಲಾಕ್‌ಇನ್ ಪಿರಿಯಡ್ ಇದ್ದು, ಈ ಪಿರಿಯಡ್ ನಂತರವೇ ಕ್ಲೇಮ್‌ಅನ್ನು ಕಂಪನಿಗಳು ಪರಿಗಣಿಸುತ್ತವೆ. ಪಾಲಿಸಿದಾರ ನೀಡಿದ ಪ್ರೀಮಿಯಂ ಕೇವಲ ಒಂದು ವರ್ಷ ಮಾತ್ರ ಚಾಲ್ತಿಯಲ್ಲಿದ್ದು, ಪ್ರತಿವರ್ಷ ಪ್ರೀಮಿಯಂ ಪೇಮೆಂಟ್ ಮಾಡಬೇಕಾಗುತ್ತದೆ.
ಕೆಲವು ವಿಮಾ ಕಂಪನಿಗಳು ಹಿರಿಯ ನಾಗರಿಕರಿಗೆ ಪಾಲಿಸಿ ಅಡಿಯಲ್ಲಿ , ಯಾವುದೇ ಕ್ಲೇಮ ಮಾಡದಿದ್ದರೆ No Claim Bonus ಅನ್ನು ಪ್ರೀಮಿಯಂನಲ್ಲಿ ಸ್ವಲ್ಪ ಕಡಿಮೆ ಮಾಡಿ ಆಥವಾ sum assuredಅನ್ನು ಹೆಚ್ಚಿಸಿ ಹೊಂದಾಣಿಕೆ ಮಾಡುತ್ತವೆ.
ಸೂಪರ್ ಸೀನಿಯರ್ ಕೆಟಗರಿ
ಸಾಮಾನ್ಯವಾಗಿ 60ರಿಂದ 75 ವರ್ಷದವರನ್ನು ಹಿರಿಯ ನಾಗರಿಕರೆಂದು ಪರಿಗಣಿಸುತ್ತಾರೆ. ಆದಾಯಕರ ಕಾನೂನಿನ ನಿಯಮಾವಳಿಯಂತೆ ಕೆಲವು ಸಂದರ್ಭದಲ್ಲಿ 80 ವರ್ಷದವರೆಗೂ ಹಿರಿಯ ನಾಗರಿಕರೆಂದು ನೋಡುತ್ತಾರೆ. ಆದರೆ, 80 ವರ್ಷ ದಾಟಿದವರನ್ನು “ಸೂಪರ್ ಸೀನಿಯರ್ ಸಿಟಿಝನ್’ ಎಂದು ವರ್ಗೀಕರಿಸುತ್ತಾರೆ. ಇವರಿಗೆ ಹಿರಿಯ ನಾಗರಿಕರಿಗಿರುವ ಆರೋಗ್ಯ ವಿಮಾ ಪಾಲಿಸಿಗಳು ಸ್ವಲ್ಪ ಮಾರ್ಪಾಡಾಗುತ್ತವೆ.
ಸಾಮಾನ್ಯವಾಗಿ ವಿಮಾ ಮೊತ್ತವು 1ರಿಂದ 5 ಲಕ್ಷದ ವರೆಗೆ(ಕೆಲವು ಸಂದರ್ಭಗಳಲ್ಲಿ ಹೆಚ್ಚು ) ಇರುತ್ತದೆ. ಆದರೆ, ಹಿರಿಯ ನಾಗರಿಕರ ಆರೋಗ್ಯ ದೃಷ್ಟಿಯಲ್ಲಿ high risk ಕೆಟಗರಿಯಲ್ಲಿ ಇರುವುದರಿಂದ , ಅವರ ವಿಮಾ ಮೊತ್ತವನ್ನು (sum assured) ಅನ್ನು ಕಡಿಮೆ (capping) ) ಮಾಡುತ್ತಿದ್ದು, 2ರಿಂದ 3 ಲಕ್ಷಕ್ಕೆ ಮಿತಿಗೊಳಿಸುವ ಸಂದರ್ಭಗಳು ಇರುತ್ತವೆ.
ಕೆಲವು ಸಂದರ್ಭದಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ದುಬಾರಿ ಎನಿಸಿದರೂ, ಅರ್ಥಿಕ ಅಸಹಾಯಕತೆಯ ದಿನಗಳಲ್ಲಿ, ಸೀಮಿತ ಆದಾಯದಲ್ಲಿ ದಿನದೂಡುವಾಗ, ಬೇರೆ ಅರ್ಥಿಕ ಸಹಾಯ ದೊರಕದಿರುವಾಗ, ವೈದ್ಯಕೀಯ ಚಿಕಿತ್ಸೆ ಅನಿವಾರ್ಯವಾದಾಗ, ಅದು ನೀಡುವ ಸಹಾಯ ಮರಳುಭೂಮಿಯಲ್ಲಿ ನೀರು ಸಿಕ್ಕಂತೆ,ಮುಳುಗುವವನಿಗೆ ಹುಲ್ಲುಕಡ್ಡಿ ಆಶ್ರಯ ಸಿಕ್ಕಂತೆ. ಹಿರಿಯ ನಾಗರಿಕರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸಮೀಕರಿಸದಿದ್ದರೂ, ಜರ್ಜರಿತವಾದ ಹಿರಿಯನಾಗರಿಕರಿಗೆ ಪುನರ್ಜನ್ಮ ನೀಡುವುದು ಗ್ಯಾರಂಟಿ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.